Forest Watcher Recruitment 2026: 774 Group D ಹುದ್ದೆಗಳ ನೇಮಕಾತಿ – ಅರ್ಜಿ ಆರಂಭ, ಅರ್ಹತೆ, ದಿನಾಂಕ, ಸಂಪೂರ್ಣ ಮಾಹಿತಿ
Forest Watcher Recruitment 2026: ಕರ್ನಾಟಕ ಅರಣ್ಯ ಇಲಾಖೆ 774 ಅರಣ್ಯ ವೀಕ್ಷಕ (ಗ್ರೂಪ್ ‘ಡಿ’) ಹುದ್ದೆಗಳ ನೇಮಕಾತಿ 2026 ಅಧಿಸೂಚನೆ ಪ್ರಕಟಿಸಿದೆ. ಆಗಸ್ಟ್ 1ರಿಂದ ಆಗಸ್ಟ್ 31ರವರೆಗೆ ಅರ್ಜಿ ಸಲ್ಲಿಸಬಹುದು. ಸಂಪೂರ್ಣ ಮಾಹಿತಿ ಇಲ್ಲಿ ಓದಿ.
ಕರ್ನಾಟಕ ಅರಣ್ಯ ಇಲಾಖೆ 774 ಅರಣ್ಯ ವೀಕ್ಷಕ (ಗ್ರೂಪ್ ‘ಡಿ’) ಹುದ್ದೆಗಳ ನೇಮಕಾತಿ 2026 ಅಧಿಸೂಚನೆ ಪ್ರಕಟಿಸಿದೆ. ಆಗಸ್ಟ್ 1ರಿಂದ ಆಗಸ್ಟ್ 31ರವರೆಗೆ ಅರ್ಜಿ ಸಲ್ಲಿಸಬಹುದು. ಸಂಪೂರ್ಣ ಮಾಹಿತಿ ಇಲ್ಲಿ ಓದಿ.
ಕರ್ನಾಟಕ ಅರಣ್ಯ ಇಲಾಖೆ ಅರಣ್ಯ ವೀಕ್ಷಕ (ಗ್ರೂಪ್ ‘ಡಿ’) ನೇಮಕಾತಿ 2026
ಕರ್ನಾಟಕ ಅರಣ್ಯ ಇಲಾಖೆ (Karnataka Forest Department) ವತಿಯಿಂದ ಅರಣ್ಯ ವೀಕ್ಷಕ (ಗ್ರೂಪ್ ‘ಡಿ’) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದೆ. ರಾಜ್ಯದ ವಿವಿಧ ಅರಣ್ಯ ವಲಯಗಳಲ್ಲಿ ಒಟ್ಟು 774 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರಣ್ಯ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ: 01-08-2026
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31-08-2026
- ಶುಲ್ಕ ಪಾವತಿ ಕೊನೆಯ ದಿನಾಂಕ: 02-09-2026
ವಲಯವಾರು ಹುದ್ದೆಗಳ ವಿವರ
ಅರಣ್ಯ ವಲಯವಾರು ಹುದ್ದೆಗಳ ವಿವರ
| ಕ್ರಮ ಸಂಖ್ಯೆ | ಅರಣ್ಯ ವಲಯ (Circle) | ಹುದ್ದೆಗಳ ಸಂಖ್ಯೆ |
|---|---|---|
| 1 | Kanara Circle | 67 |
| 2 | Kodagu Circle | 32 |
| 3 | Dharwad Circle | 12 |
| 4 | Mangaluru Circle | 54 |
| 5 | Hassan Circle | 31 |
| 6 | Chikkamagaluru Circle | 60 |
| 7 | Kalaburagi Circle | 6 |
| 8 | Belagavi Circle | 42 |
| 9 | Mysuru Circle | 121 |
| 10 | Ballari Circle | 64 |
| 11 | Chamarajanagar Circle | 159 |
| 12 | Bengaluru Circle | 82 |
| 13 | Shivamogga Circle | 44 |
| ಒಟ್ಟು ಹುದ್ದೆಗಳು | 774 | |
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ ಹಾಗೂ ಅಗತ್ಯ ದಾಖಲೆಗಳ ಕುರಿತು ಖಚಿತಪಡಿಸಿಕೊಳ್ಳುವುದು ಸೂಕ್ತ.
ಅಧಿಕೃತ ವೆಬ್‌ಸೈಟ್: https://aranya.gov.in
ಅಭ್ಯರ್ಥಿಗಳಿಗೆ ಸೂಚನೆ
- ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
- ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿಯೇ ಅರ್ಜಿ ಸಲ್ಲಿಸಿ.
- ಅರ್ಜಿ ಸಲ್ಲಿಸಿದ ನಂತರ ಅದರ ಪ್ರಿಂಟ್ ಪ್ರತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
- ಪರೀಕ್ಷೆ ಹಾಗೂ ಮುಂದಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸಿ.
ಕರ್ನಾಟಕ ಅರಣ್ಯ ಇಲಾಖೆಯ 774 ಅರಣ್ಯ ವೀಕ್ಷಕ (ಗ್ರೂಪ್ ‘ಡಿ’) ಹುದ್ದೆಗಳ ನೇಮಕಾತಿಯು ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 01 ಆಗಸ್ಟ್ 2026 ರಿಂದ 31 ಆಗಸ್ಟ್ 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದುವುದು ಕಡ್ಡಾಯ.
▪️ಅರ್ಹತೆ:
(1) ಭಾರತೀಯ ನಾಗರಿಕನಾಗಿರತಕ್ಕದ್ದು.
(2) ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಪತ್ನಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದಿಂದ ಪೂರ್ವಾನುಮತಿಯನ್ನು ಪಡೆಯದೆ ನೇಮಕಾತಿಗೆ ಅರ್ಹರಾಗುವುದಿಲ್ಲ.
(3) ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಹಾಗೂ ಅವರ ನೇಮಕಾತಿಯ ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನ್ಯತೆಯಿಂದ ಮುಕ್ತರಾಗಿರಬೇಕು.
(4) ದೈಹಿಕವಾಗಿ ಅನರ್ಹರಾಗಿದ್ದಾರೆ ಎಂಬುದಾಗಿ ವೈದ್ಯಕೀಯ ಮಂಡಳಿಯ ವರದಿಯ ಮೇರೆಗೆ ಅನರ್ಹರಂಬುದಾಗಿ ತಿರಸ್ಕರಿಸುವ ಪೂರ್ಣ ವಿವೇಚನೆಯನ್ನು ಆಯ್ಕೆ ಪ್ರಾಧಿಕಾರವು ಕಾಯ್ದಿರಿಸಿಕೊಂಡಿದೆ ಮತ್ತು ಸರ್ಕಾರದ ವಿವೇಚನೆಯು ಯಾವುದೇ ವಿಧದಲ್ಲೂ ಈ ನಿಯಮಗಳ ಮೂಲಕ ಸೀಮಿತವಾಗಿರುವುದಿಲ್ಲ.
▪️ವಿದ್ಯಾರ್ಹತೆ
ಅಭ್ಯರ್ಥಿಯು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಅಥವಾ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಗೆ ತತ್ಸಮಾನವಾದ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಹೊಂದಿರಬೇಕು.
ವಿಶೇಷ ಸೂಚನೆಗಳು:
(1) ಸರ್ಕಾರದ ಸುತ್ತೋಲೆ ಸಂಖ್ಯೆ: ಸಿ.ಆ.ಸು.ಇ. 81 ಸೇವನೆ 2017, ದಿನಾಂಕ: 27.02.2018 ರಲ್ಲಿ ಸ್ಪಷ್ಟಪಡಿಸಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಗಳು ಈ ಕೆಳಗಿನಂತಿವೆ:
(a) ಸಿ.ಬಿ.ಎಸ್.ಇ. (CBSE) ಮತ್ತು ಐ.ಸಿ.ಎಸ್.ಇ. (ICSE) ಮಂಡಳಿಯು ನಡೆಸುವ Class 10 ಪರೀಕ್ಷೆ; ಅಥವಾ
(b) ಇತರೆ ರಾಜ್ಯ ಸರ್ಕಾರಗಳ ಪರೀಕ್ಷಾ ಮಂಡಳಿಗಳಿಂದ ನಡೆಸುವ Class 10 ಪರೀಕ್ಷೆ; ಅಥವಾ
(c) ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ವತಿಯಿಂದ ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್; ಅಥವಾ
(d) ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್ (KOS).
(2) ಮೇಲೆ ನಮೂದಿಸಿರುವ ವಿದ್ಯಾರ್ಹತೆಯನ್ನು ಹೊಂದದೇ ಇರುವ ಅಥವಾ ಇತರೆ ಕಾರಣಗಳಿಂದ ಅನರ್ಹರಿರುವ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಿ, ಯಾವುದೇ ಕಾರಣದಿಂದ ಭಾಗವಹಿಸಿದಲ್ಲಿ, ನಂತರ ನಿಗದಿಪಡಿಸಲಾದ ವಿದ್ಯಾರ್ಹತೆ ಅಂಕಪಟ್ಟಿ ಹೊಂದಿರುವುದಿಲ್ಲವೆಂದು ಅಥವಾ ಇತರೆ ಕಾರಣಗಳಿಂದ ಅನರ್ಹರಿರುವುದು ಆಯ್ಕೆ, ಪ್ರಾಧಿಕಾರ / ನೇಮಕಾತಿ ಪ್ರಾಧಿಕಾರಕ್ಕೆ ಕಂಡುಬಂದಲ್ಲಿ, ಅಂತಹ ಅಭ್ಯರ್ಥಿಗಳ ಅಭ್ಯರ್ಥಿತ್ವವನ್ನು ಯಾವುದೇ ಹಂತದಲ್ಲಾದರೂ ರದ್ದುಪಡಿಸಲಾಗುವುದು ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೇನೆ ಎಂಬ ಕಾರಣಕ್ಕಾಗಿಯೂ ಅಭ್ಯರ್ಥಿಯು ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಈ ಕುರಿತು ಆಯ್ಕೆ ಪ್ರಾಧಿಕಾರಿ / ನೇಮಕಾತಿ ಪ್ರಾಧಿಕಾರ ತೆಗೆದುಕೊಳ್ಳುವ ನಿರ್ಣಯವೇ ಅಂತಿಮವಾಗಿರುತ್ತದೆ.
(3) ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ನಿಗದಿತ ವಿದ್ಯಾರ್ಹತೆಯ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಹಾಗೂ ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ ಹೊಂದಿಲ್ಲದೇ ಇರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ. ಮೇಲಿನ ವಿದ್ಯಾರ್ಹತೆಯನ್ನು ಹೊರತುಪಡಿಸಿ ಬೇರೆ ಯಾವ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ.
(4) ಸ್ಥಳೀಯ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡ [Local Forest Dwelling Tribes] ಪ್ರವರ್ಗದಡಿ ಮೀಸಲಾತಿ ಕೋರುವ ಅಭ್ಯರ್ಥಿಗಳು ಆನ್ನೈನ್ (Online) (ಎಲೆಕ್ಟ್ರಾನಿಕ್ ಮಾರ್ಗ) ಅರ್ಜಿ ಸಲ್ಲಿಸುವ ವೇಳೆ ಪರಿಶಿಷ್ಟ ಜಾತಿ – ಸ್ಥಳೀಯ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡ [Local Forest Dwelling Tribes] ಮೀಸಲಾತಿ ಅಂಕಣವನ್ನು ಎಚ್ಚರಿಕೆ ವಹಿಸಿ ಭರ್ತಿ ಮಾಡುವುದು. ತಪ್ಪಿದ್ದಲ್ಲಿ, ಈ ಬಗ್ಗೆ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ.
▪️ವಯೋಮಿತಿ:
ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 6ರಲ್ಲಿ ಒಳಗೊಂಡಿರುವ ಯಾವುದೇ ವಿಷಯದ ಹೊರತಾಗಿಯೂ ಅಭ್ಯರ್ಥಿಗಳು ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಹಾಗೂ ಅಧಿಸೂಚನೆ ಪ್ರಾರಂಭಿಕ ದಿನಾಂಕಕ್ಕೆ ಈ ಕೆಳಗಿನಂತೆ ಗರಿಷ್ಠ ವಯೋಮಿತಿಯೊಳಗಿರತಕ್ಕದ್ದು.
▪️ಸರ್ಕಾರದ ಆದೇಶ ಸಂಖ್ಯೆ: ಸಿ.ಅಸು.ಇ. 262 ಸೇನೆನಿ 2025, ದಿನಾಂಕ:29.01.2026 ರನ್ವಯ ಈ ಆದೇಶದ ದಿನಾಂಕದ ನಂತರ ಮುಂದಿನ ದಿನಾಂಕ: 31.12.2027ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ನಿಗದಿಪಡಿಸಿರುವ ಗರಿಷ್ಠ, ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a one-time measure) 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ಸಾಮಾನ್ಯ ಅಭ್ಯರ್ಥಿ:
▪️ಗರಿಷ್ಠ ವಯೋಮಿತಿ 30 ವರ್ಷ, ಗರಿಷ್ಠ ವಯೋಮಿತಿ 32 ವರ್ಷ
▪️ಪ್ರವರ್ಗ 2ಎ, 2ಬಿ, 3ಎ, 3ಬಿ ಹಿಂದುಳಿದ ಪ್ರವರ್ಗಗಳು
▪️ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1- ಗರಿಷ್ಠ ವಯೋಮಿತಿ 33 ವರ್ಷ
▪️ಮಾಜಿ ಸೈನಿಕರಿಗೆ ವಯೋಮಿತಿ: ಸಶಸ್ತ್ರ ಪಡಗಳಲ್ಲಿ ಸೇವ ಸಲ್ಲಿಸಿ ನಿಯಮಾನುಸಾರ ನಿವೃತ್ತಿ/ಡಿಮೊಬಿಲೈಸೇಷನ್ (Demobilisation) ಅಥವಾ ರಿಟ್ರೆಚ್ಮೆಂಟ್ (Retrenchment) ಹೊಂದಿದ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಯಾವ ಪವರ್ಗಕ್ಕೆ ಸೇರಿರುತ್ತಾರೆಯೊ ಈ ಮೇಲಿನ ಪ್ರವರ್ಗಕ್ಕೆ ನಿಗದಿಪಡಿಸಿದ ಗರಿಷ್ಠ ವಯೋಮಿತಿಗೆ ಅವರು ಎಷ್ಟು ವರ್ಷ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿರುವರೋ ಅಷ್ಟು ವರ್ಷಗಳಿಗೆ ಮೂರು (3) ವರ್ಷ ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳ ಸಡಿಲಿಕೆಯನ್ನು ನೀಡಲಾಗುವುದು.
ಅರಣ್ಯ ಪ್ರೇರಕರಿಗೆ ವಯೋಮಿತಿ:
ಅಧಿಸೂಚನೆ ದಿನಾಂಕಕ್ಕೆ ಅರಣ್ಯ ಇಲಾಖೆಯಲ್ಲಿ ನಿರಂತರ ಕನಿಷ್ಠ 5 ವರ್ಷಗಳ ಸೇವೆಯನ್ನು ಅರಣ್ಯ ಪ್ರೇರಕರಾಗಿ ಪೂರೈಸಿದ್ದು, ಪ್ರಸ್ತುತ ಅರಣ್ಯ ಪ್ರೇರಕರಾಗಿ ಸೇವೆಯಲ್ಲಿ ಇನ್ನು ನಿಶ್ಚಿತ ಗೌರವಧನವನ್ನು ಪಡೆಯುತ್ತಿರುವ ಅರಣ್ಯ ಪ್ರೇರಕರಿಗೆ ಮಾತ್ರ ಈ ಕೆಳಗಿನ ಗರಿಷ್ಠ ವಯೋಮಿತಿ ಅನ್ವಯವಾಗುವುದು.
▪️ಸಾಮಾನ್ಯ ಅಭ್ಯರ್ಥಿ ಗರಿಷ್ಠ ವಯೋಮಿತಿ 40 ವರ್ಷ
▪️ಪ್ರವರ್ಗ 2ಎ, 2ಬಿ, 3ಎ, 3ಬಿ ಹಿಂದುಳಿದ ಪ್ರವರ್ಗಗಳು: ಗರಿಷ್ಠ ವಯೋಮಿತಿ 42 ವರ್ಷ
▪️ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1- ಗರಿಷ್ಠ ವಯೋಮಿತಿ 43 ವರ್ಷ
ನೇಮಕಾತಿ/ ಆಯ್ಕೆ ವಿಧಾನ:
ಆನ್ಸೆನ್ (Online) (ಎಲೆಕ್ಟ್ರಾನಿಕ್ ಮಾರ್ಗ) ನಲ್ಲಿ ಸ್ವೀಕೃತವಾದ ಅರ್ಜಿಗಳಲ್ಲಿ ಅಭ್ಯರ್ಥಿಗಳು ಭರ್ತಿ ಮಾಡಿರುವ ಮಾಹಿತಿ / ವಿವರಗಳ ಆಧಾರದನ್ವಯ ಆಯ್ಕೆ ಪ್ರಾಧಿಕಾರವು ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಅಥವಾ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:20 (ಹುದ್ದೆ : ಅಭ್ಯರ್ಥಿ) ಅನುಪಾತದಲ್ಲಿ ಶಾರೀರಿಕ ಮಾನದಂಡಗಳ ಪರೀಕ್ಷೆ (Physical Standard Test) ದೈಹಿಕ ತಾಳ್ವಿಕೆ ಪರೀಕ್ಷೆ Physical Endurance Test) ಮತ್ತು ದೈಹಿಕ ಕಾರ್ಯ ಸಮರ್ಥತೆ (Physical Efficiency Test) ಪರೀಕ್ಷೆಗಾಗಿ ಅಭ್ಯರ್ಥಿಗಳ ವೃತ್ತ ಮಟ್ಟದ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಿ, ಪರೀಕ್ಷೆಗಳ ಕುರಿತ ದಿನಾಂಕವನ್ನು ಕಾಲಕಾಲಕ್ಕೆ ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ: https://aranya.gov.in/ ನಲ್ಲಿ ಮುಖಪುಟದ ಕೆಳಭಾಗದಲ್ಲಿ “ನೇಮಕಾತಿ” ಶೀರ್ಷಿಕೆಯ ಮೂಲಕ ಪ್ರಕಟಪಡಿಸಲಾಗುವುದು.
ಈ ಕುರಿತು ಇಲಾಖೆಯ ವತಿಯಿಂದ ಅಭ್ಯರ್ಥಿಗಳೊಂದಿಗೆ ಯಾವುದೇ ಪತ್ರ ವ್ಯವಹಾರ ನಡೆಸಲಾಗುವುದಿಲ್ಲ.
| ವೃತ್ತ / ಅಧಿಸೂಚನೆ | ಹುದ್ದೆಗಳು | |
|---|---|---|
| ಕೆನರಾ ವೃತ್ತ | 67 | CLICK HERE |
| ಕೊಡಗು ವೃತ್ತ | 32 | CLICK HERE |
| ಧಾರವಾಡ ವೃತ್ತ | 12 | CLICK HERE |
| ಮಂಗಳೂರು ವೃತ್ತ | 54 | CLICK HERE |
| ಹಾಸನ ವೃತ್ತ | 31 | CLICK HERE |
| ಚಿಕ್ಕಮಗಳೂರು ವೃತ್ತ | 60 | CLICK HERE |
| ಕಲಬುರ್ಗಿ ವೃತ್ತ | 6 | CLICK HERE |
| ಬೆಳಗಾವಿ ವೃತ್ತ | 42 | CLICK HERE |
| ಮೈಸೂರು ವೃತ್ತ | 121 | CLICK HERE |
| ಬಳ್ಳಾರಿ ವೃತ್ತ | 64 | CLICK HERE |
| ಚಾಮರಾಜನಗರ ವೃತ್ತ | 159 | CLICK HERE |
| ಬೆಂಗಳೂರು ವೃತ್ತ | 82 | CLICK HERE |
| ಶಿವಮೊಗ್ಗ ವೃತ್ತ | 44 | CLICK HERE |
ಅರ್ಜಿ / ಶುಲ್ಕ ಸಲ್ಲಿಕೆ ವೇಳಾಪಟ್ಟಿ:
| ವಿವರ | ದಿನಾಂಕ |
|---|---|
| ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | 01.08.2026 (00:00:01 ಸಮಯದಿಂದ) |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31.08.2026 (23:59:59 ಸಮಯದವರೆಗೆ) |
| ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ | 02.09.2026 |
ಅರ್ಜಿ ಶುಲ್ಕ:
| ವರ್ಗ | ಪ್ರಮುಖ ಅಭ್ಯರ್ಥಿಗಳು | ಮಾಜಿ ಸೈನಿಕ / ತೃತೀಯ ಲಿಂಗ |
|---|---|---|
| ಸಾಮಾನ್ಯ ಅರ್ಹತೆ, ಪ್ರವರ್ಗ IIA, IIB, IIIA ಮತ್ತು IIIB | ₹200/- | ₹100/- |
| ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-I | ₹100/- | ₹50/- |
ಸೂಚನೆ: ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 431 ಸೆಸನಿ 2016, ದಿನಾಂಕ: 28.12.2016 ರನ್ವಯ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

| Important Links | Click Here |
|---|---|
| Notification | CLICK HERE – NOTIFICATION |
| Official Website | CLICK HERE – OFFICIAL WEBSITE |
Karnataka Forest Department Recruitment 2026, Forest Watcher Recruitment 2026, Karnataka Group D Jobs 2026, Karnataka Forest Jobs, Aranya Recruitment 2026, Karnataka Government Jobs 2026, Forest Watcher Vacancy 2026.