Gruhalakshmi Amount: ಗೃಹಲಕ್ಷ್ಮಿ 23ನೇ ಕಂತಿನ ಹಣ ಬಿಡುಗಡೆ ಜಮೆ ಹಣ ಹೀಗೆ ಚೆಕ್ ಮಾಡಿ
Gruhalakshmi Amount: ರಾಜ್ಯದ 1.27 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಗೃಹಲಕ್ಷ್ಮಿ ಯೋಜನೆಯ ಸೆಪ್ಟೆಂಬರ್ ತಿಂಗಳ 23ನೇ ಕಂತಿನ ಹಣವು ಕೊನೆಗೂ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲು ಪ್ರಾರಂಭಿಸಿದೆ. ಸಚಿವೆ ಲಕ್ಷ ಹೆಬ್ಬಾಳ್ಳರ್ ಅವರು ಗೃಹಲಕ್ಷ್ಮಿ 23ನೇ ಕಂತಿನ ಹಣವನ್ನು 80% ಫಲಾನುಭವಿಗಳ ಖಾತೆಗಳಿಗೆ ಈಗಾಗಲೇ ವರ್ಗಾಯಿಸಲಾಗಿದೆ ಎಂದು ಮಾಧ್ಯಮಗಳ ಮುಂದೆ ತಿಳಿಸಿದ್ದರು.
ಉಳಿದ 20% ಮಹಿಳೆಯರಿಗೆ ಶೀಘ್ರದಲ್ಲಿಯೇ ಹಣ ತಲುಪಲಿದೆ ಎಂದೂ ಭರವಸೆ ನೀಡಿದ್ದರು. ಇದೀಗ ಹಾವೇರಿ,ರಾಯಚೂರು, ಬೆಂಗಳೂರು, ಧಾರವಾಡ, ದಕ್ಷಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಿಂದ ಬಂದಿರುವ ಖಚಿತ ಮಾಹಿತಿ ಹಾಗೂ ಸಾರ್ವಜನಿಕರ ಪ್ರತಿಕ್ರಿಯೆಗಳ ಆಧಾರದ ಮೇಲೆ ಸಚಿವರ ಹೇಳಿಕೆ ನಿಜವೆಂದು ಸಾಬೀತಾಗಿದೆ. ಹಣ ಜಮಾ ಪ್ರಕ್ರಿಯೆಯು ಪ್ರಸ್ತುತ ಭರದಿಂದ ಸಾಗಿದೆ.
ಗೃಹಲಕ್ಶ್ಮಿ ಯೋಜನೆ 23ನೇ ಕಂತಿನ ಹಣ ಬಿಡುಗಡೆ: ನಿಮ್ಮ ಖಾತೆಗೆ ಜಮೆಯಾಗಿದೆಯೇ? ಮನೆಯಲ್ಲೇ ಈ ರೀತಿಯಾಗಿ ಚೆಕ್ ಮಾಡಿ
ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 23ನೇ ಕಂತಿನ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮೊತ್ತ ಜಮೆಯಾಗುತ್ತಿದ್ದು, ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂಬುದನ್ನು ಮನೆಯಲ್ಲೇ ಕೆಲವು ಕ್ಷಣಗಳಲ್ಲಿ ಆನ್ಲೈನ್ ಮೂಲಕ ಸುಲಭವಾಗಿ ಪರಿಶೀಲಿಸಬಹುದು.
ಆ ಮೂಲಕ ನೀವು ಪಾವತಿ ಸ್ಥಿತಿಯನ್ನು, DBT ಜಮೆ ವಿವರಗಳನ್ನು ಮತ್ತು Aadhaar–ಬ್ಯಾಂಕ್ ಲಿಂಕ್ ಸ್ಥಿತಿಯನ್ನು ಕೂಡಾ ತಿಳಿದುಕೊಳ್ಳಬಹುದು.

DBT ಕರ್ನಾಟಕ ಅಪ್ಲಿಕೇಶನ್ ಮೂಲಕ ಹಣ ಪರಿಶೀಲಿಸುವ ವಿಧಾನ
DBT ಕರ್ನಾಟಕ ಆಪ್ನ್ನು ನಿಮ್ಮ ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿ. ನಂತರ ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಲಾಗಿನ್ ಆಗಿ. OTP ನಮೂದಿಸಿದ ನಂತರ, ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ ಜಮೆಯಾಗಿರುವ ಹಣದ ಸ್ಥಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು.
CLICK HERE TO DOWNLOAD DBT APP