Government Employees Must Know Authorities: ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ತಿಳಿದಿರಲೇಬೇಕಾದ 9 ಪ್ರಮುಖ ಪ್ರಾಧಿಕಾರಗಳು

Government Employees Must Know Authorities: ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ತಿಳಿದಿರಲೇಬೇಕಾದ 9 ಪ್ರಮುಖ ಪ್ರಾಧಿಕಾರಗಳು

 

Government Employees Must Know Authorities: ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ತಿಳಿದಿರಬೇಕಾದ 9 ಪ್ರಮುಖ ಪ್ರಾಧಿಕಾರಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿರಿ. ಇಲಾಖೆ ಮಟ್ಟದ ಅಧಿಕಾರಿಗಳು, ಆಡಳಿತಾತ್ಮಕ ಪ್ರಾಧಿಕಾರಗಳು, ಕ್ರಮಬದ್ಧ ಅಧಿಕಾರ ಶ್ರೇಣಿಗಳು ಹಾಗೂ ಅವರ ಪಾತ್ರಗಳ ಬಗ್ಗೆ ಸ್ಪಷ್ಟ ಹಾಗೂ ಉಪಯೋಗಕಾರಿ ಮಾರ್ಗದರ್ಶಿ.

ಆಯ್ಕೆ ಪ್ರಾಧಿಕಾರ:-

ಖಾಲಿ ಹುದ್ದೆಗೆ ಅರ್ಹ ಅಭ್ಯರ್ಥಿಯನ್ನು ನೇಮಕಾತಿ ನಿಯಮಗಳನ್ವಯ ಆಯ್ಕೆ ಮಾಡಿ ಸಮಬಂಧಪಟ್ಟ ಇಲಾಖೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಕಳುಹಿಸುವುದು.

ನೇಮಕಾತಿ ಪ್ರಾಧಿಕಾರ:-

ಆಯ್ಕೆ ಪ್ರಾಧಿಕಾರ ಆಯ್ಕೆ ಮಾಡಿಕೊಟ್ಟ ಅಭ್ಯರ್ಥಿಗೆ ದಾಖಲಾತಿ ಪರಿಶೀಲನೆ ನಡೆಸಿ, ಸಿಂಧುತ್ವ ಮತ್ತು ಇತರೆ ಕರ್ತವ್ಯಗಳನ್ನು ನಿಯಮಾನುಸಾರ ಅರ್ಹ ಅಭ್ಯರ್ಥಿಗೆ ನೇಮಕಾತಿ ಆದೇಶ ಹೊರಡಿಸುವುದು

ಸಕ್ಷಮ ಪ್ರಾಧಿಕಾರ :-

ಕೆಲವು ಇಲಾಖೆಗಳಲ್ಲಿ ಮತ್ತು ಕೆಲವು ವರ್ಗ ಎ, ಬಿ, ಸಿ & ಡಿ ವರ್ಗಗಳಿಗೆ ಆಯ್ಕೆ ಪ್ರಾಧಿಕಾರ ಮತ್ತು ನೇಮಕಾತಿ ಪ್ರಾಧಿಕಾರ ಒಂದೇ ಆಗಿ ಕರ್ತವ್ಯ ನಿರ್ವಹಿಸಬಹುದು ಇಲ್ಲ ಬೇರೆ ಬೇರೆಯಾಗಿ ಕರ್ತವ್ಯ ನಿರ್ವಹಿಸಬಹುದು. ಅಂತಹ ಅಭ್ಯರ್ಥಿಗಳನ್ನು ಎರವಲು ಸಹ ನೀಡಬಹುದು.

ಎರವಲು ಪ್ರಾಧಿಕಾರ:-

ನೇಮಕಾತಿ ಹೊಂದಿದ ಇಲಾಖೆಯೊಳಗೆ ಅಥವಾ ಇಲಾಖೆಯಿಂದ ಮತ್ತೊಂದು ಇಲಾಖೆಗೆ ಸಕ್ಷಮ ಪ್ರಾಧಿಕಾರಿಗಳಿಂದ ಅಧಿಕಾರಿ & ಸಿಬ್ಬಂದಿಗಳನ್ನು ಪಡೆದು ಕರ್ತವ್ಯ ಹಂಚಿಕೆ ಮಾಡಬಹುದು ಶಿಸ್ತು ಮತ್ತು ದಂಡನೆ ವಿಧಿಸುವಲ್ಲಿ ಸಕ್ರಮ ಪ್ರಾಧಿಕಾರದ ಅನುಮತಿಯೊಂದಿಗೆ ಕರ್ತವ್ಯ ನಿರ್ವಹಿಸುವವು. ನೌಕರನ ರಜೆ ಮಂಜೂರಾತಿ ವೇತನ ಮಂಜೂರಾತಿ ಮತ್ತು ಇತರೆ ಕೆಲಸ ಇತರೆ ಕರ್ತವ್ಯಗಳನ್ನು ನಿರ್ವಹಿಸುವುದು.

ರಜಾ ಪ್ರಾಧಿಕಾರ :-

ಯಾವುದೇ ಸರ್ಕಾರಿ ನೌಕರನಿಗೆ ತತ್ ತಕ್ಷಣದ ಅಧಿಕಾರಿಯಾಗಿ ಮತ್ತೊಬ್ಬ ಮೇಲಾಧಿಕಾರಿಯಿದ್ದು ಅವನಿಗೆ ಇರುವ ವಿತ್ತಾಧಿಕಾರದಡಿ ರಜೆ ಮಂಜೂರು ಮಾಡಬಹುದು ಹಾಗೂ ಹೆಚ್ಚಿನ ರಜೆ ಮಂಜೂರಾತಿಗಾಗಿ ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಿ ಕೊಡಬೇಕಾಗಬಹುದು. ಅಂತಹ ಸಕ್ಷಮ ಪ್ರಾಧಿಕಾರಿ ನೌಕರನ ಅಗತ್ಯತೆ ಪರಿಶೀಲಿಸಿ ರಜೆ ಮಂಜೂರು ಮಾಡಬಹುದು.

ಶಿಸ್ತು ಪ್ರಾಧಿಕಾರ:-

ಆಯ್ಕೆ ಪ್ರಾಧಿಕಾರ ಮತ್ತು ನೇಮಕಾತಿ ಪ್ರಾಧಿಕಾರ ಒಂದೇ ಆಗಿದ್ದು ಅದೇ ಪ್ರಾಧಿಕಾರ ಆ ನೌಕರನಿಗೆ ಸಕ್ಷಮ ಪ್ರಾಧಿಕಾರವಾಗಿದ್ದರೆ ಅಂತಹ ನೌಕರನು ಸಕ್ಷಮ ಪ್ರಾಧಿಕಾರದ ಅಡಿಯಲ್ಲಿ ಕರ್ತವ್ಯ ನಿರ್ವಹಿಸಿ ತಪ್ಪುಗಳನ್ನು ಎಸಗಿದ್ದರೆ ಅಂತಹ ಸರ್ಕಾರಿ ನೌಕರನಿಗೆ ಅವರೇ ಶಿಸ್ತಪ್ರಾಧಿಕಾರಿಯಾಗಿ ದಂಡನೆ ವಿಧಿಸಬಹುದು. ಇಲ್ಲವಾದಲ್ಲಿ ಯಾರ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾನೋ ಆ ಅಧಿಕಾರಿಗೆ ಕ.ನಾ.ಸೇ (ಸಿಸಿಎ) ನಿಯಮಗಳಡಿ ವಿತ್ತಾಧಿಕಾರ ನೀಡಿದ್ದರೆ ಆಗ ಮಾತ್ರ ಆ ವ್ಯಕ್ತಿ ದಂಡನೆ ವಿಧಿಸಬಹುದು ಸಾಮಾನ್ಯವಾಗಿ ಲಘುದಂಡನೆಗಳಿಗೆ ಅವಕಾಶ ಕಲ್ಪಿಸಿರುತ್ತಾರೆ ಕಠಿಣ ದಂಡನೆಗಳನ್ನು ಸಕ್ಷಮ ಪ್ರಾಧಿಕಾರವೇ ಹೊರಡಿಸುತ್ತದೆ.

ಅಪೀಲು ಪ್ರಾಧಿಕಾರ:-

ಸರ್ಕಾರಿ ನೌಕರನು ಎಸಗಿದ ತಪ್ಪಿಗೆ ಶಿಸ್ತುಪ್ರಾಧಿಕಾರವು ದಂಡನೆ ವಿಧಿಸಿದ್ದರೆ ಶಿಸ್ತುಪ್ರಾಧಿಕಾರದ ಮೇಲ್ಪಟ್ಟ ಅಧಿಕಾರಿ ಕ.ನಾ.ಸೇ (ಸಿಸಿಎ) ನಿಯಮಗಳನ್ವಯ ಹಂಚಿಕೆ ಮಾಡಲಾದ ಅಧಿಕಾರಿಯು ಅಪೀಲು ಪ್ರಾಧಿಕಾರವಾಗಿರುತ್ತಾರೆ ಇಂತಹ ಅಧಿಕಾರಿಗೆ ನೌಕರನು ತನಗೆ ವಿಧಿಸಿದ ದಂಡನೆ ಸರಿಯಿಲ್ಲವೆಂದು ಮಾರ್ಪಡಿಸಲು ಕೋರಬಹುದು.

ಇದು ಅಲ್ಲದೆ, – ಸಕ್ಷಮ ಪ್ರಾಧಿಕಾರವು ಮಾಡಿದ ಇತರೆ ತರಹದ ಯಾವುದೇ ಆದೇಶ, ಹಿಂಬರಹಗಳಿದ್ದರೆ ಅವುಗಳ ಬಗ್ಗೆ ನೌಕರನಿಗೆ ತೃಪ್ತಿಕರ ಅನ್ನಿಸಲಿಲ್ಲದಿದ್ದರೆ ಅವುಗಳ ವಿರುದ್ಧ ಕ.ನ.ಸೇ(ಸಿಸಿಎ) ನಿಯಮಗಳನ್ವಯ ಮೇಲ್ಮನವಿ ಸಲ್ಲಿಸಬಹುದು

ಹೀಗೆ ಸ್ವೀಕರವಾದ ಮೇಲ್ಮನವಿಗಳನ್ನು ಪರಿಶೀಲಿಸಿ ಆದೇಶ ಮಾರ್ಪಡಿಸಿ ಹೊರಡಿಸಬಹುದು.

ಪರಿಷ್ಕರಣ ಮೇಲ್ಮನವಿ ಪ್ರಾಧಿಕಾರ :

– ಸರ್ಕಾರಿ ನೌಕರನಿಗೆ ಮೇಲ್ಮನಿ ಪ್ರಾಧಿಕಾರವು ಮಾಡಿದ ಆದೇಶ ತೃಪ್ತಿಕರವಾಗಿಲ್ಲ ಎಂದಾಗ ಪರಿಷ್ಕರಣ ಮೇಲ್ಮನವಿ ಪ್ರಾಧಿಕಾರವಾದ ಸರ್ಕಾರ (ಆಯಾ ಇಲಾಖೆ ಮುಖ್ಯಸ್ಥರು) ಕ್ಕೆ ಪರಿಷ್ಕರಣ ಮೇಲ್ಮನವಿ ಸಲ್ಲಿಸಬಹುದು ಅಂತಹ ಮೇಲ್ಮನವಿಗಳನ್ನು ಪರಿಶೀಲಿಸಿ ಸರ್ಕಾರ ಆದೇಶ ಹೊರಡಿಸುತ್ತದೆ.

ಪುನರಾವಲೋಕನ ಪ್ರಾಧಿಕಾರ:-

ಸರ್ಕಾರಿ ನೌಕರನಿಗೆ ಪರಿಷ್ಕರಣ ಪ್ರಾಧಿಕಾರವು ಮಾಡಿದ ಆದೇಶ ತೃಪ್ತಿಕರವಾಗಿಲ್ಲ ಎಂದಾಗ ಪುನರಾವಲೋಕನ ಪ್ರಾಧಿಕಾರವಾದ ಸರ್ಕಾರಕ್ಕೆ ಹೊಸದಾಗಿ ಲಭ್ಯವಾದ ದಾಖಲೆ ಅಥವಾ ವಿಚಾರಣೆಯಲ್ಲಿ ಪರಿಗಣಿಸದಿರುವ ದಾಖಲೆಗಳ ಬಗ್ಗೆ ಗಮನಸೆಳೆದು (ಆಯಾ ಇಲಾಖೆ ಮುಖ್ಯಸ್ಥರು) ಕ್ಕೆ ಪುನಾರಾವಲೋಕನಾ ಅರ್ಜಿಯನ್ನು ಸಲ್ಲಿಸಬಹುದು ಅಂತಹ ಅರ್ಜಿಗಳನ್ನು ಪರಿಶೀಲಿಸಿ ಸರ್ಕಾರ ಮರು ಆದೇಶ ಹೊರಡಿಸುತ್ತದೆ.

Government Employees Must Know Authorities

CLICK HERE TO DOWNLOAD 

ಮಾಹಿತಿ ಕೃಪೆ: ಶಶಿಕುಮಾರ್. ಪಿ. ಎಂ. ಸಚಿವಾಲಯ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!