Kalika Deepa programme-2025 ಕಲಿಕಾ ದೀಪ ಕಾರ್ಯಕ್ರಮ|ಆಯ್ದ ಶಾಲೆಗಳಲ್ಲಿ ಅನುಷ್ಠಾನ
Kalika Deepa programme-2025: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಆಯ್ದ 1145 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ 4 ರಿಂದ 6ನೇ ತರಗತಿವರೆಗೆ ಓದುತ್ತಿರುವ 1,44,062 ವಿದ್ಯಾರ್ಥಿಗಳಲ್ಲಿ ಕನ್ನಡ ಮತ್ತು ಆಂಗ್ಲಭಾಷೆಯನ್ನು ಓದಲು ಮತ್ತು ಗಣಿತದ ಆರಂಭಿಕ ಸಾಮರ್ಥ್ಯಗಳಿಸಲು 2025-26ನೇ ಸಾಲಿನ ಆಯವ್ಯಯದ ಕಂಡಿಕೆ 111(vi) ರಲ್ಲಿ ಘೋಷಣೆಯಾಗಿರುವ “ಕಲಿಕಾ ದೀಪ” ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಉಲ್ಲೇಖ-1ರ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯ ಸುತ್ತೋಲೆಯಲ್ಲಿ ಸದರಿ ಕಾರ್ಯಕ್ರಮಕ್ಕೆ ಪಿ.ಎ.ಬಿ ಅನುಮೋದಿತ Component code 5.10.1 ಹಾಗೂ PFMS Line Item Code F.01.11 Quality elementary ರಡಿಯಲ್ಲಿ ಈ ಕೆಳಕಂಡ ಅನುದಾನವನ್ನು ಸಂಬಂಧಿಸಿದ 1145 ಶಾಲೆಗಳಿಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಮುಂದುವರೆದು ಸದರಿ ಸುತ್ತೋಲೆಯಲ್ಲಿ ಜಿಲ್ಲಾವಾರು ಕಲಿಕಾ ದೀಪ ಕಾರ್ಯಕ್ರಮ ಅನುಷ್ಠಾನಿಸುವ ಸರ್ಕಾರಿ ಪ್ರಾಥಮಿಕ ಶಾಲೆಗಳ ಪಟ್ಟಿ ಹಾಗೂ ಪ್ರತಿ ಶಾಲೆಗೆ ಬಿಡುಗಡೆ ಮಾಡಲಾಗಿರುವ ಇಂಟರ್ ನೆಟ್ ವ್ಯವಸ್ಥೆ ಹಾಗೂ ಹೆಡ್‌ಫೋನ್ ಗಳ ಖರೀದಿ ವೆಚ್ಚದ ವಿವರವನ್ನು ಈಗಾಗಲೇ ಎಲ್ಲಾ ಜಿಲ್ಲೆಗಳ ಡಯಟ್‌ಗಳ ಪ್ರಾಂಶುಪಾಲರುಗಳ ಗಮನಕ್ಕೆ ತರಲಾಗಿದೆ.
ಈ ಪ್ರಕಾರ ಶಾಲೆಗಳಲ್ಲಿ ಇಂಟರ್ ನೆಟ್ ವ್ಯವಸ್ಥೆಯನ್ನು ಹಾಗೂ ಪ್ರತಿ ಶಾಲೆಗಳಿಗೆ 10 ಹೆಡ್‌ಫೋನ್ ಗಳ ಖರೀದಿಯನ್ನು ಮಾಡಬೇಕಾಗಿದೆ. ಆದುದರಿಂದ ಉಲ್ಲೇಖ-2ರಲ್ಲಿನ ಸರ್ಕಾರದ ಪತ್ರದಲ್ಲಿ ಅನುಮೋದನೆಯಾಗಿರುವ ಹೆಡ್‌ಸೆಟ್ ತಾಂತ್ರಿಕ ನಿರ್ದಿಷ್ಟತೆ (specification) ಗಳನ್ನು ಈ ಪತ್ರದ ಅನುಬಂಧ-1ರಲ್ಲಿರಿಸಿದೆ. ಇಂಟರ್‌ನೆಟ್ ಸೌಲಭ್ಯ ಹಾಗೂ ಹೆಡ್‌ಸೆಟ್ ಗಳ ಖರೀದಿಯನ್ನು ಶಾಲಾ ಹಂತದಲ್ಲಿ ಕೆ ಟಿ ಪಿ ಪಿ ನಿಯಮಗಳನ್ವಯ ಖರೀದಿ ಮಾಡುವಂತೆ ಸಂಬಂಧಿಸಿದ ಶಾಲೆಗಳಿಗೆ ಸೂಕ್ತ ನಿರ್ದೇಶನ ಮತ್ತು ಮಾರ್ಗದರ್ಶನವನ್ನು ನೀಡುವಂತೆ ಈ ಮೂಲಕ ಸೂಚಿಸಿದೆ. ಮುಂದುವರೆದು ಉಲ್ಲೇ-3ರ ಜ್ಞಾಪನದಂತೆ ಎಲ್ಲಾ ಡಯಟ್ ಗಳ ಟ್ಬಾಲ್ ನೋಡಲ್ ಅಧಿಕಾರಿಗಳು ಹಾಗೂ FLN ನೋಡಲ್ ಅಧಿಕಾರಿಗಳಿಗೆ ದಿನಾಂಕ:20/09/2025 ರಂದು ಕಲಿಕಾ ದೀಪ ಕಾರ್ಯಕ್ರಮ ಅನುಷ್ಠಾನ ಕುರಿತಂತೆ ರಾಜ್ಯಮಟ್ಟದ ಎಂ.ಆರ್.ಪಿ ತರಬೇತಿಯನ್ನು ಸಹ ನೀಡಲಾಗಿದೆ.
ಆದುದರಿಂದ, ಇಂಟರ್ ನೆಟ್ ವ್ಯವಸ್ಥೆಯನ್ನು ಹಾಗೂ ಪ್ರತಿ ಶಾಲೆಗಳಿಗೆ 10 ಹೆಡ್‌ಫೋನ್ ಗಳ ಖರೀದಿಯನ್ನು ದಿನಾಂಕ:17/11/2025 ರೊಳಗೆ ಪೂರ್ಣಗೊಳಿಸಿ ಅನುಬಂಧ-2ರಲ್ಲಿನ ನಮೂನೆಯಲ್ಲಿ ಪ್ರಗತಿಯನ್ನು ಸಲ್ಲಿಸುವುದು.

CLICK HERE TO DOWNLOAD MEMORANDUM