SC-ST ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ.
2024-25 ನೇ ಸಾಲಿಗೆ ಭಾರತೀಯ ಸೇನೆ / ಭದ್ರತಾ ಪಡೆ / ರಾಜ್ಯ ಪೊಲೀಸ್ ಸೇವೆ ಹಾಗೂ ಇತರೆ ಸರ್ಕಾರಿ ಸಮವಸ್ತ್ರ (Uniformed Services) ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ(SC-ST) ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ದತೆ ಬಗ್ಗೆ ಉಚಿತವಾಗಿ 2 ತಿಂಗಳು ವಸತಿಯುತ ದೈಹಿಕ ಸಾಮರ್ಥ್ಯ ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯ ಅವಧಿ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿ ಸಲ್ಲಿಸಬೇಕಾದ ವೆಬ್‌ಸೈಟ್ ವಿಳಾಸ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರಗಳು ಈ ಕೆಳಕಂಡಂತಿವೆ.
ಸಮವಸ್ತ್ರ) (Uniformed Services) ಸೇವೆಗಳಿಗೆ ವಸತಿಯುತ 60 ದಿನಗಳ ದೈಹಿಕ ಹಾಗೂ ಇತರೆ ತರಬೇತಿ
1) ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣರಾಗಿರಬೇಕು.
2) ವಯೋಮಿತಿ: 17 ವರ್ಷ 6 ತಿಂಗಳಿನಿಂದ 23 ವರ್ಷಗಳು.
3) ಅಭ್ಯರ್ಥಿಯ ಅರ್ಹತೆ:
ಅಭ್ಯರ್ಥಿಯ ಸಾಮಾನ್ಯ ಅರ್ಹತೆ:
1.ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ (SC-ST) ಸೇರಿರಬೇಕು.
2.ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗಧಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿರಬೇಕು.
4) ವಾರ್ಷಿಕ ಆದಾಯ ಕುಟುಂಬದ ವಾರ್ಷಿಕ ಆದಾಯ ರೂ.5.00 ಲಕ್ಷ ಮೀರಿರಬಾರದು.
5) ದೈಹಿಕ ಗುಣಮಟ್ಟ ಪರೀಕ್ಷೆ:
ಪುರುಷ ಅಭ್ಯರ್ಥಿ:
ಎತ್ತರ: 162-185 ಸೆಂ.ಮಿ
ಎದೆಯ ಸುತ್ತಳತೆ: ಸಹಜ ಸ್ಥಿತಿಯಲ್ಲಿ 75 ಸೆಂ.ಮೀ. ಹೊಂದಿದ್ದು, ವಿಸ್ತರಿಸಿದಾಗ ಕನಿಷ್ಠ 80 ಸೆ.ಮೀ. ಹೊಂದಿರಬೇಕು.
ತೂಕ: ಕನಿಷ್ಠ 47.2 ರಿಂದ ಗರಿಷ್ಠ 78.7 ಯೊಳಗಿರಬೇಕು.
ಮಹಿಳಾ ಅಭ್ಯರ್ಥಿ:
ಎತ್ತರ: 152 ಸೆಂ.ಮೀ
ಎದೆಯ ಸುತ್ತಳತೆ: ಅನ್ವಯಿಸುವುದಿಲ್ಲ.
ತೂಕ: ಕನಿಷ್ಠ 44.4 ಕೆ.ಜಿ.
ಅರ್ಜಿ ಸಲ್ಲಿಸುವ ವಿಧಾನ:
www.sw.kar.nic.in ವೆಬ್ ಸೈಟ್ ನ್ನು ವಿಕ್ಷಿಸುವುದು.
2.ತಾಂತ್ರಿಕವಾಗಿ ಸಮಸ್ಯೆಗಳು ಕಂಡು ಬಂದರೆ ದೂರವಾಣಿ ಸಂಖ್ಯೆ : 9482300400 / 9480843005 / 080-22207784 ಅನ್ನು ಸಂಪರ್ಕಿಸುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20/12/2024 ಸಂಜೆ: 6pm
ಅಭ್ಯರ್ಥಿಗಳ ಅಯ್ಕೆ ವಿಧಾನ:
1.250 ಅಭ್ಯರ್ಥಿಗಳಂತೆ 4 ಬ್ಯಾಚ್ ಗಳಲ್ಲಿ ತರಬೇತಿ ಸಂಸ್ಥೆ ಮೂಲಕ ಆಯ್ಕೆ ಮಾಡಲಾಗುವುದು.
2.ತರಬೇತಿ ನೀಡಲು ನಿಗಧಿಪಡಿಸಿದ ತರಬೇತಿ ಸಂಸ್ಥೆಯ ನೇತೃತ್ವದಲ್ಲಿ ನಡೆಸಲಾಗುವ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಷರತ್ತಿಗೊಳಪಟ್ಟು ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು. ಅಭ್ಯರ್ಥಿಗಳ ಅಂತಿಮ ಆಯ್ಕೆ ತರಬೇತಿ ಸಂಸ್ಥೆಯದ್ದಾಗಿರುತ್ತದೆ.
3.ಮೊದಲು ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಹಂತ ಹಂತವಾಗಿ ತರಬೇತಿಗೆ ನಿಯೋಜಿಸಲಾಗುವುದು.
ಇತರೆ ಷರತ್ತುಗಳು:
1.ನಿಗಧಿತ ದಿನಾಂಕ ಹಾಗೂ ಸ್ಥಳಕ್ಕೆ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು.
2.ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಸಂದರ್ಭದಲ್ಲಿ ಉಂಟಾಗಬಹುದಾದ ಯಾವುದೇ ನಷ್ಟ ದುರಂತ, ದುರ್ಘಟನೆಗೆ ಇಲಾಖೆ ಅಥವಾ ತರಬೇತಿ ನೀಡಲು ಆಯ್ಕೆಯಾದ ತರಬೇತಿ ಸಂಸ್ಥೆ ಹೊಣೆಯಾಗುವುದಿಲ್ಲ.
ತರಬೇತಿ ಸೌಲಭ್ಯ:-
ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿಯೊಂದಿಗೆ 2 ತಿಂಗಳ ಸಮವಸ್ತ್ರ, ಸೇವೆಗೆ ದೈಹಿಕ ಸಾಮರ್ಥ್ಯ ತರಬೇತಿ ಹಾಗೂ ಇತರೆ ಅಗತ್ಯವಾಗಿರುವ ತರಬೇತಿಗಳನ್ನು ನೀಡಲಾಗುತ್ತದೆ. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ಸಂಸ್ಥೆ ಮೂಲಕ ಪ್ರತ್ಯೇಕ ವಸತಿ ಸೌಲಭ್ಯ ಕಲ್ಪಿಸಲಾಗುವುದು.
ಗಮನದಲ್ಲಿಡಬೇಕಾದ ಮುಖ್ಯ ಅಂಶಗಳು:-
ಇಲಾಖಾವತಿಯಿಂದ ಯಾವುದೇ ವೈಯಕ್ತಿಕ ಪತ್ರ ವ್ಯವಹಾರವನ್ನು ನಡೆಸಲಾಗುವುದಿಲ್ಲ ಆದ್ದರಿಂದ, ಇಲಾಖಾ ವೆಬ್‌ಸೈಟ್‌ನಲ್ಲಿ www.sw.kar.nic.in ಕಾಲಕಾಲಕ್ಕೆ ನೀಡಲಾಗುವ ಮಾಹಿತಿಯು ಅಧಿಕೃತ ಹಾಗೂ ಅಂತಿಮವಾಗಿರುತ್ತದೆ.
ತಪ್ಪು ಮಾಹಿತಿಯ ಕಾರಣದಿಂದ ಉಂಟಾಗಬಹುದಾದ ಪರಿಣಾಮಗಳಿಗೆ ಇಲಾಖೆ ಜವಾಬ್ದಾರಿಯಾಗಿರುವುದಿಲ್ಲ.
ನಿಗಧಿತ ದಿನಾಂಕ ಹಾಗೂ ಸಮಯಕ್ಕೆ ದೈಹಿಕ ಪರೀಕ್ಷೆಗೆ ಹಾಜರಾಗದಿದ್ದರೆ, ಆಯ್ಕೆಗೆ ಪರಿಗಣಿಸುವುದಿಲ್ಲ. ಇಂತಹ ನಿರ್ಲಕ್ಷಕ್ಕೆ ಅಭ್ಯರ್ಥಿಗಳೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
SC-ST ವಿದ್ಯಾರ್ಥಿಗಳು ಉಚಿತ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಸಲ್ಲಿಕೆ ಮಾಡಲು-CLICK HERE