EMRS 6th Class Admission 2026-27: ಮೊದಲ ಸುತ್ತಿನ ಸೀಟು ಹಂಚಿಕೆ ಪಟ್ಟಿ ಬಿಡುಗಡೆ! ಸಂಪೂರ್ಣ ಮಾಹಿತಿ ಇಲ್ಲಿದೆ
EMRS 6th Class Admission 2026-27: ಏಕಲವ್ಯ ವಸತಿ ಶಾಲೆಗಳ (EMRS) 6ನೇ ತರಗತಿ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪಟ್ಟಿ 04-05-2026ರಂದು ಪ್ರಕಟವಾಗಿದೆ. ನಿಮ್ಮ ಸೀಟ್ ನ್ನು kar.nic.in ನಲ್ಲಿ ಪರಿಶೀಲಿಸಿ.
ಏಕಲವ್ಯ ವಸತಿ ಶಾಲೆಗಳು: 2026ರ 6ನೇ ತರಗತಿ ಪ್ರವೇಶ – ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕಟ
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ (EMRS) 2026ನೇ ಸಾಲಿನ 6ನೇ ತರಗತಿ ಪ್ರವೇಶಾತಿಗೆ ಸಂಬಂಧಿಸಿದ ಮಹತ್ವದ ಮಾಹಿತಿ ಬಿಡುಗಡೆಯಾಗಿದೆ.
2026-27ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆಯ ಭಾಗವಾಗಿ, ತಾತ್ಕಾಲಿಕ (Provisional) ಸೀಟು ಹಂಚಿಕೆ ಪಟ್ಟಿಯನ್ನು ದಿನಾಂಕ 17-04-2026 ರಂದು ಪ್ರಕಟಿಸಲಾಗಿತ್ತು. ಇದೀಗ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಬಹಳ ನಿರೀಕ್ಷಿತವಾಗಿದ್ದ ಮೊದಲನೇ ಸುತ್ತಿನ (First Round) ಸೀಟು ಹಂಚಿಕೆ ಪಟ್ಟಿ ದಿನಾಂಕ 04-05-2026 ರಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.
ಸೀಟು ಹಂಚಿಕೆ ವಿವರಗಳು
- ತಾತ್ಕಾಲಿಕ ಸೀಟು ಹಂಚಿಕೆ ಪ್ರಕಟಣೆ: 17 ಏಪ್ರಿಲ್ 2026
- ಮೊದಲ ಸುತ್ತಿನ ಸೀಟು ಹಂಚಿಕೆ: 04 ಮೇ 2026
- ಅಧಿಕೃತ ವೆಬ್‌ಸೈಟ್: http://kar.nic.in
ಮೊದಲ ಸುತ್ತಿನ ಸೀಟು ಹಂಚಿಕೆ ಪಟ್ಟಿಯನ್ನು ಹೇಗೆ ಪರಿಶೀಲಿಸಬೇಕು?
ವಿದ್ಯಾರ್ಥಿಗಳು ಮತ್ತು ಪಾಲಕರು ಕೆಳಗಿನ ಕ್ರಮಗಳನ್ನು ಅನುಸರಿಸಿ ತಮ್ಮ ಸೀಟು ಹಂಚಿಕೆ ವಿವರಗಳನ್ನು ಪರಿಶೀಲಿಸಬಹುದು:
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- “EMRS 6th Class Admission 2026” ವಿಭಾಗವನ್ನು ಕ್ಲಿಕ್ ಮಾಡಿ
- ಸೀಟು ಹಂಚಿಕೆ ಫಲಿತಾಂಶವನ್ನು ವೀಕ್ಷಿಸಿ ಮತ್ತು ಡೌನ್‌ಲೋಡ್ ಮಾಡಿ
ಮುಂದಿನ ಹಂತಗಳು
ಮೊದಲ ಸುತ್ತಿನಲ್ಲಿ ಸೀಟು ಪಡೆದಿರುವ ವಿದ್ಯಾರ್ಥಿಗಳು, ಸೂಚಿಸಿದ ಅವಧಿಯಲ್ಲಿ:
- ಅಗತ್ಯ ದಾಖಲೆಗಳ ಸಲ್ಲಿಕೆ ಮಾಡುವುದು.
- ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು
- ವಿಳಂಬ ಮಾಡಿದರೆ ಸೀಟು ರದ್ದು ಆಗುವ ಸಾಧ್ಯತೆ ಇದೆ!
ಮುಖ್ಯ ಸೂಚನೆ
- ಫಲಿತಾಂಶವನ್ನು ಕೇವಲ ಅಧಿಕೃತ ವೆಬ್‌ಸೈಟ್‌ನಲ್ಲೇ ಪರಿಶೀಲಿಸಿ
- ಮುಂದಿನ ಸುತ್ತಿನ ಸೀಟು ಹಂಚಿಕೆ ಕುರಿತು ಅಪ್ಡೇಟ್‌ಗಳನ್ನು ಗಮನದಲ್ಲಿಡಿ
ಏಕಲವ್ಯ ವಸತಿ ಶಾಲೆಗಳು ಗ್ರಾಮೀಣ ಮತ್ತು ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಪ್ರಮುಖ ಸಂಸ್ಥೆಗಳಾಗಿವೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಬೆಳಗಿಸಿಕೊಳ್ಳಬಹುದು.
