ITR: ಐಟಿಆರ್ ಸಲ್ಲಿಕೆ ವೇಳೆ 6 ತಪ್ಪುಗಳನ್ನು ಮಾಡದಿರಿ!

Table of Contents

ITR: ಐಟಿಆರ್ ಸಲ್ಲಿಕೆ ವೇಳೆ 6 ತಪ್ಪುಗಳನ್ನು ಮಾಡದಿರಿ!

ITR: ಐಟಿಆರ್ ಸಲ್ಲಿಸುವುದು ನಿಮ್ಮ ಜವಾಬ್ದಾರಿ. ಜತೆಗೆ ಇದು ನಿಮ್ಮ ಹಣಕಾಸಿನ ಸಾಮರ್ಥ್ಯಕ್ಕೆ ದೃಢೀಕರಣ ಪತ್ರದಂತಿದ್ದು, ನಿಮ್ಮ ವಿಶ್ವಾಸಾರ್ಹತೆಯೂ ವೃದ್ಧಿಯಾಗುತ್ತದೆ. ಗಡುವಿನೊಳಗೆ ಐಟಿಆರ್ ಸಲ್ಲಿಸಿ. ತರಾತುರಿಯಲ್ಲಿ ತಪ್ಪುಗಳನ್ನು ಮಾಡಬೇಡಿ. ನೀವು ಮಾಡಬಹುದಾದ ತಪ್ಪುಗಳು, ಐಟಿಆರ್ ವಿಳಂಬ ಶುಲ್ಕಕ್ಕಿಂತ ದುಬಾರಿಯಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಬಹುತೇಕರು ಮಾಡುವ ತಪ್ಪುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಆದಾಯ ತೆರಿಗೆ ಲೆಕ್ಕಪತ್ರ (ITR) ವಿವರ ಸಲ್ಲಿಕೆಯ ಸೆಪ್ಟೆಂಬರ್ 15ರ ಗಡುವು ಸಮೀಪ ದಲ್ಲಿದೆ. ಲಕ್ಷಾಂತರ ಜನರು ಕೊನೆಯ ಕ್ಷಣದಲ್ಲಿ ಮಾಹಿತಿ ಸಲ್ಲಿಸಲು ಧಾವಂತದಲ್ಲಿದ್ದಾರೆ. ಅವಸರದಲ್ಲಿ ರಿಟರ್ನ್ಸ್ ಸಲ್ಲಿಸುವುದರಿಂದ ತಪ್ಪುಗಳಾಗ ಬಹುದು. ವಿಳಂಬ ಶುಲ್ಕ ಪಾವತಿಯಷ್ಟೇ ಅಲ್ಲದೆ, ದೋಷಪೂರಿತ ವಿವರ, ಅದಕ್ಕೆ ಪ್ರತಿಯಾಗಿ ನೋಟಿಸ್, ಮರುಪಾವತಿ ವಿಳಂಬಗಳು ಆಗಬಹುದು. ಅಲ್ಲದೇ, ಲೆಕ್ಕಪರಿಶೋಧನೆಗೂ ದಾರಿ ಮಾಡಿಕೊಡಬಹುದು.

ಸದ್ಯಕ್ಕೆ ದೇಶಿ ತೆರಿಗೆ ವ್ಯವಸ್ಥೆಯು ಸಂಪೂರ್ಣವಾಗಿ ಡಿಜಿಟಲೀಕರಣವಾಗಿದೆ. ಕೃತಕ ಬುದ್ದಿಮತ್ತೆ ಚಾಲಿತ ಪರಿಶೀಲನೆ, ನೈಜ ಸಮಯದ ದತ್ತಾಂಶ ಹೊಂದಾಣಿಕೆ, ಮಾಹಿತಿ ಒದಗಿಸುವಿಕೆಯ ಕಟ್ಟುನಿಟ್ಟಾದ ನಿಬಂಧನೆಗಳು ಮತ್ತು ಪರಿಷ್ಕೃತ ಐಟಿಆರ್ ಸ್ವರೂಪಗಳಿಂದಾಗಿ ತೆರಿಗೆದಾರನ ತಪ್ಪುಗಳನ್ನು ತಕ್ಷಣವೇ ಗುರುತಿಸಬಹುದಾಗಿದೆ. ಮೂಲದಲ್ಲಿಯೇ ತೆರಿಗೆ ಕಡಿತದಲ್ಲಿನ(TDS) ಪ್ರತಿಯೊಂದು ಮಾಹಿತಿಯು ಹೊಂದಿಕೆಯಾಗದಿರುವುದು, ಸ್ವಯಂ ಘೋಷಣೆ ಮಾಡದಿರುವುದು ಹಾಗೂ ತಪ್ಪಾಗಿ ವರದಿ ಮಾಡಲಾದ ವಿವರಗಳು ಸಮಸ್ಯೆಯಾಗಬಹುದು.

ತೆರಿಗೆ ಮರುಪಾವತಿ ಸ್ಥಗಿತ, ದಂಡ ಅಥವಾ ಸ್ವಯಂಚಾಲಿತ ಅಧಿಸೂಚನೆಗಳಿಗೆ ಕಾರಣವಾಗಬಹುದು. ಸಣ್ಣ ತಪ್ಪು ನಿಜಕ್ಕೂ ದೊಡ್ಡದುರಂತಕ್ಕೂ ಕಾರಣವಾಗಬಹುದು.

ತೆರಿಗೆದಾರರು ಹೆಚ್ಚಾಗಿ ಎಡವಿ ಬೀಳುವುದು ಇಲ್ಲಿಯೇ. ಆದಾಯ ತೆರಿಗೆಗೆ ಸಂಬಂಧಿಸಿದ ನಿಯಮ ಗಳನ್ನು ಪಾಲಿಸುವುದು ಭಾರತದ ಹೊಸ ಡಿಜಿಟಲ್ ಸ್ವರೂಪದ ಐಟಿ ರಿಟರ್ನ್ಸ್ ಸಲ್ಲಿಕೆಗೆ ಕಡ್ಡಾಯವಾಗಿದೆ. ಐಟಿ ರಿಟರ್ನ್ಸ್ ವೇಳೆ ಆಗಬಹುದಾದ 6 ತಪ್ಪುಗಳು ಹೀಗಿವೆ:



ದಾಖಲಿಸದ ಆದಾಯ ಮೂಲಗಳು:



ಆನೇಕ ತೆರಿಗೆದಾರರು ಸಂಬಳದ ವಿವರಗಳನ್ನು ಮಾತ್ರ ರಿಟರ್ನ್ಸ್‌ನಲ್ಲಿ ದಾಖಲಿಸುತ್ತಾರೆ. ಬಡ್ಡಿ, ಲಾಭಾಂಶ, ಬಾಡಿಗೆ ಆದಾಯ ಅಥವಾ ಸ್ವತಂತ್ರ ಗಳಿಕೆಯಂತಹ ಇತರ ಆದಾಯ ಮೂಲಗಳನ್ನು ಉಲ್ಲೇಖಿಸುವುದನ್ನು ಮರೆಯುತ್ತಾರೆ ಇಲ್ಲವೆ ನಿರ್ಲಕ್ಷಿಸುತ್ತಾರೆ. 2025ರಲ್ಲಿ ಬಹಿರಂಗಪಡಿಸದ ಆದಾಯವು ಸ್ವಯಂಚಾಲಿತ ನೋಟಿಸ್ ಗಳಿಗೆ ಕಾರಣವಾಗಿ, ಸಾವಿರಾರು ಮರುಪಾವತಿಗಳು ವಿಳಂಬವಾದವು. ಅರ್ಜಿ ನಮೂನೆ 26 ಎಎಸ್ ಮತ್ತು ಬ್ಯಾಂಕ್ ಖಾತೆಯ ವಿವರಗಳು ದುಬಾರಿ ಅನುಸರಣೆಗಳನ್ನು ತಡೆಯಬಹುದು.



ಹೊಂದಿಕೆಯಾಗದ ಫಾರ್ಮ್ 16, 26 ಎಎಸ್ ಅಥವಾ ಎಐಎಸ್:



ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್) ಹೊಂದಾಣಿಕೆ ಯಾಗದಿರುವುದು ಅಥವಾ ಬಹಿರಂಗಪಡಿಸದ ಆದಾಯವು ಮರುಪಾವತಿಯನ್ನು ತಕ್ಷಣವೇ ಸ್ಥಗಿತಗೊಳಿ ಸುತ್ತದೆ. 2025ರಲ್ಲಿ ಸಂಬಳ, ಬಡ್ಡಿ ಮತ್ತು ಹೂಡಿಕೆ ಆದಾಯಕ್ಕೆ ಸಂಬಂಧಿಸಿದಂತೆ ಹೊಂದಾಣಿಕೆಯಾಗದ ಲಕ್ಷಾ ಂತರ ರಿಟರ್ನ್ಗಳನ್ನು ಪರಾಮರ್ಶೆಗೆ ಒಳಪಡಿಸಲಾಗಿದೆ. ಸಲ್ಲಿಕೆಯಾಗುವ ಎಲ್ಲಾ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಆದಾಯ ತೆರಿಗೆ ವ್ಯವಸ್ಥೆಯು ಎಲ್ಲವನ್ನೂ ಪರಾಮರ್ಶಿಸುತ್ತದೆ ಎನ್ನುವುದನ್ನು ಮರೆಯಬೇಡಿ.



ಆದಾಯ, ವಹಿವಾಟಿನ ವಿವರ ಮುಚ್ಚಿಡಬೇಡಿ:



ವರ್ಚುವಲ್ ಡಿಜಿಟಲ್ ಸ್ವತ್ತುಗಳು, ವಿದೇಶಿ ಖಾತೆಗಳು ಮತ್ತು ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಪತ್ತೆಹಚ್ಚಬಹುದು. ಆದಾಯದ ಮೂಲಗಳನ್ನು ಬಹಿರಂಗ ಪಡಿಸದಿರುವುದಕ್ಕೆ ತೆರಿಗೆ ಬಾಕಿಯ ಶೇಕಡ 200ರವರೆಗೆ ದಂಡ ವಿಧಿಸಬಹುದಾಗಿದೆ. ಪ್ರತಿಯೊಂದು ವಹಿವಾಟು, ವರ್ಗಾವಣೆ ಅಥವಾ ಡಿಜಿಟಲ್ ವಹಿವಾಟು ನಷ್ಟಕ್ಕೆ ಗುರಿಯಾಗಿದ್ದರೂ ನಿಖರವಾಗಿ ಮಾಹಿತಿ ನೀಡಬೇಕು.



ದೋಷಪೂರಿತ ಕಡಿತಗಳು ಅಥವಾ ಬ್ಯಾಂಕ್ ವಿವರಗಳು:



80 ಸಿ ಕ್ಷೇಮ್‌ಗಳಲ್ಲಿನ ತಪ್ಪುಗಳು ಅಥವಾ ಪರಿಶೀಲಿಸದ ಬ್ಯಾಂಕ್ ಖಾತೆಗಳು ಮರುಪಾವತಿಯನ್ನು ವಿಳಂಬಗೊಳಿ ಸುತ್ತವೆ. ಆದಾಯ ಲೆಕ್ಕಪತ್ರ ವಿವರ ಸಲ್ಲಿಸುವ ಮೊದಲು ಶಾಶ್ವತ ಖಾತೆ ಸಂಖ್ಯೆ (ಪ್ಯಾನ್), ಆಧಾರ್, ಐಎಫ್ಎಸಿ ಮತ್ತು ಬ್ಯಾಂಕ್ ಖಾತೆಗಳನ್ನು ಮೊದಲೇ ದೃಢಿಕರಿಸಿಕೊಳ್ಳಿ. ಮಾಹಿತಿ ನಿಖರತೆಯು ನಿಮ್ಮ ಮರುಪಾವತಿಯು ಸಮಯಕ್ಕೆ ಸರಿಯಾಗಿ ನಿಮ್ಮ ಖಾತೆಗೆ ಜಮಾ ಆಗಲಿದೆಯೇ ಎಂಬುದರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.



ಇ-ಪರಿಶೀಲನೆ ಮರೆಯದಿರಿ:



ಕೊನೆಯ ಹಂತದಲ್ಲಿ ರಿಟರ್ನ್ಸ್ ಸಲ್ಲಿಸುವವರಲ್ಲಿ ಸುಮಾರು ಜನರು 30 ದಿನಗಳಲ್ಲಿ ಇ-ಪರಿಶೀಲನೆ (ಇ-ವೆರಿಫಿಕೇಷನ್) ಮಾಡಲು ವಿಫಲರಾಗುತ್ತಾರೆ. ಇದು ಅವರ ರಿಟರ್ನ್ ಅನ್ನು ರದ್ದುಗೊಳಿಸುತ್ತದೆ. ಆಧಾರ್‌ನ ಒಟಿಪಿ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿಯೇ ಇ-ವೆರಿಫಿಕೇಷನ್ ಮುಗಿಸಬಹುದು. ಐಟಿಆರ್ ಬಳಿಕ ಈ ಹಂತವನ್ನು ಬಿಟ್ಟುಬಿಡಬೇಡಿ.



ವಾಯಿದಾ (ಎಫ್‌ ಆ್ಯಂಡ್‌ಒ) ಆದಾಯದ ತಪ್ಪು ವರದಿ:


ಷೇರುಪೇಟೆಯಲ್ಲಿನ ಪ್ಯೂಚರ್ ಆ್ಯಂಡ್ ಆ್ಯಪ್ಸನ್ ವಹಿವಾಟಿನ ಆದಾಯವು ವಹಿವಾಟಿನ ಆದಾಯ ವಾಗಿರಲಿದೆಯೇ ಹೊರತು ಬಂಡವಾಳ ಗಳಿಕೆಯಲ್ಲ, ಇಂತಹ ಆದಾಯವನ್ನು ತಪ್ಪಾಗಿ ವರ್ಗೀಕರಿಸುವುದು ನೋಟಿಸ್‌ಗಳು ಬರಲು ಕಾರಣವಾಗುತ್ತದೆ. 10 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ವಹಿವಾಟಿನ ಸಂಪೂರ್ಣ ಮಾಹಿತಿಯ ಲೆಕ್ಕಪತ್ರ ನೀಡುವುದು ಮತ್ತು ಐಟಿಆರ್-3 ಸಲ್ಲಿಕೆ ಕಡ್ಡಾಯವಾಗಿದೆ. ಹೊಸ ವೃತ್ತಿ ಸಂಹಿತೆಗಳು ತಪ್ಪು ವರದಿ ಮಾಡಿರುವುದನ್ನು ಸುಲಭವಾಗಿ ಪತ್ತೆಹಚ್ಚಲಿವೆ.


ದಾರಿ ಸುಲಭ ಮತ್ತು ಸರಳ:



ಗಡುವು ಮುಗಿಯುವ ಕೊನೆಯ ಹಂತದಲ್ಲಿ ಆದಾಯ ಲೆಕ್ಕಪತ್ರ ವಿವರ (ITR) ಸಲ್ಲಿಸುವುದಕ್ಕೆ ಅನೇಕರು ಮುಂದಾಗುತ್ತಾರೆ. ಆಗ ಸಮಸ್ಯೆಗಳು ಎದುರಾಗಬಹುದು. ಇದು ನಿಮ್ಮ ದಕ್ಷ ಹಣಕಾಸು ನಿರ್ವಹಣೆ ಖ್ಯಾತಿಗೆ ಕೆಟ್ಟ ಹೆಸರು ತರಬಹುದು. ನಿಖರತೆ, ಸಂಪೂರ್ಣ ಮಾಹಿತಿ ಬಹಿರಂಗಪಡಿಸುವಿಕೆ ಮತ್ತು ಸಕಾಲಿಕ ಇ-ಪರಿಶೀಲನೆ ಇನ್ನು ಮುಂದೆ ಐಚ್ಛಿಕವಾಗಿ ಉಳಿಯುವುದಿಲ್ಲ, ಲೆಕ್ಕಪರಿಶೋಧನೆಗಳು, ದಂಡಗಳು ಮತ್ತು ಸ್ಥಗಿತಗೊಳಿಸಿದ ಮರುಪಾವತಿಗಳ ವಿರುದ್ಧದ ನಿಮ್ಮ ಮೊದಲ ರಕ್ಷಣಾ ಕವಚ ಇದಾಗಿದೆ. ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಭಾರತದ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಉತ್ತಮವಾಗಿ ಸಿದ್ಧಪಡಿಸಿದ ಐಟಿ ರಿಟರ್ನ್ಸ್ ನಿಮ್ಮ ಹಣವನ್ನಷ್ಟೇ ರಕ್ಷಿಸುವುದಿಲ್ಲ. ಅದು ನಿಮ್ಮ ವಿಶ್ವಾಸಾರ್ಹತೆಯನ್ನೂ ಎತ್ತಿ ಹಿಡಿಯುತ್ತದೆ. ಜಾಣತನದಿಂದ ಐಟಿ ರಿಟರ್ನ್ಸ್ ಸಲ್ಲಿಸಿ, ಅರ್ಜಿ ನಮೂನೆಯಲ್ಲಿನ ಮಾಹಿತಿಯನ್ನೆಲ್ಲ ಪೂರ್ಣಗೊಳಿಸಿ ಮತ್ತು ನೆಮ್ಮದಿಯಿಂದ ಮುಂದುವರಿಯಿರಿ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!