Master Mitra

NSCL Recruitment-2024: NSCL ನಲ್ಲಿ ಉದ್ಯೋಗಾವಕಾಶ,ಅರ್ಜಿ ಸಲ್ಲಿಸಲು ನೇರ ಲಿಂಕ್ ಇಲ್ಲಿದೆ.

NSCLನಲ್ಲಿ  ಉದ್ಯೋಗಾವಕಾಶ2024

NSCL: ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣ ಹೊಂದಿ ಕೆಲಸ ನಿರ್ವಹಿಸುತ್ತಿರುವ ನ್ಯಾಷನಲ್ ಸೀಡ್ಸ್ ಕಾರ್ಪೊರೇಷನ್ ಲಿಮಿಟೆಡ್ ಟ್ರೇನಿ, ಮ್ಯಾನೇಜ್‌ಮೆಂಟ್ ಟ್ರೇನಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನ ಮಾಡಿದೆ. ಐಟಿಐ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪೂರ್ಣಗೊಳಿಸಿದ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನ.30 ಕೊನೇ ದಿನವಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ.?

ಕಂಪ್ಯೂಟ‌ರ್ ಆಧಾರಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಶುಲ್ಕದ ವಿವರ:

ಯುಆ‌ರ್/ಇಡಬ್ಲ್ಯುಎಸ್/ಒಬಿಸಿ/ಮಾಜಿ ಸೈನಿಕ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 500ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಎಸ್ಸಿ/ಎಸ್ಟಿ/ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಿಲ್ಲ.

ಪರೀಕ್ಷಾ ಮಾದರಿ ಹೇಗಿರಲಿದೆ?

100 ಅಂಕಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು 90 ನಿಮಿಷಗಳ ಕಾಲ ನಡೆಸಲಾಗುತ್ತದೆ. ಮೊದಲ ಭಾಗದಲ್ಲಿ 70 ಪ್ರಶ್ನೆಗಳಿದ್ದು, ಅದು ಹುದ್ದೆಯ ಆಯಾ ವಿಭಾಗದಲ್ಲಿನ ವಿಷಯ ಜ್ಞಾನದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಎರಡನೇ ಭಾಗದಲ್ಲಿ 30 ಪ್ರಶ್ನೆಗಳಿದ್ದು, ಆಪ್ಟಿಟ್ಯೂಡ್, ರೀಸನಿಂಗ್, ಕರೆಂಟ್ ಅಫೇರ್ಸ್, ಸಾಮಾನ್ಯ ಜ್ಞಾನ, ಕಂಪ್ಯೂಟ‌ರ್ ಮತ್ತು ಇಂಗ್ಲಿಷ್‌ ಭಾಷೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಋಣಾತ್ಮಕ ಅಂಕಗಳು ಪ್ರತಿ ತಪ್ಪು ಉತ್ತರಕ್ಕೆ 0.25 ಆಗಿರುತ್ತದೆ. 100ಕ್ಕೆ 35 ಕನಿಷ್ಠ ಅರ್ಹತಾ ಅಂಕಗಳಾಗಿವೆ.

ಹುದ್ದೆಗಳ ವಿವರ:

ಮ್ಯಾನೇಜೈಂಟ್ ಟ್ರೇನಿ (ಎಚ್‌ಆರ್) 2,

(ಕ್ವಾಲಿಟಿ ಕಂಟ್ರೋಲರ್) 2,

(ಎಲೆಕ್ಟಿಕಲ್ ಇಂಜಿನಿಯರಿಂಗ್) 1,

ಸಿನೀಯರ್ ಟ್ರೇನಿ (ವಿಜಿಲೆನ್ಸ್) 2,

ಟ್ರೇನಿ (ಅಗ್ರಿಕಲ್ಟರ್) 49,

(ಕ್ವಾಲಿಟಿ ಕಂಟ್ರೋಲರ್) 11,

(ಮಾರ್ಕೆಟಿಂಗ್)  33

(ಡ್ಯೂಮನ್‌ ರಿಸೋರ್ಸ್) 16,

(ಸ್ಟೆನೋಗ್ರಾಫರ್) 15,

(ಅಕೌಂಟ್ಸ್) 8,

(ಅಗ್ರಿಕಕ್ಟರ್ ಸ್ಟೋರ್ಸ್) 19,

(ಇಂಜಿನಿಯರಿಂಗ್ ಸ್ಟೋರ್ಸ್) 7,

(ಟೆಕ್ನಿಕಲ್) 21.

 

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಬಿಎಸ್ಸಿ, ಡಿಪ್ಲೊಮಾ, ಐಟಿಐ, ಬಿ.ಕಾಮ್, ಎಂಎಸ್ : ಡಬ್ಲ್ಯು, ಎಂಎ, ಎಂಬಿಎ, ಎಂಎಸ್ಸಿ, ಇಸಿಇ/ಇಇಇನಲ್ಲಿ ಬಿಇ ಅಥವಾ ಬಿ.ಟೆಕ್ ಪೂರ್ಣಗೊಳಿಸಿರಬೇಕು

ವಯೋಮಿತಿ:

ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 27 ವರ್ಷದೊಳಗಿರಬೇಕು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ.

ವೇತನ ವಿವರ:

ಮ್ಯಾನೇಜ್‌ಮೆಂಟ್‌ ಟ್ರೇನಿ (ಎಚ್‌ಆರ್) ಹುದ್ದೆಗೆ 57,920ರೂ., ಸಿನೀಯರ್ ಟ್ರೇನಿ (ವಿಜಿಲೆನ್ಸ್) ಹುದ್ದೆಗೆ 31,856ರೂ., ಉಳಿದ ಟ್ರೇನಿ ಹುದ್ದೆಗೆ 24,616ರೂ. ವೇತನ ನಿಗದಿಪಡಿಸಲಾಗಿದೆ.

ಕಂಪ್ಯೂಟರ್ ಆಧಾರಿತ ಪರೀಕ್ಷೆ:

ತಾತ್ಕಾಲಿಕ ದಿನಾಂಕ: ಡಿಸೆಂಬರ್-22

ಅರ್ಜಿ ಸಲ್ಲಿಕೆ:

ಆಸಕ್ತ ಅಭ್ಯರ್ಥಿಗಳು NSCL ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:ನವೆಂಬರ್,30,2024

ಹೆಚ್ಚಿನ ಮಾಹಿತಿಗಾಗಿ- CLICK HERE

ಅಧಿಸೂಚನೆಗಾಗಿ – CLICK HERE

 

Exit mobile version