E-Khatha- ಮನೆ ಬಾಗಿಲಿಗೆ ಇ – ಖಾತಾ ವಿತರಿಸುವ ಯೋಜನೆ|25 ಲಕ್ಷ ಆಸ್ತಿದಾರರಿಗೆ ಸಿಗಲಿದೆ ಈ ಸೌಲಭ್ಯ
E-Khatha- ಮನೆ ಬಾಗಿಲಿಗೆ ಇ – ಖಾತಾ ವಿತರಿಸುವ ಯೋಜನೆ|25 ಲಕ್ಷ ಆಸ್ತಿದಾರರಿಗೆ ಸಿಗಲಿದೆ. ಸಾರ್ವಜನಿಕರ ಆಸ್ತಿಗಳಿಗೆ ರಕ್ಷಣೆ ಹಾಗೂ ದಾಖಲೆಗಳ ಸುರಕ್ಷತೆಯ ಗ್ಯಾರಂಟಿಗಾಗಿ ʼಮನೆ ಬಾಗಿಲಿಗೆ ಇ – ಖಾತಾʼ ವಿತರಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 25 ಲಕ್ಷ ಆಸ್ತಿದಾರರಿಗೆ ಈ ಸೌಲಭ್ಯ ಸಿಗಲಿದ್ದು, ಈಗಾಗಲೇ 5.51 ಲಕ್ಷ ಆಸ್ತಿದಾರರಿಗೆ ಅಂತಿಮ ಇ-ಖಾತಾ ವಿತರಿಸಲಾಗಿದೆ.
ಉಳಿದವರಿಗೂ ಅವರ ಮನೆಗಳಿಗೆ ಕರಡು ಇ – ಖಾತಾವನ್ನು 100 ದಿನಗಳಲ್ಲಿ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.