GPTR RECURITMENT-2022: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಬಗ್ಗೆ
GPTR RECURITMENT-2022: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಬಗ್ಗೆ: ವಿಷಯಕ್ಕೆ ಸಂಬಂಧಿಸಿದಂತೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ-2022ರ ಕುರಿತಾಗಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿನ ಆದೇಶದಂತೆ ದಿನಾಂಕ: 08.03.2023ರ ಅಂತಿಮ ಆಯ್ಕೆ ಪಟ್ಟಿಗೆ ಸೀಮಿತಗೊಳಿಸಿ, ಕೌನ್ಸಿಲಿಂಗ್‌ಗೆ ಅರ್ಹರಾದ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಸದರಿ ಕೌನ್ಸಿಲಿಂಗ್ ಪಟ್ಟಿಯಂತೆ ಕೌನ್ಸಿಲಿಂಗ್ ನಡೆದು ಒಂದೂವರೆ ವರ್ಷ ಗತಿಸಿದೆ.
ಈಗಾಗಲೇ ಕೌನ್ಸಿಲಿಂಗ್ ನೀಡಿದ್ದು, ನೇಮಕಾತಿ ಆದೇಶ ನೀಡಲು ಬಾಕಿ ಇರುವ ಪ್ರಕರಣಗಳಲ್ಲಿ ನಿಯಮಾನುಸಾರ ಅರ್ಹವಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ತ್ವರಿತವಾಗಿ ಅಗತ್ಯ ಕ್ರಮಕೈಗೊಳ್ಳಲು ಮಾನ್ಯ ಆಯುಕ್ತರು ಸೂಚಿಸಿರುತ್ತಾರೆ.
ಕೌನ್ಸಿಲಿಂಗ್ ಪಟ್ಟಿಯಂತೆ ಸ್ಥಳನಿಯುಕ್ತಿಗೊಳಿಸಲಾದ ಹಾಗೂ ಕೌನ್ಸಿಲಿಂಗ್/ನೇಮಕಾತಿ ಆದೇಶ ನೀಡಲು ಬಾಕಿ ಇರುವ ಬಗ್ಗೆ ಅಂದರೆ ಅಭ್ಯರ್ಥಿವಾರು ನೇಮಕಾತಿಯ ಹಂತದ ಪ್ರಗತಿಯನ್ನು ಇದರೊಂದಿಗೆ ಲಗತ್ತಿಸಲಾದ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ, ಹಾರ್ಡ್ ಪ್ರತಿಯನ್ನು ದೃಢೀಕರಿಸಿ, ಸಾಪ್ ಪ್ರತಿಯನ್ನು ಇ-ಮೇಲ್ ವಿಳಾಸ : cackarnataka1@gmail.com ಕ್ಕೆ ದಿನಾಂಕ: 02.09.2025 ರೊಳಗಾಗಿ ಕಳುಹಿಸಲು ಸೂಚಿಸಿದೆ.
