HRMS2 ESS Application Released-2025: ಒಂದೇ ಅಪ್ಲಿಕೇಶನ್ನಲ್ಲಿ ಎಲ್ಲಾ ಸೇವೆಗಳು.
HRMS2 ESS App : ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ/ನೌಕರರು ಹೆಚ್ಆರ್ಎಂಎಸ್ನ ನೌಕರರ ಸ್ವಯಂ ಸೇವೆ (Employee Self Service-ESS App) ಅಪ್ಲಿಕೇಶನ್ನಲ್ಲಿ ನೋಂದಣಿ ಮಾಡಿಕೊಂಡು,ಸರ್ಕಾರಿ ನೌಕರರು ತಮ್ಮ ವೇತನ ಪ್ರಮಾಣ ಪತ್ರ,ರಜೆ ಬಾಕಿ, ಸಾಲ/ ಮುಂಗಡ,ಕಡಿತದ ವಿವರಗಳು,ವಿಮೆ,ಇ-ಸೇವಾ ಪುಸ್ತಕ,HRMS ಟಿಕೆಟ್,ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮ ಯೋಜನೆ (ಪಿಎಂಜೆಜೆಬಿವೈ),ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ)ಮುಂತಾದ ಮಾಹಿತಿ ಪಡೆಯಬಹುದು.
ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗಲು ಹೆಚ್ಆರ್ ಎಂಎಸ್ ನಿರ್ದೇಶನಾಲಯವು ನೌಕರರ ಸ್ವಯಂ ಸೇವೆ (Employee Self Service-ESS App) ಅನ್ನು ಸಿದ್ಧಪಡಿಸಿದೆ. ಸದರಿ ಅಪ್ಲಿಕೇಶನ್ ಬ ಳಕೆದಾರರ ಸ್ನೇಹಿಯಾಗಿದ್ದು, ಈ ಕೆಳಕಂಡಂತೆ ಹಲವು ರೀತಿಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
1) ವೇತನ ಚೀಟಿ (Pay Slip)
ಸರ್ಕಾರಿ ನೌಕರರು ತಮ್ಮ ಕೆಜಿಐಡಿ ಸಂಖ್ಯೆಯ ಮೂಲಕ ನೋಂದಣಿಯಾಗಿ ನೇರವಾಗಿ ತಮ್ಮ ವೇತನ ಚೀಟಿಯನ್ನು (Pay Slip) ಅನ್ನು ಪಡೆಯಬಹುದು ಮತ್ತು ಯಾವುದೇ ತಿಂಗಳಿಗೆ ನಿಮ್ಮ ಪೇಸ್ಲಿಪ್ಗಳನ್ನು ತ್ವರಿತವಾಗಿ ಪ್ರವೇಶಿಸಿ ಮತ್ತು ಡೌನ್ಲೋಡ್ ಮಾಡಬಹುದು.
2) ರಜೆ ಬಾಕಿ (Leave Balance)
ನೌಕರರು ತಮ್ಮ ರಜೆ ಬಾಕಿಯನ್ನು ವೀಕ್ಷಿಸಬಹುದು. ಮತ್ತು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ನಿಮ್ಮ ರಜೆ ಬಾಕಿಗಳನ್ನು ಟ್ರ್ಯಾಕ್ ಮಾಡಬಹುದು.
3) ಸಾಲ/ಮುಂಗಡ (Loan/Advance)
ನೌಕರರು ಸಾಲ/ಮುಂಗಡದ ವಿವರಗಳನ್ನು ವೀಕ್ಷಿಸಬಹುದು. ಮತ್ತು ನಿಮ್ಮ ಸಾಲಗಳು ಮತ್ತು ಮರುಪಾವತಿ ವೇಳಾಪಟ್ಟಿಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.
4) ಕಡಿತದ ವಿವರಗಳು (Deduction Details)
ನೌಕರರು ತಮ್ಮ ಕಡಿತಗಳಾದ ಆದಾಯ ತೆರಿಗೆ (IT), ಕೆಜಿಐಡಿ, ಸಾಮಾನ್ಯ ಭವಿಷ್ಯ ನಿಧಿ (GPF), ಎನ್ಪಿಎಸ್, ಮುಂತಾದವುಗಳನ್ನು ವೀಕ್ಷಿಸಬಹುದು.
5) ವಿಮೆ ಮಾಹಿತಿ (Insurance)
ನೌಕರರು ತಮ್ಮ ವಿಮೆಗಳಾದ ಕೆಜಿಐಡಿ, ಜಿಪಿಎಪ್ ಮುಂತಾದ ವಿವರಗಳನ್ನು ಸಹ ವೀಕ್ಷಿಸಬಹುದು.
6) ಇ-ಸೇವಾ ಪುಸ್ತಕ (Service Register Book)
ನೌಕರರ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿ (ESR) ಯಲ್ಲಿ ಅಪ್ಲೋಡ್ ಮಾಡಿ ಪಬ್ಲಿಷ್ ಮಾಡಿದ ಇ-ಸೇವಾ ಪುಸ್ತಕವನ್ನು ಈ ಪರದೆಯಲ್ಲಿ ವೀಕ್ಷಿಸಬಹುದು.
7) HRMS ಟಿಕೆಟ್ (Ticket Status)
ನೌಕರರು ಹೆಚ್ಆರ್ಎಂಎಸ್ನಲ್ಲಿ ಸೃಜಿಸಿದ ಟಿಕೇಟ್ನ ವಿವರಗಳನ್ನು ವೀಕ್ಷಿಸಬಹುದು.
8) ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮ ಯೋಜನೆ (ಪಿಎಂಜೆಜೆಬಿವೈ)
ಪಿ ಎಂ ಜೆ ಜೆ ಬಿ ವೈ ಮತ್ತು ಪಿ ಎಂ ಎಸ್ ಬಿ ವೈ ಯೋಜನೆಗಳಲ್ಲಿ ಸಿಬ್ಬಂದಿಗಳು ನೋಂದಣಿಯಾದ ವಿವರಗಳನ್ನು ವೀಕ್ಷಿಸಬಹುದು ಹಾಗೂ ಮುದ್ರಿಸಬಹುದು.
9) ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ)
ಪಿ ಎಂ ಜೆ ಜೆ ಬಿ ವೈ ಮತ್ತು ಪಿ ಎಂ ಎಸ್ ಬಿ ವೈ ಯೋಜನೆಗಳಲ್ಲಿ ಸಿಬ್ಬಂದಿಗಳು ನೋಂದಣಿಯಾದ ವಿವರಗಳನ್ನು ವೀಕ್ಷಿಸಬಹುದು ಹಾಗೂ ಮುದ್ರಿಸಬಹುದು.
10) ಡಿಜಿಲಾಕರ್:
ಡಿಜಿಲಾಕರ್ ಸೌಲಭ್ಯವನ್ನು ಕೂಡ ಈ ಅಪ್ಲಿಕೇಶನ್ ದಲ್ಲಿ ಒದಗಿಸಲಾಗಿದೆ.
CLICK HERE TO DOWNLOAD APPLICATION [App]
ಇದನ್ನೂ ನೋಡಿ….HRMS ESS PORTAL
Hi
Basu