District Court Tumakuru Jobs-2026: ಸ್ಟೆನೋಗ್ರಾಫರ್ ಗ್ರೇಡ್-III ಹಾಗೂ ಟೈಪಿಸ್ಟ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ

District Court Tumakuru Jobs: ಸ್ಟೆನೋಗ್ರಾಫರ್ ಗ್ರೇಡ್-III ಹಾಗೂ ಟೈಪಿಸ್ಟ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ.

District Court Tumakuru Jobs: ತುಮಕೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2026: ಸ್ಟೆನೋಗ್ರಾಫರ್ ಗ್ರೇಡ್-III ಹಾಗೂ ಟೈಪಿಸ್ಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ. ಅರ್ಹತೆ, ವಯೋಮಿತಿ, ವೇತನ, ಅರ್ಜಿ ಸಲ್ಲಿಕೆ ವಿಧಾನ, ಪ್ರಮುಖ ದಿನಾಂಕಗಳು ಹಾಗೂ ಅಧಿಕೃತ ಅಧಿಸೂಚನೆಯ ಸಂಪೂರ್ಣ ಮಾಹಿತಿಯನ್ನು ಇಲ್ಲಿದೆ.

ಈ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ-ಗ್ರೇಡ್-1 ಹಾಗೂ ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವೆಬ್‌ಸೈಟ್ https://tumakuru.dcourts.gov.in/ ಇಲ್ಲಿ ನೀಡಲಾದ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ದಿನಾಂಕ 25/7/2026 ರಿಂದ 24/8/2026ರ ರಾತ್ರಿ 11.59 ರವರೆಗೆ ಮಾತ್ರ ಸಲ್ಲಿಸತಕ್ಕದ್ದು.

ಆನ್‌ಲೈನ್ ಹೊರತುಪಡಿಸಿ, ಖುದ್ದಾಗಿ, ಅಂಚೆ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

1. ಶೀಘ್ರ ಲಿಪಿಗಾರ ಗ್ರೇಡ್-III ಹುದ್ದೆ (Stenographer Grade-III):

▪️ಹುದ್ದೆಗಳ ಸಂಖ್ಯೆ: 10 (ಹೊಸ ಹುದ್ದೆಗಳು 7 + ಬ್ಯಾಕ್ ಲಾಗ್ ಹುದ್ದೆಗಳು 3)

▪️ವೇತನ ಶ್ರೇಣಿ: 44425-1125-47800-1250-52800-1375-58300-1500-64300-1650-74200-1900-83700

▪️ಹಿಂಬಾಕಿ ಹುದ್ದೆಗಳು (ಬ್ಯಾಕ್ ಲಾಗ್):

 

• ಹಿಂಬಾಕಿ ಹುದ್ದೆಗಳು (ಬ್ಯಾಕ್‌ಲಾಗ್):

ವರ್ಗೀಕರಣ ಮಹಿಳೆ ಗ್ರಾಮೀಣ ಅಂಗವಿಕಲ ಒಟ್ಟು
ಪರಿಶಿಷ್ಟ ಪಂಗಡ   1   1
ಪ್ರವರ್ಗ 2ಬಿ   1   1
ಸಾಮಾನ್ಯ ಅಭ್ಯರ್ಥಿ     1* 1
ಒಟ್ಟು   2 1 3

* Blindness and Low Vision (ಅಂಧ/ದೃಷ್ಟಿಮಾಂದ್ಯ)

• ಪ್ರವರ್ಗಗಳ ವರ್ಗೀಕರಣ:

ವರ್ಗೀಕರಣ ಇತರ ಮಹಿಳೆ ಗ್ರಾಮೀಣ ಅಂಗವಿಕಲ ಒಟ್ಟು
ಪರಿಶಿಷ್ಟ ಜಾತಿ   1     1
ಪ್ರವರ್ಗ–2ಎ 1 1     2
ಪ್ರವರ್ಗ–2ಬಿ 1       1
ಸಾಮಾನ್ಯ ಅಭ್ಯರ್ಥಿ   1 1 1 3
ಒಟ್ಟು 2 3 1 1 7

 

ಶೈಕ್ಷಣಿಕ ವಿದ್ಯಾರ್ಹತೆ:

1. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ 3 ವರ್ಷಗಳ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

2. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಹಾಗೂ ಆಂಗ್ಲ ಭಾಷೆಯ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಹಿರಿಯ ಶ್ರೇಣಿ ಶೀಘ್ರಲಿಪಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಆಯ್ಕೆ ವಿಧಾನ:

ಅ)ಕರ್ನಾಟಕ ಅಧೀನ ನ್ಯಾಯಾಲಯಗಳು (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2021ರ ನಿಯಮಗಳನ್ವಯ ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುವುದು.

ಆ) ಆಯ್ಕೆಗೆ ಕೌಶಲ ಪರೀಕ್ಷೆ ಮತ್ತು ಸಂದರ್ಶನವನ್ನು ಈ ಕೆಳಕಂಡಂತೆ ನಡೆಸಲಾಗುವುದು.

1. ನೇಮಕಾತಿ ಪ್ರಾಧಿಕಾರದಿಂದ ನೇಮಿಸಲಾದ ಪರೀಕ್ಷಕರು 1 ನಿಮಿಷಕ್ಕೆ 120 ಪದಗಳ ದರದಲ್ಲಿ ತಲಾ 5 ನಿಮಿಷಗಳ ಕನ್ನಡ ಮತ್ತು ಇಂಗ್ಲೀಷ್ ಉಕ್ತಲೇಖನವನ್ನು ನೀಡುವರು. ಅದನ್ನು ಅಭ್ಯರ್ಥಿಗಳು 45 ನಿಮಿಷಗಳಲ್ಲಿ ವಿಶೇಷ ತಂತ್ರಾಂಶದ ಗಣಕಯಂತ್ರದಲ್ಲಿ ಬೆರಳಚ್ಚು ಮಾಡತಕ್ಕದ್ದು. ಬೆರಳಚ್ಚು ಯಂತ್ರದ ಕೀಲಿಮಣೆಯನ್ನು ಹೋಲುವ ತಂತ್ರಾಂಶವನ್ನು ಗಣಕಯಂತ್ರಗಳಿಗೆ ಅಳವಡಿಸಲಾಗುವುದು.

2. ಕನ್ನಡ ಮತ್ತು ಆಂಗ್ಲ ಭಾಷಾ ಕೌಶಲ ಪರೀಕ್ಷೆಗಳಿಗೆ ತಲಾ ಗರಿಷ್ಠ 100 ಅಂಕಗಳನ್ನು ನಿಗದಿಪಡಿಸಲಾಗಿದ್ದು, ಉತ್ತೀರ್ಣರಾಗಲು ತಲಾ ಕನಿಷ್ಠ 50 ಅಂಕಗಳನ್ನು ಪಡೆಯಬೇಕಾಗಿರುತ್ತದೆ.

3. ನಿಗದಿಪಡಿಸಲಾದ ವಿದ್ಯಾರ್ಹತೆಯ ಪರೀಕ್ಷೆಗಳಲ್ಲಿನ ಮತ್ತು ಕೌಶಲ ಪರೀಕ್ಷೆಗಳ ಒಟ್ಟು ಅಂಕಗಳ ಶೇಕಡಾವಾರು ಮೊತ್ತದ ಆಧಾರದ ಮೇಲೆ ಮೀಸಲಾತಿಗನುಗುಣವಾಗಿ 1 ಹುದ್ದೆಗೆ 5 ಅಭ್ಯರ್ಥಿಗಳಂತೆ (1:5ರ ಅನುಪಾತದಲ್ಲಿ) ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

4. ಸಂದರ್ಶನವು 5 ಅಂಕಗಳನ್ನು ಒಳಗೊಂಡಿರುತ್ತದೆ.

2. ಬೆರಳಚ್ಚುಗಾರ ಹುದ್ದೆ (Typist) :

ಹುದ್ದೆಗಳ ಸಂಖ್ಯೆ: 14 (ಹೊಸ ಹುದ್ದೆಗಳು 13 + ಬ್ಯಾಕ್‌ ಲಾಗ್ ಹುದ್ದೆ 1)

▪️ವೇತನ ಶ್ರೇಣಿ: 34100-800-35700-900-39300-1000-43300-1125-47800-1250-52800-1375-58300-1500-64300-1650-67600

ಹಿಂಬಾಕಿ ಹುದ್ದೆಗಳು (ಬ್ಯಾಕ್‌ ಲಾಗ್):

ವರ್ಗೀಕರಣ ಅಂಗವಿಕಲ ಒಟ್ಟು
ಪ್ರವರ್ಗ–2ಬಿ 1 * 1
ಒಟ್ಟು 1

* Blindness and Low Vision (ಅಂಧ/ದೃಷ್ಟಿಮಾಂದ್ಯ)

ಹುದ್ದೆಗಳ ವರ್ಗೀಕರಣ:

ವರ್ಗೀಕರಣ ಇತರ ಮಹಿಳೆ ಗ್ರಾಮೀಣ ಅಂಗವಿಕಲ ಒಟ್ಟು
ಪರಿಶಿಷ್ಟ ಜಾತಿ   1 1   2
ಪ್ರವರ್ಗ–1 1       1
ಪ್ರವರ್ಗ–2ಎ 1 1     2
ಪ್ರವರ್ಗ–2ಬಿ 1       1
ಪ್ರವರ್ಗ–3ಎ 1       1
ಸಾಮಾನ್ಯ ಅಭ್ಯರ್ಥಿ 1 2 2 1* 6
ಒಟ್ಟು 5 4 3 1 13

* Blindness and Low Vision (ಅಂಧ/ದೃಷ್ಟಿಮಾಂದ್ಯ)

ಶೈಕ್ಷಣಿಕ ವಿದ್ಯಾರ್ಹತೆ:

1.ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ 3 ವರ್ಷಗಳ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

2. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಹಾಗೂ ಆಂಗ್ಲ ಹಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

3.12ನೇ ತರಗತಿಯ ಅಂಕಗಳು ಶ್ರೇಣಿಯಲ್ಲಿದ್ದರೆ (Grade) ಅದನ್ನು ಅಂಕಗಳಾಗಿ ಪರಿವರ್ತಿಸಿ ಗರಿಷ್ಠ ಅಂಕಗಳು ಮತ್ತು ಪಡೆದ ಅಂಕಗಳನ್ನು ನಮೂದಿಸಿದ ಅಂಕ ಪಟ್ಟಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಕ್ಷಮ ಪ್ರಾಧಿಕಾರದಿಂದ ಪಡೆದಿಟ್ಟುಕೊಂಡಿರಬೇಕು.

▪️ಬೆರಳಚ್ಚುಗಾರ ಹುದ್ದೆಯ ಆಯ್ಕೆ ವಿಧಾನ :

ಅ) ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ 1977 ಹಾಗೂ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ ನೇಮಕಾತಿ) ನಿಯಮ 1982 ಹಾಗೂ (ತಿದ್ದುಪಡಿ) ನಿಯಮಗಳು, 2007 ಮತ್ತು 2021ರ ನಿಯಮಗಳನ್ವಯ ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುವುದು.

ಆ) ಆಯ್ಕೆಗೆ ಕೌಶಲ ಪರೀಕ್ಷೆ ಮತ್ತು ಸಂದರ್ಶನವನ್ನು ಈ ಕೆಳಕಂಡಂತೆ ನಡೆಸಲಾಗುವುದು.

1. ನೇಮಕಾತಿ ಪ್ರಾಧಿಕಾರದಿಂದ ನೇಮಿಸಲಾದ ಪರೀಕ್ಷಕರು 15 ನಿಮಿಷಗಳ ಕನ್ನಡ ಮತ್ತು 15 ನಿಮಿಷಗಳ ಇಂಗ್ಲೀಷ್ ಉಕ್ತಲೇಖನವನ್ನು ನೀಡುವರು. ಅದನ್ನು ಅಭ್ಯರ್ಥಿಗಳು ವಿಶೇಷ ತಂತ್ರಾಂಶದ ಗಣಕಯಂತ್ರದಲ್ಲಿ ಬೆರಳಚ್ಚು ಮಾಡತಕ್ಕದ್ದು. ಬೆರಳಚ್ಚುಯಂತ್ರದ ಕೀಲಿಮಣೆಯನ್ನು ಹೋಲುವ ತಂತ್ರಾಂಶವನ್ನು ಗಣಕಯಂತ್ರಗಳಿಗೆ ಅಳವಡಿಸಲಾಗುವುದು.

2. ಕನ್ನಡ ಮತ್ತು ಆಂಗ್ಲ ಭಾಷಾ ಕೌಶಲ ಪರೀಕ್ಷೆಗಳಿಗೆ ತಲಾ ಗರಿಷ್ಠ 100 ಅಂಕಗಳನ್ನು ನಿಗದಿಪಡಿಸಲಾಗಿದ್ದು, ಉತ್ತೀರ್ಣರಾಗಲು ತಲಾ ಕನಿಷ್ಠ 50 ಅಂಕಗಳನ್ನು ಪಡೆಯಬೇಕಾಗಿರುತ್ತದೆ.

3. ನಿಗದಿಪಡಿಸಲಾದ ವಿದ್ಯಾರ್ಹತೆಯ ಪರೀಕ್ಷೆಗಳಲ್ಲಿನ ಮತ್ತು ಕೌಶಲ ಪರೀಕ್ಷೆಗಳ ಒಟ್ಟು ಅಂಕಗಳ ಶೇಕಡಾವಾರು ಮೊತ್ತದ ಆಧಾರದ ಮೇಲೆ ಮೀಸಲಾತಿಗನುಗುಣವಾಗಿ 1 ಹುದ್ದೆಗೆ 5 ಅಭ್ಯರ್ಥಿಗಳಂತೆ (1:5ರ ಅನುಪಾತದಲ್ಲಿ) ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

4. ಸಂದರ್ಶನವು 5 ಅಂಕಗಳನ್ನು ಒಳಗೊಂಡಿರುತ್ತದೆ.

ಮೇಲಿನ ಎಲ್ಲಾ ಹುದ್ದೆಗಳಿಗೆ ವಯೋಮಿತಿ :

(ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕಕ್ಕೆ):

▪️ಕನಿಷ್ಠ ವಯೋಮಿತಿ- 18 ವರ್ಷ

▪️ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ- 35+5* ವರ್ಷ

▪️ಪ್ರವರ್ಗ 2A, 2B, 3A, 3B -38+5* ವರ್ಷ 

▪️ಪ.ಜಾ, ಪ.ಪಂ & ಪ್ರವರ್ಗ-1- 40+5* ವರ್ಷ

▪️1) ಸರ್ಕಾರಿ ಸೇವೆಯಲ್ಲಿರುವವರಿಗೆ, ವಿಧವೆಯರಿಗೆ, ಮಾಜಿ ಸೈನಿಕರಿಗೆ ಹಾಗೂ ಅಂಗವಿಕಲರಿಗೆ ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

2) ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 262 ಸೆನೆನಿ 2025, ದಿನಾಂಕ 29/1/2026ರನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a onetime measure) 05 ವರ್ಷಗಳ ಸಡಿಲಿಕೆ ನೀಡಲಾಗುವುದು.

▪️ಪರಿವೀಕ್ಷಣಾ ಅವಧಿ:

ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸೇವಾ ನಿಯಮ (ಪರಿವೀಕ್ಷಣೆ ನಿಯಮಗಳು) 1977ರ ಪ್ರಕಾರ 2 ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿರುತ್ತಾರೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ, ಕನ್ನಡ ಭಾಷಾ ಪರೀಕ್ಷೆಯಲ್ಲಿ ಮತ್ತು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

ಮೇಲಿನ ಹುದ್ದೆಗಳಿಗೆ ನಿಗದಿತ ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ :

▪️ಪ್ರವರ್ಗ-2ಎ, 2ಬಿ, 3ಎ, 3ಬಿ ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ- ₹200

▪️ಪ.ಜಾ, ಪ.ಪಂ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ- ಶುಲ್ಕ ವಿನಾಯತಿ ಇರುತ್ತದೆ.

▪️ ನಿಗದಿತ ಶುಲ್ಕವನ್ನು ನ್ಯಾಯಾಲಯದ https://tumakuru.dcourts.gov.in/ ವೆಬ್ಸೈಟ್ ನಲ್ಲಿ ನೀಡಲಾದ ಲಿಂಕ್ ಮುಖಾಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ State Bank Collect ಮೂಲಕ Online payment through Net Banking/ Credit Card/ Debit Card/UPI ID/QR Code ಸೌಲಭ್ಯದ ಮೂಲಕ ಪಾವತಿಸತಕ್ಕದ್ದು. ಇದನ್ನು ಹೊರತುಪಡಿಸಿ ಯಾವುದೇ Demond Draft, Postal Order, Money Order, Challan ಇವುಗಳನ್ನು ಸ್ವೀಕರಿಸಲಾಗುವುದಿಲ್ಲ. ಶುಲ್ಕ ಭರಿಸಿದ ನಂತರ ತಕ್ಷಣವೇ e-verify ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ನಿಗದಿತ ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅಭ್ಯರ್ಥಿಗಳು ಒಂದು ವೇಳೆ ಅರ್ಜಿ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದಲ್ಲಿ ಅಥವಾ ಯಾವುದೇ ಕಾರಣಕ್ಕಾಗಿ ಶುಲ್ಕ ಪಾವತಿಯಾಗದಿದ್ದಲ್ಲಿ ನೇಮಕಾತಿ ಪ್ರಾಧಿಕಾರವು ಹೊಣೆಯಾಗಿರುವುದಿಲ್ಲ ಮತ್ತು ಈ ಕುರಿತು ಯಾವುದೇ ಸಂವಹನಕ್ಕೆ ಅವಕಾಶವಿರುವುದಿಲ್ಲ.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡುವ ಮೊದಲು ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳತಕ್ಕದ್ದು.

ಹುದ್ದೆಗಳ ಸಂಖ್ಯೆ ಮತ್ತು ವರ್ಗೀಕರಣವು ಯಾವುದೇ ಮುನ್ಸೂಚನೆಯಿಲ್ಲದೆ ಬದಲಾವಣೆಗೆ ಒಳಪಡಬಹುದು.

1. ಅಭ್ಯರ್ಥಿಗಳು ವಿವಿಧ ವರ್ಗಗಳಿಗೆ ಒಂದೇ ಅರ್ಜಿಯನ್ನು ಸಲ್ಲಿಸಬೇಕು. ಸದರಿ ಅರ್ಜಿಯಲ್ಲಿ ತಾವು ಕ್ಷೇಮು ಮಾಡುವ ತಮ್ಮ ಮೀಸಲಾತಿಗಳ ಬಗ್ಗೆ ನಮೂದಿಸತಕ್ಕದ್ದು.

2. ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸುವ ಮೊದಲು ಕೊಟ್ಟಿರುವ ಎಲ್ಲಾ ಸೂಚನೆಗಳನ್ನು ಗಮನವಿಟ್ಟು ಓದಿಕೊಳ್ಳುವುದು ಮತ್ತು ತಪ್ಪಾಗದಂತೆ ನೋಡಿಕೊಳ್ಳುವುದು. ಸರಿಯಾದ ಮಾಹಿತಿ ನೀಡದಿರುವ ಹಾಗೂ ಅಪೂರ್ಣ ಮಾಹಿತಿಂ ಮಾಹಿತಿಯುಳ್ಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

3. ಅರ್ಜಿ ಸಲ್ಲಿಕೆಯ ಬಳಿಕ ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳುವುದು.

4. ಅಭ್ಯರ್ಥಿಗಳು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವುದು ಹಾಗೂ ಮಿಂಚಂಚೆ (e-mail id) ಯನ್ನು ನಮೂದಿಸುವುದು. ಅರ್ಹ ಅಭ್ಯರ್ಥಿಗಳಿಗೆ sms ಮತ್ತು e-mail ಮುಖಾಂತರ ಮಾಹಿತಿ ನೀಡಲಾಗುವುದು. ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

5. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಯು ಅರ್ಜಿಯಲ್ಲಿ ನಮೂದಿಸುವ ಜನ್ಮದಿನಾಂಕ, ವಿದ್ಯಾರ್ಹತೆ, ಮೀಸಲಾತಿ ಹಾಗೂ ವಯೋಮಿತಿ ಸಡಿಲಿಕೆ ಇತ್ಯಾದಿ ವಿವರಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು ಹಾಗೂ ಈ ಬಗ್ಗೆ ಆನಂತರದಲ್ಲಿ ಬದಲಾವಣೆ ಕುರಿತಂತೆ ಸಲ್ಲಿಸುವ ಯಾವುದೇ ಕೋರಿಕೆ ಪತ್ರಗಳನ್ನು ಪುರಸ್ಕರಿಸಲಾಗುವುದಿಲ್ಲ.

6.ಅಭ್ಯರ್ಥಿಗಳು ತಮ್ಮ ಭಾವಚಿತ್ರ ಮತ್ತು ಸಹಿಯನ್ನು scan ಮಾಡಿ upload ಮಾಡುವುದು.

7.ಅಭ್ಯರ್ಥಿಯು ಕಪ್ಪು ಬಾಲ್ ಪಾಯಿಂಟ್ ಪೆನ್ನಿನಲ್ಲಿ ಬಿಳಿ ಹಾಳೆಯ ಮೇಲೆ ಸಹಿ ಮಾಡಿ (2.5 cm ಉದ್ದ 7.5 cm ಅಗಲವುಳ್ಳದ್ದಾಗಿರಬೇಕು ಮತ್ತು 25 kb ಅಳತೆಯದ್ದಾಗಿರಬೇಕು ಹಾಗೂ ಅದು jpg ನಮೂನೆಯಲ್ಲಿರಬೇಕು) upload ಮಾಡಬೇಕು.

8.ತದನಂತರ ಅಭ್ಯರ್ಥಿಯು ಆನ್‌ಲೈನ್ ಅರ್ಜಿಯಲ್ಲಿ ಕೋರಲಾದ ಎಲ್ಲಾ ಮಾಹಿತಿಗಳನ್ನೂ ಭರ್ತಿ ಮಾಡಿ ನಿಗದಿತ ಶುಲ್ಕ ಪಾವತಿಸಲು ಅರ್ಜಿಯಲ್ಲಿ ತಿಳಿಸಿರುವಂತೆ ಕ್ರಮ ಕೈಗೊಳ್ಳುವುದು. ತದನಂತರ ಅರ್ಜಿಯನ್ನು ಹಾಗೂ ಆನ್‌ಲೈನ್‌ನಲ್ಲಿ ಶುಲ್ಕವನ್ನು ಪಾವತಿಸಿದ ಪ್ರತಿಯನ್ನು download ಮಾಡಿಕೊಂಡು ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ತಮ್ಮ ಹತ್ತಿರ ಕಾಯ್ದಿರಿಸಿಕೊಳ್ಳತಕ್ಕದ್ದು ಹಾಗೂ ಅರ್ಹತಾ ಪರೀಕ್ಷೆಯ ಸಮಯದಲ್ಲಿ ಹಾಜರುಪಡಿಸತಕ್ಕದ್ದು.

9. ಬಣ್ಣದ ಭಾವಚಿತ್ರವು ಇತ್ತೀಚಿನದಾಗಿದ್ದು ಅಳತೆಯಲ್ಲಿ 5cm ಉದ್ದ X 3.6cm ಅಗಲ ಉಳ್ಳದ್ದಾಗಿರಬೇಕು ಮತ್ತು 50kb ಅಳತೆಯದ್ದಾಗಿರಬೇಕು ಹಾಗೂ ಅದು .jpg ನಮೂನೆಯಲ್ಲಿರಬೇಕು. ಬಿಳಿ ಬಣ್ಣದ ಪರದೆಯ ಹಿನ್ನೆಲೆಯಿರುವ ಭಾವಚಿತ್ರವಾಗಿರಬೇಕು. (White background screen).

10.ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ಅರ್ಜಿಗೆ ಅಪ್‌ ಲೋಡ್ ಮಾಡಬೇಕು. (ಯಾವುದೇ ಕಾರಣಕ್ಕೂ ಭಾವಚಿತ್ರದ ಮೇಲೆ ಸಹಿ ಮಾಡಬಾರದು).

11. ಅಭ್ಯರ್ಥಿಯು ಕಪ್ಪು ಬಾಲ್ ಪಾಯಿಂಟ್ ಪೆನ್ನಿನಲ್ಲಿ ಬಿಳಿಯ ಹಾಳೆಯ ಮೇಲೆ ಸಹಿ ಮಾಡಿ ಅಪ್‌ ಲೋಡ್ ಮಾಡಬೇಕು. (2.5cm ಉದ್ದ X 7.5cm ಅಗಲ ಉಳ್ಳದ್ದಾಗಿರಬೇಕು ಮತ್ತು 26kb ಅಳತೆಯದ್ದಾಗಿರಬೇಕು ಹಾಗೂ ಅದು .jpg ನಮೂನೆಯಲ್ಲಿರಬೇಕು.

12.ತದನಂತರ ಅಭ್ಯರ್ಥಿಯು ಆನ್‌ಲೈನ್ ಅರ್ಜಿಯಲ್ಲಿ ಕೋರಲಾದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ನಿಗದಿತ ಶುಲ್ಕ ಪಾವತಿಸಲು ಅರ್ಜಿಯಲ್ಲಿ ತಿಳಿಸಿರುವಂತೆ ಕ್ರಮ ಕೈಗೊಳ್ಳುವುದು. ತದನಂತರ ಅರ್ಜಿಯನ್ನು ಹಾಗೂ ಶುಲ್ಕವನ್ನು ತುಂಬಿದ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ತಮ್ಮ ಹತ್ತಿರ ಕಾಯ್ದಿರಿಸಿಕೊಳ್ಳತಕ್ಕದ್ದು ಹಾಗೂ ಕೌಶಲ ಪರೀಕ್ಷೆಯ/ ಸಂದರ್ಶನದ ಸಮಯದಲ್ಲಿ ಹಾಜರುಪಡಿಸತಕ್ಕದ್ದು.

13.ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ವಿಳಂಬ ಮಾಡದೇ ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲೂ ಹಿಂದಿರುಗಿಸಲಾಗುವುದಿಲ್ಲ ಹಾಗೂ ಯಾವುದೇ ಇತರೆ ನೇಮಕಾತಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.

14.ಈ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಲು ದಿನಾಂಕ 24/8/2026ರ ರಾತ್ರಿ 11.59 ರವರೆಗೆ ಅವಕಾಶವಿರುತ್ತದೆ.

15. ಕೌಶಲ ಪರೀಕ್ಷೆಯ ವೇಳಾಪಟ್ಟಿ ಹಾಗೂ ಸಂದರ್ಶನದ ವೇಳಾ ಪಟ್ಟಿಯನ್ನು ಈ ನ್ಯಾಯಾಲಯದ ವೆಬ್ಸೈಟ್ https://tumakuru.dcourts.gov.in/ನಲ್ಲಿ ಪ್ರಕಟಿಸಲಾಗುವುದು. ಕೌಶಲ ಪರೀಕ್ಷೆಗೆ ಮತ್ತು ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳ ಕೌಶಲ ಪರೀಕ್ಷೆಗೆ ಮತ್ತು ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಕೌಶಲ ಪರೀಕ್ಷೆಗೆ ಮತ್ತು ಸಂದರ್ಶನಕ್ಕೆ ಪ್ರವೇಶ ಪತ್ರಗಳನ್ನು ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ರವಾನಿಸಲಾಗುವುದಿಲ್ಲ. ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶ ಪತ್ರವನ್ನು ಡೌನ್‌ ಲೋಡ್ ಮಾಡಿಕೊಂಡು ಒಂದು ಮೂಲ ಗುರುತಿನ ಚೀಟಿಯೊಂದಿಗೆ (Voter ID/ Aadhar Card/ Driving License/ PAN Card) ಸಂದರ್ಶನಕ್ಕೆ ಹಾಜರಾಗುವುದು.

🔺ಅಭ್ಯರ್ಥಿಗಳು ಕೌಶಲ ಪರೀಕ್ಷೆ/ ಸಂದರ್ಶನ/ ದಾಖಲೆ ಪರಿಶೀಲನೆ ಸಮಯದಲ್ಲಿ ಈ ಕೆಳಕಂಡ ದಾಖಲೆಗಳನ್ನು ಹಾಜರುಪಡಿಸತಕ್ಕದ್ದು.

▪️ಆನ್‌ಲೈನ್ ಮೂಲಕ ಸಲ್ಲಿಸಲಾದ ಅರ್ಜಿಯ ಪ್ರತಿ

▪️ಶುಲ್ಕವನ್ನು ಪಾವತಿಸಿದ ರಶೀದಿಯ ಪ್ರತಿ

▪️ಎಸ್.ಎಸ್.ಎಲ್.ಸಿ/ ತತ್ಸಮಾನ ಅಂಕಪಟ್ಟಿ

▪️ ದ್ವಿತೀಯ ಪಿ.ಯು.ಸಿ/ ತತ್ಸಮಾನ ಅಂಕಪಟ್ಟಿ

1. ಬೆರಳಚ್ಚುಗಾರ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೇಲ್ಕಂಡ ದಾಖಲೆಗಳೊಂದಿಗೆ ಹಿರಿಯ ಶ್ರೇಣಿ ಶ್ರೇಣಿ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಗಳ ಅಂಕಪಟ್ಟಿಗಳು ಅಥವಾ ತತ್ಸಮಾನ ಪರೀಕ್ಷಾ ಅಂಕಪಟ್ಟಿಗಳು.

2. ಶೀಘ್ರಲಿಪಿಗಾರ- ಗ್ರೇಡ್-111 ರ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೇಲ್ಕಂಡ ದಾಖಲೆಗಳೊಂದಿಗೆ ಹಿರಿಯ ಶ್ರೇಣಿ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಗಳ ಅಂಕಪಟ್ಟಿಗಳು ಮತ್ತು ಹಿರಿಯ ಶ್ರೇಣಿ ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿ ಪರೀಕ್ಷೆಗಳ ಅಂಕಪಟ್ಟಿಗಳು ಅಥವಾ ತತ್ಸಮಾನ ಪರೀಕ್ಷಾ ಅಂಕಪಟ್ಟಿಗಳು.

▪️ಮೀಸಲಾತಿ ಮತ್ತು ಒಳ ಮೀಸಲಾತಿ ಕುರಿತಂತೆ ಸೂಚನೆಗಳು:

1. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ‘ನಮೂನೆ-ಡಿ’ ಯಲ್ಲಿ, ಪ್ರವರ್ಗ-1ರ ಅಭ್ಯರ್ಥಿಗಳು “ನಮೂನೆ ಇ” ಯಲ್ಲಿ ಮತ್ತು ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿಗೆ ಸೇರಿದ ಅಭ್ಯರ್ಥಿಗಳು ‘ನಮೂನೆ-ಎಫ್’ ನಲ್ಲಿ ಸಂಬಂಧಿಸಿದ ತಹಶೀಲ್ದಾರರಿಂದ ಪಡೆದ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಪಡೆದಿರತಕ್ಕದ್ದು.

2. ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ/96/ಸೇನನಿ/2005, ದಿನಾಂಕ 10/8/2005ರ ಪ್ರಕಾರ ನಿಗದಿತ ನಮೂನೆ-2 ರಲ್ಲಿ ಶಾಲಾ ಮುಖ್ಯೋಪಾಧ್ಯಾಯರಿಂದ ಪಡೆದು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲುಸಹಿಯನ್ನು ಕಡ್ಡಾಯವಾಗಿ ಮಾಡಿಸಿ ಸಲ್ಲಿಸಬೇಕು. ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರಗಳು.

2. ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ/96/ಸೇನನಿ/2005, ದಿನಾಂಕ 10/8/2005ರ ಪ್ರಕಾರ ನಿಗದಿತ ನಮೂನೆ-2 ರಲ್ಲಿ ಶಾಲಾ ಮುಖ್ಯೋಪಾಧ್ಯಾಯರಿಂದ ಪಡೆದು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲುಸಹಿಯನ್ನು ಕಡ್ಡಾಯವಾಗಿ ಮಾಡಿಸಿ ಸಲ್ಲಿಸಬೇಕು. ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರಗಳು ತಿರಸ್ಕೃತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ.

3 : ಗ್ರಾಮೀಣ ಮೀಸಲಾತಿಯನ್ನು ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ನಮೂನೆ-2ರ ಜೊತೆ ನಮೂನೆ-1ರ ದೃಢೀಕೃತ ಪತ್ರವನ್ನು ಹೊಂದಿರಬೇಕು.

4. ಮಾಜಿ ಸೈನಿಕ ಮೀಸಲಾತಿ ಕೋರುವ ಅಭ್ಯರ್ಥಿಗಳು ಮಿಲಿಟರಿ ಸೇವೆಯಿಂದ ಬಿಡುಗಡೆ ಮಾಡಲಾದ ಅಥವಾ ವಿಮುಕ್ತಿಗೊಳಿಸಿದ ಪ್ರಮಾಣ ಪತ್ರವನ್ನು ಹೊಂದಿರಬೇಕು.

5 : ಅಂಗವಿಕಲ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ದಿನಾಂಕ 19/11/2005ರ ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆ ಸಿಆಸುಇ/115/ಸೇನನಿ/2005 ರಲ್ಲಿ ನಿಗದಿಪಡಿಸಿರುವ ಅಂಗವಿಕಲತೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕು. (ಇತರೆ ನಮೂನೆಯ ಪ್ರಮಾಣ ಪತ್ರ/ ಗುರುತಿನ ಚೀಟಿಗಳನ್ನು ಪರಿಗಣಿಸುವುದಿಲ್ಲ).

6. ವಿಧವೆಯರು, ಜೀತ ಕಾರ್ಮಿಕರು ಮತ್ತು ರಿಯಾಯಿತಿಗೆ ಅರ್ಹರಾದ ಇನ್ನಿತರರು ವಯೋಮಿತಿ ರಿಯಾಯಿತಿ ಕೋರಲು ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕು.

7. ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದಿಂದ 6 ತಿಂಗಳೊಳಗಿನ ಇಬ್ಬರು ಗಣ್ಯವ್ಯಕ್ತಿಗಳು ನೀಡಿರುವ ನಡತೆ ಪ್ರಮಾಣ ಪತ್ರ (ಗಣ್ಯವ್ಯಕ್ತಿಗಳ ಮೊಹರು ಮತ್ತು ಸಹಿ ಕಡ್ಡಾಯವಾಗಿರಬೇಕು) ಪಡೆದಿರಬೇಕು.

8. ಅಭ್ಯರ್ಥಿಯು ಶಾಲಾ ನಡತೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆದಿರಬೇಕು.

▪️ಗಮನಿಸಬೇಕಾದ ಇತರೆ ಸೂಚನೆಗಳು:

1.ಮೇಲ್ಕಂಡ ದಾಖಲೆಗಳು ನಿಗದಿತ ನಮೂನೆಗಳಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಮೊದಲು ಪಡೆದ ದಾಖಲೆಗಳಾಗಿರಬೇಕು ಹಾಗೂ ಸದರಿ ದಾಖಲೆಗಳ ಮೂಲ ದಾಖಲೆಗಳನ್ನು ಪರಿಶೀಲನೆ ಸಮಯದಲ್ಲಿ ಹಾಜರುಪಡಿಸಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಪಡೆದ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ.

2. ಕೌಶಲ ಪರೀಕ್ಷೆಗೆ/ ಸಂದರ್ಶನಕ್ಕೆ/ ದಾಖಲೆ ಪರಿಶೀಲನೆಗೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಹಾಜರಾಗಬೇಕು.

3. ನೇಮಕಾತಿ ಸಂಬಂಧವಾಗಿ ಅಭ್ಯರ್ಥಿಗಳು ಈ ಕಚೇರಿಯೊಂದಿಗೆ ಯಾವುದೇ ದೂರವಾಣಿ/ ಪತ್ರ ವ್ಯವಹಾರ ನಡೆಸಲು ಆಸ್ಪದವಿರುವುದಿಲ್ಲ.

4. ಅಭ್ಯರ್ಥಿಯು ನಕಲಿ ಅಭ್ಯರ್ಥಿಯಾಗಿರುವುದು, ಖೋಟಾ ದಸ್ತಾವೇಜು, ತಿದ್ದಲಾದ ದಸ್ತಾವೇಜುಗಳನ್ನು ಸಲ್ಲಿಸಿರುವುದು. ತಪ್ಪು ಅಥವಾ ಸುಳ್ಳು ಹೇಳಿಕೆ ನೀಡಿರುವುದು.

5. ವಾಸ್ತವಿಕ ಮಾಹಿತಿಯನ್ನು ಮರೆ ಮಾಚಿರುವುದು, ನೇಮಕಾತಿ ಉದ್ದೇಶಗಳಿಗೆ ನಡೆಸಲಾದ ಪರಿಶೀಲನೆ ಪ್ರಕ್ರಿಯೆಗಳ ಸಂದರ್ಭಗಳಲ್ಲಿ ಅನುಚಿತ ಮಾರ್ಗವನ್ನು ಅನುಸರಿಸುತ್ತಿರುವುದು ಅಥವಾ ಅನುಸರಿಸಲು ಪ್ರಯತ್ನಿಸಿರುವುದು. ನೇಮಕಾತಿ ಸಂದರ್ಭದಲ್ಲಿ ಯಾವುದೇ ಇತರೆ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವುದು ಕಂಡುಬಂದಲ್ಲಿ ಅವರ ಅಭ್ಯರ್ಥಿತ್ವವನ್ನು ರದ್ದು ಪಡಿಸಲಾಗುವುದಲ್ಲದೇ ಅಭ್ಯರ್ಥಿಯನ್ನು ಕ್ರೀಮಿನಲ್ ವ್ಯವಹರಣೆಗಳಿಗೆ ಮತ್ತು ಶಿಸ್ತು ಕ್ರಮಕ್ಕೆ ಒಳಪಡಿಸಲಾಗುವುದು.

ವಿಶೇಷ ಸೂಚನೆ:

ಈ ಅಧಿಸೂಚನೆಗೆ ಸಂಬಂಧಿಸಿದಂತೆ ಹೊರಡಿಸಲಾಗುವ ನೇಮಕಾತಿ ಆದೇಶವು ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 01 ಸೆಹಿಮ 2026, ಬೆಂಗಳೂರು, ದಿನಾಂಕ 27/2/2026ರಲ್ಲಿ ತಿಳಿಸಿರುವಂತೆ ಮಾನ್ಯ ಉಚ್ಚನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

District Court Tumakuru Jobs

Important Links Click Here
Notification CLICK HERE
Online Application CLICK HERE
Official Website CLICK HERE

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!