Diploma Curriculum 2025 (C-25): ಡಿಪ್ಲೊಮಾಕ್ಕೆ ಹೊಸ ಪಠ್ಯಕ್ರಮ|ಈ ವರ್ಷದಿಂದ ಜಾರಿಗೆ ಆದೇಶ.

Diploma Curriculum 2025 (C-25): ಡಿಪ್ಲೊಮಾಕ್ಕೆ ಹೊಸ ಪಠ್ಯಕ್ರಮ|ಈ ವರ್ಷದಿಂದ ಜಾರಿಗೆ ಆದೇಶ

Diploma Curriculum 2025 (C-25): ರಾಜ್ಯದ ಪಾಲಿಟೆಕ್ನಿಕ್ ಕಾಲೇಜ್‌ಗಳಲ್ಲಿ 2025-26ನೇ ಶೈಕ್ಷಣಿಕ ವರ್ಷದಲ್ಲಿ ಮೊದಲ ವರ್ಷದ ಡಿಪ್ಲೊಮಾ ಮತ್ತು ಪೋಸ್ಟ್ ಡಿಪ್ಲೋಮಾ ಕೋರ್ಸ್‌ಗಳಿಗೆ ಪಠ್ಯಕ್ರಮ25 (C-25) ಜಾರಿಗೆ ತರುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯದಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಡಿಪ್ಲೊಮಾ ಪಠ್ಯಕ್ರಮ ಪರಿಷ್ಕರಿಸಲಾಗುತ್ತಿದೆ.

ಅದರಂತೆ ಪರಿಷ್ಕಕ ಪಠ್ಯಕ್ರಮ ಈ ವರ್ಷದಿಂದ ಜಾರಿಗೆ ಬರಲಿದ್ದು 2030 ರ ವರೆಗೆ ಜಾರಿಯಲ್ಲಿರಲಿದೆ. ಪ್ರಸ್ತುತ ಔದ್ಯೋಗಿಕ, ಕೈಗಾರಿಕಾ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಬದಲಾವಣೆ, ಆವಿಷ್ಕಾರ ಮತ್ತು ಅವುಗಳ ಅವಶ್ಯಕತೆ ಪರಿಗಣಿಸಿ ರಾಜ್ಯದ ಡಿಪ್ಲೊಮಾ ಮತ್ತು ಪೋಸ್ಟ್ ಡಿಪ್ಲೊಮಾ ಕೋರ್ಸ್ಗಳ ಪಠ್ಯ ಪರಿಸ್ಕರಿಸಲಾಗಿದೆ.

44 ಡಿಪ್ಲೊಮಾ ಕೋರ್ಸ್ ಮತ್ತು ಒಂದು ಪೋಸ್ಟ್ ಡಿಪ್ಲೊಮಾ ಕೋರ್ಸ್ ಸಂಬಂಧಿಸಿದ ಕೋರ್ಸ್ ಪಠ್ಯಕ್ರಮ ಪರಿಷ್ಕರಣೆಯನ್ನು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ತಾಂತ್ರಿಕ ಶಿಕ್ಷಕರ ತರಬೇತಿ ಮತ್ತು ಸಂಶೋಧನಾ ಸಂಸ್ಥೆ (ಎನ್ ಐಟಿಟಿಟಿಆರ್) ಯು ನಡೆಸಿದೆ.

 

ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯು ರಾಜ್ಯದ ಪಾಲಿಟೆಕ್ನಿಕ್‌ಗಳಲ್ಲಿ ಬೋಧಿಸಲ್ಪಡುವ ಡಿಪ್ಲೊಮಾ ಕೋರ್ಸುಗಳ ಪಠ್ಯಕ್ರಮವನ್ನು ಪರಿಷ್ಕರಿಸಿ, ಹೊಸದಾಗಿ ರೂಪಿಸಿದ Curriculum 2025 (C-25) ಅನ್ನು 2025-26ನೇ ಶೈಕ್ಷಣಿಕ ಸಾಲಿನಿಂದ ಡಿಪ್ಲೋಮಾ ಪ್ರಥಮ ವರ್ಷದ ಪಠ್ಯಕ್ರಮಕ್ಕೆ ಮಾತ್ರ ಅನ್ವಯಿಸುವಂತೆ ಜಾರಿಗೆ ತರಲು ಸರ್ಕಾರದ ಅನುಮತಿ ನೀಡಿ ಆದೇಶಿಸಿದೆ.

ಸದರಿ ಹೊಸ ಪಠ್ಯಕ್ರಮಕ್ಕೆ ಅನುಗುಣವಾಗಿ ರೂಪಿಸಲಾದ Regulations of Diploma and Post Diploma Programme- Curriculum 2025 (C-25) ನಿಯಮಾವಳಿಗಳನ್ನು ಈ ಆದೇಶದ ಅನುಬಂಧದಲ್ಲಿ ನೀಡಲಾಗಿದೆ.

 

CLICK HERE TO DOWNLOAD CURRICULUM

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!