Income tax: ನಿಮ್ಮ ಸೋಷಿಯಲ್‌ ಮೀಡಿಯಾ ಮೇಲೆ ಐಟಿ ಕಣ್ಣು! -info-01

Income tax: ನಿಮ್ಮ ಸೋಷಿಯಲ್‌ ಮೀಡಿಯಾ ಮೇಲೆ ಐಟಿ ಕಣ್ಣು!

Income tax: ನಿಮ್ಮ ಸೋಷಿಯಲ್‌ ಮೀಡಿಯಾ ಮೇಲೆ ಐಟಿ ಕಣ್ಣು!: ಆದಾಯ ತೆರಿಗೆ ಪಾವತಿಸದ, ಕಡಿಮೆ ತೆರಿಗೆ ಪಾವತಿಸುವ ವ್ಯಕ್ತಿಗಳ ಸಾಮಾಜಿಕ ಜಾಲತಾಣದ ಚಟುವಟಿಕೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಡುತ್ತಿದೆ. ಆಧುನಿಕ ತಾಂತ್ರಿಕ ನಿಯಂತ್ರಣಗಳಾದ ಡೇಟಾ ಅನಾಲಿಟಿಕ್ಸ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ಡೀಪ್ ಲರ್ನಿಂಗ್ ಟೂಲ್ ಗಳನ್ನು ಬಳಸಿ ವಿಶ್ಲೇಷಿಸುವ ವ್ಯವಸ್ಥೆ ಮಾಡಿಕೊಂಡಿದೆ.

ಜಪಾನ್ ಸುತ್ತಾಡಿದ್ದೀರಿ. ಅಮೆರಿಕ ಪ್ರವಾಸದ ಬನಡುವೆ ಪ್ರವಾಸಿ ತಾಣಗಳಲ್ಲಿ ಪತ್ನಿ, ಮಕ್ಕಳೊಂದಿಗೆ ಕಳೆದ ಸುಂದರ ಕ್ಷಣಗಳ ಫೋಟೊಗಳನ್ನು ಫೇಸ್‌ಬುಕ್, ಇನ್ ಸ್ಟಾಗ್ರಾಂನಲ್ಲಿ ಹಾಕಿದ್ದೀರಿ. ಆದರೆ ವರ್ಷಾಂತ್ಯಕ್ಕೆ ಆದಾಯ ತೆರಿಗೆ ಇಲಾಖೆಗೆ ಯಾವುದೇ ಲೆಕ್ಕ ಕೊಡದೆ ಸುಮ್ಮನಿರುವಂತಿಲ್ಲ…! ಹೀಗೆ ನೀವು ದೇಶ, ವಿದೇಶದಲ್ಲಿ ಮಾಡಿದ ಖರ್ಚು, ಗಳಿಕೆಯನ್ನು ಮುಚ್ಚಿಟ್ಟರೆ ಇನ್ನುಮುಂದೆ ನಡೆಯುವುದಿಲ್ಲ.

ನೀವು ಪೋಸ್ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪೋಸ್ಟ್‌ಗಳನ್ನೇ ಆದಾಯ ತೆರಿಗೆ ಇಲಾಖೆ ಚಾಲಾಡಬಹುದು, ನೋಟಿಸ್ ಕೊಡಬಹುದು! ಹೌದು, ಆದಾಯ ತೆರಿಗೆ ಪಾವತಿಸದ, ಕಡಿಮೆ ತೆರಿಗೆ ಪಾವತಿಸುವ ವ್ಯಕ್ತಿಗಳ ಸಾಮಾಜಿಕ ಜಾಲತಾಣದ ಚಟುವಟಿಕೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಡುತ್ತಿದೆ. ಆಧುನಿಕ ತಾಂತ್ರಿಕ ನಿಯಂತ್ರಣಗಳಾದ ಡೇಟಾ ಅನಾಲಿಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ಡೀಪ್ ಲರ್ನಿಂಗ್ ಟೂಲ್ಗಳನ್ನು ಬಳಸಿ ವಿಶ್ಲೇಷಿಸುವ ವ್ಯವಸ್ಥೆ ಮಾಡಿಕೊಂಡಿದೆ.

ಯಾವುದರ ಮೇಲೆ ನಿಗಾ ಇಡಲಾಗುತ್ತದೆ?

ದೇಶವಿದೇಶದಲ್ಲಿ ನೀವು ಮಾಡಿದ ಪ್ರವಾಸ, ಹೂಡಿಕೆ, ದುಬಾರಿ ಕಾರು, ಬಂಗಲೆ ಖರೀದಿ, ಮಗ ಅಥವಾ ಮಗಳ ಅದ್ದೂರಿ ಮದುವೆ, ಯಾರಿಗೋ ನೀಡಿದ ದುಬಾರಿ ಉಡುಗೊರೆಯ ಫೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಅವುಗಳ ಲೆಕ್ಕವನ್ನು ಆದಾಯ ತೆರಿಗೆ [Income tax dept] ಇಲಾಖೆಗೆ ಕೊಡಬೇಕು. ಹಾಗೊಂದು ವೇಳೆ, ಲೆಕ್ಕ ಕೊಡದಿದ್ದರೆ, ಕಡಿಮೆ ಲೆಕ್ಕ ಕೊಟ್ಟರೆ ಅದು ನಿಮ್ಮ ವ್ಯವಹಾರಗಳ ಮೇಲೆ ಕಣ್ಣಿಡಲು ಕಾರಣವಾಗುತ್ತದೆ.

ಐಟಿ ಇಲಾಖೆಗೆ ಅಧಿಕಾರ ಹೇಗೆ?

▪️ಭಾರತೀಯ ಆದಾಯ ತೆರಿಗೆ ಕಾಯಿದೆಗಳ ಪ್ರಕಾರ – ಶಂಕಾಸ್ಪದ ವ್ಯಕ್ತಿಗಳ ಮಾಹಿತಿ ಪಡೆದು ಬ್ಯಾಂಕ್ ಖಾತೆ, ಪ್ಯಾನ್, ಆಧಾರ್ ಲಿಂಕ್ ಮಾಡಿದ ಖಾತೆಗೆ ಬಂದ ದುಡ್ಡು, ಹೊರ ಹೋದ ದುಡ್ಡು ಮತ್ತು ಆಸ್ತಿ ದಾಖಲೆ ಎಲ್ಲವನ್ನೂ ಪರಿಶೀಲಿಸಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಅಧಿಕಾರವಿದೆ.

▪️ಸಾರ್ವಜನಿಕರ, ತೆರಿಗೆದಾರರ ಗೌಪ್ಯತೆ ಕಾಪಾಡುವ ನಿಯಮಗಳನ್ನು ಪಾಲಿಸಿ, ವ್ಯಕ್ತಿಯ ಕುರಿತು ಸಾರ್ವಜನಿಕ ವಾಗಿ ಲಭ್ಯವಿರುವ ಮಾಹಿತಿಯನ್ನಷ್ಟೇ ಆದಾಯ ತೆರಿಗೆ ಇಲಾಖೆಯು ಜಾಲಾಡುತ್ತದೆ. ವ್ಯಕ್ತಿಗತ, ಪಾಸ್‌ವರ್ಡ್ ಸಂರಕ್ಷಿತ ಖಾತೆಗಳಲ್ಲಿರುವ ಮಾಹಿತಿ ಪಡೆಯುವಂತಿಲ್ಲ. ಇಂಥ ಖಾತೆಗಳಲ್ಲಿನ ಮಾಹಿತಿ ಪಡೆಯಬೇಕಿದ್ದರೆ ಆದಾಯ ತೆರಿಗೆ ಇಲಾಖೆಯು ನ್ಯಾಯಾಲಯದ ಅನುಮತಿ ಪಡೆದು, ಕಾನೂನು ಕ್ರಮದ ಪ್ರಕಾರ ಮುಂದಡಿ ಇಡಬೇಕು.

▪️ಬ್ಯಾಂಕ್ ಖಾತೆ ಮೂಲಕ ವ್ಯವಹರಿಸುವ ಫೋನ್‌ಪೇ, ಗೂಗಲ್‌ಪೇ ಹಾಗೂ ಬ್ಯಾಂಕ್ ಖಾತೆ ಬದಲು ಪ್ರತ್ಯೇಕವಾಗಿ ವ್ಯವಹರಿಸುವ ಡಿಜಿಟಲ್ ವ್ಯಾಲೆಟ್ ಮೂಲಕ ಕ್ರೆಡಿಟ್ ಆದ, ಡೆಬಿಟ್ ಆದ ಮೊತ್ತಗಳ ಮೇಲೂ ಆದಾಯ ತೆರಿಗೆ ಇಲಾಖೆ ನಿಗಾ ಇಡಲಿದೆ. ಇದಕ್ಕೆ ಬೇಕಾದ ದಶಕದ ಡೇಟಾ ಮೈನಿಂಗ್‌ಅನ್ನು ಆದಾಯ ತೆರಿಗೆ ಇಲಾಖೆ ಮಾಡಿದೆ.

ನನ್ನ ಕಕ್ಷಿದಾರರಿಗೆ ಸಾಮಾಜಿಕ ಜಾಲತಾಣದ ಪೋಸ್ಟ್ ಆಧಾರದಲ್ಲಿ ಪ್ರಶ್ನೆ ಕೇಳಿದ ಅನುಭವವಾಗಿದೆ. ಪಾರದರ್ಶಕ ತೆರಿಗೆ ವ್ಯವಸ್ಥೆಯ ಹಾದಿಯಲ್ಲಿ ಆದಾಯ ತೆರಿಗೆ ಇಲಾಖೆಯು ಸಾರ್ವಜನಿಕ ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮಾಹಿತಿ ಪಡೆಯುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಗೂ ತೆರಿಗೆ ದಾಖಲೆಗಳಿಗೂ ಸಮತೋಲನ ಅತಿ ಮುಖ್ಯ. ಸಕಾಲದಲ್ಲಿ ಐಟಿಆರ್ ಸಲ್ಲಿಸಬೇಕು.

ಗುಜ್ಜಾಡಿ ಪ್ರಭಾಕರ ನಾಯಕ್ ಹಿರಿಯ ಲೆಕ್ಕಪರಿಶೋಧಕರು, ಉಡುಪಿ

ಐಟಿ ಕಣ್ಣು, ನೀವು ಹುಷಾರು!

▪️ಸೋಷಿಯಲ್ ಮೀಡಿಯಾದಲ್ಲಿ ತೆರಿಗೆದಾರರ ಯಾವ ಚಟುವಟಿಕೆಗಳ ಮೇಲೆ ಐಟಿ ಇಲಾಖೆ ನಿಗಾ ಇಡುತ್ತದೆ?
▪️ದೇಶ, ವಿದೇಶ ಪ್ರಯಾಣ/ ನಾನಾ ರೀತಿಯ ಹೂಡಿಕೆ
▪️ದುಬಾರಿ ಕಾರು/ಐಷಾರಾಮಿ ಮನೆ, ಬಂಗಲೆ ಖರೀದಿ
▪️ಉಡುಗೊರೆ/ಕೊಡುಗೆ/ ದುಬಾರಿ ಜೀವನಶೈಲಿ

ಇವುಗಳ ಮೇಲೆ ಹೆಚ್ಚಿನ ನಿಗಾ ಎಸ್ ಎಂಎಸ್, ಇ-ಮೇಲ್, ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್.

ಹಲೋ ಫ್ರೆಂಡ್ಸ್, ಹೀಗೆಲ್ಲ ಮಾಡದಿರಿ!

ದೇಶವಿದೇಶದಲ್ಲಿ ಪ್ರವಾಸ, ದುಬಾರಿ ಹೋಟೆಲ್ಗಳಲ್ಲಿ ವಾಸ್ತವ್ಯದ ಬಗ್ಗೆ ಫಾರ್ಮ್ 26ಎಎಸ್ ಅಥವಾ ಐಟಿಆರ್‌ನಲ್ಲಿ ದಾಖಲಿಸಬೇಕು. ನೀವು ದುಬಾರಿ ವಾಹನ, ಬಂಗಲೆ ಖರೀದಿ, ದುಬಾರಿ ಉಡುಗೊರೆ ನೀಡಿಕೆ ಅಥವಾ ಸ್ವೀಕಾರ – ನೀವು ಇಂಥ ಫೋಟೊ/ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರೆ ತೊಂದರೆಯಿಲ್ಲ, ಆದರೆ, ಆ ಸಂಬಂಧಿ ವ್ಯವಹಾರಗಳ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಕಷ್ಟದ ದಿನಗಳು ಎದುರಾಗಬಹುದು.

ಖರ್ಚು, ಆದಾಯದ ಮೂಲಗಳಿಗೆ ಸರಿಯಾಗಿ ಲೆಕ್ಕದ ಜತೆಗೆ ತೆರಿಗೆ ಕೊಡುತ್ತಿದ್ದೀರಿ ಎಂದಾದರೆ ತಲೆಬಿಸಿಯಿಲ್ಲ. ಹಾಗೆಂದು ನಕಲಿ ಫೋಟೊ ಅಥವಾ ತೋರಿಕೆಯ ಜೀವನಶೈಲಿ ಕುರಿತು ಜನರಲ್ಲಿ ಭಾವನೆ ಮೂಡಿಸಲು ಹೊರಟರೆ ಇ.ಡಿ, ಜಿಎಸ್‌ಟಿ ಮತ್ತು ಕಸ್ಟಮ್ಸ್ ಸಂಸ್ಥೆಗಳೂ ನಿಮ್ಮ ಮನೆ ಮತ್ತು ಕಚೇರಿ ಬಾಗಿಲು ಬಡಿಯಬಹುದು.

ಮಾಹಿತಿ ಕೃಪೆ:vk

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!