Insurance facility:ರಾಜ್ಯದಲ್ಲಿ ವಿಕಲಚೇತನರಿಗೆ ವಿಮಾ ಸೌಲಭ್ಯ-2025

Insurance facility:ರಾಜ್ಯದಲ್ಲಿ ವಿಕಲಚೇತನರಿಗೆ ವಿಮಾ ಸೌಲಭ್ಯ

Insurance facility:ರಾಜ್ಯದಲ್ಲಿ ವಿಕಲಚೇತನರಿಗೆ ವಿಮಾ ಸೌಲಭ್ಯದ ಬಗ್ಗೆ ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ.

 

ಪ್ರಶ್ನೆ: ರಾಜ್ಯದಲ್ಲಿ ವಿಶೇಷವಾಗಿ . ವಿಕಲಚೇತನರಿಗೆ ಸರ್ಕಾರದಿಂದ ನೀಡಲಾಗುವ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳು ಯಾವುವು: (ಮಾಹಿತಿ ಒದಗಿಸುವುದು)

ಉತ್ತರ: ರಾಜ್ಯದಲ್ಲಿ ವಿಕಲಚೇತನರಿಗೆ ಸರ್ಕಾರದಿಂದ ನೀಡಲಾಗುವ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳು ಈ ಕೆಳಗಿನಂತಿವೆ.

1.ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಯೋಜನೆ:-

ಸದರಿ ಯೋಜನೆಯಡಿ ಮುಖಾಂತರ ವಿಕಲಚೇತನತೆಯನ್ನು ಶಸ್ತ್ರಚಿಕಿತ್ಸೆಯ ನಿವಾರಣೆ ಮಾಡಿಕೊಳ್ಳಲು ಅಥವಾ ಕಡಿಮೆ ಮಾಡಿಕೊಳ್ಳಲು ಸಂಜಯಗಾಂಧಿ ಅಪಘಾತ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು, ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಅಥವಾ ಕರ್ನಾಟಕದ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ರೂ.1.00 ಲಕ್ಷಗಳವರೆಗೆ ಸಹಾಯ ಧನವನ್ನು ಮಂಜೂರು ಮಾಡಲಾಗುತ್ತಿದೆ. ಸದರಿ ಯೋಜನೆಯನ್ನು ದಿನಾಂಕ:01-04-2000ರಲ್ಲಿ ಜಾರಿಗೆ ತಂದಿದ್ದು, ಪ್ರಥಮವಾಗಿ ರೂ.15,000/-ಗಳ ಸಹಾಯಧನವನ್ನು ನೀಡಲಾಗುತ್ತಿದ್ದು, 2008ರಲ್ಲಿ ರೂ.15,000/-ಗಳಿಂದ ರೂ.35,000/-ಗಳವರೆಗೆ ಶಸ್ತ್ರಚಿಕಿತ್ಸೆಯ ಮೊತ್ತವನ್ನು ಹೆಚ್ಚಿಸಲಾಗಿರುತ್ತದ ಹಾಗೂ 2014ರಲ್ಲಿ ರೂ.35,000 ಗಳಿಂದ ರೂ. 1,00,000 ಗಳಿಗೆ ಹೆಚ್ಚಿಸಿ ವಿಕಲಚೇತನರಿಗೆ ರೂ.1,00,000/-ಗಳವರೆಗೆ ಶಸ್ತ್ರಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತಿದೆ.

2.“ನಿರಾಮಯ ಆರೋಗ್ಯ ವಿಮಾ ಯೋಜನೆ:

ಈ ಯೋಜನೆ” ಪ್ರಸ್ತುತ ರಾಜ್ಯದಲ್ಲಿ ನ್ಯಾಷನಲ್ ಟ್ರಸ್ಟ್ ಆಕ್ಟ್ 1999ರಡಿ 04 ಬಗೆಯ ವಿಕಲಚೇತನರಿಗೆ (ಆಟಿಸಂ, ಸೆರಬ್ರಲ್ ಪಾಲ್ಸಿ, ಬುದ್ಧಿಮಾಂದ್ಯ ಮತ್ತು ಬಹುವಿಧ ಅಂಗವಿಕಲರು) ನಿರಾಮಯ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಕರ್ನಾಟಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಈ 04 ಬಗೆಯ ವಿಕಲಚೇತನ ವ್ಯಕ್ತಿಗಳಿಗೆ ಒಂದು ಬಾರಿ ವಾರ್ಷಿಕ ರೂ.250/-ಗಳನ್ನು ಸರ್ಕಾರದ ವತಿಯಿಂದ ವಿಮಾ ಕಂತಾಗಿ ಪಾವತಿಸಿ, ಪ್ರತಿವರ್ಷ ರೂ.1.00 ಲಕ್ಷಗಳವರೆಗೆ ಉಚಿತವಾಗಿ ವೈದ್ಯಕೀಯ ಸೌಲಭ್ಯ ಪಡೆಯ ಬಹುದಾಗಿರುತ್ತದೆ. ಈ ಮೊತ್ತದಲ್ಲಿ ರೂ.40,000/-ಗಳವರೆಗೆ ಶಸ್ತ್ರಚಿಕಿತ್ಸೆ ರೂ.15,000/-ಶಸ್ತ್ರಚಿಕಿತ್ಸೆ ರಹಿತ ಖಾಯಿಲೆಗಳ ವೆಚ್ಚ ರೂ.15,000/- ಹೊರ ರೋಗಿ ವಿಭಾಗದ ವೆಚ್ಚ, ಆರೋಗ್ಯ ತಪಾಸಣೆ, ಪರೀಕ್ಷೆಗಳು, ಔಷಧಿಗಳು, ರೂ.4000/- ಹಲ್ಲುಗಳಿಗೆ ಸಂಬಂಧಿಸಿದ ವೆಚ್ಚ ರೂ.20,000/-ಗಳ ಚಾಲ್ತಿಯಲ್ಲಿರುವ ಥೆರಪಿ ರೂ.4,000/-ಪರ್ಯಾಯ ಔಷಧಿಗಳು ರೂ.2,000/- ಪ್ರಯಾಣ ವೆಚ್ಚಗಳನ್ನು ಒಳಗೊಂಡಿರುತ್ತದೆ. ಬಡತನರೇಖೆಗಿಂತ ಮೇಲ್ಪಟ್ಟ ಕುಟುಂಬದ ವಿಕಲಚೇತನ ವ್ಯಕ್ತಿಗಳು ವಾರ್ಷಿಕ ರೂ.500/-ಗಳನ್ನು ಪಾವತಿಸಿ ಈ ಸೌಲಭ್ಯ ಪಡೆಯಬಹುದಾಗಿರುತ್ತದೆ.

3.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕಾಕ್ಲಿಯಾರ್ ಇಂಪ್ಲಾಂಟ್ ಯೋಜನೆ

ಈ ಯೋಜನೆ ಅಡಿಯಲ್ಲಿ ಕಡ್ಡಾಯ ನವಜಾತ ಶಿಶುಗಳ ಶ್ರವಣ ತಪಾಸಣೆ ನಡೆಸಿ, ಗುರುತು ಹಚ್ಚಿದ ತೀವ್ರತರವಾದ / ಗಂಭೀರ ಸ್ವರೂಪದ ಶ್ರವಣದೋಷವುಳ್ಳ 6 ವರ್ಷದ ಕೆಳಗಿನ ಮಕ್ಕಳಿಗೆ ಶ್ರವಣ ಸಾಧನಗಳನ್ನು ನೀಡಿ, ಟ್ರಯಲ್‌ಆಡಿಟರಿವರ್ಬಲ್ ಥೆರಪಿಯನ್ನು ಒದಗಿಸಲಾಗುವುದು, ಮುಂದುವರೆದು ಶ್ರವಣ ದೋಷವುಳ್ಳ ವ್ಯಕ್ತಿಗಳಿಗೆ ಸಾಧನಗಳಿಂದ ಸರಿಪಡಿಸಲಾಗದಿದ್ದಲ್ಲಿ, ಕಾಕ್ಲಿಯಾರ್ ಇಂಪ್ಲಾಂಟ್‌ಶಸ್ತ್ರಚಿಕಿತ್ಸೆ ಒದಗಿಸುವುದರೊಂದಿಗೆ, ಶಸ್ತ್ರಚಿಕಿತ್ಸಾ ನಂತರದ 2 ವರ್ಷಗಳ ಪುನರ್ವಸತಿ ಆಡಿಟರಿವರ್ಬಲ್ ಥೆರಪಿ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಲಾಗುತ್ತಿದೆ. 2016-17ನೇ ಸಾಲಿನಿಂದ ಇಲ್ಲಿಯವರೆಗೆ 665 ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿರುತ್ತದೆ

ಆ. ವಿಶೇಷವಾಗಿ ವಿಕಲಚೇತನರಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಬಳಸುವಂತೆ ಆರೋಗ್ಯ ವಿಮೆಯನ್ನು ಸರ್ಕಾರದ ವತಿಯಿಂದ ಭರಿಸಲು ಮುಂದಾಗುವುದೇ; ಇದರ ಬಗ್ಗೆ ಸರ್ಕಾರದ ಅಭಿಪ್ರಾಯವೇನು; (ಮಾಹಿತಿ ಒದಗಿಸುವುದು)

ಉತ್ತರ: ನಿರಾಮಯ ಆರೋಗ್ಯ ವಿಮಾ ಯೋಜನೆಯಡಿ 04 ಬಗೆಯ ವಿಕಲಚೇತನರಿಗೆ (ಆಟಿಸಂ, ಸೆರಬ್ರಲ್‌ಪಾಲ್ಸಿ, ಬುದ್ಧಿಮಾಂದ್ಯ ಮತ್ತು ಬಹುವಿಧ ಅಂಗವಿಕಲರು) ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸೆಯ ಗರಿಷ್ಠ 01 ಲಕ್ಷದವರೆಗೆ ಶಸ್ತ್ರಚಿಕಿತ್ಸೆ ಹಾಗೂ ವೈದ್ಯಕೀಯ ವೆಚ್ಚಗಳನ್ನು ಕೇಂದ್ರ ಸರ್ಕಾರವು ಗುರುತಿಸಿರುವ ಸಂಸ್ಥೆಯ ಮುಖಾಂತರ ಪಡೆಯುತ್ತಿದ್ದಾರೆ.

ಇ. ಜೀವನ ನಿರ್ವಹಣೆಗೂ ಕಷ್ಟಪಡುವ ಇವರುಗಳಿಗೆ ಸರ್ಕಾರವು ಕನಿಷ್ಠ ಉಚಿತ ಆರೋಗ್ಯ ವಿಮೆಗಳನ್ನು ನೀಡಲು ಇರುವ ತೊಂದರೆಗಳೇನು; ಇದನ್ನು ಜಾರಿಗೊಳಿಸಲು ಸರ್ಕಾರದ ತೀರ್ಮಾನಗಳೇನು? (ವಿವರಗಳನ್ನು ನೀಡುವುದು).

ಉತ್ತರ: ಈ ಬಗ್ಗೆ ಪರಿಶೀಲಿಸಲಾಗುವುದು.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!