Family pension facility: ಕುಟುಂಬ ಪಿಂಚಣಿ ಸೌಲಭ್ಯ|ನೋಂದಾಯಿತ ಕಾರ್ಮಿಕ ಪಿಂಚಣಿದಾರರ ಪತಿ ಅಥವಾ ಪತ್ನಿಗೆ ಮಂಡಳಿ ಯಿಂದ ಮಾಸಿಕ ಪಿಂಚಣಿ ಸೌಲಭ್ಯ!
Family pension facility: ನೋಂದಾಯಿತ ಕಾರ್ಮಿಕರ ನಿಧನವಾದ ಬಳಿಕ ಅವರ ಕುಟುಂಬದ ಆರ್ಥಿಕ ಸುರಕ್ಷತೆಗಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಕುಟುಂಬ ಪಿಂಚಣಿ ಸೌಲಭ್ಯವನ್ನು ನೀಡುತ್ತಿದೆ.
ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರು ಪಿಂಚಣಿದಾರರಾಗಿದ್ದರೆ, ಅವರ ಪತಿ ಅಥವಾ ಪತ್ನಿಗೆ ಮಾಸಿಕ ಪಿಂಚಣಿ ಸೌಲಭ್ಯ ದೊರೆಯುತ್ತದೆ. ಈ ಯೋಜನೆಯ ಉದ್ದೇಶ ಕುಟುಂಬದ ಜೀವನೋಪಾಯಕ್ಕೆ ಆರ್ಥಿಕ ಸಹಾಯ ಒದಗಿಸುವುದಾಗಿದೆ.
▪️ಅರ್ಹತೆ:
* ಕಾರ್ಮಿಕರು ಮಂಡಳಿಯಲ್ಲಿ ನೋಂದಾಯಿತರಾಗಿರಬೇಕು.
* ಕಾರ್ಮಿಕರ ನಿಧನದ ನಂತರ ಪತಿ ಅಥವಾ ಪತ್ನಿಯು ಜೀವಂತವಾಗಿರಬೇಕು.
* ಮಂಡಳಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
▪️ಅರ್ಜಿಯೊಂದಿಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು:
* ಮಂಡಳಿಯಿಂದ ನೀಡಿರುವ ಮೃತ ಫಲಾನುಭವಿಯ ಗುರುತಿನ ಚೀಟಿಯ ನಕಲು ಪ್ರತಿ
* ಪಿಂಚಣಿ ಮಂಜೂರಾತಿ ಆದೇಶ
* ರೇಷನ್ ಕಾರ್ಡ್ ಪ್ರತಿ
* ಅವಲಂಬಿತರ ಬ್ಯಾಂಕ್ ಖಾತೆ ವಿವರ
* ಮರಣ ಪ್ರಮಾಣ ಪತ್ರ
* ಮೃತರ ಪತಿ ಅಥವಾ ಪತ್ನಿಯ ಅಧಾರ್ ಕಾರ್ಡ್ ಪ್ರತಿ
* ಅವಲಂಬಿತರ ವಾಸಸ್ಥಳ ಪ್ರಮಾಣ ಪತ್ರ
* ಅರ್ಜಿದಾರರ ಕೋರಿಕೆ ಪತ್ರ
* ನೋಂದಣಿದಾರರ ಆಧಾರ್ ಕಾರ್ಡ್ ಪ್ರತಿ
▪️ಸೌಲಭ್ಯ:
ಮಂಡಳಿಯು ಅರ್ಹ ಪತಿ ಅಥವಾ ಪತ್ನಿಗೆ ಪ್ರತಿ ತಿಂಗಳು ನಿಗದಿತ ಮೊತ್ತದ ಕುಟುಂಬ ಪಿಂಚಣಿ ನೀಡುತ್ತದೆ. ಈ ಮೊತ್ತವು ಮಂಡಳಿಯ ನಿಯಮಾವಳಿ ಪ್ರಕಾರ ಬದಲಾಗಬಹುದು.
▪️ಹೇಗೆ ಅರ್ಜಿ ಮಾಡುವುದು ಹೇಗೆ:
ಅರ್ಜಿದಾರರು ತಮ್ಮ ಜಿಲ್ಲೆಯ ಕಾರ್ಮಿಕ ಕಲ್ಯಾಣ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಪರಿಶೀಲನೆಯ ನಂತರ ಮಂಡಳಿಯು ಪಿಂಚಣಿ ಮಂಜೂರು ಮಾಡುತ್ತದೆ.