ವಿವಾಹ ವಿಚ್ಛೇದ (Divorce) :Present law-Hindu Marriage Act 1955

ವಿವಾಹ ವಿಚ್ಛೇದ (Divorce) ಬಗ್ಗೆ ಒಂದಿಷ್ಟು ಮಾಹಿತಿ.

ವಿವಾಹ ವಿಚ್ಛೇದ (Divorce): ಹಿಂದೂ ಕಾನೂನಿಗಿಂತ ಮೊದಲು (Prior Hindu law) : ಹಿಂದೂ ಕಾನೂನಿನ ಪ್ರಕಾರ ವಿವಾಹವು ಗಂಡ ಮತ್ತು ಹೆಂಡತಿಯ ಅವಿಘಟಿತ ಒಂದಾಗುವಿಕೆಯೆಂಬ ಭಾವನೆ ಯಿದ್ದುದರಿಂದ ವಿವಾಹ ವಿಚ್ಛೇದದ ವಿಚಾರವು ಹಿಂದೂಗಳಿಗೆ ಹೊಸತು. ಮಾರಾಟದಿಂದ ಅಥವಾ ಪರಿತ್ಯಜನೆ ಯಿಂದ ಹೆಂಡತಿಯನ್ನು ಗಂಡನಿಂದ ಪ್ರತ್ಯೇಕಿಸಲಾಗುವದೆಂದು ಮನುವು ಘೋಷಿಸಿರುವನು. ವೈವಾಹಿಕ ಸಂಬಂಧವು ಮುರಿಯಲಾರದೆಂಬುದೇ ಇದರ ಅರ್ಥ. ಆದುದ ರಿಂದ ಧರ್ಮಶಾಸ್ತ್ರ ಗಳು ವಿವಾಹ ವಿಚ್ಛೇದನಕ್ಕೆ ಮನ್ನಣೆ ಕೊಟ್ಟಿಲ್ಲವೆಂಬುದು ಇದರಿಂದ ಸ್ಪಷ್ಟ ವಾಗುತ್ತದೆ. ಆದರೂ ಸಹ ಎಲ್ಲೆಲ್ಲಿ ವಿವಾಹ ವಿಚ್ಛೇದದ ಪರಂಪರೆಯಿತ್ತೋ ಅಲ್ಲೆಲ್ಲ ಇದಕ್ಕೆ ಕಾನೂನಿನ ಶಕ್ತಿಯಿತ್ತು. ಮುಂಬಯಿ, ಮದ್ರಾಸು ಮತ್ತು ಸೌರಾಷ್ಟ್ರದಲ್ಲಿ ಇದಕ್ಕೆ ಶಾಸನದಿಂದ ಸಮ್ಮತಿಯಿತ್ತು. ತದ್ವಿ ರುದ್ಧವಾದ ರೂಢಿಯಿಲ್ಲದಿದ್ದಲ್ಲಿ ವಿವಾಹ ವಿಚ್ಛೇದನವಾಗುವಂತಿರಲಿಲ್ಲ. . ಮತಾಂತರದಿಂದಾಗಲಿ ಜಾತಿ ಭ್ರಷ್ಟತೆಯಿಂದಾಗಲಿ ಅಥವಾ ಬಹುಪತ್ನಿತ್ವದ ಬಗ್ಗೆ ಮಾಡಲಾದ ಒಪ್ಪಂದದ ಉಲ್ಲಂಘನೆಯಿಂದಾಗಲಿ ಒಂದು ವಿವಾಹವು ವಿಚ್ಛೇದಿಸಲ್ಪಡುತ್ತಿರಲಿಲ್ಲ. ಜಾತಿಯಿಂದ ಹೇರಲಾದ ಜುಲ್ಮಾನೆಯನ್ನು ಸಲ್ಲಿಸಿ ವಿವಾಹ ವಿಚ್ಛೇದನ ಮಾಡುವ ಪದ್ಧತಿಯನ್ನು ಮುಂಬಯಿ ಉಚ್ಚನ್ಯಾಯಾಲಯವು ಖಂಡಿಸಿದ ನಿದರ್ಶನವಿದೆ. ಆದರೆ ಇನ್ನೊಂದು ಪಕ್ಷದ ಸಮ್ಮತಿ ಪಡೆದು ಒಂದು ಪಕ್ಷವು ವಿವಾಹ ವಿಚ್ಛೇದಗೊಳಿಸಿದ್ದನ್ನು ಮದ್ರಾಸ ಉಚ್ಚನ್ಯಾಯಾಲಯವು ಮನ್ನಿಸಿದೆ.

ಮನ್ನಣೆಯಿಲ್ಲದ ಪ್ರಕಾರದ ವಿವಾಹವನ್ನು ಪರಸ್ಪರ ಸಮ್ಮತಿಯಿಂದ ವಿಚ್ಛೇದಗೊಳಿಸ ಬಹುದೆಂದು ಕೌಟಿಲ್ಯನು ಹೇಳಿರುವನು. ಆದರೆ ವಿವಾಹವೊಂದನ್ನು ಮುರಿಯುವ ಬಗ್ಗೆ ಮನು ವಿನ ಸಮ್ಮತಿಯಿಲ್ಲ. “ಪರಸ್ಪರ ನಿಷ್ಠೆಯು ಮೃತ್ಯುಪರ್ಯಂತ ಮುಂದುವರಿಯಲಿ; ಇದೇ ಗಂಡ-ಹೆಂಡಿರ ಅತ್ಯಂತ ದೊಡ್ಡ ಧರ್ಮವೆಂಬುದಾಗಿ ಸಂಕ್ಷೇಪವಾಗಿ ತಿಳಿದಿರಲಿ” ಎಂದು ಮನುವು ಘೋಷಿಸಿರುವನು. ಒಬ್ಬ ಪತ್ನಿಯ ಕರ್ತವ್ಯವು ಆಕೆಯ ಮರಣದ ಬಳಿಕವೂ ಮುಂದುವರಿಯು ಇದೆ. ಆಕೆಯು ಎಂದೆಂದಿಗೂ ಇನ್ನೊಬ್ಬ ಗಂಡನನ್ನು ಪಡೆಯುವಂತಿಲ್ಲ ಎಂದು ಮನುವು ಅಭಿ ಪ್ರಾಯ ಪಟ್ಟಿರುವನು. ದೇಶೀಯ ಮತಾಂತರಿಗಳ ‘ವಿವಾಹ ವಿಘಟನೆ ಅಧಿನಿಯಮ 1866’ ಜಾರಿಗೆ ಬಂದ ಬಳಿಕ ಒಬ್ಬ ಹಿಂದುವು ಕ್ರೈಸ್ತ ಮತಕ್ಕೆ ಮತಾಂತರಗೊಂಡರೆ ಮತಾಂತರಗೊಂಡ ವ್ಯಕ್ತಿಯ ಗಂಡ ಅಥವಾ ಹೆಂಡತಿಯು ಮತಾಂತರಗೊಂಡ ವ್ಯಕ್ತಿಯನ್ನು ಪರಿತ್ಯಾಗ ಮಾಡಿದರೆ ಮತಾಂತರಗೊಂಡ ವ್ಯಕ್ತಿಯು ಮಾಡಿದ ಅರ್ಜಿಯ ಮೇಲೆ ನ್ಯಾಯಾಲಯವು ಅಂಥ ವಿವಾಹವನ್ನು ವಿಘಟಗೊಳಿಸುವ ಡಿಕ್ರಿ ಪಾಸುಮಾಡಬಹುದು. ಮತ್ತು ವಿವಾಹದ ಪಕ್ಷಗಳು ತಮ್ಮ ಹಿಂದಿನ ವಿವಾಹವು ಮರಣದಿಂದ ವಿಘಟಿತವಾಗಿದೆ ಎಂಬಂತೆ ಪುನಃ ವಿವಾಹ ಮಾಡಿಕೊಳ್ಳಬಹುದು.

ಈಗಿನ ಕಾನೂನು ಹಿಂದೂ ವಿವಾಹ ಅಧಿನಿಯಮ, 1955 (Present law-Hindu Marriage Act 1955)

ಈಗಿನ ಅಧಿನಿಯಮ ವಿವಾಹ ಮತ್ತು ವಿವಾಹ ವಿಚ್ಛೇದನದ ಮಹತ್ವದ ಹಾಗೂ ಪ್ರಗತಿ ಶೀಲ ಬದಲಾವಣೆಗಳಿಂದ ಒಳಗೊಂಡಿದೆ. ಕೆಲವು ಪರಿಸ್ಥಿತಿಗಳಲ್ಲಿ ವಿವಾಹ ವಿಚ್ಛೇದ ಪಡೆಯಲು ಇದು ಸ್ಪಷ್ಟ ಉಪಬಂಧಗಳನ್ನು ಹಾಕಿದೆ. ಈ ಅಧಿನಿಯಮದ ಕಲಮು 13,14 ಮತ್ತು 15 ಈ ವಿಷಯದ ಕುರಿತಾಗಿವೆ. ಕಲಮು 14 ವಿವಾಹ ವಿಚ್ಛೇದ ಪಡೆಯುವ ಹಕ್ಕನ್ನೂ ನಿಯಂತ್ರಿಸುತ್ತದೆ. ಈ ಕಲಮಿನ ಮೇರೆಗೆ ಅರ್ಜಿದಾರನಿಗೆ ಅತಿಯಾದ ತೊಂದರೆಯಾಗದ ಹೊರತು ವಿವಾಹ ವಿಚ್ಛೇದನಕ್ಕಾಗಿ ವಿವಾಹ ಜರುಗಿ ಒಂದು ವರ್ಷ ಮುಗಿಯುವದರೊಳಗಾಗಿ ಅರ್ಜಿ ಮಾಡು ವಂತಿಲ್ಲವೆಂದು 1976ರ ತಿದ್ದುಪಡಿ ಅಧಿನಿಯಮದಲ್ಲಿ ಹೇಳಲಾಗಿದೆ. ವಿವಾಹ ವಿಚ್ಛೇದನ ಮಾಡಿದ ವ್ಯಕ್ತಿಗಳು ಮತ್ತೊಮ್ಮೆ ವಿವಾಹವಾಗುವ ಸಂಬಂಧದಲ್ಲಿ ಕಲಮು 15 ಪರಿಮಿತಿಗಳನ್ನು ಹೇರಿದೆ.

ಪ್ರಮುಖ ಬದಲಾವಣೆಗಳು ವಿವಾಹದ ಪವಿತ್ರ ಸಂಸ್ಕಾರದ ಸ್ವರೂಪದ ಮೇಲೆ ಸಾಕಷ್ಟು ಪರಿಣಾಮ ಇದಲ್ಲದೆ ವಿವಾಹ ಕಾನೂನುಗಳ (ತಿದ್ದುಪಡಿ) ಅಧಿನಿಯಮ 1976ರಲ್ಲಿ ತಂದ ಕೆಲವು ಬೀರಿವೆ. ಈ ಅಧಿನಿಯಮವು ವಿವಾಹದ ಪಕ್ಷಗಳು ಪರಸ್ಪರ ಸಮ್ಮತಿಯಿಂದ ವಿವಾಹ ವಿಚ್ಛೇದನ ಮಾಡಿಕೊಳ್ಳಲು ಕಲಮು 13-ಬಿ ಉಪಬಂಧ ಮಾಡಿದೆ. ವಿವಾಹವು ಒಂದು ಕರಾರು ಆಗಿದ್ದು ವಿವಾಹ ಪಕ್ಷಗಳು ಪರಸ್ಪರ ಸಮ್ಮತಿಯಿಂದ ಅದನ್ನು ವಿಘಟಿತಗೊಳಿಸಬಹುದೆಂಬ ಅಂತರ್ಗತ ಅರ್ಥವನ್ನು ಈ ಉಪಬಂಧವು ಸೂಚಿಸುತ್ತದೆ. 1976ರ ತಿದ್ದುಪಡಿ ಅಧಿನಿಯಮವು ವಿವಾಹ ವಿಚ್ಛೇದನದ ಮತ್ತು ನ್ಯಾಯಿಕ ಪ್ರತ್ಯೇಕೀಕರಣ ಡಿಕ್ರಿ ಪಡೆಯಲು ಇಂಥ ಕಾರಣಗಳಿಗೆ ಅವಕಾಶ ಕೊಟ್ಟಿದೆ. ಈ ಅಧಿನಿಯಮದ ಮೇರೆಗೆ ಪರಿಹಾರ ಪಡೆಯುವಲ್ಲಿ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಅಧಿನಿಯಮದಲ್ಲಿ ಈ ಬದಲಾವಣೆಗಳು ಮಾಡಲ್ಪಟ್ಟಿವೆ.

ಎ. ವಿವಾಹ ವಿಚ್ಛೇದನಕ್ಕಾಗಿ ಕಾರಣಗಳು (ಕಲಮು 13) (Grounds for Divorce)

ಗಂಡ ಮತ್ತು ಹೆಂಡತಿ ಇಬ್ಬರಿಗೂ ದೊರಕುವಂಥವುಗಳು.

ಗಂಡ ಅಥವಾ ಹೆಂಡತಿಯು ಒಂದು ಅರ್ಜಿ ಮಾಡಿ ಕಲಮು 13ರಲ್ಲಿ ತೋರಿಸಲಾದ ಕಾರಣದ ಮೇರೆಗೆ ವಿವಾಹ ವಿಚ್ಛೇದನದ ಡಿಕ್ರಿ ಪಡೆದು ಒಂದು ವಿವಾಹವನ್ನು ವಿಘಟನೆ ಮಾಡ ಬಹುದು. ಈ ಕೆಳಗಿನ ಯಾವದೇ ಒಂದು ಕಾರಣದ ಮೇಲೆ ವಿವಾಹ ವಿಚ್ಛೇದನವನ್ನು ಪಡೆಯ ಬಹುದು.

1. ಜಾರತ್ವ (Adultry) : ಎದುರುಗಾರ ಪಕ್ಷವು ವಿವಾಹ ಜರುಗಿದ ನಂತರ ತನ್ನ ಗಂಡ ಅಥವಾ ಹೆಂಡತಿಯಲ್ಲದ ಬೇರೆ ವ್ಯಕ್ತಿಯೊಂದಿಗೆ ಶ್ವೇಚ್ಛೆಯಿಂದ ಸಂಭೋಗ ಮಾಡಿದೆ; ಅಥವಾ,

2. ಕ್ರೌರ್ಯ (Cruelty) : ಎದುರುಗಾರ ಪಕ್ಷವು ವಿವಾಹ ಜರುಗಿದ ನಂತರ ಅರ್ಜಿ ದಾರ ಪಕ್ಷದೊಂದಿಗೆ ಕ್ರೌರ್ಯದಿಂದ ವರ್ತಿಸಿದೆ; ಅಥವಾ,

3. ಪರಿತ್ಯಜನೆ (Desertion) : ಅರ್ಜಿ ಮಾಡುವ ತತ್ ಕ್ಷಣ ಪೂರ್ವದಲ್ಲಿ ಸತತವಾಗಿ ಎರಡು ವರ್ಷಗಳವರೆಗೆ ಎದುರುಗಾರ ಪಕ್ಷವು ಅರ್ಜಿದಾರರ ಪಕ್ಷವನ್ನು ತೊರೆದು ಹೋಗಿದೆ ; ಅಥವಾ,

4. ಮತಾಂತರ (Conversion) : ಎದುರುಗಾರ ಪಕ್ಷವು ಬೇರೊಂದು ಮತಕ್ಕೆ ಮತಾಂತರವಾಗಿ ಹಿಂದುತ್ವವನ್ನು ಕಳೆದುಕೊಂಡಿದೆ; ಅಥವಾ,

5. ಬುದ್ಧಿಭ್ರಮೆ (Unsoundness) : ಎದುರುಗಾರ ಪಕ್ಷವು ಚಿಕಿತ್ಸಾತೀತ ಬುದ್ಧಿ ಭ್ರಮೆಯಿಂದ ಪೀಡಿತವಾಗಿದೆ ಅಥವಾ ಅರ್ಜಿದಾರ ಪಕ್ಷವು ಎದುರು ಪಕ್ಷದೊಡನೆ ಕೂಡಿ ವಾಸಿ ಸಲು ನ್ಯಾಯವಾಗಿ ಅಪೇಕ್ಷಿಸುವದು ಅಸಾಧ್ಯವಾಗುವ ರೀತಿಯ ಹಾಗೂ ಅಷ್ಟರ ಮಟ್ಟಿನ ನಿರಂತರ ಇಲ್ಲವೆ ಮೇಲಿಂದ ಮೇಲೆ ಉಂಟಾಗುವ ಮಾನಸಿಕ ಗೊಂದಲದಿಂದ ಪೀಡಿತವಾಗಿದೆ.

6. ಕುಷ್ಠರೋಗ (Leprosy) : ಎದುರುಗಾರ ಪಕ್ಷವು ಅರ್ಜಿಮಾಡುವ ತತ್‌ಕ್ಷಣ ಪೂರ್ವದಲ್ಲಿ ದಾರುಣ ಹಾಗೂ ಚಿಕಿತ್ಸಾತೀತ ಕುಷ್ಠರೋಗದಿಂದ ನರಳಿದೆ; ಅಥವಾ,

7. ಲೈಂಗಿಕ ರೋಗ: (Veneral disease) ಎದುರುಗಾರ ಪಕ್ಷವು ಅರ್ಜಿಮಾಡುವ ತತ್‌ಕ್ಷಣ ಪೂರ್ವದಲ್ಲಿ ಸಾಂಸರ್ಗಿಕ ಸ್ವರೂಪದ ಲೈಂಗಿಕ ರೋಗದಿಂದ ನರಳುತ್ತಿದೆ; ಅಥವಾ,

8. ಜಗತ್ತಿನ ಪರಿತ್ಯಾಗ : (Renuciation) ಎದುರುಗಾರ ಪಕ್ಷವು ಯಾವುದಾದ ಬೊಂದು ಧಾರ್ಮಿಕ ಪಂಥವನ್ನು ಸೇರಿ ಜಗತ್ತನ್ನು ಪರಿತ್ಯಾಗ ಮಾಡಿದೆ; ಅಥವಾ,9. ಮೃತಪಟ್ಟಿರುವನೆಂಬ ಪೂರ್ವಭಾವನೆ (Presumed death) : ಒಂದೊಮ್ಮೆ ಎದುರುಗಾರ ಪಕ್ಷವು ಜೀವಂತವಾಗಿದ್ದರೆ ಯಾರಿಗೆ ಅವರ ಅವರ ಸುದ್ದಿ, ಸಮಾಚಾರ ತಿಳಿಯುತ್ತಿತ್ತೋ ಅಂಥವರಿಗೆ ಏಳು ವರ್ಷಗಳ ಅಥವಾ ಹೆಚ್ಚಿನ ಅವಧಿಯಲ್ಲಿ ಅವರು ಜೀವಂತರಿದ್ದಾರೆಂಬುದನ್ನು ತಿಳಿದು ಬರಲಿಲ್ಲ; ಅಥವಾ,

10. ಸಹವಾಸದ ಪುನರಾರಂಭ ಮಾಡದಿರುವಿಕೆ (Non resumption of co-habitation) : ನ್ಯಾಯಿಕ ಪ್ರತ್ಯೇಕೀಕರಣದ ಡಿಕ್ರಿಗೆ ಅವರು ಪಕ್ಷಗಾರರಾಗಿದ್ದು ಡಿಕ್ಕಿ ಮಾಡಿ ದಂದಿನಿಂದ ಒಂದು ವರ್ಷದ ಅವಧಿಗೆ ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಅವರು ಸಹವಾಸದ ಪುನರಾರಂಭ ಮಾಡಿಲ್ಲ; ಅಥವಾ,

11. ದಾಂಪತ್ಯದ ಹಕ್ಕುಗಳ ಮರು ಸ್ವಾಧೀನತೆಯ ಡಿಕ್ಕಿ ಪಾಲಿಸದಿದ್ದರೆ (Failure to comply with decree of restitution of conjugal rights):

ಗಂಡ ಹೆಂಡತಿ ಇಬ್ಬರೂ ಪಕ್ಷಗಾರರಾಗಿದ್ದ ಒಂದು ಮೊಕದ್ದಮೆಯಲ್ಲಿ ದಾಂಪತ್ಯದ ಹಕ್ಕುಗಳ ಮರುಸ್ವಾಧೀನತೆಯ ಡಿಕ್ಕಿ ಮಂಜೂರಾದಂದಿನಿಂದ ಒಂದು ವರ್ಷದ ಅವಧಿಯವರೆಗೆ ಅಥವಾ ಹೆಚ್ಚು ಕಾಲ ಅವರೊ ಳಗೆ ದಾಂಪತ್ಯದ ಹಕ್ಕುಗಳ ಮರುಸ್ವಾಧೀನತೆಯಾಗಿಲ್ಲ.

ಬಿ. ಹೆಂಡತಿಗೆ ಸಿಗುವ ಹೆಚ್ಚಿನ ಕಾರಣಗಳು: (Additional grounds to wife)

ವಿವಾಹದ ವಿಚ್ಛೇದನ ಪಡೆಯಲು ಹೆಂಡತಿಗೆ ಗಂಡನಿಗಿಂತ ಹೆಚ್ಚಿನ ಅವಕಾಶವಿದೆ. ಈ ಕೆಳಗಿನ ಕಾರಣಗಳಿಗೋಸ್ಕರ ಹೆಂಡತಿಯು ವಿವಾಹ ವಿಚ್ಛೇದನದ ಡಿಕ್ಕಿ ಪಡೆಯಬಹುದು.

1) ಈ ಅಧಿನಿಯಮವು ಆರಂಭವಾಗುವದಕ್ಕಿಂತ ಮೊದಲು ಜರುಗಿದ ವಿವಾಹದ ಸಂಬಂಧದಲ್ಲಿ, ಇಂಥ ಆರಂಭಕ್ಕಿಂತ ಮೊದಲು ಗಂಡನು ಮತ್ತೊಮ್ಮೆ ವಿವಾಹಿತನಾಗಿದ್ದನು ಮತ್ತು ಅಥವಾ ಅರ್ಜಿದಾರಳ ವಿವಾಹವು ವಿವಾಹವು ಜರುಗುವ ಸಮಯದಲ್ಲಿ ಇಂಥ ಆರಂಭಕ್ಕಿಂತ ಮೊದಲು ವಿವಾಹಿತಳಾಗಿದ್ದ ಆ ಗಂಡನ ಬೇರೊಬ್ಬ ಹೆಂಡತಿಯು ಜೀವಂತಳಿದ್ದಳು.

ಪರಂತು ಅರ್ಜಿಯನ್ನು ದಾಖಲು ಮಾಡುವ ಕಾಲದಲ್ಲಿ ಇನ್ನೊಬ್ಬ ಪತ್ನಿಯು ಬದುಕಿರ ಬೇಕು, ಅಥವಾ,

ii) ಬಲಾತ್ಕಾರ ಸಂಭೋಗ ಅಥವಾ ಪುಂಮೈಥುನ

ವಿವಾಹ ಜರುಗಿದ ಬಳಿಕ ಗಂಡನು ಬಲತ್ಕಾರ ಸಂಭೋಗ ಅಥವಾ ಪುಂಮೈಥುನ ಮಾಡಿ ರುವನು; ಅಥವಾ,

iii) ಹಿಂದೂ ದತ್ತಕ ಮತ್ತು ಜೀವನಾಂಶ ಅಧಿನಿಯಮ, 1956 ರ ಕಲಮು 18ರ ಮೇರೆಗೆ ಒಂದು ಮೊಕದ್ದಮೆ ಅಥವಾ ಅಪರಾಧ ಪ್ರಕ್ರಿಯಾ ಸಂಹಿತೆ 1873 ರ ಕಲಮು125 ರಮೇರೆಗೆ ನಡೆಸಿದ ಮೊಕದ್ದಮೆಯಲ್ಲಿ (ಅಥವಾ ತತ್ಸಮಾನವಾದ ಅಪರಾಧ ಪ್ರಕ್ರಿಯಾ ಸಂಹಿತೆ. 1989ರ ಕಲಮು 488 ರ ಮೇರೆಗೆ) ಹೆಂಡತಿಗೆ ಜೀವನಾಂಶ ಕೊಡಬೇಕೆಂದು ಗಂಡನ ವಿರುದ್ಧ ಒಂದು ಡಿಗ್ರಿ ಅಥವಾ ಆದೇಶವು ಮಂಜೂರಾಗಿದ್ದ ಮತ್ತು ಅಂಥ ಡಿಕ್ರಿ ಅಥವಾ ಆದೇಶ ಮಾಡಿ ದಂದಿನಿಂದ ಒಂದು ವರ್ಷಕಾಲ ಅಥವ ಅದಕ್ಕೂ ಹೆಚ್ಚು ಕಾಲ ಉಭಯ ಪಕ್ಷದವರೊಳಗೆ ಸಹ ವಾಸವು ನಡೆದಿಲ್ಲ; ಅಥವಾ,

iv) ಆಕೆಯು 15ರ ವಯಸ್ಸಿನವಳಾಗುವುದಕ್ಕಿಂತ ಮೊದಲು ಆಕೆಯ ವಿವಾಹವು (ಪರಿ ಪೂರ್ಣವಾಗಿರಲಿ, ಆಗದಿರಲಿ) ಜರುಗಿತ್ತು ಮತ್ತು ಆಕೆಯು ಆ ವಯಸ್ಸಿನವಳಾದಾಗ ಆದರೆ 18 ರ ವಯಸ್ಸಿನವಳಾಗುವುದಕ್ಕಿಂತ ಮೊದಲು ಆ ವಿವಾಹವನ್ನು ನಿರಾಕರಿಸಿರುವಳು.

ಪರಸ್ಪರ ಸಮ್ಮತಿಯಿಂದ ವಿವಾಹ ವಿಚ್ಛೇದ

(Divorce by matual consent)

ವಿವಾಹ ಬದ್ಧರಾದ ಉಭಯತರು, ಅವರ ವಿವಾಹವು ಜರುಗಿದುದು ವಿವಾಹ ಕಾನೂನು ಗಳ (ತಿದ್ದುಪಡಿ) ಅಧಿನಿಯಮ, 1976ರ ವಿರಲಿ ಅಥವಾ ನಂತರವೇವಿರಲಿ ತಾವಿಬ್ಬರೂ ಒಂದು ವರ್ಷದ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಬೇರೆ ಬೇರೆಯಾಗಿ ವಾಸಿಸುತ್ತಿದ್ದೇವೆ. ಹಾಗೂ ತಮಗೆ ಕೂಡಿ ಬಾಳ್ವೆ ಮಾಡಲು ಸಾಧ್ಯವಿಲ್ಲ ಹಾಗೂ ವಿವಾಹವು ರದ್ದಾಗಬೇಕೆಂದು ತಮ್ಮೊಳಗೆ ಒಪ್ಪಿಕೊಂಡಿದ್ದೇವೆ ಎಂದು ವಿವಾಹ ಕಾನೂನುಗಳ (ತಿದ್ದುಪಡಿ) ಅಧಿನಿಯಮ, 1978ರ ಮೇರೆಗೆ ವಿವಾಹ ವಿಚ್ಛೇದನ ಡಿಕ್ಕಿ ಪಡೆಯಬಹುದು.

ಅರ್ಜಿಯನ್ನು ದಾಖಲ ಮಾಡಿದ ದಿನಾಂಕದಿಂದ ಆರು ತಿಂಗಳ ನಂತರ ಹಾಗೂ ಹದಿ ನೆಂಟು ತಿಂಗಳ ಮೊದಲು, ಆ ಅವಧಿಯೊಳಗೆ ಅರ್ಜಿಯನ್ನು ಹಿಂದೆ ತೆಗೆದುಕೊಳ್ಳದಿದ್ದರೆ ಉಭಯತರು ಮಾಡಿದ ಮನವಿಯ ಮೇರೆಗೆ ನ್ಯಾಯಾಲಯವು ಇಬ್ಬರ ಹೇಳಿಕೆಯನ್ನು ಕೇಳಿ ಕೊಂಡು ಹಾಗೂ ತಮಗೆ ಅವಶ್ಯವೆಂದು ಕಂಡು ಚೌಕಶಿಯನ್ನು ಮಾಡಿದ ಬಳಿಕ ಉಭಯತ ರೊಳಗೆ ವಿವಾಹ ಜರುಗಿತ್ತು ಹಾಗೂ ಅರ್ಜಿಯಲ್ಲಿ ಬರೆಯಲಾದ ಸಂಗತಿಗಳು ಯಥಾರ್ಥವೆಂದು ಸಮಾಧಾನಪಟ್ಟರೆ ವಿವಾಹವು ವಿಘಟಿತವಾಗಿದೆಯೆಂದು ಘೋಷಿಸಿ ಡಿಕ್ರಿ ಮಂಜೂರು ಮಾಡ ಬಹುದು.

ವಿವರಣೆ

1. ಜಾರತ್ವ (Adultry) : ವಿವಾಹ ಕಾನೂನುಗಳ (ತಿದ್ದುಪಡಿ) ಅಧಿನಿಯಮ 1976 ‘ಜಾರತ್ವದಲ್ಲಿ ಜೀವಿಸುವದು’ ಎಂಬ ಪದವನ್ನು ರದ್ದುಗೊಳಿಸಿ ಅದರ ಜಾಗೆಯಲ್ಲಿ ಬರೇ ‘ಜಾರತ್ವ’ ಎಂಬುದನ್ನು ಇಟ್ಟಿದೆ. ಅಂದರೆ ಪರಣೇತೃವಲ್ಲದ ವ್ಯಕ್ತಿಯೊಂದಿಗೆ ಐಚ್ಛಿಕ ಲೈಂಗಿಕ ಸಂಭೋಗ ಮಾಡುವದು. ಈಗ ಒಂದು ಏಕಲ ಜಾರತ್ವವೂ ಸಹ ವಿವಾಹ ವಿಚ್ಛೇದನ ಪಡೆಯಲು ಸಾಕಷ್ಟು ಕಾರಣವಾಗಿದೆ. ಈ ತಿದ್ದುಪಡಿ ಮಾಡಲು ಕಾರಣವೇನೆಂದರೆ, ಈ ತಿದ್ದುಪಡಿಗಿಂತ ಮೊದಲು ಇನ್ನೊಂದು ಪಕ್ಷವು ವಿವಾಹ ವಿಚ್ಛೇದನದ ಡಿಗ್ರಿಗೆ ಅರ್ಜಿಮಾಡಿದೆಯೆಂಬುದನ್ನು ತಿಳಿ ದಾಗ ಜಾರತ್ವದಲ್ಲಿ ಜೀವಿಸುತ್ತಿರುವ ಪರಿಣೇತೃವು ಇನ್ನೊಂದು ಪಕ್ಷದ ಕಣ್ಣಿಗೆ ಮಣ್ಣೆರೆಚುವ ಉದ್ದೇಶದಿಂದ ತಾತ್ಕಾಲಿಕವಾಗಿ ಜಾರತ್ವವನ್ನು ನಿಲ್ಲಿಸುವ ಸಂಭವವಿತ್ತು. ತನ್ನ ಪರಿಣೇತೃವಲ್ಲದ ವ್ಯಕ್ತಿಯೊಂದಿಗೆ ವಿರೋಧಿ ಪಕ್ಷವು ಸರ್ವೆಸಾಮಾನ್ಯವಾಗಿ ಲೈಂಗಿಕ ಸಂಭೋಗವನ್ನು ನಡೆಸುತ್ತಿದೆ ಎಂಬುದನ್ನು ಅರ್ಜಿದಾರರ ಪಕ್ಷವು ತೋರಿಸಬೇಕಾಗುತ್ತದೆ. ಇದಲ್ಲದೇ ಕಲಮು 23(1) (ಬಿ) ಯ ಮೇರೆಗೆ ಈ ಕೃತ್ಯದಲ್ಲಿ ಅರ್ಜಿದಾರ ಪಕ್ಷವು ಯಾವುದೇ ರೀತಿಯಿಂದ ಇದರಲ್ಲಿ ಸಹಸಾಧನ ವಾಗಿರಲಿಲ್ಲ ಮತ್ತು ಆತನು ಅಥವಾ ಆಕೆಯು ಮೌನ ಸಮ್ಮತಿ ಅಥವಾ ಮಾಫಿ ಕೊಟ್ಟಿಲ್ಲ ಎಂಬು ಅಪರಾಧವನ್ನು ಮಾಡಿರುವಳೆಂಬುದನು ತಿಳಿದು ಸಹ ಗಂಡನು ಸಹವಾಸ ಮಾಡಿದರೆ ಇದು ದನ್ನು ತೋರಿಸಬೇಕಾಗುತ್ತಿತ್ತು. ಹೆಂಡತಿಯು ಇನ್ನೊಬ್ಬ ವ್ಯಕ್ತಿಯೊಂದಿಗೆ ಸಹವಾಸದಲ್ಲಿರುವ ಆಕೆಯ ಅಪರಾಧವನ್ನು ಮಾಫಿ ಮಾಡಿದಂತಾಗುವದು.

ಪುರಾವೆಯ ಅಳತೆಗೋಲು: ಜಾರತ್ನವು ಒಂದು ಗೌಪ್ಯಕ್ರಿಯೆಯಾಗಿರುತ್ತದೆ.ಜಾರತ್ತದ ಪ್ರತ್ಯಕ್ಷ ಪುರಾವೆಯನ್ನು ಕೊಡುವದು ಕಷ್ಟ, ಪ್ರತ್ಯಕ್ಷ ಪುರಾವೆಯನ್ನು ಮುಂದಿಟ್ಟರೂ ಸಹ ನ್ಯಾಯಾಲಯವು ಅದನ್ನು ಸಂಶಯದಿಂದ ನೋಡುತ್ತದೆ. ಜಾರತ್ನದ ಕ್ರಿಯೆಯು ಅತ್ಯಂತ ಗೋಪ್ಯತೆಯಿಂದ ನಡೆಯುವದಾದುದರಿಂದ ಇದರ ಬಗ್ಗೆ ಹಾಜರುಗೊಳಿಸಿದ ಸಾಕ್ಷಿಯನ್ನು ನ್ಯಾಯಾಲಯವು ಅತ್ಯಂತ ಸುಲಭದಲ್ಲಿ ನಂಬುವದಿಲ್ಲ. ಇದು ಜಾರತ್ನವಲ್ಲದೇ ಇನ್ನೇನೂ ಅಲ್ಲವೆಂದು ಜಾರತ್ವದ ಬಗ್ಗೆ ಪ್ರಸ್ತುತಗೊಳಿಸಲಾದ ಪುರಾವೆಯಿಂದ ಒಬ್ಬ ವಿವೇಕ ವ್ಯಕ್ತಿಯು ನಿರ್ಣಯಿಸುವಂತಾಬೇಕು.

ಇಂತಹ ಒಂದು ವಿವಾದವನ್ನು ರಾಜಸ್ತಾನ ಉಚ್ಚ ನ್ಯಾಯಾಲಯವು ಈ ಕೆಳಗಿನಂತೆ ನಿರ್ಣಯಿಸಿದೆ.

ಜಾರತ್ವದ ವಸ್ತುಸ್ಥಿತಿಯನ್ನು ಸಾಬೀತುಗೊಳಿಸಲು ಪ್ರತ್ಯಕ್ಷ ಪುರಾವೆಯನ್ನು ತರುವ ಅವಶ್ಯಕತೆಯಿಲ್ಲ. ಮತ್ತು ಒಂದೊಮ್ಮೆ ಅದನ್ನು ಸಾದರಪಡಿಸಿದರೂ ಸಹ ಅದನ್ನು ಸಂಶಯದಿಂದ ನೋಡಲಾಗುವದು ಮತ್ತು ಅದು ತಿರಸ್ಕೃತವಾಗುವ ಸಂಭವವಿದೆ. ಸಾಮಾನ್ಯವಾಗಿ ಜಾರತ್ವವು ಪರೋಕ್ಷವಾದ ಪುರಾವೆಯಿಂದ ಸಾಬೀತುಪಡಿಸಲಾಗುತ್ತದೆ. ಸಾಮಾನ್ಯ ನಿಯಮವು ಹೇಗಿದೆಯೆಂದರೆ, ಒಬ್ಬ ವಿವೇಕಿ ನಿಷ್ಪಕ್ಷಪಾತಿ ವ್ಯಕ್ತಿಯು ಪರಿಸ್ಥಿತಿಗಳನ್ನು ನೋಡಿ ಅವುಗಳ ಬಗ್ಗೆ ಸರಿಯಾದ ನಿಷ್ಕರ್ಷೆಗೆ ಬರುವಂತಾಗಬೇಕು. (ಶ್ರೀಮತಿ ಪುಷ್ಪಾದೇವಿ ವಿ. ರಾಧೇಶ್ಯಾಮ ಎ.ಐ.ರ್. 197293 260)

ಪುರಾವೆಯ ಅಳತೆಗೋಲಿಗೆ ಸಂಬಂಧಿಸಿದ ಕಾನೂನು ಸ್ಪಷ್ಟ ಹಾಗೂ ಸರಳವಾಗಿದೆ. ಆ ಪಾವಿತ್ರ್ಯದ ಆರೋಪವನ್ನು ಎಲ್ಲಾ ಯುಕ್ತ ಸಂಶಯಗಳನ್ನು ಮೀರಿ ಸಾಬೀತುಪಡಿಸಬೇಕಾಗಿಲ್ಲ. ನ್ಯಾಯಾಲಯವು ಸಂಭವನೀಯ ಅಧಿಕೃತ್ಯದ ಆಧಾರದ ಮೇಲೆ ನಿರ್ಣಯಿಸಬಹುದು.

2. ಕ್ರೌರ್ಯ (Cruelty) : ವಿವಾಹವು ಜರುಗಿದ ಬಳಿಕ ಅರ್ಜಿದಾರ ಪಕ್ಷದೊಮದಿಗ್ಧ ಕ್ರೌರ್ಯದಿಂದ ವರ್ತಿಸಿದ್ದರೆ ಆ ಪಕ್ಷಕ್ಕೆ ವಿವಾಹದ ವಿಚ್ಛೇದದ ಡಿಕ್ರಿ ಪಡೆಯುವ ಅಧಕಾರವಿದೆ. ವಿವಾಹ ಕಾನೂನುಗಳ (ತಿದ್ದುಪಡಿ) ಅಧಿನಿಯಮ 1976, ಜಾರಿಗೆ ಬಂದ ಬಳಿಕ ಕ್ರೌರ್ಯವು ಒಂದು ವಿವಾಹ ವಿಚ್ಛೇದದ ಕಾರಣವಾಗಿದೆ. ಕ್ರೌರ್ಯವು ಅಸ್ತಿತ್ವದಲ್ಲಿರುವದು ಕಂಡು ಬಂದಾಗ ದಂಪತಿಗಳಿಗೆ ಪ್ರತ್ಯೇಕವಾಗಿ ನಿವಾಸ ಮಾಡಲು ಮತ್ತು ವಿವಾಹವನ್ನು ವಿಘಟಿತಗೊಳಿಸಲು ಅನು ಮತಿ ಈಯುವದು ಯುಕ್ತವಾಗಿದೆ. ವಿವಾಹ ವಿಚ್ಛೇದನಕ್ಕೆ ಕಾರಣವನ್ನಾಗಿ ಮಾಡಿದ ಕ್ರೌರ್ಯವು ಎಷ್ಟರ ಮಟ್ಟಿಗೆ ಗಂಭೀರವಾಗಿದೆ ಎಂಬ ಬಗ್ಗೆ ನ್ಯಾಯಾಲಯವು ಯೋಚಿಸಬೇಕಾಗಿದೆ. ‘ವರ್ತಿಸಿದೆ’ ಎಂಬ ಪದವು ಪ್ರತಿಪಕ್ಷದ ಸತತವಾದ ಕ್ರೂರ ನಡತೆಯ ಅರ್ಥ ಕೊಡುತ್ತದೆ.

ಕ್ರೌರ್ಯ ಎಂಬ ಪದಕ್ಕೆ ಕಾನೂನಿನಲ್ಲಿ ಒಂದು ವಿಶಿಷ್ಟವಾದ ಅರ್ಥವಿದೆ. ಇದು ಜನ ಸಾಮನ್ಯರು ತಿಳಿದಿರುವ ಅರ್ಥಕ್ಕಿಂತ ಭಿನ್ನವಾಗಿದೆ. ಪ್ರೀವಿ ಕೌನ್ಸಿಲ್ ಕ್ರೌರ್ಯದ ಅರ್ಥವನ್ನು

ಗೋಪ್ಯತೆಯಿಂದ ನಡೆಯುವದಾದುದರಿಂದ ಇದರ ಬಗ್ಗೆ ಹಾಜರುಗೊಳಿಸಿದ ಸಾಕ್ಷಿಯನ್ನು ನ್ಯಾಯಾಲಯವು ಅತ್ಯಂತ ಸುಲಭದಲ್ಲಿ ನಂಬುವದಿಲ್ಲ. ಇದು ಜಾರತ್ವವಲ್ಲದೇ ಇನ್ನೇನೂ ಅಲ್ಲವೆಂದು ಜಾರತ್ವದ ಬಗ್ಗೆ ಪ್ರಸ್ತುತಗೊಳಿಸಲಾದ ಪುರಾವೆಯಿಂದ ಒಬ್ಬ ವಿವೇಕ ವ್ಯಕ್ತಿಯು ನಿರ್ಣಯಿಸುವಂತಾಬೇಕು.

ಇಂತಹ ಒಂದು ವಿವಾದವನ್ನು ರಾಜಸ್ತಾನ ಉಚ್ಚ ನ್ಯಾಯಾಲಯವು ಈ ಕೆಳಗಿನಂತೆ ನಿರ್ಣಯಿಸಿದೆ.

ಜಾರತ್ವದ ವಸ್ತುಸ್ಥಿತಿಯನ್ನು ಸಾಬೀತುಗೊಳಿಸಲು ಪ್ರತ್ಯಕ್ಷ ಪುರಾವೆಯನ್ನು ತರುವ ಅವಶ್ಯಕತೆಯಿಲ್ಲ. ಮತ್ತು ಒಂದೊಮ್ಮೆ ಅದನ್ನು ಸಾದರಪಡಿಸಿದರೂ ಸಹ ಅದನ್ನು ಸಂಶಯದಿಂದ ನೋಡಲಾಗುವದು ಮತ್ತು ಅದು ತಿರಸ್ಕೃತವಾಗುವ ಸಂಭವವಿದೆ. ಸಾಮಾನ್ಯವಾಗಿ ಜಾರತ್ವವು ಪರೋಕ್ಷವಾದ ಪುರಾವೆಯಿಂದ ಸಾಬೀತುಪಡಿಸಲಾಗುತ್ತದೆ. ಸಾಮಾನ್ಯ ನಿಯಮವು ಹೇಗಿದೆಯೆಂದರೆ, ಒಬ್ಬ ವಿವೇಕಿ ನಿಷ್ಪಕ್ಷಪಾತಿ ವ್ಯಕ್ತಿಯು ಪರಿಸ್ಥಿತಿಗಳನ್ನು ನೋಡಿ ಅವುಗಳ ಬಗ್ಗೆ ಸರಿಯಾದ ನಿಷ್ಕರ್ಷೆಗೆ ಬರುವಂತಾಗಬೇಕು. (ಶ್ರೀಮತಿ ಪುಷ್ಪಾದೇವಿ ವಿ. ರಾಧೇಶ್ಯಾಮ ಎ.ಐ.ರ್. 197293 260)

ಪುರಾವೆಯ ಅಳತೆಗೋಲಿಗೆ ಸಂಬಂಧಿಸಿದ ಕಾನೂನು ಸ್ಪಷ್ಟ ಹಾಗೂ ಸರಳವಾಗಿದೆ. ಆ ಪಾವಿತ್ರ್ಯದ ಆರೋಪವನ್ನು ಎಲ್ಲಾ ಯುಕ್ತ ಸಂಶಯಗಳನ್ನು ಮೀರಿ ಸಾಬೀತುಪಡಿಸಬೇಕಾಗಿಲ್ಲ. ನ್ಯಾಯಾಲಯವು ಸಂಭವನೀಯ ಅಧಿಕೃತ್ಯದ ಆಧಾರದ ಮೇಲೆ ನಿರ್ಣಯಿಸಬಹುದು.

2. ಕ್ರೌರ್ಯ (Cruelty) : ವಿವಾಹವು ಜರುಗಿದ ಬಳಿಕ ಅರ್ಜಿದಾರ ಪಕ್ಷದೊಮದಿಗ್ಧ ಕ್ರೌರ್ಯದಿಂದ ವರ್ತಿಸಿದ್ದರೆ ಆ ಪಕ್ಷಕ್ಕೆ ವಿವಾಹದ ವಿಚ್ಛೇದದ ಡಿಕ್ರಿ ಪಡೆಯುವ ಅಧಕಾರವಿದೆ.

ವಿವಾಹ ಕಾನೂನುಗಳ (ತಿದ್ದುಪಡಿ) ಅಧಿನಿಯಮ 1976, ಜಾರಿಗೆ ಬಂದ ಬಳಿಕ ಕ್ರೌರ್ಯವು ಒಂದು ವಿವಾಹ ವಿಚ್ಛೇದದ ಕಾರಣವಾಗಿದೆ. ಕ್ರೌರ್ಯವು ಅಸ್ತಿತ್ವದಲ್ಲಿರುವದು ಕಂಡು ಬಂದಾಗ ದಂಪತಿಗಳಿಗೆ ಪ್ರತ್ಯೇಕವಾಗಿ ನಿವಾಸ ಮಾಡಲು ಮತ್ತು ವಿವಾಹವನ್ನು ವಿಘಟಿತಗೊಳಿಸಲು ಆನು ಮತಿ ಈಯುವದು ಯುಕ್ತವಾಗಿದೆ. ವಿವಾಹ ವಿಚ್ಛೇದನಕ್ಕೆ ಕಾರಣವನ್ನಾಗಿ ಮಾಡಿದ ಕ್ರೌರ್ಯವು ಎಷ್ಟರ ಮಟ್ಟಿಗೆ ಗಂಭೀರವಾಗಿದೆ ಎಂಬ ಬಗ್ಗೆ ನ್ಯಾಯಾಲಯವು ಯೋಚಿಸಬೇಕಾಗಿದೆ. ‘ವರ್ತಿಸಿದೆ’ ಎಂಬ ಪದವು ಪ್ರತಿಪಕ್ಷದ ಸತತವಾದ ಕ್ರೂರ ನಡತೆಯ ಅರ್ಥ ಕೊಡುತ್ತದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!