ESIC Teacher Recuritment-2025: ಬೋಧಕ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ.
ESIC Teacher Recuritment-2025: ಎಂಪ್ಲಾಯೀಸ್ ಸ್ಟೇಟ್ ಇನ್ಸೂರೆನ್ಸ್ ಕಾರ್ಪೊರೇಷನ್ (ESIC) ದೇಶದಾದ್ಯಂತ ತನ್ನ ವಿವಿಧ ಘಟಕಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆ (ಅಸಿಸ್ಟೆಂಟ್ ಪ್ರೊಫೆಸರ್)ಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ.
ಒಟ್ಟು ಹುದ್ದೆಗಳು: 243
ಅನಾಟಮಿ, ಅನಸ್ತೇಷಿಯಾ, ಬಯೋ ಕೆಮಿಸ್ಟ್ರಿ, ಕಮ್ಯುನಿಟಿ ಮೆಡಿಸಿನ್, ಪೊರೆನ್ಸಿಕ್ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 243 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಒಟ್ಟು ಹುದ್ದೆಗಳಲ್ಲಿ ಎಸ್‌ಸಿ ಅಭ್ಯರ್ಥಿಗಳಿಗೆ 40, ಎಸ್‌ಟಿ ವರ್ಗದವರಿಗೆ 18, ಒಬಿಸಿ ಅಭ್ಯರ್ಥಿಗಳಿಗೆ 63, ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ 25, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 97 ಹುದ್ದೆಗಳನ್ನು ಮೀಸಲಿಡಲಾಗಿದೆ.
ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಸಂಬಂಧಿತ ವಿಷಯಗಳಲ್ಲಿ ಎಂಡಿ, ಎಂಎಸ್, ಡಿಎನ್‌ಬಿ, ಎಂಡಿಎಸ್, ಸ್ನಾತಕೋತ್ತರ ಪದವೀಧರರು, ಪಿಎಚ್‌ಡಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ:
ಗರಿಷ್ಠ 40 ವರ್ಷದ ಒಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ನಿಯಮಾನುಸಾರ ಮೀಸಲಾತಿ ವ್ಯಾಪ್ತಿಗೆ ಒಳಪಡುವ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮೂರು ವರ್ಷ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಮಹಿಳೆಯರು, ಎಸ್‌ಸಿ, ಎಸ್‌ಟಿ, ವಿಶೇಷಚೇತನ, ఇఎనో ఐసి ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಉಳಿದಂತೆ ಒಬಿಸಿ, ಸಾಮಾನ್ಯ, ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳು ಡಿಮ್ಯಾಂಡ್ ಡ್ರಾಫ್ಟ್ ಅಥವಾ ಬ್ಯಾಂಕರ್ಸ್ ಚೆಕ್ ಮೂಲಕ 500 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ:
ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.ಒಟ್ಟು 100 ಅಂಕಗಳಿಗೆ ಸಂದರ್ಶನ ನಡೆಸಲಾಗುವುದು. ಸಂದರ್ಶನದಲ್ಲಿ ಸಾಮಾನ್ಯ ಮತ್ತು ಇಡಬ್ಲ್ಯುಎಸ್ ವರ್ಗದ ಅಭ್ಯರ್ಥಿಗಳು 50 ಅಂಕ, ಒಬಿಸಿ ಅಭ್ಯರ್ಥಿಗಳು 45 ಅಂಕ, ಎಸ್‌ಸಿ/ಎಸ್‌ಟಿ/ ವಿಶೇಷಚೇತನ ಅಭ್ಯರ್ಥಿಗಳು 40 ಅಂಕ ಗಳಿಸುವುದು ಕಡ್ಡಾಯ.
▪️ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 15
▪️ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ
▪️ಮಾಸಿಕ 67,700ರೂ.ನಿಂದ 2,08,700 ರೂ. ವರೆಗೆ ವೇತನ.
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಸೆಪ್ಟೆಂಬರ್ 15ರ ಒಳಗೆ ಆಸಕ್ತ ಅಭ್ಯರ್ಥಿಗಳು ಈ ವಿಳಾಸಕ್ಕೆ ಅರ್ಜಿ ಕಳಿಸಬೇಕಿದೆ Regional Director, ESI Corporation, Panchdeep Bhawan, Sector-16, (Near Laxmi Narayan Mandir), Faridabad-121002, Haryana.