GPF Amendment rules-2024
GPF Amendment rules: ಭವಿಷ್ಯ ನಿಧಿಗಳ ಅಧಿನಿಯಮ, 1925 (1925 ರ ಕೇಂದ್ರ ಅಧಿನಿಯಮ XIX) ರ 8 ನೇ ಪ್ರಕರಣವನ್ನು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 8 ರೊಂದಿಗೆ ಓದಿಕೊಂಡು ಅದೇ ಅಧಿನಿಯಮದ (3)ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ 2016 ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಈ ಮುಂದಿನ ಕರಡನ್ನು ರಚಿಸಲು ಉದ್ದೇಶಿಸಿದ್ದು, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ (ಎ) ಖಂಡದ ಮೂಲಕ ಅಗತ್ಯ ಪಡಿಸಿರುವಂತೆ ಅಧಿಸೂಚನೆ ಸಂಖ್ಯೆ: ಆಇ 03 ಮುಭನಿ 2023, ದಿನಾಂಕ:31.07.2024 ಅನ್ನು ದಿನಾಂಕ: 7 ನೇ ಆಗಸ್ಟ್, 2024ರ ಅಧಿಕೃತ ರಾಜ್ಯ ಪತ್ರದ ಭಾಗ-IV-A ರಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಲಾಗಿದ್ದುದರಿಂದ;
ಮತ್ತು ಸದರಿ ರಾಜ್ಯ ಪತ್ರವನ್ನು ದಿನಾಂಕ: 7 ನೇ ಆಗಸ್ಟ್ 2024 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;
ಮತ್ತು ಯಾವುದೇ ಆಕ್ಷೇಪಣೆಗಳು ಹಾಗೂ ಸಲಹೆಗಳು ರಾಜ್ಯ ಸರ್ಕಾರದಲ್ಲಿ ಸ್ವೀಕೃತವಾಗಿಲ್ಲದಿರುವುದರಿಂದ;
ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ, 1978 (1990 ರ ಕರ್ನಾಟಕ ಅಧಿನಿಯಮ 14) ರ (3)ನೇ ಪ್ರಕರಣದ (1)ನೇ ಉಪ-ಪ್ರಕರಣವನ್ನು ಅದೇ ಅಧಿನಿಯಮದ ಪ್ರಕರಣ 8 ರೊಂದಿಗೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಭವಿಷ್ಯ ನಿಧಿಗಳ ಅಧಿನಿಯಮ, 1925 (1925 ರ ಕೇಂದ್ರ ಅಧಿನಿಯಮ XIX)ದ 8ನೇ ಪ್ರಕರಣವನ್ನು ಓದಿಕೊಂಡು, ಕರ್ನಾಟಕ ಸರ್ಕಾರವು ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016 ನ್ನು ಮತ್ತಷ್ಟು ತಿದ್ದುಪಡಿ ಮಾಡಿ ಈ ಮೂಲಕ ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:-
ನಿಯಮಗಳು ಈ ಕೆಳಗಿನಂತಿವೆ.
1.ಹೆಸರು ಮತ್ತು ಪ್ರಾರಂಭ: (1) ಈ ನಿಯಮಗಳನ್ನು ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ (ತಿದ್ದುಪಡಿ)
ನಿಯಮಗಳು, 2024. (2) ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
ಅನುಸೂಚಿಯ ಪ್ರತಿಸ್ಥಾಪನೆ:- ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016 ರ ಅನುಸೂಚಿಯಲ್ಲಿ ಈ ಕೆಳಕಂಡಂತೆ ಸೇರಿಸತಕ್ಕದ್ದು, ಅಂದರೆ:-
ಅನುಸೂಚಿ (ನಿಯಮ 16 ಮತ್ತು 17 )
ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016 ರ ಅಡಿಯಲ್ಲಿ ತಾತ್ಕಾಲಿಕ ಮುಂಗಡಗಳನ್ನು ಮತ್ತು ಭಾಗಶಃ ಅಂತಿಮ ಹಿಂಪಡೆಯುವಿಕೆಗಳನ್ನು ಮಂಜೂರು ಮಾಡಲು ಸಕ್ಷಮವಾಗಿರುವ ಪ್ರಾಧಿಕಾರಗಳು,
I. ತಾತ್ಕಾಲಿಕ ಮುಂಗಡಗಳು: ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016 ರ ನಿಯಮ-16 ಮತ್ತು ನಿಯಮ-17ರ ಅಡಿಯಲ್ಲಿ ದಿನಾಂಕ: 21.10.1994 ರ ಸರ್ಕಾರಿ ಆದೇಶ ಸಂಖ್ಯೆ:ಎಫ್‌ಡಿ 48 ಮಕಮು 1994 ರಲ್ಲಿ ನಿಗದಿಪಡಿಸಲಾಗಿರುವ Take Home Salary ಯ ಮಿತಿ ಹಾಗೂ ಚಂದಾದಾರರ ಲಭ್ಯವಿರುವ ಸೇವೆಯ ಅವಧಿಯನ್ನು ಗಣನೆಗೆ ತೆಗೆದುಕೊಂಡು ತಾತ್ಕಾಲಿಕ ಮುಂಗಡಗಳನ್ನು ಮಂಜೂರು ಮಾಡುವ ಪ್ರಾಧಿಕಾರಗಳು ಈ ಕೆಳಗಿನಂತಿರುತ್ತವೆ.
|
II. ಹಿಂಪಡೆಯುವಿಕೆಗಳು:- ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016 ರ ನಿಯಮ 26ರ ಜೊತೆಗೆ ಓದಲಾದ ನಿಯಮ-27 ರ ಅಡಿಯಲ್ಲಿ ಭಾಗಶಃ ಅಂತಿಮ ಹಿಂಪಡೆಯುವಿಕೆಗಳನ್ನು ಮಂಜೂರು ಮಾಡುವ ಪ್ರಾಧಿಕಾರಗಳು ಈ ಕೆಳಗಿನಂತಿರುತ್ತವೆ.
ಕ್ರಮ ಸಂಖ್ಯೆ | ಮಂಜೂರಾತಿ ಪ್ರಾಧಿಕಾರ | ಪ್ರತ್ಯಾಯೋಜಿಸಲು ಶಿಫಾರಸ್ಸು ಮಾಡಲಾದ ಅಧಿಕಾರ |
01 | ಇಲಾಖಾ ಮುಖ್ಯಸ್ಥರ ಕಛೇರಿಯಲ್ಲಿ ಕಾಕಾರ್ಯನಿರ್ವಹಿಸುತ್ತಿರುವ ನಿರ್ದೇಶಕರು ಹಾಗೂ ನಿಯಂತ್ರಣ ಅಧಿಕಾರಿಗಳು |
ಇಲಾಖಾ ಮುಖ್ಯಸ್ಥರ ಕಛೇರಿಯಲ್ಲಿ ಸಿಬ್ಬಂದಿಗಳನ್ನು ಕಾರ್ಯನಿರ್ವಹಿಸುವ ಹೊರತುಪಡಿಸಿ ಇತರ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ, ಸದರಿ ನಿಯಮಗಳ ನಿಯಮ 26(1) ನೇ ಉಪನಿಯಮದ ಅಂಶ(a) ರಲ್ಲಿ ನಿರ್ದಿಷ್ಟ ಪಡಿಸಿದ ಕಾರಣಕ್ಕಾಗಿ ಅದರೊಂದಿಗೆ ಓದಲಾದ ನಿಯಮ 27 ರಡಿಯಲ್ಲಿ ಭಾಗಶ: ಅಂತಿಮ ಹಿಂತೆಗೆದುಕೊಳ್ಳುವಿಕೆಯನ್ನು ಅದರಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಗಳಿಗೆ ಮಂಜೂರು ಮಾಡುವ ದಿನಾಂಕದಂದು ಸರ್ಕಾರಿ ನೌಕರನ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಇರುವ ಉಳಿಕೆ ಮೊತ್ತದ ಗರಿಷ್ಠ 90%ನ್ನು ಮಂಜೂರು ಮಾಡುವುದು. |
02 | ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು | ಇಲಾಖಾ ಮುಖ್ಯಸ್ಥರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ಹೊರತುಪಡಿಸಿ ಇತರೆ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ, ಸದರಿ ನಿಯಮಗಳ ನಿಯಮ 26(1) ನೇ ಉಪನಿಯಮದ ಅಂಶ(a) ರಲ್ಲಿ ನಿರ್ದಿಷ್ಟ ಪಡಿಸಿದ ಕಾರಣಕ್ಕಾಗಿ ಅದರೊಂದಿಗೆ ಓದಲಾದ ನಿಯಮ 27 ರಡಿಯಲ್ಲಿ ಭಾಗಶ: ಅಂತಿಮ ಹಿಂತೆಗೆದುಕೊಳ್ಳುವಿಕೆಯನ್ನು ನಿರ್ದಿಷ್ಟಪಡಿಸಿದ ಉದ್ದೇಶಗಳಿಗೆ ಮಂಜೂರು ಮಾಡುವ ದಿನಾಂಕದಂದು ಸರ್ಕಾರಿ ನೌಕರನ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಇರುವ ಉಳಿಕೆ ಮೊತ್ತದ ಗರಿಷ್ಠ 90%ನ್ನು ಮಂಜೂರು ಮಾಡುವುದು. |