ESR Digitising Service Records of Government Employees
ESR Digitising Service Records of Government Employees: ಮೇಲ್ಕಂಡ ವಿಷಯ ಮತ್ತು ಉಲ್ಲೇಖಗಳಿಗೆ ಸಂಬಂಧಿಸಿದಂತೆ. ಸದರಿ ಉಲ್ಲೇಖಗಳನ್ನಯ 2021-22 ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ/ನೌಕರರುಗಳ ಸೇವಾ ವಹಿಯನ್ನು “ವಿದ್ಯುನ್ಮಾನ ಸೇವಾ ವಹಿ” Electronic Service Register (ESR) ನಲ್ಲಿಯೇ ಅನುಷ್ಠಾನಗೊಳಿಸಲು ಸಂಬಂದಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಲಾಗಿರುತ್ತದೆ ಹಾಗೂ ಉಲ್ಲೇಖಿತ ಸರ್ಕಾರದ ಸುತ್ತೋಲೆ (3) & (4) ರಂತೆ, ಎಲ್ಲಾ ಸಿಬ್ಬಂದಿಗಳ ಸೇವಾ ವಹಿಗಳನ್ನು ESR ಗೆ ಬದಲಾಯಿಸಿ ಮುಂದೆ ESR ನಲ್ಲಿಯೇ ಮುಂದುವರೆಸುವಂತೆ ತಿಳಿಸಲಾಗಿದೆ. HRMS-1 ತಂತ್ರಾಂಶದ ಸೇವಾವಹಿ ಭಾಗದಲ್ಲಿ ಅಧಿಕಾರಿ/ನೌಕರರ ಮಾಹಿತಿಯು ಲಭ್ಯವಿದ್ದು ಸದರಿ ಮಾಹಿತಿಯನ್ನು HRMS-2 ಯೋಜನೆಯ ಭಾಗವಾಗಿರುವ ವಿದ್ಯುನ್ಮಾನ ಸೇವಾ ವಹಿ (ESR) ಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸದರಿ ಮಾಹಿತಿಯನ್ನು ವರ್ಗಾಯಿಸಿದ ನಂತರ ESR ನಲ್ಲಿ ಯಾವುದೇ ತಿನ್ನುವಡಿ ಮಾಡುವ ಅವಕಾಶವಿಲ್ಲದಿರುವ ಕಾರಣ HRMS-1 ತಂತ್ರಾಂಶದಲ್ಲಿ ಲಭ್ಯವಿರುವ ತಮ್ಮ ಇಲಾಖೆಯ ಎಲ್ಲಾ ಸರ್ಕಾರಿ ಅಧಿಕಾರಿ/ ನೌಕರರುಗಳ ಸೇವಾ ವಹಿಯ ಪೂರ್ಣ ಮಾಹಿತಿಯನ್ನು ಕೂಡಲೇ ಪರಿಶೀಲಿಸಿ, ಅವಶ್ಯಕವಿದ್ದಲ್ಲಿ ಸರಿಪಡಿಸುವಂತೆ ಹಾಗೂ ಸೇರಿಸಲು ಸೂಚಿಸಲಾಗಿತ್ತು.
HOD ಮಟ್ಟದಲ್ಲಿ ಡಿಡಿಓಗಳು ವರದಿಸಿದ ಸಮಸ್ಯೆಯನ್ನು/ ವಿನಂತಿಯನ್ನು ತ್ವರಿತವಾಗಿ ಕ್ರಮತೆಗೆದುಕೊಳ್ಳಲಾಗುತ್ತಿಲ್ಲ. ಮತ್ತು ಅದರಿಂದ, ESR ಅನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗಿದೆ ಎಂದು ಅನೇಕ ಬಳಕೆದಾರರು ವರದಿ ಮಾಡಿದ್ದಾರೆ. ಆದ್ದರಿಂದ, HRMS-1 ರಲ್ಲಿನ ಅಧಿಕಾರಿ/ ನೌಕರರುಗಳ ಡೇಟಾದಲ್ಲಿನ ತಿದ್ದುಪಡಿಗಳು ಅಥವಾ ನವೀಕರಣಗಳಿಗಾಗಿ ಮಾಡಲಾದ ವಿನಂತಿಯನ್ನು ಮೊದಲ ಆದ್ಯತೆಯ ಮೇಲೆ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ತಮ್ಮಲ್ಲಿ ವಿನಂತಿಸುತ್ತಿದ್ದೇನ.
ಹೆಚ್ಚಿನ ಇಲಾಖೆಗಳು ಈಗಾಗಲೇ HRMS-2 ಗೆ ಸೇರ್ಪಡೆಗೊಂಡಿವೆ. HRMS-2 ರಲ್ಲಿ ಒದಗಿಸಬೇಕಾದ ಸೇವೆಗಳಿಗಾಗಿ ಅಧಿಕಾರಿ/ ನೌಕರರ ಸೇವಾ ವಿವರಗಳನ್ನು ESR ಗೆ ಬದಲಾಗಿ ಪ್ರಸ್ತುತ HRMS-1 ರಿಂದ ಪಡೆಯಲಾಗುತ್ತಿದೆ. ಭವಿಷ್ಯದಲ್ಲಿ HRMS-1 ಕಾರ್ಯನಿರ್ವಹಿಸುವುದು ನಿಲ್ಲಿಸಿದಾಗ, ಅಧಿಕಾರಿ/ ನೌಕರರ ಡೇಟಾವನ್ನು HRMS-2 ವಿನಲ್ಲಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ESR ನಲ್ಲಿ ನೌಕರರ ಸೇವಾ ವಿವರಗಳನ್ನು ತುರ್ತಾಗಿ ನವೀಕರಿಸುವುದು ಬಹಳ ಅವಶ್ಯಕ.
ಮುಖ್ಯ ಕಾರ್ಯದರ್ಶಿಗಳು ಸೂಚಿಸಿದಂತೆ, ಮೂರು ವರ್ಷದೊಳಗೆ ನಿವೃತ್ತರಾಗಲಿರುವ ಅಧಿಕಾರಿ/ನೌಕರರ ESR ಅನ್ನು ತುರ್ತಾಗಿ ತಯಾರಿಸಬೇಕಾಗಿದೆ. ಏಕೆಂದರೆ, ಭವಿಷ್ಯದಲ್ಲಿ AG ಪಿಂಚಣಿ ಉದ್ದೇಶಕ್ಕಾಗಿ ESR ನಿಂದಲೇ Form-7 ನಮೂನೆಯನ್ನು ಸ್ವೀಕರಿಸುತ್ತಾರೆ. ಹಾಗೂ Digital ESR ಲಗತ್ತಿಸುವಂತೆ ತಿಳಿಸಿರುತ್ತಾರೆ. ಆದ್ದರಿಂದ, ಇವರುಗಳ ESR ನ್ನು ಪ್ರಥಮ ಆದ್ಯತೆಯಲ್ಲಿ ತಯಾರಿಸುವುದು ಅವಶ್ಯಕವಾಗಿದೆ.
ಗ್ರೂಪ್ ಎ ಮತ್ತು ಬಿ ಅಧಿಕಾರಿ/ ನೌಕರರ ಸೇವಾ ವಿವರಗಳನ್ನು AG ಮತ್ತು HRMS-1 ವತಿಯಿಂದ ಪಡೆಯಲಾಗುತ್ತದೆ. ಅಧಿಕಾರಿ/ ನೌಕರರ GER ಸಂಖ್ಯೆಯನ್ನು HRMS-1 ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ನಂತರ, ಅವರ ESR ಪೂರ್ಣಗೊಳಿಸಬೇಕು.
ಗ್ರೂಪ್ ಎ ಮತ್ತು ಬಿ ಪತ್ರಾಂಕಿತ ಅಧಿಕಾರಿಗಳ ಭೌತಿಕ ಸೇವಾ ಪುಸ್ತಕ ನಿಮ್ಮ ಕಛೇರಿಯಲ್ಲಿ ನಿರ್ವಹಿಸದೆ ಇರುವುದರಿಂದ, ಅದನ್ನು upload ಮಾಡುವ ಸಂದರ್ಭವಿರುವುದಿಲ್ಲ. ಆದುದರಿಂದ, GER ಸಂಖ್ಯೆ ಹೊಂದಿರುವ ಪತ್ರಾಂಕಿತ ಅಧಿಕಾರಿಗಳ ESR ಪರಿಶೀಲನೆಗಾಗಿ ವಿಷಯ ನಿರ್ವಾಹಕರ login ನಲ್ಲಿ ಲಭ್ಯವಿರುತ್ತದೆ.
ಮುಂದೆ HRMS-20 ಸಂಪೂರ್ಣವಾಗಿ ಅನುಷ್ಠಾನಗೊಂಡ ನಂತರ (April 2026 ರಿಂದ) ESR – LIVE HRMS system ನಲ್ಲೆ ತಯಾರಾಗುತ್ತದೆ ಹಾಗೂ ಇದರಿಂದ AG ಗೆ ಪಿಂಚಣಿ ಮಾಹಿತಿ, TLE ಹಾಗೂ Gratuity & Pension Form-7 ಇವೆಲ್ಲಕ್ಕಾಗಿ ಮಾಹಿತಿ online ನಲ್ಲಿ ನೀಡಲಾಗುವುದು.
ಗ್ರೂಪ್ ಸಿ ಯಿಂದ ಬಿ (ಪತ್ರಾಂಕಿತ) ಹುದ್ದೆಗೆ ಪದೋನ್ನತಿ ಪಡೆದ ಅಧಿಕಾರಿ/ನೌಕರರ, ಗ್ರೂಪ್ ಸಿ ನಲ್ಲಿ ಇರುವಾಗ ನಿರ್ವಹಿಸಿದ ಭೌತಿಕ ಸೇವಾ ಪುಸ್ತಕವನ್ನು Scan ಮಾಡಿ upload ಮಾಡಬಹುದು. ಅಧಿಕಾರಿ/ನೌಕರರ ಸೇವಾ ವಿವರಗಳನ್ನು ಪರಿಶೀಲಿಸಿ. AG ಯಿಂದ ಪಡೆದ ಮಾಹಿತಿಯೊಂದಿಗೆ ತಾಳ ಹೊಂದಿಸಿ, ESR ಅನ್ನು ಪೂರ್ಣಗೊಳಿಸಬೇಕು.
AG ಯಿಂದ ಬಂದಿರುವ ಅಧಿಕಾರಿ/ ನೌಕರರ ರಜೆ, ವೇತನ ಬಡ್ತಿ, ವೇತನ ಪರಿಷ್ಕರಣೆ ಮತ್ತು ಇತರೆ ಸೇವಾ ವಿವರಗಳಲ್ಲಿ ಏನಾದರೂ ವ್ಯತ್ಯಾಸವಿದ್ದರೆ, ಅದನ್ನು AG ಕಛೇರಿಯಲ್ಲಿ ಸರಿಪಡಿಸಿಕೊಳ್ಳುವುದು.
HRMS-2 ರಲ್ಲಿ ಎಲ್ಲಾ ಸೇವೆಗಳನ್ನು ಅಧಿಕಾರಿ/ ನೌಕರರಿಗೆ online ನಲ್ಲಿ ಒದಗಿಸಲಾಗುತ್ತದೆ ಹಾಗೂ ಆ ವಿವರಗಳನ್ನು ESR (ESR-LIVE) ಗೆ ಸ್ವಯಂಚಾಲಿತವಾಗಿ ಸೇರ್ಪಡೆಯಾಗುತ್ತದೆ. ಅಧಿಕಾರಿ/ ನೌಕರರ ವಿವರಗಳು AG ಗೆ ಏಕೀಕರಣ ಮೂಲಕ ವರ್ಗಾಯಿಸಲಾಗುತ್ತದೆ ಮತ್ತು AG ಯಿಂದ ಅಧಿಕಾರಿ/ ನೌಕರರ ರಜೆ ಹಕ್ಕು ಮತ್ತು ವೇತನ ಚೀಟಿ (Leave entitlements & Pay slips) ಅನ್ನು ನೇರವಾಗಿ ಪಡೆಯಲಾಗುವುದು.
HRMS-2 ರಲ್ಲಿ ಎಲ್ಲಾ ಸೇವೆಗಳನ್ನು ನೌಕರರಿಗೆ online ನಲ್ಲಿ ಒದಗಿಸಲಾಗುತ್ತದೆ. HRMS-2 ಪೂರ್ಣವಾಗಿ ಅನುಷ್ಠಾನವಾದ ನಂತ ಅವರ ವಿವರಗಳನ್ನು ESR-LIVE ಮಾಡ್ಯೂಲ್ ನಲ್ಲಿ ಸ್ವಯಂಚಾಲಿತವಾಗಿ ಪಡೆಯಲಾಗುತ್ತದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ESR ತಯಾರಿಸುವ ಅವಶ್ಯಕತೆ ಇರುವುದಿಲ್ಲ.
ಆದುದರಿಂದ, ಈ ಬಗ್ಗೆ ಸಂಬಂದಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಹೆಚ್ಚಿನ ಗಮನಹರಿಸಿ, ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ/ನೌಕರರುಗಳ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿಯಲ್ಲಿಯೇ ಅನುಷ್ಠಾನಗಿಳಿಸುವಂತ ಹಾಗೂ ಸಿಬ್ಬಂದಿಗಳ ESR ನಿರ್ವಹಣೆಯಲ್ಲಿ ಯಾವುದೇ ಅಡಚಣೆಯುಂಟಾದಲ್ಲಿ ಕೂಡಲೇ HRMS ತಂಡವನ್ನು ಸಂರ್ಪಕಿಸಿ ಸರಿಪಡಿಸಿಕೊಂಡು ಸದರಿ ಕಾರ್ಯವನ್ನು Feb 2026 ರೊಳಗೆ ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದೆ.

D group