Government Circular-2025 ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ–ಟ್ರೋಫಿ ನಿಷೇಧ,ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರದ ಸುತ್ತೋಲೆ

Government Circular-2025 ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ–ಟ್ರೋಫಿ ನಿಷೇಧ,ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರದ ಸುತ್ತೋಲೆ

Government Circular-2025: ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದೆಂದು ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡಬಹುದೆಂದು ಉಲ್ಲೇಖಿತ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.ಸದರಿ ಸುತ್ತೋಲೆಗೆ ಹಲವು ಅಂಶಗಳನ್ನು ಸೇರ್ಪಡೆಗೊಳಿಸಬೇಕಿರುವ ಅವಶ್ಯಕತೆಯನ್ನು ಮನಗಂಡು ಈ ಸುತ್ತೋಲೆಯಲ್ಲಿ ಕೆಳಕಂಡಂತೆ ಸೇರಿಸಲಾಗಿದೆ.

ಸರ್ಕಾರಿ ಪ್ರಾಯೋಜಿತ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಗಣ್ಯರಿಗೆ ಸ್ಮರಣಿಕೆ, ಟ್ರೋಫಿ ಮತ್ತು ಇನ್ನಿತರೇ ಸ್ಮರಣಾರ್ಥ ವಸ್ತುಗಳನ್ನು ನೀಡುವುದು ನಿಯಮಿತ ಅಭ್ಯಾಸವಾಗಿರುತ್ತದೆ. ಈ ಪದ್ಧತಿಯು ಆರಂಭದಲ್ಲಿ ಸದ್ಭಾವನೆ ಮತ್ತು ಮೆಚ್ಚುಗೆಯ ಸಂಕೇತದ ಉದ್ದೇಶವಾಗಿದ್ದರೂ ಸಹ ಗಣ್ಯರನ್ನು ಸನ್ಮಾನಿಸುವ ಇಂತಹ ಅಭ್ಯಾಸವು ಆರ್ಥಿಕ ಮಿತವ್ಯಯ, ಪರಿಸರ ಸುಸ್ಥಿರತೆ ಮತ್ತು ಸಾಗಣೆ ದಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳಿಗೆ ಕಾರಣವಾಗಿದೆ.

ನಿರಂತರವಾಗಿ ಜೈವಿಕವಾಗಿ ವಿಘಟನೆಯಲ್ಲದ (Non-biodegradable) ಲ್ಯಾಮಿನೇಟೆಡ್ ಮರ, ಪ್ಲಾಸ್ಟಿಕ್, ಲೋಹ ಮತ್ತು ಗಾಜಿನಂತಹ ಮರುಬಳಕೆ ಮಾಡಲಾಗದ ವಸ್ತುಗಳಿಂದ ತಯಾರಿಸಲ್ಪಟ್ಟ ವಸ್ತುಗಳಿಂದ ಸುತ್ತಮುತ್ತಲಿನ ನೈಸರ್ಗಿಕ ಪರಿಸರದ ಅವನತಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ. ಈ ವಸ್ತುಗಳನ್ನು ಬೇರ್ಪಡಿಸುವುದು ಅಥವಾ ಮರುಬಳಕೆ ಮಾಡುವುದು ಕಷ್ಟಕರವಾಗಿದ್ದು ಹೀಗೆ ನಿರಂತರವಾಗಿ ಶೇಖರಣೆಗೊಳ್ಳುವ ತ್ಯಾಜ್ಯವು ರಾಜ್ಯದ ಘನತ್ಯಾಜ್ಯ ನಿರ್ವಹಣಾ ಹೊರೆಯನ್ನು ಹೆಚ್ಚಿಸುವುದರೊಂದಿಗೆ ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸಲು ಮತ್ತು ಅನಿವಾರ್ಯವಲ್ಲದ ತ್ಯಾಜ್ಯವನ್ನು ಕಡಿಮೆ ಮಾಡುವ ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ತದ್ವಿರುದ್ಧವಾಗುವುದಲ್ಲದೇ ಪರಿಸರ ಕಾಳಜಿಯ ಉದ್ದೇಶಗಳನ್ನು ಈಡೇರಿಸುವಲ್ಲಿ ವಿಫಲವಾಗುತ್ತದೆ.

ಅಂತೆಯೇ ವಿವಿಧ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳು ಸ್ಮರಣಿಕೆ ಮತ್ತು ಟ್ರೋಫಿಗಳ ಖರೀದಿಗೆ ವಾರ್ಷಿಕವಾಗಿ ಬೃಹತ್ ಮೊತ್ತವನ್ನು ಖರ್ಚು ಮಾಡುತ್ತಿದ್ದು, ಆರ್ಥಿಕ ದೃಷ್ಟಿಕೋನದಿಂದ ಅಭಿವೃದ್ಧಿಯೇತರ ಮುಖ್ಯಸ್ಮರ ಅಡಿಯಲ್ಲಿನ ಸಂಚಿತ ವೆಚ್ಚವನ್ನು ಉತ್ಪಾದಕ ಮತ್ತು ಕಲ್ಯಾಣ-ಆಧಾರಿತ ಚಟುವಟಿಕೆಗಳಿಗೆ ಉತ್ತಮವಾಗಿ ಬಳಸಿಕೊಳ್ಳಬಹುದಾಗಿರುತ್ತದೆ. ಇದಲ್ಲದೇ, ಗಣ್ಯರ ಅಥವಾ ಇಲಾಖಾ ಕಾರ್ಯಕ್ರಮಗಳ ಸಂದರ್ಭದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಮಾಡಲಾಗುವ ಇಂತಹ ಅನಗತ್ಯ ಕಳಪೆ ವಸ್ತುಗಳ ಪುನರಾವರ್ತಿತ ಖರೀದಿಯಿಂದ ಅವುಗಳ ಸಂಗ್ರಹಣೆ, ನಿರ್ವಹಣೆ ಹಾಗೂ ವಿಲೇವಾರಿಯು ಕಠಿಣ ಸವಾಲಾಗಿ ಪರಿಣಮಿಸುತ್ತದೆ. ಮುಂದುವರೆದು, ಪರಿಸರ ಕಾಳಜಿ, ಆರ್ಥಿಕತೆ, ಸರಳತೆ, ಸಂಪನ್ಮೂಲ ಸಂರಕ್ಷಣೆ ಹಾಗೂ ಸಾರ್ವಜನಿಕ ಹೊಣೆಗಾರಿಕೆಯ ಮನವರಿಕೆಯನ್ನು ಒತ್ತಿಹೇಳುವ ಸಾಮಾಜಿಕ & ಆಡಳಿತಾತ್ಮಕ ಮೌಲ್ಯಗಳಿಗೆ ಪ್ರಸಕ್ತ ಪದ್ಧತಿಯು ಹೊಂದಾಣಿಕೆಯಾಗುವುದಿಲ್ಲ.

ಮೇಲಾಗಿ, ನಾಗರೀಕರು ಕನಿಷ್ಠ ಮತ್ತು ಸುಸ್ಥಿರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಸರ್ಕಾರವು ಪ್ರೋತ್ಸಾಹಿಸುತ್ತಿರುವ ಹಿನ್ನೆಲೆಯಲ್ಲಿ ಅನಗತ್ಯ ಲೇಖನಗಳನ್ನು ಪ್ರಸ್ತುತ ಪಡಿಸುವುದು ದುಂದುಗಾರಿಕೆಯ ಗ್ರಹಿಕೆಯನ್ನು ತಿಳಿಸುತ್ತದೆ. ಸಸಿಗಳು, ಪುಸ್ತಕಗಳು, ಕೈ ಮಗ್ಗ ಉತ್ಪನ್ನಗಳು ಅಥವಾ ಸ್ಥಳೀಯವಾಗಿ ರಚಿಸಲಾದ ಪರಿಸರ ಸ್ನೇಹಿ ಸ್ಮರಣಿಕೆಗಳಂತಹ ಸಾಂಕೇತಿಕ ಪರ್ಯಾಯಗಳು ಸುಸ್ಥಿರ ಆಡಳಿತ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗೆ ರಾಜ್ಯದ ಬದ್ಧತೆಯನ್ನು ಪ್ರತಿಬಿಂಬಿಸುವಲ್ಲಿ ಉತ್ತಮ ಆಯ್ಕೆಯಾಗಿರುತ್ತವೆ.

ಈ ಹಿನ್ನೆಲೆಯಲ್ಲಿ, ಸರ್ಕಾರಿ ಪ್ರಾಯೋಜಿತ ಅಥವಾ ಅನುದಾನಿತ ಕಾರ್ಯಕ್ರಮಗಳ ಸಂದರ್ಭದಲ್ಲಿ ಸ್ಮರಣಿಕೆ, ಟ್ರೋಫಿ ಮತ್ತು ಅಂತಹ ವಸ್ತುಗಳ ಖರೀದಿ ಮತ್ತು ಪ್ರಸ್ತುತಿಯನ್ನು ನಿಷೇಧಿಸುವಂತೆ ಎಲ್ಲಾ ಇಲಾಖೆ, ನಿಗಮ ಮತ್ತು ಮಂಡಳಿ ಹಾಗೂ ಜಿಲ್ಲಾಡಳಿತಗಳಿಗೆ ಸೂಚಿಸಿದೆ ಹಾಗೂ ಅವುಗಳ ಬದಲಿಗೆ ಗಣ್ಯರು/ಅತಿಥಿಗಳಿಗೆ ಪರಿಸರ ಪ್ರಜ್ಞೆಯ ತತ್ತ್ವಗಳಿಗೆ ಅನುಗುಣವಾಗಿ ಸದ್ಭಾವನೆ ಮತ್ತು ಸುಸ್ಥಿರತೆಯನ್ನು ಪ್ರೋತ್ಸಾಹಿಸುವಂತಹ ಕೆಳಕಂಡ ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳಲು ತಿಳಿಸಲಾಗಿದೆ.

ಪರಿಸರ ಸ್ನೇಹಿ ಆಯ್ಕೆಗಳು:

▪️ಸಸ್ಯಗಳು: ಮರಗಳ ಸಸಿಗಳು ಅಥವಾ ಕುಂಡಗಳಲ್ಲಿ ಬೆಳಸಿರುವ ಸಸ್ಯಗಳು;

▪️ಪುಸ್ತಕಗಳು ಅಥವಾ ಅಧಿಕೃತ ಪ್ರಕಟಣೆಗಳು;

▪️ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಕೈಮಗ್ಗ ಅಥವಾ ಕರಕುಶಲ

▪️ವಸ್ತುಗಳು; ಮರು ಬಳಕೆಯ ಕಾಗದದ ಮೇಲೆ ಮೆಚ್ಚುಗೆ ಪ್ರಮಾಣ ಪತ್ರಗಳು;

ಪರಿಸರ ಕಾಳಜಿ, ಸಾರ್ವಜನಿಕ ಹೊಣೆಗಾರಿಕೆ ಹಾಗೂ ಆಡಳಿತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಈ ಕೆಳಕಂಡ ಷರತ್ತುಗಳನ್ನು ಪಾಲಿಸುವುದು:

1. ಯಾವುದೇ ಇಲಾಖೆ, ಮಂಡಳಿ ಅಥವಾ ನಿಗಮವು ಸ್ಮರಣಿಕೆ ಅಥವಾ ಟ್ರೋಫಿ ಖರೀದಿಯಲ್ಲಿ ಯಾವುದೇ ಹೊಸ ಟೆಂಡರ್‌ಗಳ ಪ್ರಕ್ರಿಯೆಯನ್ನು ಪ್ರಾರಂಭಿಸಬಾರದು.

2. ಅಸ್ತಿತ್ವದಲ್ಲಿರುವ ಸ್ಮರಣಿಕೆಗಳ ಯಾವುದೇ ಸ್ಮಾಕನ್ನು ಅಧಿಕೃತ ಮರುಬಳಕೆ ಏಜೆನ್ಸಿಗಳು ಅಥವಾ ಸಮಾಜ ಕಲ್ಯಾಣ ಸಂಸ್ಥೆಗಳ ಮೂಲಕ ಸಂಬಂಧಿತ ಇಲಾಖಾ ಮುಖ್ಯಸ್ಥರ ಅನುಮತಿಯೊಂದಿಗೆ ತ್ಯಜಿಸಬಹುದು ಅಥವಾ ದಾನ ಮಾಡಬಹುದು.

3. ಉಪ-ಶೀರ್ಷಿಕೆ ಪ್ರಸ್ತುತಿ ಲೇಖನಗಳು / ಸ್ಮರಣಿಕೆಗಳ ಅಡಿಯಲ್ಲಿ ಭವಿಷ್ಯದ ಬಜೆಟ್ ಅಂದಾಜುಗಳಲ್ಲಿ ಅಂತಹ ಯಾವುದೇ ನಿಬಂಧನೆಯನ್ನು ಮಾಡಲಾಗುವುದಿಲ್ಲ ಎಂದು ಇಲಾಖಾ ಹಣಕಾಸು ಅಧಿಕಾರಿಗಳು ಖಚಿತಪಡಿಸಿಕೊಳ್ಳುವುದು.

4. ಆಡಿಟ್ ಅಧಿಕಾರಿಗಳು ನಿಯಮಿತ ವೆಚ್ಚ ಲೆಕ್ಕ ಪರಿಶೋಧನೆಗಳನ್ನು ನಡೆಸುವಾಗ ಮೇಲ್ಕಂಡ ಅನುಸರಣೆಯನ್ನು ಪರಿಶೀಲಿಸುವುದು.

ವಿಶೇಷ ಸೂಚನೆಗಳು:

1. ಇದು ಉದ್ಘಾಟನೆಗಳು, ಶಿಲಾನ್ಯಾಸಗಳು, ಸಮ್ಮೇಳನಗಳು, ಕಾರ್ಯಾಗಾರಗಳು, ಸನ್ಮಾನ ಕಾರ್ಯಕ್ರಮಗಳು, ಸಾರ್ವಜನಿಕ ಸಭೆ ಮತ್ತು ಸಮಾರಂಭಗಳು ಮತ್ತು ರಾಜ್ಯ ಭೇಟಿಗಳಂತಹ ಎಲ್ಲಾ ಅಧಿಕೃತ ಚಟುವಟಿಕೆಗಳಿಗೆ ಅನ್ವಯಿಸುತ್ತದೆ.

2. ಅಧಿಕೃತ ರಾಜ್ಯ ಕ್ರೀಡಾ ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹ ಟ್ರೋಫಿಗಳನ್ನು ( ಕೇವಲ ಪ್ಲಾಸ್ಟಿಕ್ ಮುಕ್ತ) ಹೊರತುಪಡಿಸಲಾಗಿದೆ.

 

 

Government Circular




CLICK HERE TO DOWNLOAD CIRCULAR

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!