Granting recognition to private aided/unaided primary and high schools
Granting recognition to private aided/unaided primary and high schools: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಶಿಕ್ಷಣ ಕಾಯ್ದೆ-1983. ಸೆಕ್ಷನ್-36 ಹಾಗೂ ಆರ್.ಟಿ.ಇ. ಕಾಯ್ದೆ-2009 ರ ಸೆಕ್ಷನ್-18 ರಂತೆ 2021-22ನೇ ಸಾಲಿನ ಪೂರ್ವದಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಂದ ಭೌತಿಕವಾಗಿ ಪ್ರಸ್ತಾವನೆ ಪಡೆದು, ನಿಯಮಾನುಸಾರ ಪರಿಶೀಲಿಸಿ ಸಕ್ಷಮ ಪ್ರಾಧಿಕಾರಿಗಳು ಮಾನ್ಯತೆ ನೀಡುವ ಪ್ರಕ್ರಿಯೆ ಜಾರಿಯಲ್ಲಿತ್ತು. 2021-22ನೇ ಸಾಲಿನ ನಂತರದಲ್ಲಿ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ ಮಾನ್ಯತೆ ನವೀಕರಣ ಪಡೆಯಲು ಆಯಾ ಶೈಕ್ಷಣಿಕ ಸಾಲುಗಳಲ್ಲಿ ಕಾಲ-ಕಾಲಕ್ಕೆ ಅವಕಾಶ ನೀಡಿ ಸುತ್ತೋಲೆ ನೀಡಲಾಗಿರುತ್ತದೆ.
ಆದಾಗ್ಯೂ ಕೆಲವು ಶಾಲೆಗಳು 2023-24ನೇ ಸಾಲು ಮತ್ತು ಅದರ ಹಿಂದಿನ ಶೈಕ್ಷಣಿಕ ಸಾಲುಗಳಲ್ಲಿ ಅವಕಾಶ ನೀಡಿದ ಕಾಲಾವಧಿಯಲ್ಲಿ ಮಾನ್ಯತೆ ಪಡೆಯಲು ವಿಫಲರಾಗಿದ್ದು, ಪ್ರಸ್ತುತದಲ್ಲಿ ಮಾನ್ಯತೆ ನವೀಕರಣ ಪಡೆಯಲು ಅವಕಾಶ ಕೋರಿದ ಹಿನ್ನೆಲೆಯಲ್ಲಿ ಅಂತಹ ಶಾಲೆಗಳಿಗೆ ಉಲ್ಲೇಖಿತ (9)ರ ಸರ್ಕಾರದ ಪತ್ರದಂತೆ 2024-25ನೇ ಸಾಲಿನ ಹಿಂದಿನ ಸಾಲುಗಳಿಗೆ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಇಲ್ಲದೇ ನಡೆಯುತ್ತಿರುವ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಅಂತಹ ಎಲ್ಲಾ ಶಾಲೆಗಳಿಗೆ ಅಂತಿಮ ಎಚ್ಚರಿಕೆ ನೀಡಿ ಮಾನ್ಯತೆ ನವೀಕರಣಕ್ಕೆ ಅಗತ್ಯವಿರುವ ಎಲ್ಲಾ ಮಾನದಂಡಗಳನ್ನು ಪೂರೈಸಿರುವುದನ್ನು ಕೂಲಂಕಷವಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು, ಮುಂದಿನ ವರ್ಷಗಳಲ್ಲಿ ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ಮಾನ್ಯತೆ ನವೀಕರಣ ಮಾಡಿಕೊಳ್ಳುವ ಮತ್ತು ಆ ರೀತಿ ಮಾನ್ಯತೆ ನವೀಕರಣ ಮಾಡಿಕೊಳ್ಳಲು ವಿಫಲವಾದಲ್ಲಿ ಶಾಲೆಯ ನೋಂದಣಿ ರದ್ದುಪಡಿಸುವ ಮತ್ತು ಮಾನ್ಯತೆಯನ್ನು ಹಿಂಪಡೆಯುವ ಷರತ್ತಿಗೊಳಪಡಿಸಿ ಒಂದು ಬಾರಿಗೆ ಮಾತ್ರ 2024-25ಕ್ಕಿಂತ ಹಿಂದಿನ ಶೈಕ್ಷಣಿಕ ಸಾಲುಗಳ ಮಾನ್ಯತೆ ನವೀಕರಣಕ್ಕೆ ಅವಕಾಶ ನೀಡಲು ಸಹಮತಿ ನೀಡಲಾಗಿರುತ್ತದೆ.
ಅದರಂತೆ ಉಲ್ಲೇಖಿತ ಕಾಯ್ದೆ, ನಿಯಮಗಳಂತೆ, ಸರ್ಕಾರದ ಪತ್ರದಂತೆ ಎಲ್ಲಾ ಖಾಸಗಿ ಶಾಲೆಗಳು ನಿಗದಿತ ಅವಧಿಯಲ್ಲಿ ನಿಯಮಾನುಸಾರ ಎಲ್ಲಾ ಅಗತ್ಯ ಮಾಹಿತಿ/ದಾಖಲೆಗಳೊಂದಿಗೆ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಿ ಮಾನ್ಯತೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಯಾವುದೇ ಶಾಲೆಯು ಮಾನ್ಯತೆ ಪಡೆಯದೇ ನಡೆಯುತ್ತಿದ್ದಲ್ಲಿ ಅಂತಹ ಶಾಲೆಯ ವಿರುದ್ಧ ನಿಯಮಾನುಸಾರ ಕ್ರಮ ವಹಿಸುವುದು ಸಕ್ಷಮ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ. ಉಲ್ಲೇಖಿತ (1) ರಿಂದ (8)ರ ಎಲ್ಲಾ ಅಧಿಸೂಚನೆ/ಸುತ್ತೋಲೆಗಳ ಎಲ್ಲಾ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತವೆ.
ಮುಂದುವರೆದು, 2021-22ನೇ ಸಾಲಿಗೂ ಪೂರ್ವದ ಹಾಗೂ 2021-22ನೇ ಸಾಲು ಮತ್ತು 2023-24 ನೇ ಸಾಲಿನ ಮಾನ್ಯತೆ ನವೀಕರಣ ಪಡೆಯದ ಖಾಸಗಿ ಶಾಲೆಗಳು ಪ್ರಸ್ತುತ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಕೋರಿದಲ್ಲಿ ಅಂತಹ ಶಾಲೆಗಳು ಘಟನೋತ್ತರ ಮಾನ್ಯತೆ ಕೋರಿ ಆನ್‌ಲೈನ್ ಮೂಲಕ ತಂತ್ರಾಂಶದಲ್ಲಿಯೇ ಅರ್ಜಿ ಸಲ್ಲಿಸುವುದು. ಚಾಲ್ತಿ ನಿಯಮಗಳಂತೆ ಉಪನಿರ್ದೇಶಕರು(ಆಡಳಿತ) ಇವರು ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಘಟನೋತ್ತರ ಮಾನ್ಯತೆಗೆ ಸಲ್ಲಿಕೆಯಾದ ಅರ್ಜಿಗಳನ್ನು ಅರ್ಜಿ ಸ್ವೀಕೃತಗೊಂಡ ತಕ್ಷಣ ಇತ್ಯರ್ಥಪಡಿಸಲು ಕ್ರಮವಹಿಸುವುದು.
2023-24 ನೇ ಸಾಲು ಮತ್ತು ಹಿಂದಿನ ಶೈಕ್ಷಣಿಕ ಸಾಲುಗಳಿಗೆ ಮಾನ್ಯತೆ ನವೀಕರಣ ಪಡೆಯದ ಖಾಸಗಿ ಅನುದಾನಿತ/ಅನುದಾನರಹಿತ ಪ್ರಾಥಮಿಕ మత్తు ಪ್ರೌಢಶಾಲೆಗಳಿಗೆ ಸದರಿ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಿರಸ್ಕಾರಕ್ಕೆ ಅವಕಾಶ ನೀಡದಂತೆ ಎಲ್ಲಾ ಅಗತ್ಯ ಮಾಹಿತಿ/ ದಾಖಲೆಗಳೊಂದಿಗೆ ತಂತ್ರಾಂಶದಲ್ಲಿ ನಿಗದಿತಪಡಿಸಿದ ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಪಡೆಯಲು ಸಕ್ಷಮ ಪ್ರಾಧಿಕಾರಿಗಳು ಸಂಬಂಧಪಟ್ಟ ಆಡಳಿತ ಮಂಡಳಿಗಳಿಗೆ ಸೂಚನೆ ನೀಡುವುದು ಈ ಅವಧಿಯ ನಂತರ ತಮ್ಮ ವ್ಯಾಪ್ತಿಯ ಯಾವುದೇ ಶಾಲೆಯು ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಪಡೆಯದೇ ಇದ್ದಲ್ಲಿ ಅಂತಹ ಶಾಲೆಗಳ ವಿರುದ್ಧ ಸರ್ಕಾರದ ಪತ್ರ ಮತ್ತು ನಿಯಮಗಳನುಸಾರ ಅಗತ್ಯ ಕ್ರಮ ವಹಿಸಲು ಸೂಚಿಸಿದೆ.
ವಿಶೇಷ ಸೂಚನೆ:- ಯಾವುದೇ ಶಾಲೆಯು ಬಾಕಿ ಇರುವ ಮೊದಲ ಸಾಲಿಗೆ ಮಾನ್ಯತೆ ಕೋರಿ
ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ವೇಳಾಪಟ್ಟಿಯಂತೆ ನಿಗದಿಪಡಿಸಲಾಗಿದೆ. ಸದರಿ ಅರ್ಜಿಯು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡು ದೃಢೀಕೃತ ಪ್ರಮಾಣಪತ್ರ ಆನ್‌ಲೈನ್ ಮೂಲಕ ನೀಡಿದ 05 ಕರ್ತವ್ಯದ ದಿನಗಳೊಳಗೆ ನಂತರದ ಸಾಲಿಗೆ ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ನಿರ್ಲಕ್ಷ್ಯತನ ತೋರಿ ಅರ್ಜಿ ಸಲ್ಲಿಸದಿದ್ದಲ್ಲಿ 05 ದಿನಗಳ ನಂತರ ಅರ್ಜಿ ಸಲ್ಲಿಕೆಗೆ ಅವಕಾಶವಿರುವುದಿಲ್ಲ ಎಂಬ ಅಂಶವನ್ನು ಗಮನಿಸುವುದು.
ಉದಾಹರಣೆ: 2021-22 ನೇ ಸಾಲಿನಿಂದ ಮಾನ್ಯತೆ ಪಡೆಯದಿರುವ ಶಾಲೆಯು ವೇಳಾಪಟ್ಟಿಯಂತೆ ನಿಗದಿಪಡಿಸಿ ಕಾಲಾವಕಾಶದಲ್ಲಿ ಮಾನ್ಯತೆ ಕೋರಿ ಅಗತ್ಯ ಮಾಹಿತಿ/ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು, ಸದರಿ ಅರ್ಜಿಯು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡು DSC ಪ್ರಮಾಣಪತ್ರ ಅನುಮೋದನೆಗೊಂಡ 05 ಕರ್ತವ್ಯದ ದಿನಗಳೊಳಗೆ ನಂತರದ ಸಾಲಿಗೆ ಮಾನ್ಯತೆ ಕೋರಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
2023-24 ನೇ ಸಾಲು ಮತ್ತು ಹಿಂದಿನ ಶೈಕ್ಷಣಿಕ ಸಾಲುಗಳಿಗೆ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಪ್ರಕ್ರಿಯೆಗೆ ವೇಳಾಪಟ್ಟಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೈಪಿಡಿಯನ್ನು ಮಾನ್ಯತೆ ನವೀಕರಣ ತಂತ್ರಾಂಶದ ಲಾಗಿನ್ ಪುಟದಲ್ಲಿ ಆಳವಡಿಸಲಾಗಿದೆ. ಅರ್ಜಿ ಸಲ್ಲಿಕೆ ಮತ್ತು ಪರಿಶೀಲನೆ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ giaprimarycpi@gmail.com ವಿಳಾಸಕ್ಕೆ ಎಲ್ಲಾ ಅಗತ್ಯ ಮಾಹಿತಿ ಸಹಿತ ತಮ್ಮ ಸಮಸ್ಯೆಯನ್ನು ಈ-ಮೇಲ್ ಮೂಲಕ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ಒಂದು ಬಾರಿಗೆ ಮಾತ್ರ ಷರತ್ತುಗೊಳಪಡಿಸಿ 2023-24 ನೇ ಸಾಲು ಮತ್ತು ಹಿಂದಿನ ಶೈಕ್ಷಣಿಕ ಸಾಲುಗಳಿಗೆ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಪಡೆಯದ ಖಾಸಗಿ ಅನುದಾನಿತ/ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅವಕಾಶ ಕಲ್ಪಿಸಿದ್ದು, ಸದರಿ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಶಾಲಾ ಆಡಳಿತ ಮಂಡಳಿಗಳು ಬಾಕಿ ಇರುವ ಅವಧಿಗೆ ಘಟನೋತ್ತರ ಮಾನ್ಯತೆ ಪಡೆಯಲು ಕ್ರಮವಹಿಸುವುದು. ಈ ಅವಧಿಯ ನಂತರವೂ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಪಡೆಯದ ಖಾಸಗಿ ಶಾಲೆಗಳಿಗೆ ಸಂಬಂಧಿಸಿದಂತೆ ಉಲ್ಲೇಖಿತ(9) ಪತ್ರದ ಷರತ್ತಿನಂತೆ ನಿಯಮಾನುಸಾರ ನೊಂದಣಿ ರದ್ದುಪಡಿಸಲು ಸಕ್ಷಮ ಪ್ರಾಧಿಕಾರಿಗಳು ಕ್ರಮವಹಿಸಲು ಸೂಚಿಸಿದೆ.
CLICK HERE TO DOWNLOAD CIRCULAR