Government employees’ TA and GPF advance bill:ಸರ್ಕಾರಿ ನೌಕರರ ಪ್ರಯಾಣ ಭತ್ಯೆ ಮತ್ತು ಭವಿಷ್ಯ ನಿಧಿ ಮುಂಗಡ ಬಿಲ್: ನೂತನ ಆದೇಶ ಇದೀಗ ಪ್ರಕಟ-2025

Government employees’ TA and GPF advance bill:ಸರ್ಕಾರಿ ನೌಕರರ ಪ್ರಯಾಣ ಭತ್ಯೆ ಮತ್ತು ಭವಿಷ್ಯ ನಿಧಿ ಮುಂಗಡ ಬಿಲ್: ನೂತನ ಆದೇಶ ಇದೀಗ ಪ್ರಕಟ-2025

Government employees’ TA and GPF advance bill:ವೋಚರುಗಳ ಡಿಜಿಟಲೀಕರಣದ ಅಂಗವಾಗಿ, ಭೌತಿಕ ಬಿಲ್ಲುಗಳ ಬದಲಿಗೆ ಡಿಜಿಟಲ್ ಸಹಿಯಾದ ವೋಚರುಗಳನ್ನು ಅಂಗೀಕರಿಸುವ ವಿಧಾನವನ್ನು ಪ್ರಯಾಣ ಭತ್ಯೆ ಬಿಲ್ಲು ಹಾಗೂ ಭವಿಷ್ಯನಿಧಿ ಮುಂಗಡ ಬಿಲ್ಲುಗಳಿಗೆ ವಿಸ್ತರಿಸುವ ಬಗ್ಗೆ.

ಪ್ರಸ್ತಾವನೆ:-

ಮೇಲೆ ಓದಲಾದ (1) ಮತ್ತು (2) ರ ಸರ್ಕಾರದ ಆದೇಶಗಳಲ್ಲಿ, ವೋಚರುಗಳ ಡಿಜಿಟಲೀಕರಣದ ಅಂಗವಾಗಿ, ಹೆಚ್.ಆರ್.ಎಂ.ಎಸ್ ಹಾಗೂ ಖಜಾನೆ-2 ರಲ್ಲಿ ಸೃಜಿಸುವ ಜಿಲ್ಲಾ ವಲಯದ ಹಾಗೂ ರಾಜ್ಯ ವಲಯದ ವೇತನ ಬಿಲ್ಲುಗಳು ಹಾಗೂ ಸಂಬಂಧಿಸಿದ ವೇತನಗಳಲ್ಲಿನ ಕಡಿತ, ವಸೂಲಾತಿಗಳ ಸಂಬಂಧ ಭೌತಿಕ ಷೆಡ್ಯೂಲ್‌ಗಳ ಬದಲು ಆನ್‌ಲೈನ್‌ನಲ್ಲಿ ಸಲ್ಲಿಸಲು ಹಾಗೂ ಇದಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ಡಿಡಿಓಗಳು ಡಿಎಸ್‌ಸಿ ಮೂಲಕ ದೃಢೀಕರಿಸಿ ಖಜಾನೆಗಳಿಗೆ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸುವಂತೆ ಆದೇಶಿಸಲಾಗಿದೆ.

ಮುಂದುವರೆದು, ಇತರೆ ಕ್ಷೇಮುಗಳ ಬಿಲ್ಲುಗಳನ್ನು ಭೌತಿಕ ಬಿಲ್ಲುಗಳ ಬದಲಿಗೆ ಡಿಜಿಟಲ್ ಸಹಿಯಾದ ವೋಚರುಗಳನ್ನು ಅಂಗೀಕರಿಸುವ ಕುರಿತು, ಸಿಎಜಿ ರವರು ಸೂಚಿಸಿದಂತೆ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (SOP) ಮೇಲಿನ ಸ್ವಯಂ ಮೌಲ್ಯಮಾಪನ ಹೇಳಿಕೆಯ ಅನುಸರಣಾ ಪಾಲನಾ ವರದಿಯನ್ನು ಮಹಾಲೇಖಪಾಲರಿಗೆ ಸಲ್ಲಿಸಿರುವುದಾಗಿ, ಮಹಾಲೇಖಪಾಲರು ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (SOP) ದಲ್ಲಿನ ನಿಬಂಧನೆಗಳಂತೆ

1) TA Bills

2) Work Expenditure

3) Bills Claims on GeM

4) Digitally signed e Vouchers

5) GPF Advances ಕ್ಲೈಮ್ ಗಳನ್ನು ಸೆಪ್ಟೆಂಬರ್ 2025 ರಿಂದ 3 ತಿಂಗಳುಗಳ ಕಾಲ. ಸಮಾನಾಂತರವಾಗಿ, ಭೌತಿಕ ಹಾಗೂ ಡಿಜಿಟಲ್ ರೂಪ ಎರಡೂ ವಿಧಾನಗಳನ್ನು ಪ್ರಯೋಗಿಸಬಹುದಾಗಿದೆ ಎಂದು ತಿಳಿಸಿರುತ್ತಾರೆಂದು ಮೇಲೆ ಓದಲಾದ (3) ರ ಪತ್ರದಲ್ಲಿ ಖಜಾನೆ ಆಯುಕ್ತರು, ಪ್ರಯಾಣ ಭತ್ಯೆ ಬಿಲ್ಲು (TA BILLS) ಹಾಗೂ’ ಭವಿಷ್ಯ ನಿಧಿ ಮುಂಗಡಗಳ (GPF ADVANCES) ಬಿಲ್ಲುಗಳನ್ನು ಡಿಜಿಟಲೈಸ್ಟ್ ವೋಚರ್‌ಗಳಲ್ಲಿ ಪ್ಲೇಮುಗಳನ್ನು ಅಂಗೀಕರಿಸಲು ಸೂಕ್ತ ಆದೇಶವನ್ನು ಹೊರಡಿಸಲು ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ ಆಇ 1 ಟಿಟಿಸಿ 2023. ಬೆಂಗಳೂರು, ದಿನಾಂಕ:17-10-2025

ವೋಚರುಗಳ ಡಿಜಿಟಲೀಕರಣದ ಅಂಗವಾಗಿ, ಪ್ರಯಾಣ ಭತ್ಯೆ ಬಿಲ್ಲು (TA BILLS) ಹಾಗೂ ಭವಿಷ್ಯ ನಿಧಿ ಮುಂಗಡಗಳ (GPF ADVANCES) ಬಿಲ್ಲುಗಳನ್ನು, ಡಿಡಿಓರವರು, ಖಜಾನೆ-2 ರಲ್ಲಿ ಆನ್‌ಲೈನ್ ನಲ್ಲಿ ಸೃಜಿಸಿ, ದಿನಾಂಕ: 01.11.2025 ರಿಂದ ಜಾರಿಗೆ ಬರುವಂತೆ 3 ತಿಂಗಳುಗಳ ಕಾಲ ಸಮಾನಾಂತರವಾಗಿ, ಭೌತಿಕ ಹಾಗೂ ಇ-ವಿಧಾನ (digital) ಎರಡೂ ವಿಧಾನಗಳಲ್ಲಿ ಖಜಾನೆಗೆ ಸಲ್ಲಿಸುವಂತೆ, ಮೂರು ತಿಂಗಳ ನಂತರ ಡಿಜಿಟಲ್ ರೂಪದಲ್ಲಿ ಮಾತ್ರ ಸಲ್ಲಿಸುವಂತೆ ಆದೇಶಿಸಿದೆ.

ಖಜಾನೆಗಳು ರಾಜ್ಯ ವಲಯದ ಪ್ರಯಾಣ ಭತ್ಯೆ ಹಾಗೂ ಭವಿಷ್ಯ ನಿಧಿ ಮುಂಗಡ ಡಿಜಿಟೈಸ್ಟ್ ವೋಚರ್‌ಗಳನ್ನು ಮಹಾಲೇಖಪಾಲರಿಗೆ ವೋಚರ್‌ಗಳಿಗಾಗಿಯೇ ಮೀಸಲಾದ ಸರ್ವರ್ (Dedicated Server) ರಲ್ಲಿ ಲಭ್ಯಗೊಳಿಸುವುದು, ಖಜಾನೆಗಳು, ಜಿಲ್ಲಾ ವಲಯದ (ಜಿಲ್ಲಾ ಪಂಚಾಯತ್/ತಾಲ್ಲೂಕು ಪಂಚಾಯತ್) ಪ್ರಯಾಣ ಭತ್ಯೆ ಡಿಜಿಟೈಸ್ಟ್ ವೋಚರ್‌ಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರಯಾಣಭತ್ಯೆ ಬಿಲ್ಲುಗಳಿಗೆ ಸಂಬಂಧಿಸಿದ ವೋಚರುಗಳನ್ನು ವೀಕ್ಷಿಸಲು. ಅವರ ಲಾಗಿನ್ ನಲ್ಲಿ e-Complication Form 1 ಮೂಲಕ ಅವಕಾಶ ಕಲ್ಪಿಸುವುದು ಹಾಗೂ ಸದರಿ ಡಿಜಿಟೈಸ್ಟ್ ವೋಚರುಗಳನ್ನು ಲೆಕ್ಕ ಪರಿಶೋಧನೆಗಾಗಿ ಮಾಹೆವಾರು ವರ್ಗೀಕರಿಸಿ, ಲಭ್ಯವಾಗುವಂತೆ ಮಾಡುವುದು.

ಈ ಸಂಬಂಧ ಕರ್ನಾಟಕ ಆರ್ಥಿಕ ಸಂಹಿತೆ ಮತ್ತು ಕರ್ನಾಟಕ ಖಜಾನೆ ಸಂಹಿತೆ ನಿಯಮಗಳಿಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

CLICK HERE TO DOWNLOAD ORDER

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!