Government Employees: ನಿಯೋಜನೆ ( Deputation) ಕುರಿತು ಸಂಕ್ಷಿಪ್ತ ವಿವರಣೆ-01

Government Employees: ನಿಯೋಜನೆ ( Deputation) ಕುರಿತು ಸಂಕ್ಷಿಪ್ತ ವಿವರಣೆ:

Government Employees: ನಿಯೋಜನೆ ( Deputation) ಕುರಿತು ಸಂಕ್ಷಿಪ್ತ ವಿವರಣೆ: ಸರ್ಕಾರಿ ನೌಕರರ ನಿಯೋಜನೆಗೆ ಸಂಬಂಧಿಸಿದಂತೆ ಸೂಚನೆಗಳ ಕುರಿತು ಕರ್ನಾಟಕ ಸರ್ಕಾರ, ಸರ್ಕಾರದ ಸುತ್ತೋಲೆ ಸಂಖ್ಯೆ: ಸಂಖ್ಯೆ: ಸಿಆಸುಇ 14 ಸೇನೌವ 2023, ದಿನಾಂಕ: 12.09.2023ರನ್ನು ಹೊರಡಿಸಿದೆ.

1) ನಿಯೋಜನೆ ಕುರಿತು ಯಾವ ನಿಯಮದಲ್ಲಿ ತಿಳಿಸಲಾಗಿದೆ?

ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 16(a)(ii)ರಲ್ಲಿ ತಿಳಿಸಿಕೊಡಲಾಗಿದೆ. ಹಾಗೂ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಲಾದ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 22 ಸೇನೌವ 2013 ದಿನಾಂಕ:07.06.20130 ಕಂಡಿಕೆ 6(ಆ) ರಲ್ಲಿ ತಿಳಿಸಿಕೊಡಲಾಗಿದೆ.

2) ಯಾವ ಹುದ್ದೆಗಳಿಗೆ ಯಾರು ಬೇಕಾದರು ನಿಯೋಜನೆ ಹೋಗಬಹುದೇ?

ಕಂಡಿತಾ ಇಲ್ಲ… ರಾಜ್ಯ ಸಿವಿಲ್ ಸೇವೆಗಳಲ್ಲಿ ಸಮಾನಾಂತರ ಹುದ್ದೆಗೆ ನಿಯೋಜನೆ ಮೇಲೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಸಮಾಂತರ ಹುದ್ದೆ ಎಂದರೆ ಕರ್ನಾಟಕ ನಾಗರೀಕ ಸೇವಾ (ಸಿಸಿಎ) ನಿಯಮ 5 ರಡಿ ವರ್ಗೀಕರಿಸಿರುವ ಸಮೂಹಗಳಡಿ ಬರುವ ಸಮಾನ ವೇತನ ಶ್ರೇಣಿಗಳ ಹುದ್ದೆಗಳಾಗಿರಬೇಕು.

3) ಎಷ್ಟು ವರ್ಷ ನಿಯೋಜನೆ ಹೊಗಬಹುದು?

ಇಂತಹ ಯಾವುದೇ, ಸಾಮಾನ್ಯ ನಿಯೋಜನೆಯ ಅವಧಿಯನ್ನು ಗರಿಷ್ಠ ಐದು ವರ್ಷಗಳು ಮಾತ್ರ. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 50(3)ರಲ್ಲಿ ಸರ್ಕಾರದ ವಿಶೇಷ ಆದೇಶಗಳಿದ್ದರೆ ಮಾತ್ರ ನಿಯೋಜನೆಯ ಅವಧಿಯನ್ನು ಐದು ವರ್ಷಗಳಿಗಿಂತ ಹೆಚ್ಚಿಗೆ ವಿಸ್ತರಿಸಬಹುದು.

4) ಚಾತುರ್ಮಾಸ ಅವಧಿಯನ್ನು (Cooling-aff period) ಎಂದರೇನು?

ಸರ್ಕಾರಿ ನೌಕರನು ವರ್ಗಾವಣೆಗೊಂಡ / ನಿಯೋಜನೆಗೊಳಿಸಿದ ಹುದ್ದೆಯಲ್ಲಿ ಗರಿಷ್ಠ ಅವಧಿಯನ್ನು ಪೂರೈಸಿದ್ದಾಗ ತಾನು ತನ್ನ ಮಾತೃ ಇಲಾಖೆ / ಕೇಂದ್ರಸ್ಥಾನಕ್ಕೆ ಹಿಂತಿರುಗಿ 2 ವರ್ಷಗಳ ಕಾಲ ಚಾತುರ್ಮಾಸ ಅವಧಿಯನ್ನು (Cooling-aff period) ಮುಗಿಸಬೇಕಾಗುತ್ತದೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment