Income Tax:ಆದಾಯ ತೆರಿಗೆ ಪೋರ್ಟಲ್‌ನಲ್ಲಿ ನಾನಾ ಸಮಸ್ಯೆ,ಏನೇನು ಸಮಸ್ಯೆಗಳಿವೆ?-2025

Income Tax: ಆದಾಯ ತೆರಿಗೆ ಪೋರ್ಟಲ್‌ನಲ್ಲಿ ನಾನಾ ಸಮಸ್ಯೆ,ಏನೇನು ಸಮಸ್ಯೆಗಳಿವೆ? ಐಟಿಆರ್ ಸಲ್ಲಿಕೆ ಗಡುವು ವಿಸ್ತರಿಸಲು CCTAX ಮನವಿ

Income Tax:ಆದಾಯ ತೆರಿಗೆ ಪೋರ್ಟಲ್‌ನಲ್ಲಿ ನಾನಾ ಸಮಸ್ಯೆ,ಏನೇನು ಸಮಸ್ಯೆಗಳಿವೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ಆದಾಯ ತೆರಿಗೆ (Income Tax) ರಿಟರ್ನ್ಸ್ (ಐಟಿಆರ್) ಫೈಲಿಂಗ್ ಪೋರ್ಟಲ್‌ನಲ್ಲಿನ ಆ ನಿರಂತರ ದೋಷಗಳಿಂದಾಗಿ ಐಟಿಆರ್ ಫೈಲಿಂಗ್ ಗಡುವನ್ನು ವಿಸ್ತರಿಸ ಬೇಕು ಎಂಬ ಒತ್ತಾಯಗಳು ಹೆಚ್ಚುತ್ತಿವೆ. ಏತನ್ಮಧ್ಯೆ, ಚಂಡೀಗಢ ಚಾರ್ಟರ್ಡ್  ಅಕೌಂಟೆಂಟ್ಸ್ ಟ್ಯಾಕ್ಸಿಷನ್ ಅಸೋಸಿಯೇಷನ್ ವಿವಿಧ ಕಾರಣಗಳನ್ನು ಉಲ್ಲೇಖಿಸಿ ಗಡುವು ವಿಸ್ತರಿಸಲು ಆಗ್ರಹಿಸಿದೆ. ಈ ಸಂಬಂಧ ಕೇಂದ್ರ ನೇರ ತೆರಿಗೆ ಮಂಡಳಿಗೆ (ಸಿಬಿಡಿಟಿ) ಪ್ರಸ್ತಾವನೆ ಸಲ್ಲಿಸಿದೆ.

ಐಟಿಆರ್ ಫೈಲಿಂಗ್ ವೆಬ್‌ಸೈಟ್‌ನಲ್ಲಿ ಅನೇಕ ಸಮಸ್ಯೆಗಳು ಕಂಡುಬಂದಿವೆ. ಎಐಎಸ್ ಮತ್ತು ಫಾರ್ಮ್ 26ಎಎಸ್ ನಡುವೆ ಡೇಟಾ ಹೊಂದಾಣಿಕೆಯಾಗುತ್ತಿಲ್ಲ. ಸರ್ವರ್ ಕ್ರಾಶ್, ಸೆಷನ್ ಟೈಮ್‌ ಔಟ್ ಮತ್ತು ಇನ್ನೂ ಅನೇಕ ದೋಷಗಳಿವೆ. ಹೀಗಾಗಿ ಆಯವ್ಯಯ ವರ್ಷ (ಎವೈ) 2025-26ಕ್ಕೆ ಆದಾಯ ತೆರಿಗೆ ರಿಟನ್ಸ್ ಮತ್ತು ತೆರಿಗೆ ಲೆಕ್ಕಪರಿಶೋಧನೆ ಗಡುವನ್ನು ವಿಸ್ತರಿಸಬೇಕು.

ಇದರ ಜೊತೆಗೆ, ಈ ವರ್ಷ ಕಾರ್ಪೊರೇಟೇತರ ಸಂಸ್ಥೆಗಳಿಗೆಫೈನಾನ್ಸಿಯಲ್ ಸ್ಟೇಟ್‌ಮೆಂಟ್ ಗಳಿಗಾಗಿ  ಇನ್‌ಸ್ಟಿಟ್ಯೂಟ್ ಆಫ್ ಚಾರ್ಟಡ್್ರ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಹೊಸ ಸ್ವರೂಪವನ್ನು ಪರಿಚಯಿಸಿದೆ. ಇದಕ್ಕೆ ತರಬೇತಿ ಮತ್ತು ಸಾಫ್ಟ್‌ವೇರ್ ಅಪ್‌ ಡೇಟ್ ಅಗತ್ಯವಿರುತ್ತದೆ. ಇದು ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿದೆ ಎಂದು ಸಿಸಿಟಿಎಕ್ಸ್ ಹೇಳಿದೆ.

ತೆರಿಗೆ ಲೆಕ್ಕಪರಿಶೋಧನೆ ನಡೆಸಬೇಕಾಗಿಲ್ಲದ ವ್ಯಕ್ತಿಗಳಿಗೆ ಸರಕಾರವು ಈಗಾಗಲೇ ಐಟಿಆರ್ ಫೈಲಿಂಗ್ ಗಡುವನ್ನು 2025ರ ಜುಲೈ 31ರಿಂದ 2025ರ ಸೆಪ್ಟೆಂಬರ್ 15ಕ್ಕೆ ವಿಸ್ತರಿಸಿದೆ. ಆದರೆ, ಎವೈ 2025-26ಕ್ಕೆ ತೆರಿಗೆ ಲೆಕ್ಕಪರಿಶೋಧನೆ ಗಡುವು 2025ರ ಸೆಪ್ಟೆಂಬರ್ 30 ರಂತೆಯೇ ಬದಲಾಗದೆ ಉಳಿದಿದೆ ಎನ್ನುವ ಅಂಶವನ್ನು ಸಿಸಿಟಿಎಕ್ಸ್‌ ಪ್ರಸ್ತಾಪಿಸಿದೆ.

“ಪ್ರಸ್ತುತ ಅನುಸರಣೆಯಾಗುತ್ತಿರುವ ಕ್ಯಾಲೆಂಡರ್ ಅವಾಸ್ತವಿಕವಾಗಿದೆ. ವೃತ್ತಿಪರರು ತಾಂತ್ರಿಕ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಗಡುವು ವಿಸ್ತರಣೆ ಅತ್ಯವಶ್ಯ. ಆದಾಯ ತೆರಿಗೆ (Income Tax) ಇಲಾಖೆಯು ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಆದಾಗ್ಯೂ, ಕೆಲವು ಸಮಸ್ಯೆಗಳು ಎದುರಾಗಿವೆ. ಹೀಗಾಗಿ ಕಾಲಮಿತಿಯಲ್ಲಿ ಐಟಿಆರ್ ಸಲ್ಲಿಕೆ ಅತ್ಯಂತ ಕಷ್ಟಕರ,” ಎಂದು ಸಿಸಿಟಿಎಕ್ಸ್‌ನ ಕಾರ್ಯದರ್ಶಿ ಸಿಎ ಮನೋಜ್ ಕೊಹ್ಲಿ ಹೇಳಿದ್ದಾರೆ.

ನೈಸರ್ಗಿಕ ವಿಕೋಪಗಳು:

ಭಾರೀ ಮಳೆ ಮತ್ತು ಪ್ರವಾಹವು ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಬಿಹಾರ, ಅಸ್ಸಾಂ, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಪ್ರದೇಶಗಳಲ್ಲಿ ತೆರಿಗೆದಾರರು ಮತ್ತು ವೃತ್ತಿಪರರು ವಿದ್ಯುತ್ ಕಡಿತ, ಇಂಟರ್ನೆಟ್ ಅಡಚಣೆಗಳು ಮತ್ತು ಕಚೇರಿ ಪ್ರವೇಶಿಸಲಾಗದ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಿದ್ದಾರೆ.

ಏನೇನು ಸಮಸ್ಯೆಗಳಿವೆ?

👉🏿 ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಗಳಿದ್ದು, ಸೆಷನ್ ಟೈಮ್‌ಔಟ್, ಅಪ್‌ಲೋಡ್ ವೈಫಲ್ಯಗಳು ಕಂಡು ಬಂದಿವೆ.

👉🏿 ಎಐಎಸ್ ಮತ್ತು ಫಾರ್ಮ್ 26ಎಎಸ್‌ ನಲ್ಲಿ ಡೇಟಾ ಹೊಂದಾಣಿಕೆಯಾಗುತ್ತಿಲ್ಲ. ಈ ಸಮಸ್ಯೆಗಳು ಹೊಂದಾಣಿಕೆಗೆ ಅಡ್ಡಿಪಡಿಸುತ್ತವೆ ಮತ್ತು ಫೈಲಿಂಗ್‌ನ ನಿಖರತೆಗೆ ಧಕ್ಕೆ ತರುತ್ತವೆ.

 

ಇದನ್ನೂ ನೋಡಿ…..DOWNLOAD YOUR AUGUST -2025 PAY SLIP

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!