IDBI BANK JOBS-2024
IDBI JOBS: ಪದವೀಧರರಿಗೆ ಉದ್ಯೋಗಾವಕಾಶ ಪ್ರತಿಷ್ಠಿತ IDBI ಬ್ಯಾಂಕ್ ದಲ್ಲಿ ಅಸಿಸ್ಟೆಂಟ್ ಮ್ಯಾನೇಜರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿದ್ದರೂ ಸಹ ಬ್ಯಾಂಕ್ ಮ್ಯಾನೇಜರ್ ಹುದ್ದೆ ಪಡೆಯುವ ಅವಕಾಶ ಇದೆ. ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (IDBI) ನಡೆಸುತ್ತಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಆಗಿರುವ ಐಡಿಬಿಐ ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (ಜೆಎಎಂ- ಗ್ರೇಡ್- ಒ, ಅಗ್ರಿಕಲ್ಟರ್ ಅಸಿಸ್ಟೆಂಟ್ ಆಫೀಸರ್ (ಎಎಒ- ಗ್ರೇಡ್ ಒ) ಹುದ್ದೆ ಭರ್ತಿಗಾಗಿ ಅಧಿಸೂಚನೆ ನೀಡಲಾಗಿದೆ.ಅರ್ಹಯುಳ್ಳ, ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ. ಒಟ್ಟು 600ರಲ್ಲಿ ಕರ್ನಾಟಕಕ್ಕೆ 65 ಹುದ್ದೆಗಳಿವೆ.
IDBI JOBS: ಹುದ್ದೆಗಳ ವಿವರ:
ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (ಜೆಎಎಂ) – 500,
ಅಗ್ರಿಕಲ್ಚರ್ ಅಸಿಸ್ಟೆಂಟ್ ಆಫೀಸರ್ (ಎಎಒ)- 100
ಒಟ್ಟು- 600
ಕರ್ನಾಟಕ- 65
IDBI JOBS: ವಿದ್ಯಾರ್ಹತೆ:
JAM ಹುದ್ದೆಗಳಿಗೆ ಮಾನ್ಯತೆ
ಪಡೆದ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಸಂಸ್ಥೆಯಿಂದ ಪದವಿ ಅಧ್ಯಯನ ಮಾಡಿರಬೇಕು. ಇನ್ನು, AAO ಹುದ್ದೆಗಳಿಗೆ ಬಿಎಸ್ಸಿ/ಬಿಇ ಅಥವಾ ಬಿ.ಟೆಕ್ ಪದವಿಯನ್ನು ಕನಿಷ್ಠ 60 ಶೇಕಡಾ ಅಂಕದೊಂದಿಗೆ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳು ಕಂಪ್ಯೂಟರ್‌ನಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ವೇತನದ ವಿವರ:
ಹುದ್ದೆಗಳಿಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ವಾರ್ಷಿಕವಾಗಿ 6.14 ಲಕ್ಷ ರೂ.ಗಳಿಂದ 6.50 ಲಕ್ಷ ರೂ.ವರೆಗೆ ವೇತನ ನಿಗದಿಪಡಿಸಲಾಗಿದೆ.
ವಯೋಮಿತಿ ವಿವರ:
ಅಭ್ಯರ್ಥಿಗಳಿಗೆ 2024 ಅ.1ಕ್ಕೆ
ಅನ್ವಯಿಸುವಂತೆ ಕನಿಷ್ಠ ವಯಸ್ಸು 20 ಆಗಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ-ಎಸ್‌ಟಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
- ಇದನ್ನೂ ನೋಡಿ..
- SBIನಿಂದ 169 ಅಸಿಸ್ಟಂಟ್ ಮ್ಯಾನೇಜರ್ ನೇಮಕ: ಅರ್ಜಿ ಆಹ್ವಾನ.
- ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್ ಲಿಮಿಟೆಡ್ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿ. ಯುಜಿ, ಪಿಜಿ ಪಾಸ್ ಅರ್ಹತೆ. ಮಾಸಿಕ ಕನಿಷ್ಠ 22,000 ವೇತನ.
ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಮುಖ್ಯಾಂಶಗಳು:
ಐಡಿಬಿಐ ಬ್ಯಾಂಕಿನ ಅಧೀಕೃತ ವೆಬ್‌ಸೈಟ್ idbibank.inನಲ್ಲಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಮುಖ್ಯ, ತದನಂತರ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಬೇಕು. ವಯಸ್ಸು, ಶೈಕ್ಷಣಿಕ ಅರ್ಹತೆ ಸೇರಿ ಅಗತ್ಯ ದಾಖಲೆಗಳ ಜತೆಗೆ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ಅಪಲೋಡ್ ಮಾಡಬೇಕು. ಸಂವಹನ ಉದ್ದೇಶಕ್ಕಾಗಿ ಸರಿಯಾದ ಇ-ಮೇಲ್ ಐಡಿ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು.
ಪರೀಕ್ಷಾ ಶುಲ್ಕದ ವಿವರ:
ಎಸ್‌ಸಿ, ಎಸ್‌ಟಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕ ನಿಗದಿಪಡಿಸಿದ್ದು, ಇತರ ಎಲ್ಲ ವರ್ಗದ ಅಭ್ಯರ್ಥಿಗಳು 1,050ರೂ.
ಅರ್ಜಿ ಶುಲ್ಕದ ಪಾವತಿ ವಿಧಾನ:
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
ಪರೀಕ್ಷಾ ಸ್ವರೂಪ ಹೇಗಿರಲಿದೆ?
ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಆನ್ಲೈನ್ ಪರೀಕ್ಷೆ ದಾಖಲೆ ಪರಿಶೀಲನೆ, ವೈಯಕ್ತಿಕ ಸಂದರ್ಶನ, ಪೂರ್ವ ನೇಮಕಾತಿ ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಲಾಜಿಕಲ್ ರೀಸನಿಂಗ್, ಡೇಟಾ ಅನಾಲಿಸಿಸ್ ಆ್ಯಂಡ್ ಇಂಟರ್‌ಪ್ರಿಟೇಷನ್‌ಗೆ 60 ಅಂಕ, ಇಂಗ್ಲಿಷ್ 40 ಅಂಕ, ಆ್ಯಪ್ಟಿಟ್ಯೂಡ್ 40 ಅಂಕ, ಜನರಲ್/ ಎಕಾನಮಿ/ಬ್ಯಾಂಕಿಂಗ್ ಅವೇರ್‌ನಸ್/ಕಂಪ್ಯೂಟರ್/ಐಟಿ 60 ಅಂಕ ಸೇರಿ 200 ಅಂಕಗಳ 200 ಪ್ರಶ್ನೆಗಳಿಗೆ ಎರಡು ತಾಸಿನಲ್ಲಿ ಉತ್ತರಿಸಬೇಕಿದೆ.
ಅಗ್ರಿಕಲ್ಟರ್ ಅಸಿಸ್ಟೆಂಟ್ ಆಫೀಸರ್ ಹುದ್ದೆಗೆ ವೃತ್ತಿಪರ ಜ್ಞಾನದ 60 ಅಂಕದ ಪ್ರಶ್ನೆಗಳಿಗೆ 45 ನಿಮಿಷ ಇರಲಿದೆ. ಪರೀಕ್ಷೆ ಇಂಗ್ಲಿಷ್/ ಹಿಂದಿ ಭಾಷೆಯಲ್ಲಿ ನಡೆಯಲಿದೆ.
ಪರೀಕ್ಷಾ ಪೂರ್ವ ತರಬೇತಿ:
ಬ್ಯಾಂಕ್ ಮೂಲಕ ಅಭ್ಯರ್ಥಿಗಳಿಗೆ ಪೂರ್ವ ತರಬೇತಿಯನ್ನು ಆಯೋಜಿಸಲಾಗುತ್ತದೆ. ಆನ್
ಲೈನ್ ಅಥವಾ ಆಫ್‌ಲೈನ್ ಮೂಲಕ ನಡೆಸಲಾಗುವ ತರಬೇತಿಗೆ ಹಾಜರಾಗಲು ಇಚ್ಛೆ ವ್ಯಕ್ತಪಡಿಸಿದವರನ್ನು ಮಾತ್ರ ಆಹ್ವಾನಿಸಲಾಗುತ್ತದೆ. ತರಬೇತಿ ಅವಧಿ ಹಾಗೂ ಇತರ ವಿವರಗಳನ್ನು ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಪರೀಕ್ಷಾ ಕೇಂದ್ರಗಳ ವಿವರ:
ಬೆಂಗಳೂರು, ಬೆಳಗಾವಿ, ಧಾರವಾಡ/ ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.
ಅರ್ಜಿ ಸಲ್ಲಿಕೆ, ಶುಲ್ಕ ಪಾವತಿಸಲು ಕೊನೇ ದಿನ: 30.11.2024
ಆನ್‌ಲೈನ್ ಪರೀಕ್ಷೆಯ ಸಂಭಾವ್ಯ ದಿನ: ಮುಂಬರುವ ಡಿಸೆಂಬರ್ ಅಥವಾ ಜನವರಿ
ಅಧಿಸೂಚನೆಗಾಗಿ : CLICK HERE