Dearness Allowance-2025 ಬೇಸಿಕ್ ಸಂಬಳದ ಜತೆ ತುಟ್ಟಿಭತ್ಯೆ (DA) ವಿಲೀನ: ಕೇಂದ್ರ ಸರ್ಕಾರದ ಸ್ಪಷ್ಟ ನಿಲುವೇನು?
Dearness Allowance-2026 ಕೇಂದ್ರ ಸರಕಾರದ ನೌಕರರು ಹಾಗೂ ಪಿಂಚಣಿದಾರರಿಗೆ ಈಗಾಗಲೇ 8ನೇ ವೇತನ ಆಯೋಗ ರಚನೆಯ ಸಿಹಿ ಸುದ್ದಿ ದೊರೆತಿದೆ. ಇದರ ಬೆನ್ನಲ್ಲೇ, ಆಯೋಗದ ಶಿಫಾರಸುಗಳ ಜಾರಿ ವೇಳೆ: ವೇಳೆ ತುಟ್ಟಿಭತ್ಯೆ ಹಾಗೂ ಬೇಸಿಕ್ ಸಂಬಳವನ್ನು ವಿಲೀನಗೊಳಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಈ ಕುರಿತು ಕೇಂದ್ರ ಸರಕಾರ ಮಹತ್ವದ ಸ್ಪಷ್ಟನೆ ನೀಡಿದೆ.
ತುಟ್ಟಿಭತ್ಯೆ ಹಾಗೂ ಬೇಸಿಕ್ ಸಂಬಳವನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಸರಕಾರವು ಸ್ಪಷ್ಟನೆ ನೀಡಿದೆ.
ಕೇಂದ್ರ ಸರಕಾರವು ಈಗ ಶೇ.58ರಷ್ಟು ತುಟ್ಟಿಭತ್ಯೆ ನೀಡುತ್ತಿದೆ. ಹಾಗೊಂದು ವೇಳೆ, ವಿಲೀನಗೊಳಿಸಿದರೆ ಮುಂಬರುವ ದಿನಗಳಲ್ಲಿ ನೌಕರರಿಗೆ ತುಟ್ಟಿಭತ್ಯೆಯನ್ನೇ ಘೋಷಣೆ ಮಾಡಲು ಆಗದು. ಇದರಿಂದಾಗಿ ಕೇಂದ್ರ ಸರಕಾರಿ ನೌಕರರಲ್ಲಿ ತುಟ್ಟಿಭತ್ಯೆ ಕಳೆದುಕೊಳ್ಳುವ ಆತಂಕ ಮೂಡಿತ್ತು. ಹಾಗಾಗಿ, ಕೇಂದ್ರ ಸರಕಾರವೇ ಈಗ ವಿಲೀನಗೊಳಿಸುವ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿರುವುದು ನೌಕರರು ನಿಟ್ಟುಸಿರು ಬಿಡುವಂತಾಗಿದೆ.

2026ರ ಏಪ್ರಿಲ್ 1ರಿಂದ 8ನೇ ವೇತನ ಆಯೋಗವು ಜಾರಿಗೆ ಬರುವ ನಿರೀಕ್ಷೆ ಇದೆ.