Create APAAR ID for Children Before June 30: ಜೂನ್ 30ರೊಳಗೆ ಎಲ್ಲಾ ವಿದ್ಯಾರ್ಥಿಗಳಿಗೆ APAAR ID ಕಡ್ಡಾಯ!
Create APAAR ID for Children Before June 30: ಸರ್ಕಾರದ ಸುತ್ತೋಲೆಯಂತೆ ಜೂನ್ 30ರೊಳಗೆ ಎಲ್ಲಾ ವಿದ್ಯಾರ್ಥಿಗಳಿಗೆ APAAR ID ಕಡ್ಡಾಯ. ಅರ್ಹತೆ, ಅಗತ್ಯ ದಾಖಲೆಗಳು ಮತ್ತು APAAR ID ಸೃಷ್ಟಿಸುವ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.
ಮೇಲಿನ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ, ಶಿಕ್ಷಣ ಮಂತ್ರಾಲಯದ ನಿರ್ದೇಶನದಂತೆ ಎಲ್ಲಾ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ (LKG ಯಿಂದ 12ನೇ ತರಗತಿವರೆಗೆ) APAAR ID ಸೃಜಿಸಲು ಸೂಚಿಸಲಾಗಿತ್ತು. ಈವರೆಗೆ ಒಟ್ಟು 1,16,32,828 ವಿದ್ಯಾರ್ಥಿಗಳ ಪೈಕಿ ಪ್ರಸ್ತುತ 75,16,563 (ಶೇ.64) ವಿದ್ಯಾರ್ಥಿಗಳಿಗೆ ಮಾತ್ರ APAAR ID ಸೃಜನೆಯಾಗಿರುತ್ತದೆ.
ಈ ಪತ್ರದೊಂದಿಗೆ ಲಗತ್ತಿಸಿರುವ ಅನುಬಂಧ-01 ರಲ್ಲಿ ಜಿಲ್ಲಾವಾರು ಸಾಧಿಸಿರುವ ಪ್ರಗತಿ ಹಾಗೂ ಸೃಜಿಸಬೇಕಾಗಿರುವ APAAR ID ಗಳ ಮಾಹಿತಿಯು ಲಭ್ಯವಿದೆ ಈ ಮಾಹಿತಿಯನ್ನು ಪರಿಶೀಲಿಸಿ APAAR ID ಸೃಜಿಸಲು ಕ್ರಮಕೈಗೊಳ್ಳಲು ಸೂಚಿಸಿದೆ.
ಇದಕ್ಕಾಗಿ ಶಿಕ್ಷಣ ಮಂತ್ರಾಲಯ ನಿರ್ದೇಶಿಸಿರುವಂತೆ (ಪ್ರತಿ ಲಗತ್ತಿಸಿದೆ) ವಾರದಲ್ಲಿ ಒಂದು ದಿನವನ್ನು APAAR Saturation ದಿನ ಎಂದು ಪರಗಣಿಸಿ ಕ್ರಮ ಕೈಗೊಳ್ಳಬಹುದಾಗಿದೆ. ಪತ್ರದಲ್ಲಿ ನೀಡಿರುವ ನಿರ್ದೇಶನಗಳನ್ನು ಪಾಲಿಸುವಂತೆ ಸೂಚಿಸಿದೆ.
ಈ ಕಾರ್ಯಕ್ಕಾಗಿ ಜಿಲ್ಲಾ ಯೋಜನಾ ಕಛೇರಿಯಲ್ಲಿ ಒಬ್ಬ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಪ್ರತಿವಾರ ಸಾಧಿಸಿರುವ ಪ್ರಗತಿ ವಿವರವನ್ನು ಈ ಕಛೇರಿಯ ಯೋಜನಾ ವಿಭಾಗದ ಈ ಮೇಲ್ ವಿಳಾಸ sskplanning2024@gmail.com ಗೆ ತಪ್ಪದೆ ವರದಿಯನ್ನು ಕಳುಹಿಸುವಂತೆ ಸೂಚಿಸಿದೆ.
ಈ ವರದಿಯನ್ನಾಧರಿಸಿ ರಾಜ್ಯ ಯೋಜನಾ ನಿರ್ದೇಶಕರ ಕಛೇರಿಯಿಂದ ವಾರಕ್ಕೊಮ್ಮೆ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಗುವುದು.
APAAR ID ಸೃಜನೆ ಕಾರ್ಯವನ್ನು ದಿನಾಂಕ: 25-04-2026 ರಿಂದ 30-06-2026 ರೊಳಗೆ ಪೂರ್ಣಗೊಳಿಸಬೇಕಾಗಿರುವುದರಿಂದ ತಮ್ಮ ನೇತೃತ್ವದಲ್ಲಿ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರುಗಳಿಗೆ ಈ ಬಗ್ಗೆ ಅರಿವನ್ನು ಮೂಡಿಸಿ ಕಾರ್ಯೋನ್ಮುಖರಾಗಲು ನಿರ್ದೇಶನ ನೀಡಲು ಸೂಚಿಸಿದೆ.
