ISRO-YUVIKA or young scientist programme-2025

ISRO-Yvika or young scientist programme-2025

ISRO- ಯುವ ವಿಜ್ಞಾನಿಗಳಾಗಲು ವಿದ್ಯಾರ್ಥಿಗಳಿಗೆ ಉತ್ತೇಜನ, ಇಸ್ರೋದಿಂದ ಎರಡು ವಾರಗಳ ವಸತಿಯುತ ಕಾರ್ಯಕ್ರಮ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆದ್ಯತೆ.

ವಿಜ್ಞಾನಾಸಕ್ತ ವಿದ್ಯಾರ್ಥಿಗಳು, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡವರು, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಜಾಗತಿಕವಾಗಿಯೂ ಪ್ರತಿಷ್ಠಿತ ಸಂಸ್ಥೆಯಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ವಸತಿಯುತ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗುತ್ತಿದೆ. ಇದಕ್ಕಾಗಿ ನೋಂದಣಿ ಆರಂಭವಾಗಿದ್ದು, ಮಾ. 23ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಯುವ ವಿಜ್ಞಾನಿ ಕಾರ್ಯಕ್ರಮ- ಯುವಿಕಾ ಅಥವಾ ‘ಯಂಗ್‌ ಸೈಂಟಿಸ್ಟ್‌ ಪ್ರೋಗ್ರಾಮ್’ ಹೆಸರಿನ ಎರಡು ವಾರಗಳ ವಸತಿಯುತ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗಾಗಿ ಇಸ್ರೋ ರೂಪಿಸಿದೆ. ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಸ್ಪೇಸ್ ಅಪ್ಲಿಕೇಷನ್ಸ್ ಕ್ಷೇತ್ರದಲ್ಲಿ ಉಂಟಾಗುತ್ತಿರುವ ವಿದ್ಯಮಾನಗಳ ಕುರಿತು ದೇಶದ ಭವಿಷ್ಯ ನಿರ್ಮಾಣಕಾರರಾದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಜ್ಞಾನ ನೀಡುವುದು ಇದರ ಉದ್ದೇಶವಾಗಿದೆ.’ಕ್ಯಾಚ್ ದೆಮ್ ಯಂಗ್’ ಯೋಜನೆಯೊಂದಿಗೆ ಇಸ್ರೋ ಮಕ್ಕಳಲ್ಲಿ ವಿಜ್ಞಾನ, ತಂತ್ರಜ್ಞಾನದಲ್ಲಿ ಆಸಕ್ತಿ ಮೂಡಿಸುತ್ತಿದೆ. ಜತೆಗೆ, ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್‌ ಹಾಗೂ ಗಣಿತ ವಿಷಯಗಳ ಕ್ಷೇತ್ರದಲ್ಲಿ ವ್ಯಾಸಂಗ ಮಾಡುವುದನ್ನು ಸಂಶೋಧನೆ ಹಾಗೂ ವೃತ್ತಿಯನ್ನು ಕೈಗೊಳ್ಳುವಂತೆ ಉತ್ತೇಜಿಸುವುದು ಕೂಡ ಇದರ ಗುರಿಯಾಗಿದೆ.

ಉಚಿತ ವ್ಯವಸ್ಥೆ:

ವಿದ್ಯಾರ್ಥಿಗಳು ಇಸ್ರೋ ಕೇಂದ್ರಕ್ಕೆ ತಲುಪಲು ಮಾಡಲಾಗುವ ಪ್ರಯಾಣ ವೆಚ್ಚವನ್ನು ಇಸ್ರೋ ಮರುಪಾವತಿಸಲಿದೆ. ಅಧ್ಯಯನ ಸಾಮಗ್ರಿ, ವಸತಿ ಹಾಗೂ ಊಟೋಪಚಾರ ವ್ಯವಸ್ಥೆಯನ್ನು ಇಸ್ರೋ ನೋಡಿಕೊಳ್ಳಲಿದೆ.

ಯಾರು ಅರ್ಹರು?

ಜನವರಿ .1, 2025 ಅನ್ವಯವಾಗುವಂತೆ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಕೆಗೆ ಅರ್ಹರಾಗಿರುತ್ತಾರೆ.

ಎಲ್ಲಿ ಕಾರ್ಯಕ್ರಮ?

ಇಸ್ರೋದ ಒಟ್ಟು 7 ಕೇಂದ್ರಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

1.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್, ಡೆಹ್ರಾಡೂನ್

2.ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್, ತಿರುವನಂತಪುರಂ

3.ಸತೀಶ್ ಧವನ್ ಸ್ಪೇಸ್ ಸೆಂಟರ್, ಶ್ರೀಹರಿಕೋಟಾ

4.ಯು.ಆರ್. ರಾವ್ ಸ್ಯಾಟಲೈಟ್ ಸೆಂಟ‌ರ್, ಬೆಂಗಳೂರು

5.ಸ್ಪೇಸ್ ಅಪ್ಲಿಕೇಷನ್ ಸೆಂಟರ್, ಅಹಮದಾಬಾದ್

6.ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್, ಹೈದರಾಬಾದ್

7.ನಾರ್ಥ್- ಈಸ್ಟರ್ನ್ ಸ್ಪೇಸ್ ಅಪ್ಲಿಕೇಷನ್ ಸೆಂಟರ್, ಶಿಲ್ಲಾಂಗ್

ನೀವು ಮಾಡಬೇಕಿರೋದೇನು?

ಇಸ್ರೋ ಆರಂಭಿಸಿರುವ ಅಂತರಿಕ್ಷ ಜಿಜ್ಞಾಸಾ jigyasa.iirs.gov.in ಪೋರ್ಟಲ್‌ಗೆ ಭೇಟಿ ನೀಡಿ. ಅಲ್ಲಿ ಯುವಿಕಾ ಲಿಂಕ್ ಮೇಲೆ ಕ್ಲಿಕ್ ಮಾಡಿದಲ್ಲಿ ಯೋಜನೆಯ ವಿವರಗಳು, ಆಯ್ಕೆ ಮಾನದಂಡಗಳು, ಯಾರು ಅರ್ಹರು, ಮತ್ತೊಂದು ಮಾಹಿತಿ ಇರುವ ಪುಟ ತೆರೆದುಕೊಳ್ಳುತ್ತದೆ.

ಇದೇ ಪುಟದಲ್ಲಿರುವ ನೋಂದಣಿ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇ-ಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಐಡಿ ರೂಪಿಸಿಕೊಳ್ಳಿ. ಬಳಿಕ ವಿವರವಾದ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿ. ಕಾರ್ಯಕ್ರಮಕ್ಕೆ ಆಯ್ಕೆಯಾದ ಬಗ್ಗೆ ನೀವು ನೀಡಿರುವ ಇ-ಮೇಲ್ ವಿಳಾಸಕ್ಕೆ ಇಸ್ರೋದಿಂದ ಸಂದೇಶ ರವಾನೆಯಾಗಲಿದೆ.

ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಭಾಗವಾಗುವಂತೆ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಲಾಗುತ್ತದೆ ಎಂದು ಇಸ್ರೋ ಹೇಳಿದೆ.

ಆಯ್ಕೆ ಹೇಗೆ ಮಾಡಲಾಗುತ್ತದೆ.

ತರಗತಿಯಲ್ಲಿ ಪಡೆದಿರುವ ಅಂಕಗಳು ಮುಖ್ಯವಾಗುತ್ತವೆ. ಇದರ ಪೈಕಿ ಶೇ.50 ಅಂಕಗಳನ್ನು ಪರಿಗಣಿಸಲಾಗುತ್ತದೆ.

ವಿದ್ಯಾರ್ಥಿಗಳು ಆನ್‌ಲೈನ್ ಕ್ವಿಜ್‌ನಲ್ಲಿ ಭಾಗಿಯಾಗಬೇಕಿದ್ದು, ಇದರಲ್ಲಿ ಪಡೆದ ಅಂಕಗಳ ಶೇ.10 ಅನ್ನು ತೆಗೆದುಕೊಳ್ಳಲಾಗುತ್ತದೆ. ಜಿಲ್ಲಾ, ರಾಜ್ಯ, ಹಾಗೂ ರಾಷ್ಟ್ರೀಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗಿಯಾಗಿ ವಿಜೇತರಾಗಿದ್ದರೆ, ಅನುಕ್ರಮವಾಗಿ ಶೇ.2, 4, 5 ಅಂಕಗಳಾಗಿ ಲೆಕ್ಕಕ್ಕೆ ಬರಲಿದೆ. ಒಲಿಂಪಿಯಾಡ್ ಅಥವಾ ತತ್ಸಮಾನ ಸ್ಪರ್ಧೆಯಲ್ಲಿ ವಿಜೇತರಾದಲ್ಲಿ ಶೇ.2, 4, 5 ಅಂಕಗಳನ್ನು ನೀಡಲಾಗುತ್ತದೆ. ಕ್ರೀಡಾ ಸಾಧನೆಗೂ ಇದೇ ಮಾನದಂಡ ಅನ್ವಯವಾಗಲಿದೆ. ಇದಲ್ಲದೆ, ಸೈಟ್ ಆ್ಯಂಡ್ ಗೈಡ್ಸ್, ಎನ್‌ಸಿಸಿ ಕೆಡೆಟ್‌ಗಳಾಗಿದ್ದಲ್ಲಿ ಶೇ.5 ಅಂಕ ನೀಡಲಾಗುತ್ತದೆ. ಕೊನೆಯದಾಗಿ ಹಾಗೂ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೇ.15 ಅಂಕಗಳು ದೊರೆಯಲಿವೆ. ಹೀಗಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ದೊರೆಯಲಿದೆ.

ಅಂಕ ಪರಿಗಣನೆಯ ವಿವರ:

ಎಂಟನೇ ತರಗತಿಯಲ್ಲಿ ಪಡೆದ ಅಂಕಗಳು- ಶೇ .50

ಆನ್‌ಲೈನ್ ಕ್ವಿಜ್- ಶೇ.10

ವಿಜ್ಞಾನ ಪ್ರದರ್ಶನದಲ್ಲಿ ವಿಜೇತರು (ಜಿಲ್ಲೆ/ರಾಜ್ಯ/ರಾಷ್ಟ್ರೀಯ ಮಟ್ಟದ)- ಶೇ2/5/10

ಒಲಿಂಪಿಯಾಡ್/ ತತ್ಸಮಾನ ಸ್ಪರ್ಧೆ- ಶೇ.2/4/5

ಕ್ರೀಡಾ ಸಾಧನೆ- ಶೇ .2/4/5

ಸ್ಕೌಟ್ ಆ್ಯಂಡ್ ಗೈಡ್ಸ್/ ಎನ್‌ಸಿಸಿ ಕೆಡೆಟ್‌ ಗಳು- ಶೇ.5

ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳಲ್ಲಿ ವ್ಯಾಸಂಗ-ಶೇ.15

ಪ್ರಮುಖ ದಿನಗಳು

ನೋಂದಣಿಗೆ ಕೊನೆಯ ದಿನ: ಮಾರ್ಚ್-23

ಮೊದಲ ಆಯ್ಕೆ ಪಟ್ಟಿ ಬಿಡುಗಡೆ- ಏ.7

ಇಸ್ರೋ ಕೇಂದ್ರಕ್ಕೆ ಹಾಜರಾಗುವುದು-ಮೇ 18

ಕಾರ್ಯಕ್ರಮ ಅವಧಿ- ಮೇ-19-30

ಬೀಳ್ಕೊಡುಗೆ ಕಾರ್ಯಕ್ರಮ-ಮೇ-31

 

ನೋಂದಣಿ ಮಾಡಲು – CLICK HERE

ಹೆಚ್ಚಿನ ಮಾಹಿತಿಗಾಗಿ – CLICK HERE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

16 thoughts on “ISRO-YUVIKA or young scientist programme-2025”

Leave a Comment

error: Content is protected !!