Egg price hike: ಬಿಸಿಯೂಟ ಯೋಜನೆಯ ಪೂರಕ ಪೌಷ್ಠಿಕ ಆಹಾರದಲ್ಲಿ ಮೊಟ್ಟೆ ಬೆಲೆ ಏರಿಕೆ: ಮೊಟ್ಟೆ ಘಟಕದ ವೆಚ್ಚ ಪರಿಷ್ಕರಣೆಗೆ ಮನವಿ-2025
Egg price hike: ಬಿಸಿಯೂಟ ಯೋಜನೆಯಡಿಯಲ್ಲಿ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಲ್ಲಿ ಮೊಟ್ಟೆ, ಬೆಲೆ ಬೆಲೆ ದಿನೇ ದಿನೇ ದಿನೇ ಹೆಚ್ಚುತ್ತಿದ್ದು ಪೂರಕ ಪೌಷ್ಠಿಕ ಆಹಾರ ಮೊಟ್ಟೆಯ ಘಟಕದ ವೆಚ್ಚವನ್ನು ಪರಿಷ್ಕರಿಸಲು ಮನವಿ ಪತ್ರ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಕರ್ನಾಟಕ ರಾಜ್ಯದಲ್ಲಿ ಸುಮಾರು 15 ಜಿಲ್ಲೆಗಳಲ್ಲಿ ಸುಮಾರು 9 ಲಕ್ಷ ಕ್ಕೂ ಹೆಚ್ಚು ಶಾಲಾ ವಿದ್ಯಾರ್ಧಿಗಳಿಗೆ ಬಿಸಿಯೂಟ, ಬಿಸಿ ಹಾಲು ಹಾಗೂ ಪೂರಕ ಪೌಷ್ಟಿಕ ಆಹಾರವನ್ನು ಸರಬರಾಜು ಮಾಡಲಾಗುತ್ತಿದೆ.
ವಾರಕ್ಕೆ 6 ದಿನವೂ ಶಾಲಾ ಮಕ್ಕಳಿಗೆ ಪೂರಕ ಪೌಷಿಕ ಯೋಜನೆಯಡಿ ಮೊಟ್ಟೆಯನ್ನು ಸರಬರಾಜು ಮಾಡುತ್ತಿದ್ದು ಸರ್ಕಾರದ ಘಟಕದ ವೆಚ್ಚವು 5 ರೂಪಾಯಿ ಆಗಿ ಮೊಟ್ಟೆ ಬೇಯಿಸಲು, ಸಾರಿಗೆ ವೆಚ್ಚ ಹಾಗೂ ಮೊಟ್ಟೆ ಸುಲಿಯುವ ವೆಚ್ಚ ಒಟ್ಟು 6 ರೂಪಾಯಿ ಇದ್ದು ಪ್ರಸ್ತುತ ಮಾರುಕಟ್ಟೆ ಬೆಲೆಗೆ ಮೊಟ್ಟೆಯನ್ನು ಬೇಯಿಸಿ ಶಾಲೆಗಳಿಗೆ ಸರಬರಾಜು ಮಾಡುವುದು ತುಂಬಾ ಕಷ್ಟಕರವಾಗಿದೆ.
ಸದ್ಯದ ಮಾರುಕಟ್ಟೆಯ ಬೆಲೆ ಈ ಶೈಕ್ಷಣಿಕ ವರ್ಷ ಜೂನ್ ಮಾಹಿಯಿಂದಲೂ 5 ರೂಪಾಯಿ ಗಿಂತ ಹೆಚ್ಚು ಇದ್ದು ಇಂದು ಪ್ರಸ್ತುತ ಮಾರುಕಟ್ಟೆಯ ಬೆಲೆ 6. 70 ಪೈಸೆ ಆಗಿದ್ದು ಮುಂದೆ ಒಂದು ಮೊಟ್ಟೆಯ ಬೆಲೆ 7.00 ರೂಪಾಯಿ ಆಗುವ ಸಾಧ್ಯತೆ ಎಂದು ಮೊಟ್ಟೆ ಸರಬರಾಜು ಮಾಡುವ ಮಾಲೀಕರು ತಿಳಿಸಿದ್ದಾರೆ.
ಮೊಟ್ಟೆಯ ಘಟಕದ ವೆಚ್ಚವನ್ನು 7 ರೂಪಾಯಿಗೆ ಪರಿಷ್ಕರಿಸಿ ಈ ಯೋಜನೆಯ ಎಲ್ಲಾ ಶಾಲಾ ಮಕ್ಕಳಿಗೆ ಪೌಷ್ಠಿಕಾಂಶವನ್ನು ಸುಧಾರಿಸಲು ಸರ್ಕಾರದಿಂದ ಈ ಯೋಜನೆಯು ಉತ್ತಮ ಫಲಕಾರಿಯಾಗಿರುವುದರಿಂದ ಪ್ರಸ್ತುತ 6 ರೂಪಾಯಿ ಘಟಕದ ವೆಚ್ಚವನ್ನು 7 ರೂಪಾಯಿಗೆ ಪರಿಷ್ಕರಿಸಿ ಆದೇಶ ಹೊರಡಿಸಲು ಕರ್ನಾಟಕ ರಾಜ್ಯ ಬಿ.ಸಿಯೂಟ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ (ರಿ) ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ರವರು ಉಲ್ಲೇಖ (1 &2) ರಂತೆ ಮನವಿ ಪತ್ರ ಸಲ್ಲಿಸಿರುತ್ತಾರೆ.
ಸದರಿ ಸಂಬಂಧ ಸರ್ಕಾರದ ಹಂತದಲ್ಲಿ ಪೂರಕ ಪೌಷ್ಟಿಕ ಆಹಾರ ಮೊಟ್ಟೆಯ ದರ ಪರಿಷ್ಕರಣೆ ಮಾಡಲು ಪ್ರಸ್ತಾವನೆಯನ್ನು ಈ ಮೂಲಕ ಸಲ್ಲಿಸಿದೆ.

