Karnataka HRMS Update 2026: HRMS1 ಸೇವೆ ಸ್ಥಗಿತ, HRMS2 ಆರಂಭ
Karnataka HRMS Update 2026: HRMS ESS (HRMS1) ಪೋರ್ಟಲ್ ಸ್ಥಗಿತಗೊಂಡಿದೆ. ಕರ್ನಾಟಕ ಸರ್ಕಾರಿ ನೌಕರರು ಈಗ HRMS2 ESS ವೆಬ್‌ಸೈಟ್ ಮೂಲಕ ಲಾಗಿನ್ ಮಾಡಿ ESS ಸೇವೆಗಳನ್ನು ಬಳಸಬಹುದು. ಹೊಸ ಲಾಗಿನ್ ಲಿಂಕ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಿರಿ..
HRMS ESS (HRMS1) ಸೇವೆ ಸ್ಥಗಿತ – HRMS2 ESS ವೆಬ್‌ಸೈಟ್ ಮೂಲಕ ಲಾಗಿನ್ ಮಾಡುವ ವಿಧಾನ
ಕರ್ನಾಟಕ ಸರ್ಕಾರದ ನೌಕರರಿಗಾಗಿ ಬಳಸಲಾಗುತ್ತಿದ್ದ ಹಳೆಯ HRMS ESS (HRMS1) ಪೋರ್ಟಲ್ ಇದೀಗ ಸ್ಥಗಿತಗೊಂಡಿದೆ. ಸರ್ಕಾರವು ಹೊಸದಾಗಿ HRMS2 & ESS App ಅನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ, ಹಳೆಯ HRMS1 ಸೇವೆಯನ್ನು ಬಳಕೆ ಮಾಡಲು ಸಾಧ್ಯವಿಲ್ಲ.
ಈ ಹಿನ್ನೆಲೆದಲ್ಲಿ, ನೌಕರರು ತಮ್ಮ Employee Self Service (ESS) ಸೇವೆಗಳನ್ನು ಬಳಸಲು ಹೊಸ HRMS2 ಪೋರ್ಟಲ್‌ಗೆ ಲಾಗಿನ್ ಮಾಡಬೇಕು.
HRMS1 ಈಗ ಲಭ್ಯವಿಲ್ಲ
ಹಿಂದೆ ಬಳಸಲಾಗುತ್ತಿದ್ದ ಪೋರ್ಟಲ್:
ಈ ವೆಬ್‌ಸೈಟ್ ಈಗ ಕಾರ್ಯನಿರ್ವಹಿಸುತ್ತಿಲ್ಲ.
HRMS2 ESS ವೆಬ್‌ಸೈಟ್ ಲಿಂಕ್
ನೌಕರರು ಇದೀಗ ಕೆಳಗಿನ ಹೊಸ ಲಿಂಕ್ ಮೂಲಕ ESS ಸೇವೆಗಳನ್ನು ಬಳಸಬಹುದು:
HRMS2 ESS ನಲ್ಲಿ ಲಭ್ಯವಿರುವ ಸೇವೆಗಳು
HRMS2 ESS ಪೋರ್ಟಲ್‌ನಲ್ಲಿ ನೌಕರರಿಗೆ ಹಲವು ಆನ್‌ಲೈನ್ ಸೇವೆಗಳು ಲಭ್ಯವಿವೆ:
- ವೇತನ ಸ್ಲಿಪ್ (Salary Slip) ಡೌನ್‌ಲೋಡ್
- ಸೇವಾ ವಿವರಗಳ ಪರಿಶೀಲನೆ
- ರಜೆ ಅರ್ಜಿ ಸಲ್ಲಿಕೆ
- GPF ವಿವರಗಳು
- ವಾರ್ಷಿಕ ಆಸ್ತಿ ಘೋಷಣೆ
- ವೈಯಕ್ತಿಕ ಮಾಹಿತಿ ತಿದ್ದುಪಡಿ
- ಪಿಂಚಣಿ ಹಾಗೂ ಸೇವಾ ದಾಖಲೆ ಮಾಹಿತಿ
HRMS2 ESS ಗೆ ಲಾಗಿನ್ ಮಾಡುವ ವಿಧಾನ
- ಮೇಲಿನ HRMS2 ESS ಲಿಂಕ್ ತೆರೆಯಿರಿ
- User ID ಮತ್ತು Password ನಮೂದಿಸಿ
- Captcha ದಾಖಲಿಸಿ
- Login ಬಟನ್ ಕ್ಲಿಕ್ ಮಾಡಿ
- ಅಗತ್ಯ ESS ಸೇವೆಗಳನ್ನು ಬಳಸಿ
ಮೊಬೈಲ್ ಆಪ್ ಬಳಕೆ
ಸರ್ಕಾರವು HRMS2 ESS ಮೊಬೈಲ್ ಆಪ್‌ನ್ನೂ ಬಿಡುಗಡೆ ಮಾಡಿರುವುದರಿಂದ, ನೌಕರರು ಮೊಬೈಲ್‌ನಲ್ಲಿಯೇ ತಮ್ಮ ಸೇವೆಗಳನ್ನು ಸುಲಭವಾಗಿ ಪಡೆಯಬಹುದು.
ಮುಖ್ಯ ಮಾಹಿತಿ
- ಹಳೆಯ HRMS1 ಲಿಂಕ್ ಈಗ ಕಾರ್ಯನಿರ್ವಹಿಸುವುದಿಲ್ಲ
- ಎಲ್ಲಾ ನೌಕರರು HRMS2 ESS ಪೋರ್ಟಲ್ ಅಥವಾ ಮೊಬೈಲ್ ಆಪ್ ಬಳಕೆ ಮಾಡಬೇಕು
- ಲಾಗಿನ್ ಸಮಸ್ಯೆಗಳಿದ್ದರೆ ಸಂಬಂಧಿತ ಇಲಾಖೆಯನ್ನು ಸಂಪರ್ಕಿಸಬಹುದು
HRMS ESS at
(HRMS1) is no longer available after the establishment of the HRMS2 & ESS app
If you want ESS (employee self-services) of HRMS2 in web browser, log in at this link

CLICK HERE UPDATE HRMS2 ESS APP
FAQs on ELECTRONIC SERVICE REGISTER