Government scheme of ₹7.5 lakh subsidy for women:ಮಹಿಳೆಯರಿಗೆ ₹7.5 ಲಕ್ಷ ಸಹಾಯಧನ ಸರ್ಕಾರದ ಮಹತ್ವದ ಯೋಜನೆ
Government scheme of ₹7.5 lakh subsidy for women:ಮಹಿಳೆಯರಿಗೆ ₹7.5 ಲಕ್ಷ ಸಹಾಯಧನ ಸರ್ಕಾರದ ಮಹತ್ವದ ಯೋಜನೆಯ ಬಗ್ಗೆ ಉಪಯುಕ್ತ ಮಾಹಿತಿ
ಸರ್ಕಾರ ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ‘ಕುಕ್ಕುಟ ಸಂಜೀವಿನಿ’ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ, ಮಹಿಳೆಯರಿಗೆ ಕೋಳಿ ಸಾಕಾಣಿಕೆಗಾಗಿ ₹7.5 ಲಕ್ಷದವರೆಗೆ ಆರ್ಥಿಕ ನೆರವು ಮತ್ತು ಉಚಿತ ಕೋಳಿ ಮರಿಗಳನ್ನು ನೀಡಲಾಗುತ್ತದೆ. ಅಲ್ಲದೆ, ಮಹಿಳೆಯರು ಬೆಳೆದ ಕೋಳಿಗಳ ಮೊಟ್ಟೆಗಳನ್ನು ಸರ್ಕಾರವೇ ಖರೀದಿಸಲಿದೆ. ಇದು ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ದೊಡ್ಡ ಉತ್ತೇಜನ ನೀಡಲಿದೆ.
ಕೋಳಿಮರಿ ವಿತರಣೆ, ಶೆಡ್‌ಗೆ ನೆರವು:
ಪಶುಸಂಗೋಪನಾ ಇಲಾಖೆಯು ಕುಕ್ಕುಟ ಸಂಜೀವಿನಿ ಯೋಜನೆಯಡಿ ಆರು ವಾರಗಳ ನಾಟಿ ಕೋಳಿಮರಿಗಳನ್ನು ವಿತರಿಸುತ್ತಿದೆ. ಎಂಜಿನರೇಗಾ ಅಡಿಯಲ್ಲಿ ಕೋಳಿ ಶೆಡ್ ನಿರ್ಮಾಣಕ್ಕೆ (500 ಕೋಳಿಗಳಿಗೆ 4.5 ಲಕ್ಷ ರೂ., 1000 ಕೋಳಿಗಳಿಗೆ 7.5 ಲಕ್ಷ ರೂ.) ನೆರವು ನೀಡಲಾಗುತ್ತದೆ. ಪ್ರತಿ ಸಂಘಕ್ಕೆ 25,000 ರೂ. ಸಹಾಯಧನ ಲಭ್ಯ. ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿಗಳಿಗೆ ನಿಗದಿತ ದರದಲ್ಲಿ ಮೊಟ್ಟೆ ಮಾರಾಟ ಮಾಡುವ ಮೂಲಕ ಸಂಘಗಳಿಗೆ ಸುಸ್ಥಿರ ಆದಾಯ ಜಾತ್ರಿಪಡಿಸಲಾಗುತ್ತದೆ.
ತಿಂಗಳಿಗೆ 30,000 ರೂಪಾಯಿ ಆದಾಯ:
ಕೋಳಿ ಸಾಕಣೆದಾರರು ಈಗ ತಮ್ಮ ಮೊಟ್ಟೆಗಳನ್ನು ನೇರವಾಗಿ ಊರಿನ ಸರ್ಕಾರಿ ಶಾಲೆಗಳು (ಬಿಸಿಯೂಟಕ್ಕೆ) ಮತ್ತು ಅಂಗನವಾಡಿಗಳಿಗೆ ಮಾರಾಟ ಮಾಡಬಹುದು. ಸರ್ಕಾರ ನಿಗದಿಪಡಿಸಿದ ದರದಲ್ಲಿ ಮೊಟ್ಟೆ ಖರೀದಿಸುವುದರಿಂದ ಮಾರುಕಟ್ಟೆ ಹುಡುಕುವ ಚಿಂತೆ ಇರುವುದಿಲ್ಲ. ಈ ಯೋಜನೆಯಿಂದ ಕೋಳಿ ಸಾಕಣೆದಾರರು ತಿಂಗಳಿಗೆ ಕನಿಷ್ಠ 20,000 ದಿಂದ 30,000 ರೂಪಾಯಿ ಆದಾಯ ಗಳಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಅರ್ಹತೆಗಳ ವಿವರ:
ಮಹಿಳಾ ಸ್ವಸಹಾಯ ಸಂಘಗಳು ಕೋಳಿ ಸಾಕಾಣಿಕೆ ಯೋಜನೆಯಡಿ ಪ್ರಯೋಜನ ಪಡೆಯಲು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಈ ಯೋಜನೆಯಡಿ, ಸ್ವಸಹಾಯ ಸಂಘವು 5 ರಿಂದ 10 ಸದಸ್ಯರನ್ನು ಹೊಂದಿರಬೇಕು. ಅರ್ಹತೆ ಪಡೆಯಲು, ಸಂಘಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿರಬೇಕು ಮತ್ತು ಕೋಳಿ ಸಾಕಾಣಿಕೆಯಲ್ಲಿ ಆಸಕ್ತಿ ಹೊಂದಿರಬೇಕು. ಆರಂಭಿಕ ಹಂತದಲ್ಲಿ 3-4 ತಿಂಗಳವರೆಗೆ ಕೋಳಿ ಮರಿಗಳನ್ನು ಪಾಲನೆ ಮಾಡುವ ಪ್ರಾಯೋಗಿಕ ಅನುಭವವಿರುವವರಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಹಾಯ ಒದಗಿಸುವ ಯೋಜನೆಯಡಿ, ಆಸಕ್ತ ಮತ್ತು ಅರ್ಹ ಸಂಘಗಳು ತಮ್ಮ ತಾಲ್ಲೂಕಿನ ಪಶುಪಾಲನಾ ಇಲಾಖೆ ಅಥವಾ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಫೋಟೋ, ಬ್ಯಾಂಕ್ ಪಾಸ್‌ಬುಕ್, ಜಮೀನಿನ ಪಹಣಿ ಮತ್ತು ಮೊಬೈಲ್ ನಂಬರ್ ಅಗತ್ಯವಿದೆ. ಈ ಯೋಜನೆಯು ಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕ ಸಬಲೀಕರಣವನ್ನು ಗುರಿಯಾಗಿರಿಸಿಕೊಂಡಿದೆ.