Joining Time: ವರ್ಗಾವಣೆ ಸ್ಥಳ ಬದಲಾವಣೆಯಾದಲ್ಲಿ ಸೇರಿಕೆ ಕಾಲದ ಅವಧಿ ಹೇಗೆ ಪರಿಗಣಿಸಬೇಕು?
Joining Time: ಕ.ನಾ.ಸೇ ನಿಯಮಗಳು 1958ರ ನಿಯಮ 78 ರನ್ವಯ ಸರ್ಕಾರಿ ನೌಕರನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾದಾಗ ಸ್ಥಳ ಬದಲಾವಣೆಯದರೆ ಕೆಳಗಿನ ಸೇರಿಕೆ ಕಾಲದ ಅವಧಿಗೆ ಅರ್ಹನಾಗುತ್ತಾನೆ.
ಇಂತಹ ಅವಧಿಯನ್ನು ಹಳೇ ಕೇಂದ್ರಸ್ಥಾನ ಮತ್ತು ಹೊಸ ಕೇಂದ್ರ ಸ್ಥಾನಕ್ಕೆ ಇರುವ ನಡುವಣ ದೂರವನ್ನು ಪರಿಗಣಿಸಿ ಆ ನೌಕರ ಪಡೆಯಬಹುದಾದ ಸೇರಿಕೆ ಕಾಲವನ್ನು ನಿರ್ಧರಿಸಬೇಕು.
1. 1000 ಕಿ.ಮೀ. ಮತ್ತು ಕಡಿಮೆ ಇದ್ದರೆ – 10 ದಿನಗಳು
2. 1000 ಕಿ.ಮೀ. ಗಿಂತಲೂ ಹೆಚ್ಚಿದ್ದರೆ – 12 ದಿನಗಳು
3. 2000 ಕಿ.ಮೀ. ಗಿಂತಲೂ ಹೆಚ್ಚಿದ್ದರೆ 15 ದಿನಗಳು.(ವಿಮಾನದಲ್ಲಿ ಪ್ರಯಾಣಿಸಿದ್ದರೆ 12 ದಿನಗಳು ಮಾತ್ರ)
ಪೂರ್ವಾಹ್ನ ಕಛೇರಿಯಿಂದ ಬಿಡುಗಡೆಗೊಂಡ ದಿನದಿಂದ ಸೇರುವಿಕೆ ಕಾಲವನ್ನು ಲೆಕ್ಕಹಾಕತಕ್ಕದ್ದು. (12 ಗಂಟೆಯನ್ನು ಪೂರ್ವಾಹ್ನ ಎಂದು ಪರಿಗಣಿಸತಕ್ಕದ್ದು) ಮದ್ಯಾಹ್ನ ಬಿಡುಗಡೆಗೊಂಡಿದ್ದರೆ ಬಿಡುಗಡೆಗೊಂಡಿದ್ದರೆ ಸೇರುವಿಕೆ ಸಮಯವು ಮರು ದಿನದಿಂದ ಪ್ರಾರಂಭವಾಗುವುದು.
ಸರ್ಕಾರಿ ನೌಕರನ ಸೇರಿಕೆ ಕಾಲ (Joining Time) ದ ಬಗ್ಗೆ ನೀಮಗೆಷ್ಟು ಗೊತ್ತು?
1.ಸೇರಿಕೆ ಕಾಲ [joining time] ಎಂದರೇನು?
ಸರ್ಕಾರಿ ನೌಕರನು ಒಂದು ಹೊಸ ಹುದ್ದೆಗೆ ಹಾಜರಾಗಲು ಅಥವಾ ಅವನನ್ನು ನಿಯುಕ್ತಿಗೊಳಿಸಿದ ಸ್ಥಳಕ್ಕೆ ಹೋಗಲು ಅನುಮತಿಸಲಾದ ಕಾಲವನ್ನು ನಾವು ಸೇರಿಕೆ ಕಾಲ ಎಂದು ಕರೆಯುತ್ತೆವೆ.
ಕರ್ನಾಟಕ ರಾಜ್ಯ ಸೇವಾ ನಿಯಮಗಳು 1958 ರ ನಿಯಮ 8 (24)
2. ಸೇರಿಕೆ ಕಾಲ ಸರ್ಕಾರಿ ನೌಕರನಿಗೆ ಯಾವ ಸಂದರ್ಭದಲ್ಲಿ ಲಭಿಸುತ್ತದೆ?
ಯಾರೇ ಒಬ್ಬ ಸರ್ಕಾರಿ ನೌಕರನು ಸರ್ಕಾರದ ಹಿತಾಸಕ್ತಿ ಮೇರೆಗೆ ವರ್ಗಾವಣೆಯಾದಾಗ, ಆತನಿಗೆ ಆ ಹುದ್ದೆಗೆ ಹೋಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೇರಿಕೆ ಕಾಲ ಸಿಗುತ್ತದೆ.
3.ಯಾವ ಸಂದರ್ಭದಲ್ಲಿ ಒಬ್ಬ ಸರ್ಕಾರಿ ನೌಕರನಿಗೆ ಸೇರಿಕೆ ಕಾಲ ಲಭಿಸುವದಿಲ್ಲ?
ಯಾರೇ ಒಬ್ಬ ಸರ್ಕಾರಿ ನೌಕರನನ್ನು ಯಾವುದೇ ಒಂದು ವಿಶೇಷ ಕರ್ತವ್ಯಕ್ಕೆ ತಾತ್ಕಾಲಿಕವಾಗಿ ನಿಯೋಜಿಸಿದಾಗ ಮತ್ತು ಆತನ ಸ್ವಂತ ಕೋರಿಕೆಯ ಮೇಲೆ ವರ್ಗಾವಣೆಯಾದಾಗ ಆತನಿಗೆ ಆ ಸ್ಥಳವನ್ನು ಹೋಗಿ ತಲುಪಲು ಬೇಕಾಗುವ ಪ್ರಯಾಣದ ಅವಧಿಯನ್ನು ಬಿಟ್ಟು ಆತನಿಗೆ ಯಾವುದೇ ಸೇರಿಕೆ ಕಾಲ ಲಭಿಸುವುದಿಲ್ಲ.
4.ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ವರ್ಗಾವಣೆಯಿಂದ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗದೇ ಇದ್ದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ [Joining Time] ಕಾಲಾವಧಿ ಎಷ್ಟು ತಿಳಿಸಿ?
ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ವರ್ಗಾವಣೆಯಿಂದ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗದೇ ಇದ್ದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭ್ಯವಾಗುವ ಸೇರಿಕೆ ಕಾಲಾವಧಿ ಈ ಕೆಳಕಂಡಂತೆ ಇದೆ.
ಎ.ಸರ್ಕಾರಿ ನೌಕರನು ಪೂರ್ವಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜನ್ನು ವಹಿಸಿಕೊಟ್ಟಲ್ಲಿ. ಅದೇ ದಿನ ಮಧ್ಯಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜನ್ನು ವಹಿಸಿಕೊಳ್ಳತ್ತಕ್ಕದ್ದು.
ಬಿ.ಸರ್ಕಾರಿ ನೌಕರನು ಮಧ್ಯಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜನ್ನು ವಹಿಸಿಕೊಟ್ಟಲ್ಲಿ, ಮರುದಿನ ಪೂರ್ವಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜನ್ನು ವಹಿಸಿಕೊಳ್ಳತ್ತಕ್ಕದ್ದು.
ಸಿ.ಸರ್ಕಾರಿ ನೌಕರನು ಮಧ್ಯಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜನ್ನು ವಹಿಸಿಕೊಟ್ಟಲ್ಲಿ, ಮರುದಿನ ರಜಾದಿನವಾಗಿದ್ದರೆ, ಮುಂದಿನ ಕೆಲಸದ ದಿನದಂದು ಪೂರ್ವಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜನ್ನು ವಹಿಸಿಕೊಳ್ಳತ್ತಕ್ಕದ್ದು.
ಡಿ.ಸರ್ಕಾರಿ ಕಛೇರಿಗಳು ಪೂರ್ವಾಹ್ನದಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದರೆ. ವರ್ಗಾವಣೆಗೊಂಡ ಸರ್ಕಾರಿ ನೌಕರನು ತನ್ನ ಕಾವ್ಯಾಭಾರವನ್ನು ಪೂರ್ವಾಹ್ನದಲ್ಲಿ ವಹಿಸಿಕೊಟ್ಟಿದ್ದರೆ, ಆತನು ತನ್ನ ಮುಂದಿನ ಕರ್ತವ್ಯದ ಕಾರ್ಯಾಭಾರವನ್ನು ಮುಂದಿನ ಕೆಲಸದ ದಿನದ ಪೂರ್ವಾಹ್ನದಲ್ಲಿಯೇ ತನ್ನ ಕರ್ತವ್ಯದ ಚಾರ್ಜನ್ನು ತೆಗೆದುಕೊಳ್ಳತಕ್ಕದ್ದು.
5.ಪೂರ್ವಾಹ್ನವೆಂದರೆ ಎಷ್ಟು ಗಂಟೆ?
12 ಗಂಟೆಯೊಳಗಿನ ಸಮಯವನ್ನು ಪೂರ್ವಾಹ್ನವೆಂದು ಕರೆಯುವರು.
6.ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಎಷ್ಟು ತಿಳಿಸಿ?
ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ವರ್ಗಾವಣೆಯಿಂದ ಅವನ ಸ್ಥಳ/ನಿವಾಸ ಬದಲಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಈ ಕೆಳಕಂಡಂತೆ ಇದೆ.
7.ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಯಾವಾಗಿನಿಂದ ಪ್ರಾರಂಭವಾಗುತ್ತದೆ ತಿಳಿಸಿ?
ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಸೇರಿಕೆ ಕಾಲವು ಈ ಕೆಳಕಂಡಂತೆ ಪ್ರಾರಂಭವಾಗುತ್ತದೆ.
1.ಆತನು ತನ್ನ ಕರ್ತವ್ಯದ ಪ್ರಭಾರವನ್ನು ಪೂರ್ವಾಹ್ನದಲ್ಲಿ ವಹಿಸಿಕೊಟ್ಟಿದ್ದರೆ ಹಳೆಯ ಹುದ್ದೆಯ ಪ್ರಭಾರವನ್ನು ತ್ಯಜಿಸಿದ ದಿನದಿಂದ ಪ್ರಾರಂಭವಾಗುತ್ತದೆ.
2.ಆತನು ತನ್ನ ಕರ್ತವ್ಯದ ಪ್ರಭಾರವನ್ನು ಅಪರಾಹ್ನದಲ್ಲಿ ವಹಿಸಿಕೊಟ್ಟಿದ್ದರೆ ಮುಂದಿನ ದಿನದಿಂದ ಸೇರಿಕೆ ಕಾಲವು ಪ್ರಾರಂಭವಾಗುತ್ತದೆ.
8.ಯಾವನೇ ಒಬ್ಬ ಸರ್ಕಾರಿ ನೌಕರನು ವರ್ಗಾವಣೆಗೊಂಡು, ಸೇರಿಕೆ ಕಾಲವಧಿಯಲ್ಲಿದ್ದಾಗ, ಆತನನ್ನು ಮೊದಲು ವರ್ಗಾವಣೆಗೊಳಿಸಿದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದಾಗ, ಆತನಿಗೆ ಲಭ್ಯವಾಗುವ ಸೇರಿಕೆ ಕಾಲವನ್ನು ತಿಳಿಸಿ.
ಆತನು ಪರಿಷ್ಕೃತ ಆದೇಶವನ್ನು ಪಡೆಯುವುದಕ್ಕಿಂತ ಮುಂಚೆ ಬಳಸಿಕೊಂಡಿದ್ದ ಸೇರಿಕೆ ಕಾಲವನ್ನು ಬಿಟ್ಟು ಆತನು ಹೊಸದಾಗಿ ಪರಿಷ್ಕೃತ ಆದೇಶವನ್ನು ಪಡೆದ ದಿನಾಂಕದಿಂದ ಹೊಸ ಸೇರಿಕೆ ಕಾಲವು ಬಳಸಿಕೊಳ್ಳಲು ಹಕ್ಕುಳ್ಳವನಾಗಿರುತ್ತಾನೆ.
9.ಯಾವನೇ ಒಬ್ಬ ಸರ್ಕಾರಿ ನೌಕರನು ವರ್ಗಾವಣೆಗೊಂಡು ಸೇರಿಕೆ ಕಾಲವಧಿಯಲ್ಲಿದ್ದಾಗ,ಆತನನ್ನು ಮೊದಲು ವರ್ಗಾವಣೆಗೊಳಿಸಿದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದಾಗ,ಆತನಿಗೆ ಲಭ್ಯವಾಗುವ ಸೇರಿಕೆ ಕಾಲ ಯಾವತ್ತಿನಿಂದ ಅಥವಾ ಎಲ್ಲಿಂದ ಪ್ರಾರಂಭವಾಗುತ್ತದೆ ತಿಳಿಸಿ.
ಯಾವನೇ ಒಬ್ಬ ಸರ್ಕಾರಿ ನೌಕರನು ವರ್ಗಾವಣೆಗೊಂಡು ಸೇರಿಕೆ ಕಾಲವಧಿಯಲ್ಲಿದ್ದಾಗ,ಆತನನ್ನು ಮೊದಲು ವರ್ಗಾವಣೆಗೊಳಿಸಿದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದಾಗ, ಆತನು ಪರಿಷ್ಕೃತ ಆದೇಶವನ್ನು ಸ್ವೀಕರಿಸಿದ ಸ್ಥಳದಿಂದಲೇ ಆತನಿಗೆ ಸೇರಿಕೆ ಕಾಲವು ಪ್ರಾರಂಭವಾಗುತ್ತದೆ
10.ಯಾವನೇ ಒಬ್ಬ ಸರ್ಕಾರಿ ನೌಕರನನ್ನು ಅಮಾನತ್ತಿನಿಂದ ಬಿಡುಗಡೆಗೊಳಿಸಿ ಅಮಾನತ್ತಿಗೆ ಮುಂಚೆ ಅಥವಾ ಅಮಾನತ್ತಿನ ಮುಂಚಿನ ರಜೆಯ ನಿಕಟಪೂರ್ವದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಪುನರ ನೇಮಿಸಿದಾಗ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆಯೇ?
ಇಂತಹ ಸಂದರ್ಭದಲ್ಲಿ ಯಾವುದೇ ಸೇರಿಕೆ ಕಾಲವು ಲಭ್ಯವಾಗುವುದಿಲ್ಲ.
11. ಯಾವನೇ ಒಬ್ಬ ಸರ್ಕಾರಿ ನೌಕರನನ್ನು ಅಮಾನತ್ತಿನಿಂದ ಬಿಡುಗಡೆಗೊಳಿಸಿ ಅಮಾನತ್ತಿಗೆ ಮುಂಚೆ ಅಥವಾ ಅಮಾನತ್ತಿನ ಮುಂಚಿನ ರಜೆಯ ನಿಕಟಪೂರ್ವದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ನೇಮಿಸಿದಾಗ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆಯೇ?

ಇಂತಹ ಸಂದರ್ಭದಲ್ಲಿ ಸೇರಿಕೆ ಕಾಲವು ಲಭ್ಯವಾಗುತ್ತದೆ. ಆಮಾನತ್ತಿನಿಂದ ಬಿಡುಗಡೆಗೊಳಿಸಿ ಪುನರ ನೇಮಕ ಮಾಡಿದ ಆದೇಶ ಸ್ವೀಕರಿಸಿದ ದಿನಾಂಕದ ನಂತರದ ದಿನದಿಂದ ಸೇರಿಕೆ ಕಾಲವು ಲಭ್ಯವಾಗುತ್ತದೆ.
12.ಯಾವನೇ ఒబ్బ ಸರ್ಕಾರಿ ನೌಕರನನ್ನು ಅಮಾನತ್ತಿನಿಂದ ಬಿಡುಗಡೆಗೊಳಿಸಿ ಅಮಾನತ್ತಿನಲ್ಲಿದ್ದ ಅವಧಿಯಲ್ಲಿ ವಾಸಮಾಡಲು ಅನುಮತಿ ನೀಡಲಾಗಿದ್ದ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ನೇಮಕ ಮಾಡಿದಾಗ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆಯೇ?
ಇಂತಹ ಸಂದರ್ಭದಲ್ಲಿ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆ.
13.ಅಭ್ಯಾಸ ಅಥವಾ ತರಬೇತಿಯನ್ನು ಪಡೆಯಲು ಸಕ್ಷಮ ಪ್ರಾಧಿಕಾರದಿಂದ ಆದೇಶ ಪಡೆದು ರಾಜ್ಯದೊಳಗೆ ಅಥವಾ ರಾಜ್ಯದ ಹೊರಗೆ ಆದರೆ ಭಾರತದೊಳಗೆ ಪ್ರತಿನಿಯೋಜಿತನಾದಲ್ಲಿ, ಆತನಿಗೆ ಸೇರಿಕೆ ಕಾಲ ಲಭ್ಯವಾಗುತ್ತದೆಯೇ?
ಇಂತಹ ಸಂದರ್ಭದಲ್ಲಿ ಆತನಿಗೆ ಯಾವುದೇ ಸೇರಿಕೆ ಕಾಲ ಲಭ್ಯವಾಗುವುದಿಲ್ಲ. ಯಾಕೆಂದರೆ ತರಬೇತಿಗೆ ನಿಕಟಪೂರ್ವದಲ್ಲಿ ಹಾಗೂ ಆನಂತರದ ಪ್ರಯಾಣದ ಅವಧಿಯನ್ನು ತರಬೇತಿಯ ಭಾಗವೆಂದು ಪರಿಗಣಿಸಲಾಗುವುದು ಹಾಗೂ ತರಬೇತಿಯ ಅವಧಿಯನ್ನು ಕರ್ತವ್ಯದ ಮೇಲಿನ ಅವಧಿಯೆಂದು ಪರಿಗಣಿಸಲಾಗುವುದು.
14.ತರಬೇತಿಗೆ ಮುಂಚೆ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಿಂದ ಬೇರೆಯಾದ ಸ್ಥಳಕ್ಕೆ ಆತನನ್ನು ನಿಯುಕ್ತಿಗೊಳಿಸಿದರೆ (ಇಲ್ಲಿ ವರ್ಗಾವಣೆ ಎನ್ನುವ ಪದವನ್ನು ಬಳಸಿರುವುದಿಲ್ಲ) ಅವನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆಯೇ?
ಇಂತಹ ಸಂದರ್ಭದಲ್ಲಿ ಆತನಿಗೆ ಸೇರಿಕೆ ಕಾಲವು ಸಿಗುತ್ತದೆ.
15.ಯಾವನೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರನನ್ನು ಕೇಂದ್ರ ಸರ್ಕಾರ ಅಥವಾ ಇತರ ರಾಜ್ಯ ಸರ್ಕಾರ ಅಥವಾ ಸಂಸ್ಥೆಯೊಂದಕ್ಕೆ ಪ್ರತಿನಿಯೋಜನೆಯ ಮೇಲೆ ವರ್ಗಾವಣೆ ಹೊಂದಿದಾಗ ಆತನಿಗೆ ಸೇರಿಕೆ ಕಾಲವು ಯಾವ ನಿಯಮಗಳಿಗೆ ಅನುಗುಣವಾಗಿ ಲಭಿಸುತ್ತವೆ?
ಸರ್ಕಾರಿ ನೌಕರನನ್ನು ಕೇಂದ್ರ ಸರ್ಕಾರ ಅಥವಾ ಇತರೆ ರಾಜ್ಯ ಸರ್ಕಾರ ಅಥವಾ ಸಂಸ್ಥೆಯೊಂದಕ್ಕೆ ಪ್ರತಿನಿಯೋಜನೆ ಮಾಡಿದಾಗ ಆ ಸರ್ಕಾರದ ನೌಕರರಿಗೆ ಅನ್ವಯಿಸುವ ನಿಯಮಗಳ ಅಡಿಯಲ್ಲಿ ಸೇರಿಕೆ ಕಾಲವು ಲಭಿಸುತ್ತದೆ.
16.ಯಾವನೇ ಕೇಂದ್ರ ಸರ್ಕಾರಿ ನೌಕರನನ್ನು ಅಥವಾ ಇತರ ರಾಜ್ಯ ಸರ್ಕಾರದ ನೌಕರನನ್ನು ಅದರಲ್ಲಿನ ಯಾವುದೇ ಇತರ ಸಂಸ್ಥೆಯ ನೌಕರನನ್ನು ಕರ್ನಾಟಕ ರಾಜ್ಯ ಸರ್ಕಾರದ ಹುದ್ದೆಗೆ ಪ್ರತಿನಿಯೋಜನೆ ಮೇಲೆ ನೇಮಕ ಮಾಡಿದಾಗ ಆತನಿಗೆ ಸೇರಿಕೆ ಕಾಲವು ಯಾವ ನಿಯಮಗಳ ಅಡಿಯಲ್ಲಿ ಲಭಿಸುತ್ತದೆ?
ಕರ್ನಾಟಕ ರಾಜ್ಯ ಸರ್ಕಾರಿ ಸೇವಾ ನಿಯಮಗಳ ಅಡಿಯಲ್ಲಿ ಅಂತ ಸರ್ಕಾರಿ ನೌಕರನಿಗೆ ಸೇರಿಕೆ ಕಾಲವು ಲಭಿಸುತ್ತದೆ.
17.ಸರ್ಕಾರಿ ನೌಕರನಿಗೆ ಸರ್ಕಾರಿ ಹಿತಾಸಕ್ತಿಯಲ್ಲಿ ವರ್ಗಾವಣೆಯಾದಾಗ ಆತನಿಗೆ ಲಭಿಸುವ ಸೇರಿಕೆ ಕಾಲದೊಂದಿಗೆ ಸಾಂದರ್ಭಿಕ ರಜೆಯನ್ನು ಸೇರಿಸಲು ಅಥವಾ ಮುಂದುವರೆಸಲು ಅವಕಾಶ ಇದೆಯಾ?
ಸರ್ಕಾರಿ ನೌಕರನಿಗೆ ಸರ್ಕಾರಿ ಹಿತಾಸಕ್ತಿಯಲ್ಲಿ ವರ್ಗಾವಣೆಯಾದಾಗ ಆತನಿಗೆ ಲಭಿಸುವ ಸೇರಿಕೆ ಕಾಲದೊಂದಿಗೆ ಸಾಂದರ್ಭಿಕ ರಜೆಯನ್ನು ಸೇರಿಸಲು ಅಥವಾ ಮುಂದುವರೆಸಲು ಸಾಧ್ಯವಿಲ್ಲ.
18.ಯಾವನೇ ಸರ್ಕಾರಿ ನೌಕರನು ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಾವಣೆ ಮಾಡಿದ್ದರೆ ಆಂಥ ಸರ್ಕಾರಿ ನೌಕರನ ಕೋರಿಕೆಯ ಮೇರೆಗೆ ಅಂಥ ವರ್ಗಾವಣೆಯಾದ ದಿನಾಂಕದಂದು ಅವನಿಗೆ ರಜೆ ನೀಡಬಹುದೇ?
ಯಾವನೇ ಸರ್ಕಾರಿ ನೌಕರನು ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಾವಣೆ ಮಾಡಿದ್ದರೆ ಅಂಥ ಸರ್ಕಾರಿ ನೌಕರನ ಕೋರಿಕೆಯ ಮೇರೆಗೆ ಅಂಥ ವರ್ಗಾವಣೆಯಾದ ದಿನಾಂಕದಂದು ಅವನು ಹೊಂದಿರುವ ಮತ್ತು ಪಡೆಯಬಹುದಾದ ಯಾವುದೇ ಬಗೆಯ ರಜೆಯನ್ನು ಅವನಿಗೆ ನೀಡಬಹುದು.ಆದರೆ ಅವನಿಗೆ ನೀಡುವ ರಜೆಯು ಆತನಿಗೆ ಲಭಿಸುವ ಸೇರಿಕೆ ಕಾಲವನ್ನು ಮೀರಬಾರದು.
19.ಸೇರಿಕೆ ಕಾಲವನ್ನು ಯಾವ ರಜೆಯೊಂದಿಗೆ ಸಂಯೋಜಿಸಿ ನೀಡಬಹುದು?
ಸೇರಿಕೆ ಕಾಲವನ್ನು ಸಾಂದರ್ಭಿಕ ರಜೆಯನ್ನು ಹೊರತುಪಡಿಸಿ ಇತರ ಯಾವುದೇ ಬಗೆಯ ರಜೆಯೊಂದಿಗೆ ಸೇರಿಸಬಹುದು.
20. ವರ್ಗಾವಣೆಯಾದ ಸರ್ಕಾರಿ ನೌಕರನಿಗೆ ರಜೆ ನೀಡಬಹುದೇ?
ಸರ್ಕಾರಿ ನೌಕರನಿಗೆ ವರ್ಗಾವಣೆ ಹೊಂದಿ ರಜೆ ಕೋರಿದರೆ, ವೈದ್ಯಕೀಯ ಕಾರಣದ ಹೊರತು ಬೇರಾವುದೇ ಕಾರಣಕ್ಕೆ ಅವನಿಗೆ ರಜೆಯನ್ನು ನೀಡತಕ್ಕದ್ದಲ್ಲ.(ದೀರ್ಘಕಾಲದ ರಜೆ).
21.ಯಾವನೇ ರಾಜ್ಯ ಸರ್ಕಾರಿ ನೌಕರನು ವಿದೇಶದಲ್ಲಿ ವ್ಯಾಸಂಗ ಅಥವಾ ತರಬೇತಿಗಾಗಿ ರಜೆಯನ್ನು ಪಡೆದು ಹಿಂತಿರುಗುವ ಸರ್ಕಾರಿ ನೌಕರನು ಅವನ ನೇಮಕಾತಿಯ ಸ್ಥಳ ಯಾವುದೇ ಇರಲಿ ಅಥವಾ ರಜಾವಧಿಯ ಎಷ್ಟೆ ಆಗಿರಲಿ ಆ ಸರ್ಕಾರಿ ನೌಕರನಿಗೆ ಎಷ್ಟು ದಿವಸ ಸೇರಿಕೆ ಕಾಲ ಲಭಿಸುತ್ತದೆ?
7 ದಿವಸಗಳ ಕಾಲ ಸೇರಿಕೆ ಕಾಲ ಲಭಿಸುತ್ತದೆ
22.ರಜೆಗಳನ್ನು ಸೇರಿಕೆ ಕಾಲದ ಮುಂಚೆನೇ ನೀಡಬಹುದೇ?
ರಜೆಗಳನ್ನು ಸೇರಿಕೆ ಕಾಲದ ನಂತರ ಸೇರಿಸಬಹುದು ಹೊರತು ಸೇರಿಕೆ ಕಾಲದ ಮೊದಲಲ್ಲಿ පවු.
23.ಸರ್ಕಾರಿ ನೌಕರನಿಗೆ ಆತನ ವರ್ಗಾವಣೆಯಿಂದ ಲಭಿಸುವ ಸೇರಿಕೆ ಕಾಲವನ್ನು ಕಡಿತಗೊಳಿಸಬಹುದೇ?
ಹೌದು ಸೇರಿಕೆ ಕಾಲವನ್ನು ಕಡಿತಗೊಳಿಸಬಹುದು.
24.ಸೇರಿಕೆ ಕಾಲವನ್ನು ಯಾರು ಕಡಿತಗೊಳಿಸಬಹುದು?
ಸರ್ಕಾರಿ ನೌಕರನ ವರ್ಗಾವಣೆ ಪ್ರಾಧಿಕಾರವು ಸೇರಿಕೆ ಕಾಲವನ್ನು ಕಡಿತಗೊಳಿಸಬಹುದು.
25.ಸೇರಿಕೆ ಕಾಲವನ್ನು ವಿಸ್ತರಿಸಬಹುದೇ?
ಸೇರಿಕೆ ಕಾಲವನ್ನು ವಿಸ್ತರಿಸಬಹುದು.
26.ಸೇರಿಕೆ ಕಾಲವನ್ನು ವಿಸ್ತರಿಸುವ ಅಧಿಕಾರ ಯಾರಿಗೆ ಇದೆ?
ಸೇರಿಕೆ ಕಾಲವನ್ನು ವಿಸ್ತರಿಸುವ ಅಧಿಕಾರ ಈ ಕೆಳಕಂಡವರಿಗೆ ಇದೆ
ಎ.ಇಲಾಖಾ ಮುಖ್ಯಸ್ಥರು
ಬಿ.ರಾಜ್ಯ ಸರ್ಕಾರ
27.ಇಲಾಖಾ ಮುಖ್ಯಸ್ಥರು ಸೇರಿಕೆ ಕಾಲವನ್ನು ಎಷ್ಟು ದಿನಗಳ ವಿಸ್ತರಿಸಬಹುದು?
ಇಲಾಖಾ ಮುಖ್ಯಸ್ಥರು 15 ದಿನಗಳವರೆಗೆ ಸೇರಿಕೆ ಕಾಲವನ್ನು ವಿಸ್ತರಿಸಬಹುದು.
28.ರಾಜ್ಯ ಸರ್ಕಾರ ಸೇರಿಕೆ ಕಾಲವನ್ನು ಎಷ್ಟು ದಿನಗಳ ಕಾಲ ವಿಸ್ತರಿಸಬಹುದು?
15 ದಿನಗಳಿಗಿಂತ ಹೆಚ್ಚಿಗೆ ಸೇರಿಕೆ ಕಾಲವನ್ನು ವಿಸ್ತರಿಸಬಹುದು.
29.ಸರ್ಕಾರಿ ನೌಕರನಿಗೆ ವರ್ಗಾವಣೆಯಿಂದ ಲಭಿಸುವ ತನ್ನ ಸೇರಿಕೆ ಕಾಲವನ್ನು ಬಳಸದೇ ಇದ್ದಾಗ ಆ ಸೇರಿಕೆ ಕಾಲವನ್ನು ಏನು ಮಾಡಬೇಕು?
ಸರ್ಕಾರಿ ನೌಕರನಿಗೆ ವರ್ಗಾವಣೆಯಿಂದ ಲಭಿಸುವ ತನ್ನ ಸೇರಿಕೆ ಕಾಲವನ್ನು ಬಳಸದೇ ಇದ್ದಾಗ ಆ ಸೇರಿಕೆ ಕಾಲವನ್ನು ಗಳಿಕೆ ರಜೆಯಾಗಿ ಪರಿವರ್ತಿಸಿ ಆತನ ಗಳಿಕೆ ರಜದ ಲೆಕ್ಕಕ್ಕೆ ಸೇರಿಸಬಹುದು.
30.ಸೇರಿಕೆ ಕಾಲದ ಮೇಲೆ ಇರುವ ಸರ್ಕಾರಿ ನೌಕರನನ್ನು ಕರ್ತವ್ಯದ ಮೇಲೆ ಇದ್ದಾನೆಂದು ಪರಿಗಣಿಸಬಹುದೇ?
ಸೇರಿಕೆ ಕಾಲದ ಮೇಲೆ ಇರುವ ಸರ್ಕಾರಿ ನೌಕರನನ್ನು ಕರ್ತವ್ಯದ ಮೇಲೆ ಇದ್ದಾನೆಂದು ಪರಿಗಣಿಸಬೇಕು.
31.ಸೇರಿಕೆ ಕಾಲವನ್ನು ಸರ್ಕಾರಿ ನೌಕರನ ವೇತನ ಬಡ್ತಿಗೆ ಪರಿಗಣಿಸಬಹುದೇ?
ಸೇರಿಕೆ ಕಾಲವನ್ನು ಸರ್ಕಾರಿ ನೌಕರನ ವೇತನ ಬಡ್ತಿಗೆ ಪರಿಗಣಿಸಬೇಕು.
32.ಸೇರಿಕೆ ಕಾಲವನ್ನು ಬಳಸಿಕೊಂಡ ನಂತರ ಸರ್ಕಾರಿ ನೌಕರನು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಇದ್ದಾಗ ಅದು ಗೈರು ಹಾಜರಿ ಆಗುತ್ತದೆಯೇ?
ಹೌದು ಅದು ಕೆ.ಸಿ.ಎಸ್.ಆರ್.ನಿಯಮ 106 ಎ ಅಡಿಯಲ್ಲಿ ಆನಧಿಕೃತ ಗೈರು ಹಾಜರಿ ಆಗುತ್ತದೆ.
33.ಸೇರಿಕೆ ಕಾಲದ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ಸೇವಾ ನಿಯಮಗಳು 1958 ರ ಯಾವ ಯಾವ ನಿಯಮಗಳು ಹೇಳುತ್ತವೆ?
ಕರ್ನಾಟಕ ರಾಜ್ಯ ಸರ್ಕಾರಿ ಸೇವಾ ನಿಯಮಗಳು 1958 ರ ನಿಯಮ 76 ರಿಂದ 90 ರವರೆಗೆ ಸರ್ಕಾರಿ ನೌಕರನಿಗೆ ಆತನ ವರ್ಗಾವಣೆಯಿಂದ ಲಭಿಸುವ ಸೇರಿಕೆ ಕಾಲದ ಬಗ್ಗೆ ಹೇಳುತ್ತವೆ.
34.ಸೇರಿಕೆ ಕಾಲ ವನ್ನು ವ್ಯಾಖ್ಯಾನಿಸಲಾಗಿದೆಯಾ?
ಹೌದು,ಸೇರಿಕೆ ಕಾಲವನ್ನು ವ್ಯಾಖ್ಯಾನಿಸಲಾಗಿದೆ.ಕರ್ನಾಟಕ ರಾಜ್ಯ ಸರ್ಕಾರಿ ಸೇವಾ ನಿಯಮಗಳು 1958 ನಿಯಮ 8(24) ರಲ್ಲಿ ಹೇಳಲಾಗಿದೆ.
35.ಕರ್ನಾಟಕ ರಾಜ್ಯ ಸರ್ಕಾರಿ ಸೇವಾ ನಿಯಮಗಳು 1958 ರ 76 ರಿಂದ 90 ವರೆಗಿನ ನಿಯಮಗಳನ್ನು ವಿವರಿಸಿ.




ಇದನ್ನೂ ನೋಡಿ…….ಒಮ್ಮೆ ಉತ್ತೀರ್ಣರಾದರೆ 4 ವರ್ಷ ಸ್ಕಾಲರ್‌ಶಿಪ್,ವಾರ್ಷಿಕ 12 ಸಾವಿರ ರೂ. ಶಿಷ್ಯವೇತನ