KARTET-2025 ಶೈಕ್ಷಣಿಕ ಮನೋವಿಜ್ಞಾನದ ಉಪಯುಕ್ತ ಟಿಪ್ಪಣಿ.
KARTET-2025 ಶೈಕ್ಷಣಿಕ ಮನೋವಿಜ್ಞಾನದ ಉಪಯುಕ್ತ ಟಿಪ್ಪಣಿಯನ್ನು ಅನುಭವಿ ಉಪನ್ಯಾಸಕರಿಂದ ಸಂಗ್ರಹ ಮಾಡಿದ ಅಧ್ಯಯನ ಸಂಪನ್ಮೂಲ.
ಪಿಯಾಜೆಯವರ ಬೌದ್ಧಿಕ ವಿಕಾಸದ ಹಂತಗಳು;
ಸ್ವಿಜಲ್ಯಾರ್ಂಡ್ ನ ಪತಿಭಾನ್ವಿತ ಜೀನ್ ಪಿಯಾಜೆ ವಿಶ್ವದ ಶ್ರೇಷ್ಠ ಮನೋವಿಜ್ಞಾನಿಯಾಗಿ ಗುರುತಿಸಿಕೊಂಡಿದ್ದಾರೆ .ಮಕ್ಕಳಲ್ಲಿ ಬುದ್ಧಿಶಕ್ತಿ ಹೇಗೆ ವಿಕಾಸಗೊಳ್ಳುತ್ತದೆ ಎಂದು ತಿಳಿಯಲು ತಮ್ಮ ಇಬ್ಬರು ಮಕ್ಕಳ ಮೇಲೆಯೇ ಅಧ್ಯಯನ ಕೈಕೊಂಡರು. ಈ ಅಧ್ಯಯನದ ಫಲವೇ ಇವರು ಬೌದ್ಧಿಕ ವಿಕಾಸದ ಸಿದ್ಧಾಂತ ರೂಪಿಸಲು ಕಾರಣವಾಯಿತು.
ಪಿಯಾಜೆಯವರು ಬೌದ್ಧಿಕ ವಿಕಾಸದಲ್ಲಿ ಪ್ರತಿ ಮಗುವು ಹೊಂದಿರುವ ನಾಲ್ಕು ಕ್ರಮಾನುಗತ ಅಂಶಗಳನ್ನು ಗುರುತಿಸಿದ್ದಾರೆ.
1. ಸಂವೇದನಾಗತಿ ಹಂತ; (ಹುಟ್ಟಿದಾಗಿನಿಂದ ಎರಡು ವರ್ಷದವರೆಗೆ)
ಮಗುವಿನ ಇಂದ್ರೀಯ ಸಂವೇದನೆಗಳು ಗತಿಶೀಲನ ಚಟುವಟಿಕೆಗಳ ನಡುವಿನ ಅನ್ನೋನ್ಯ ಕ್ರಿಯೆಯನ್ನು ಗುರುತಿಸಿ ಇದನ್ನು ಸಂವೇದನಾ ಗತಿ ಹಂತ ಎಂದು ಕರೆಯಲಾಗಿದೆ.
2. ಕಾರ್ಯ ಪೂರ್ವ ಹಂತ ( ಎರಡರಿಂದ ಏಳು ವರ್ಷಗಳವರೆಗೆ)
ಈ ಹಂತದಲ್ಲಿ ಮಗುವಿನಲ್ಲಿ ಅಹಂ ಕೇಂದ್ರೀತ ಪ್ರವೃತ್ತಿ ಕಂಡುಬರುತ್ತದೆ. ಇತರರ ಭಾವನೆ, ದೃಷ್ಟಿಕೋನಗಳಿಗೆ ಬೆಲೆ ಕೊಡುವುದಿಲ್ಲ. ಭಾಷೆಯ ಬಳಕೆ ಪದ ಮತ್ತು ಬಿಂಬಗಳಿಂದ ಕಂಡು ಬರುತ್ತದೆ .
3. ಮೂರ್ತ ಕಾರ್ಯಗಳ ಹಂತ( ಏಳರಿಂದ 11 ವರ್ಷಗಳು)
ಮಗುವಿನಲ್ಲಿ ತಾರ್ಕಿಕ ಸಾಮರ್ಥ್ಯ ಮೂಡುತ್ತದೆ. ಹಲವಾರು ಕ್ಲಿಷ್ಟ ಮೂರ್ತ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾರೆ.
4. ಔಪಚಾರಿಕ ಕಾರ್ಯಗಳ ಹಂತ( 11 ವರ್ಷಗಳ ಮೇಲ್ಪಟ್ಟು)
ಅಮೂರ್ತ ಚಿಂತನಾ ಸಾಮರ್ಥ್ಯ ಮೂಡುತ್ತದೆ ತರ್ಕಬದ್ದ ಹೇಳಿಕೆಗಳನ್ನು ಆಧರಿಸಿ ತರ್ಕಿಸುತ್ತಾರೆ ಸ್ವತಂತ್ರ ಆಲೋಚನಾ ಸಾಮರ್ಥ್ಯ ತಾರ್ಕಿಕ ಸಾಮರ್ಥ್ಯ, ವೈಜ್ಞಾನಿಕ ಚಿಂತನೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಸಮಸ್ಯೆ ಪರಿಹಾರ ಕೌಶಲಗಳು ವೃದ್ಧಿಯಾಗುತ್ತವೆ.
ಈ ಘಟಕದಲ್ಲಿ ಕಲಿಕಾರ್ಥಿಗಳು ಅರ್ಥೈಸಿಕೊಳ್ಳಬೇಕಾದ ಅಂಶಗಳು:
1.ಸ್ಕೀಮ (schema)
2. ಸಂಘಟಿಸುವಿಕೆ (Organisation)
3. ಹೊಂದಾಣಿಕೆ (Adjustment)
4. ಮನೋಗತ ಮಾಡಿಕೊಳ್ಳುವಿಕೆ: (Assimilation)
5. ಸ್ಥಳಾವಕಾಶ ಒದಗಿಸುವಿಕೆ: (Accomodation)
ಕೋಲ್ಬರ್ಗ್‌ರವರ ನೈತಿಕ ವಿಕಾಸ ಸಿದ್ಧಾಂತ :
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನಿ ಲಾರೆನ್ಸ್ ಕೋಲ್ಡರ್ಗ್‌ರವರು ವ್ಯಕ್ತಿಯಲ್ಲಿ ಪೂರ್ವ ಪ್ರಾಬಲ್ಯದಿಂದ ಪ್ರಾರಂಭವಾಗುವ ನೈತಿಕ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ವಿವಿಧ ಸಂಸ್ಕೃತಿಯ ನೂರಾರು ಮಕ್ಕಳ ಮೇಲೆ ಕೈಗೊಂಡ ಅಧ್ಯಯನದ ಆಧಾರದ ಮೇಲೆ ನೈತಿಕ ವಿಕಾಸದ ಸಿದ್ಧಾಂತವನ್ನು ಮಂಡಿಸಿದ್ದಾರೆ.
ಇವರ ಪ್ರಕಾರ ಜ್ಞಾನಾತ್ಮಕ ಪ್ರಕ್ರಿಯೆಗಳಾದ ಆಲೋಚನೆ ಮತ್ತು ತಾರ್ಕಿಕತೆಯು ಮಗುವಿನ ನೈತಿಕ ಏಕಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಇವರು ಕೂಡ ನೈತಿಕ ವಿಕಾಸದ ಹಂತಗಳನ್ನು ಗುರುತಿಸುತ್ತಾರೆ. ಇವರೇ ಹೇಳುವಂತೆ ನೈತಿಕ ವಿಕಾಸವು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸಾಗುವುದು ಜ್ಞಾನಾತ್ಮಕ ಸಾಮರ್ಥ್ಯಗಳಿಂದಲೇ ಹೊರತು ಹಿರಿಯರ, ಪೋಷಕರ, ಸ್ನೇಹಿತರ, ನೈತಿಕ ಮೌಲ್ಯಗಳಿಂದಲ್ಲ.
ನೈತಿಕ ವಿಕಾಸದ ಮೂರು ಹಂತಗಳು:
1. ಸಾಂಪ್ರದಾಯಿಕ ಪೂರ್ವ ನೈತಿಕತೆಯ ಹಂತ( ನಾಲ್ಕರಿಂದ ಹತ್ತು ವರ್ಷಗಳು)
2. ಸಾಂಪ್ರದಾಯಿಕ ನೈತಿಕತೆಯ ಹಂತ( ಹತ್ತರಿಂದ 13 ವರ್ಷಗಳು)
3. ಸ್ವಯಂ ಸ್ವೀಕೃತ ನೈತಿಕ ತತ್ವಗಳ ಹಂತ (13 ವರ್ಷಗಳ ಮೇಲ್ಪಟ್ಟು)
ನೈತಿಕ ವಿಕಾಸದ ಮೇಲೆ ಪ್ರಭಾವಿಸುವ ಅಂಶಗಳು ಹೊಗಳಿಕೆ, ಬಹುಮಾನ, ತೆಗಳಿಕೆ, ಶಿಕ್ಷೆ, ಕುಟುಂಬದ ಸದಸ್ಯರು, ಸಮಾಜ,ಸ್ವಾನುಭವ, ಸ್ವತಾರ್ಕಿಕತೆ ಇತ್ಯಾದಿ.
ಜ್ಞಾನ ಸಂರಚನಾವಾದ:
ಜ್ಞಾನ ಸಂರಚನಾವಾದವೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ಸಹ ತನ್ನ ಸ್ವಂತ ಅನುಭವಗಳ ಸಹಾಯದಿಂದ ಜ್ಞಾನವನ್ನು ನಿರ್ಮಿಸಿಕೊಳ್ಳುತ್ತಾನೆ.
ಜ್ಞಾನ ಸಂರಚನವಾದಿಗಳ ಪ್ರಕಾರ ಜ್ಞಾನ ನಿಷ್ಕ್ರಿಯವಾಗಿ ಕ್ರೋಡಿಕೃತವಾಗಿರುವುದಿಲ್ಲ. ಇದು ವ್ಯಕ್ತಿಯ ಕ್ರಿಯಾತ್ಮಕ ಸಂಜ್ಞಾನಾತ್ಮಕ ಚಟುವಟಿಕೆಯ ಫಲ.
ಜ್ಞಾನ ಸಂರಚನೆ ಒಂದು ಮಾರ್ಪಡಿಸುವ ಪ್ರಕ್ರಿಯೆಯಾಗಿದ್ದು, ಇದು ವ್ಯಕ್ತಿಯ ಅನುಭವಗಳನ್ನು ಸಂಘಟಿಸುತ್ತದೆ ಮತ್ತು ಅದರಿಂದ ಅರ್ಥ ಪಡೆಯುವಂತೆ ಮಾಡುತ್ತದೆ.
ಶೈಕ್ಷಣಿಕ ಕೊಡುಗೆಗಳು:
ಜ್ಞಾನ ಸಂರಚನಾವಾದವು ಸಾಮಾನ್ಯ ಪಠ್ಯ ಕ್ರಮವನ್ನು ಅಲ್ಲಗಳೆಯುತ್ತದೆ. ವಿದ್ಯಾರ್ಥಿಗಳ ಪೂರ್ವ ಜ್ಞಾನಕ್ಕೆ ಅನುಗುಣವಾದ ಪಠ್ಯಕ್ರಮ ಒತ್ತಿ ಹೇಳುತ್ತದೆ.
ವಿದ್ಯಾರ್ಥಿಗಳು ವಿಷಯವನ್ನು ವಿಶ್ಲೇಷಿಸಿ ಅರ್ಥೈಸಿಕೊಳ್ಳಬೇಕು ಶಿಕ್ಷಕ ಮತ್ತು ವಿದ್ಯಾರ್ಥಿಗಳಲ್ಲಿ ಸಾಕಷ್ಟು ಚರ್ಚೆಗೆ ಅವಕಾಶ ನೀಡಬೇಕು.
ತರಗತಿಯಲ್ಲಿ ಪರಿಣಾಮಕಾರಿಯಾಗಿ ಭೋದಿಸಬೇಕಾದರೆ, ವಿದ್ಯಾರ್ಥಿಗಳು ಹೊಂದಿರುವ ಮಾನಸಿಕ ಮಾದರಿಗಳನ್ನು ಅರ್ಥಮಾಡಿಕೊಳ್ಳಬೇಕು
ವೈಗಾಸ್ಕಿ ಅವರ ಸಾಂಸ್ಕೃತಿಕ ಐತಿಹಾಸಿಕ ಸಿದ್ಧಾಂತ:
▪️ಇವರ ಪ್ರಕಾರ ಸಾಮಾಜಿಕ ಅಂತರ ಕ್ರಿಯೆಗಳಿಂದ ವ್ಯಕ್ತಿಯ ವರ್ತನೆ ಮತ್ತು ಜ್ಞಾನ ಉಂಟಾಗುತ್ತದೆ.
▪️ಕುಟುಂಬದೊಂದಿಗೆ ಸಮುದಾಯದೊಂದಿಗೆ ಬೆರೆತಾಗ ಅವರಲ್ಲಿ ವಿಚಾರಗಳು ವರ್ತನೆಗಳು ಕಲಿಕೆಯ ವಿನಿಮಯವಾಗುತ್ತದೆ.
▪️ಸಮಾಜದ ಸಂಸ್ಕೃತಿಯಿಂದ ಮಗುವಿನ ವಿಕಾಸ ದಲ್ಲಿ ಬದಲಾವಣೆ ಕಂಡು ಬರುತ್ತದೆ
▪️zone of proximal development
▪️Internalization
ಶಿಶು ಕೇಂದ್ರಿತ ಶಿಕ್ಷಣ:
ಲಕ್ಷಣಗಳು :
▪️ಶಿಶು ಪ್ರಧಾನ
▪️ಶಿಶುವಿನ ಆಸಕ್ತಿ ಆಗತ್ಯತೆ ಮತ್ತು ಸಾಮರ್ಥ್ಯಕ್ಕೆ ಇಳಿದು ಬೋಧನೆ
▪️ಸ್ವಯಂ ಕಲಿಕೆಗೆ ಪ್ರೋತ್ಸಾಹ
▪️ಶಿಕ್ಷಕ ಮಾರ್ಗದರ್ಶಕನಾಗಿ,ಆಪ್ತ ಸಲಹೆಗಾರರಾಗಿ ಶಿಕ್ಷಣಕ್ಕೂ ಮಗುವಿಗೂ ಮಧ್ಯವರ್ತಿಯಾಗಿರುತ್ತಾನೆ
▪️ಶಿಶುವೇ ಕೇಂದ್ರ ಆದ್ದರಿಂದ ಮುಕ್ತ ಅವಕಾಶ ನೀಡಲಾಗಿದೆ
▪️ಚಟುವಟಿಕೆಗಳ ಮೂಲಕ ಕಲಿಕೆಗೆ ಅವಕಾಶ
▪️ಶಿಶು ಕೇಂದ್ರೀತ ಶಿಕ್ಷಣದ ಪ್ರತಿಪಾದಕರು ರೂಸೋ ಪ್ರೊಬೆಲ್ ಪೆಸ್ಟಾಲಜಿ, ರವೀಂದ್ರನಾಥ್ ಟ್ಯಾಗೋರ್ ಹಾಗೂ ಇತ್ಯಾದಿ.
ಪ್ರಗತಿದಾಯಕ ಶಿಕ್ಷಣ:
19 ನೇ ಶತಮಾನದಲ್ಲಿ ಅನುಸರಿಸುತ್ತಿದ್ದ ಸಾಂಪ್ರದಾಯಿಕ ಬೋಧನಾ ವಿಧಾನಗಳಿಗೆ ಬದಲಾಗಿ ಈಗಿನ ಸನ್ನಿವೇಶ ಮತ್ತು ಕಲಿಕಾ ಪರಿಸ್ಥಿತಿಗಳಿಗೆ ಅನುಗುಣವಾಗಿ ಸೂಕ್ತವಾದ ನೂತನ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಲಾಯಿತು. ಇದನ್ನೇ ಪ್ರಗತಿದಾಯಕ ಶಿಕ್ಷಣ ಎನ್ನುವರು.
ಈ ಶಿಕ್ಷಣ ಪದ್ದತಿಯ ಮೂಲ ರೂವಾರಿಗಳು ಇಂಗ್ಲೆಂಡಿನ ಮನೋವಿಜ್ಞಾನಿ ಜಾನ್‌ಲಾಕ್ ಮತ್ತು ಫ್ರಾನ್ಸ್ ದೇಶದ ಮನೋವಿಜ್ಞಾನಿ ಜೀನ್‌ಜಾಕ್ ರೂಸೋ. ಇವರಷ್ಟೇ ಅಲ್ಲದೆ ಸ್ವಿಟ್ಟರ್‌ಲ್ಯಾಂಡ್‌ನ ಹೆನ್ರಿಚ್ ಪೆಸ್ಟಾಲಜಿಯವರೂ ಕೂಡಾ ಪ್ರಗತಿದಾಯಕ ಶಿಕ್ಷಣವನ್ನು ಬೆಂಬಲಿಸಿ “ಕಲಿಕಾರ್ಥಿಗಳು ಆಂತರಿಕ ಪ್ರೇರಣೆಯಿಂದ ಕಲಿಯಬೇಕೇ ಹೊರತು ಹೊರಗಿನ ಬೇರೆ ಯಾವುದೇ ಪ್ರೇರಣೆಯಿಂದಲ್ಲ, ಮಗುವಿನ ಆಸಕ್ತಿ ಕಲಿಕೆಯತ್ತ ಹರಿಸುವುದೇ ಪ್ರಗತಿದಾಯಕ ಶಿಕ್ಷಣದ ಉದ್ದೇಶವಾಗಿದೆ” ಎಂದು ಹೇಳುತ್ತಾ Learning by hand, head and heart ಎಂಬ ಧ್ಯೆಯ ವಾಕ್ಯವನ್ನು ರೂಪಿಸಿದ್ದಾರೆ.
ಪ್ರೊಬೆಲ್ ರವರು ಕ್ರೀಡೆ ಮತ್ತು ಗುಂಪು ಚಟುವಟಿಕೆಯನ್ನು ಪ್ರಗತಿದಾಯಕ ಶಿಕ್ಷಣದಲ್ಲಿ ಆಳವಡಿಸಿಕೊಳ್ಳಬೇಕು, ಆ ಮೂಲಕ ಮಗು ನಲಿಯುತ್ತಾ ಖುಷಿಯಾಗಿ ಕಲಿಕೆಯಲ್ಲಿ ಸಹಜವಾಗಿ ತೊಡಗಿಸಿಕೊಳ್ಳುತ್ತದೆ ಎಂದು ಪ್ರಗತಿದಾಯಕ ಶಿಕ್ಷಣವನ್ನು ಉತ್ತೇಜಿಸಿದ್ದಾರೆ. ಜರ್ಮನಿಯ ಹರ್ಬಾರ್ಟ್ಸ್ಪೆನ್ಸರ್ ರವರು ಕೂಡಾ ಪ್ರಗತಿದಾಯಕ ಶಿಕ್ಷಣಕ್ಕೆ ತಮ್ಮ ಸಹಮತವನ್ನು ಸೂಚಿಸುತ್ತಾ ಪರಿಣಾಮಕಾರಿ ಬೋಧನೆಗಾಗಿ ಪಂಚ ಸೋಪಾನ ( Five steps or Stages for teaching) ವನ್ನು ಪರಿಚಯಿಸಿದರು. ಇದೇ ರೀತಿ ಪ್ರಗತಿದಾಯಕ ಶಿಕ್ಷಣಕ್ಕೆ ತಮ್ಮ ಬೆಂಬಲವನ್ನು ಸೂಚಿಸುವ ಮರಿಯಾ ಮಾಂಟೆಸ್ಸರಿಯವರು ಮಗುವು ಪರಿಸರದೊಂದಿಗೆ ಹೊಂದಿಕೊಂಡು ಆನಂದದಾಯಕವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕಾದರೆ ವೈಜ್ಞಾನಿಕ ಬೋಧನಾ ಕ್ರಮವನ್ನು ಬಳಸಬೇಕೆಂದು ತಿಳಿಸಿದ್ದಾರೆ.
ಪ್ರಗತಿದಾಯಕ ಶಿಕ್ಷಣದ ಗುಣಲಕ್ಷಣಗಳು ಈ ಕೆಳಕಂಡಂತಿವೆ:
▪️ಸಮಸ್ಯಾ ಪರಿಹಾರ ಮತ್ತು ತಾರ್ಕಿಕ ಆಲೋಚನೆಗೆ ಒತ್ತು ನೀಡಲಾಗಿದೆ.
▪️ಸಂಯೋಜಿತ ಮತ್ತು ಸಹಕಾರ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ.
▪️ಪ್ರಾಯೋಗಿಕ ಕಲಿಕೆಗೆ ಪ್ರೋತ್ಸಾಹ ನೀಡಲಾಗಿದೆ.
▪️ಜೀವನ ಪರ್ಯಂತ ಕಲಿಕೆ ಹಾಗೂ ಸಾಮಾಜಿಕ ಕೌಶಲಕ್ಕೆ ಉತ್ತೇಜನ ನೀಡಲಾಗಿದೆ.
▪️ಸಾಮಾಜಿಕ ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವ ಈ ಅಂಶಗಳಿಗೆ ಆದ್ಯತೆ ನೀಡಲಾಗಿದೆ.
▪️ಹೀಗೆ ಪ್ರಗತಿದಾಯಕ ಶಿಕ್ಷಣದಲ್ಲಿ ಬೋಧನಾ ವಿಧಾನ, ಪಠ್ಯವಸ್ತು, ಶಾಲಾ ಚಟುವಟಿಕೆಗಳು ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಸಾಕಷ್ಟು ಭಿನ್ನವಾಗಿದೆ.
ಬುದ್ದಿವಂತಿಕೆ ಸಂರಚನೆಯ ವಿಮರ್ಶಾತ್ಮಕ ದೃಷ್ಟಿಕೋನ, ಮಲ್ಟಿ ಡೈಮೆನ್ಸನಲ್ ಇಂಟೆಲಿಜೆನ್ಸ್ – ಬುದ್ದಿವಂತಿಕೆಯ ಬಹು ಆಯಾಮ, ಭಾಷೆ ಮತ್ತು ಚಿಂತನೆ:
ಬುದ್ಧಿಶಕ್ತಿ :
ಒಂದು ಮಗು ಸಮಸ್ಯೆಯನ್ನು ವೇಗವಾಗಿ ಮತ್ತು ನಿಖರವಾಗಿ ಬಿಡಿಸಿದರೆ ಅಥವಾ ಸಂಭಾಷಣೆಯಲ್ಲಿ ವಿವೇಕ ಮತ್ತು ಚತುರತೆಯನ್ನು ತೋರಿಸಿದರೆ ಆ ಮಗುವನ್ನು ಬುದ್ದಿವಂತ/ಬುದ್ದಿವಂತೆ ಎಂದು ಕರೆಯುತ್ತೇವೆ. ಮನೋವಿಜ್ಞಾನ ಮತ್ತು ಶಿಕ್ಷಣದಲ್ಲಿ ಬುದ್ಧಿಶಕ್ತಿ ಎಂಬ ಪದ ಸಾಕಷ್ಟು ಬಳಕೆಯಲ್ಲಿದೆ.
ಬೀನೆ ಮತ್ತು ಸೈಮನ್ ರವರ ಪ್ರಕಾರ “ಉತ್ತಮವಾಗಿ ನಿರ್ಣಯ ಕೈಗೊಳ್ಳುವ ಉತ್ತಮವಾಗಿ ಸನ್ನಿವೇಶವನ್ನು ಗ್ರಹಿಸುವ ಮತ್ತು ಉತ್ತಮವಾಗಿ ತರ್ಕಿಸುವ ವ್ಯಕ್ತಿಯ ಸಾಮರ್ಥ್ಯವೇ ಬುದ್ಧಿಶಕ್ತಿಯಾಗಿದೆ”.
ಬುದ್ಧಿಶಕ್ತಿಯ ವಿಧಗಳು:
ಥಾರ್ನ್ ಡೈಕ್ ರವರು ಬುದ್ಧಿಶಕ್ತಿಯನ್ನು
1. ಮೂರ್ತ,
2. ಅಮೂರ್ತ
3. ಸಾಮಾಜಿಕ ಬುದ್ಧಿಶಕ್ತಿ ಎಂದು ವಿಂಗಡಿಸಿದ್ದಾರೆ.
ಮೂರ್ತಬುದ್ಧಿಶಕ್ತಿ :
ಒಬ್ಬ ವ್ಯಕ್ತಿ ಜೀವನದ ನೈಜ ಸನ್ನಿವೇಶವನ್ನು ಗ್ರಹಿಸಿ ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯ
ಅಮೂರ್ತ ಬುದ್ಧಿಶಕ್ತಿ :
ಇದು ಪದಗಳು, ಸಂಖ್ಯೆಗಳು ಮತ್ತು ವಿಚಾರಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯ
ಉದಾ : ಗಣಿತದ ತರ್ಕ ಸಾಮರ್ಥ್ಯ ಮತ್ತು ತಾರ್ಕಿಕ ಚಿಂತನೆ (Logical thinking) ಯಲ್ಲಿ ಕಂಡುಬರುತ್ತದೆ.
ಸಾಮಾಜಿಕ ಬುದ್ಧಿಶಕ್ತಿ :
ದಿನನಿತ್ಯದ ಸಾಮಾಜಿಕ ಸನ್ನಿವೇಶಗಳಲ್ಲಿ ವ್ಯಕ್ತಿಯು ಪ್ರತಿಕ್ರಿಯಿಸುವ ಸಾಮರ್ಥ್ಯವಾಗಿದೆ.
ಬುದ್ಧಿಶಕ್ತಿಯ ಸಿದ್ಧಾಂತಗಳು:
1. ಮಾನಸಿಕ ಶಿಸ್ತಿನ ಸಿದ್ಧಾಂತ
2. ದ್ವಿಕಾರಕ ಸಿದ್ಧಾಂತ-( ‘G’ ಕಾರಕ ಮತ್ತು S ಕಾರಕ)
3. ಬಹುಕಾರಕ ಸಿದ್ಧಾಂತ
4. ಸಮೂಹಕಾರಕ ಸಿದ್ಧಾಂತ
5. ಬುದ್ಧಿಶಕ್ತಿಯ 3 ಆಯಾಮ ಸಿದ್ಧಾಂತ
6. ಬಹುಬುದ್ಧಿಶಕ್ತಿ (ಹೋವಾರ್ಡ್ ಗಾರ್ಡನರ್)
ಬುದ್ಧಿಶಕ್ತಿಯ ಬಹು ಆಯಾಮ ಸಿದ್ಧಾಂತಗಳು
ಮನೋವಿಜ್ಞಾನಿಗಳು ಬುದ್ಧಿಶಕ್ತಿಯ ಸ್ವರೂಪವನ್ನು ಕುರಿತು ಹಲವಾರು ಸಿದ್ದಾಂತಗಳನ್ನು ರೂಪಿಸಿದ್ದಾರೆ. ಅವುಗಳೆಂದರೆ,
ಮಾನಸಿಕ ಶಿಸ್ತಿನ ಸಿದ್ಧಾಂತ:-
ಈ ಸಿದ್ಧಾಂತದ ಪ್ರಕಾರ ಮನಸ್ಸು ಎನ್ನುವುದು ತಾರ್ಕಿಕತೆ, ಸ್ಮೃತಿ, ವಿಬೇಧೀಕರಣ ಮತ್ತು ಕಲ್ಪನಾಶಕ್ತಿಯಿಂದ ಕೂಡಿದೆ. ಈ ಎಲ್ಲಾ ಮಾನಸಿಕ ಶಕ್ತಿಗಳು ಪರಸ್ಪರ ಸ್ವತಂತ್ರವಾಗಿದೆ. ಮತ್ತು ಅವುಗಳನ್ನು ಸೂಕ್ತ ತರಬೇತಿಯ ಮೂಲಕ ಅಭಿವೃದ್ಧಿಪಡಿಸಬಹುದಾಗಿದೆ. ಆದರೆ ಪ್ರಾಯೋಗಿಕ ಮನೋವಿಜ್ಞಾನಿಗಳು ಈ ವಾದವನ್ನು ಅಲ್ಲಗಳೆದಿದ್ದಾರೆ.
ದ್ವಿಕಾರಕ ಸಿದ್ಧಾಂತ:-
ಈ ಸಿದ್ದಾಂತವನ್ನು ಬ್ರಿಟಿಷ್ ಮನೋವಿಜ್ಞಾನಿ ಚಾರ್ಲ್ಸ್ ಸ್ಪಿಯರ್ಮನ್ ಅಭಿವೃದ್ಧಿಪಡಿಸಿದರು. ಇವರ ಪ್ರಕಾರ ಬೌದ್ಧಿಕ ಸಾಮರ್ಥ್ಯಗಳು ಎರಡು ಅಂಶಗಳಿಂದ ಕೂಡಿವೆ.
1. G ಕಾರಕ- ಎಂದರೆ ಸಾಮಾನ್ಯ ಮಾನಸಿಕ ಸಾಮರ್ಥ್ಯ
2. S ಕಾರಕ- ಎಂದರೆ ನಿರ್ದಿಷ್ಟ ಸಾಮರ್ಥ್ಯಗಳು
G ಕಾರಕವು ಹುಟ್ಟಿನಿಂದ ಪಡೆದುಕೊಂಡು ಬಂದ ಸಾಮರ್ಥ್ಯ. ಇದು ಸಾಮಾನ್ಯ ಮಾನಸಿಕ ಶಕ್ತಿಯಾಗಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ವ್ಯಕ್ತಿಯಲ್ಲಿ G ಕಾರಕ ಹೆಚ್ಚಾಗಿದ್ದಷ್ಟು ಜೀವನದಲ್ಲಿ ಯಶಸ್ಸು ಹೆಚ್ಚಾಗಿರುತ್ತದೆ. S ಕಾರಕವು ಕಲಿಕೆ ಮತ್ತು ಪರಿಸರದಿಂದ ರೂಢಿಗತವಾದ ಗುಣ. ಇದು ಒಬ್ಬನೇ ವ್ಯಕ್ತಿಯಲ್ಲಿಯೂ ಸಹ ಕ್ರಿಯೆಯಿಂದ ಕ್ರಿಯೆಗೆ ಭಿನ್ನವಾಗಿರುತ್ತದೆ. ನಿರ್ದಿಷ್ಟ ಸಾಮರ್ಥ್ಯದ ಪ್ರಮಾಣದಲ್ಲಿ ವ್ಯಕ್ತಿಗಳಲ್ಲಿ ಭಿನ್ನತೆ ಕಂಡು ಬರುತ್ತದೆ.
ಬಹುಕಾರಕ ಸಿದ್ಧಾಂತ:-
ಇದನ್ನು ಇ.ಎಲ್ ಥಾರ್ನ್ ಡೈಕ್‌ರವರು ಪ್ರಸ್ತುತಪಡಿಸಿದರು. ಇವರ ಪ್ರಕಾರ ನಿರ್ದಿಷ್ಟ ಉದ್ದೀಪನಗಳಿಗೆ, ನಿರ್ದಿಷ್ಟ ಅನುಕ್ರಿಯೆಗಳು ಕಂಡುಬರುತ್ತವೆ. ಬುದ್ಧಿಶಕ್ತಿಯು ಅನೇಕ ಚಿಕ್ಕ ಚಿಕ್ಕ ಮೂಲಾಂಶಗಳಿಂದ ಕೂಡಿದೆ. ಯಾವುದೇ ಮಾನಸಿಕ ಕ್ರಿಯೆಯಲ್ಲಿ ಒಂದಕ್ಕಿಂತ ಹೆಚ್ಚು ಮೂಲಾಂಶಗಳು ಒಗ್ಗೂಡಿ ಕಾರ್ಯನಿರ್ವಹಿಸಬಹುದು. ಇವರ ಪ್ರಕಾರ ಸಾಮಾನ್ಯ ಬುದ್ಧಿಶಕ್ತಿ ಎಂಬುದಿಲ್ಲ. ಬುದ್ಧಿಶಕ್ತಿಯ ಮಟ್ಟ, ವ್ಯಾಪ್ತಿ, ಕ್ಷೇತ್ರ ಮತ್ತು ವೇಗ ಎಂಬ 4 ಆಯಾಮಗಳನ್ನು ಒಳಗೊಂಡಿದೆ.
ಬುದ್ಧಿ ಶಕ್ತಿಯ ಸಮೂಹಕಾರಕ ಸಿದ್ಧಾಂತ:-
ಈ ಸಿದ್ಧಾಂತವನ್ನು ಎಲ್.ಎಲ್. ಥರ್ಸ್ಟನ್ ರವರು ಪ್ರತಿಪಾದಿಸಿದ್ದಾರೆ. ಈ ಸಿದ್ಧಾಂತದ ಪ್ರಕಾರ ಕಾರಕಗಳ ವಿಶ್ಲೇಷಣೆಯ ಆಧಾರದ ಮೇಲೆ 7 ಪ್ರಾಥಮಿಕ ಮಾನಸಿಕ ಸಾಮರ್ಥ್ಯಗಳನ್ನ ಗುರುತಿಸಿದ್ದಾರೆ.
1. ಸಂಖ್ಯಾ ಸಾಮರ್ಥ್ಯ
2. ಶಾಬ್ಲಿಕ ಸಾಮರ್ಥ್ಯ
3. ಸ್ಥಳಾವಕಾಶ ಸಾಮರ್ಥ್ಯ
4. ಸ್ಮೃತಿ
5. ತಾರ್ಕಿಕತೆ
6. ಪದಗಳ ನಿರರ್ಗಳತೆ
7. ಗ್ರಹಿಸುವ ವೇಗ
ಈ ಮೇಲಿನ ಎಲ್ಲವೂ ಸಂಪೂರ್ಣ ಸ್ವತಂತ್ರವಲ್ಲ, ಆದರೆ ಇವೆಲ್ಲವೂ ಪರಸ್ಪರ ಸಹಸಂಬಂಧ ಹೊಂದಿವೆ.
ಬುದ್ದಿ ಶಕ್ತಿಯ 3 ಆಯಾಮಗಳ ಹಂತ :-
ಇದನ್ನು ಗಿಲ್ಫೋರ್ಡ್ ರವರು 1966 ರಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಇವರ ಪ್ರಕಾರ ಮನಸ್ಸು 3 ಮುಖ್ಯ ಆಯಾಮಗಳಿಂದ ರಚಿತವಾಗಿದೆ. ಅವುಗಳೆಂದರೆ, ಕ್ರಿಯೆಗಳು, ವಸ್ತು ಮತ್ತು ಉತ್ಪನ್ನ.
ಬಹು ಬುದ್ಧಿಶಕ್ತಿ ಸಿದ್ಧಾಂತ :-
ಹೋವರ್ ಗಾರ್ಡನರ್ (1983) ಇವರು 3 ಮುಖ್ಯ ತತ್ವಗಳನ್ನಾಧರಿಸಿ ಬಹು ಬುದ್ಧಿಶಕ್ತಿಯನ್ನು ಪ್ರತಿಪಾದಿಸಿದ್ದಾರೆ.
1. ಇವರ ಪ್ರಕಾರ ಬುದ್ದಿ ಶಕ್ತಿ ಎಂಬುದು ಒಂದು ಸಾಮರ್ಥ್ಯದಿಂದ ಕೂಡಿರುವುದಿಲ್ಲ. ಆದರೆ ಬಹುಬುದ್ಧಿಶಕ್ತಿ ಕಂಡುಬರುತ್ತದೆ.
2. ಎಲ್ಲಾ ಬುದ್ಧಿಶಕ್ತಿಗಳು ಒಂದರಿಂದ ಇನ್ನೊಂದು ಸ್ವತಂತ್ರವಾಗಿರುತ್ತದೆ. ವ್ಯಕ್ತಿಯ ಒಂದು ಕ್ಷೇತ್ರದಲ್ಲಿನ ಬುದ್ದಿಶಕ್ತಿ ಮತ್ತೊಂದು ಕ್ಷೇತ್ರದಲ್ಲಿ ಉತ್ತಮವಾಗಿರುತ್ತದೆ ಎಂದು ಹೇಳಲಾಗದು.
3. ವಿವಿಧ ರೀತಿಯ ಬುದ್ಧಿಶಕ್ತಿಗಳಲ್ಲಿ ಅಂತರ್ ಕ್ರಿಯೆಯನ್ನು ಕಾಣಬಹುದು. ಒಂದು ಸಮಸ್ಯೆಗೆ ಪರಿಹಾರ ವಿವಿಧ ರೀತಿಯ ಬುದ್ದಿ ಶಕ್ತಿಗಳ ಅಂತರ್ ಕ್ರಿಯೆಯಿಂದ ದೊರೆಯಬಹುದು.
ಗಾರ್ಡನರ್ ಪ್ರತಿಪಾದಿಸಿದ 8 ಬಹುಬುದ್ಧಿಶಕ್ತಿಗಳು ಇವುಗಳಾಗಿವೆ.
▪️ಭಾಷಾ ಬುದ್ಧಿಶಕ್ತಿ;
ಇದು ಓದುವಿಕೆ, ಬರೆಯುವಿಕೆ, ಆಲಿಸುವಿಕೆ ಮತ್ತು ಮಾತನಾಡುವಿಕೆ ಹಾಗೂ ಅರಿತುಕೊಳ್ಳುವಿಕೆ ಇತ್ಯಾದಿಗಳಿಗೆ ಸಂಬಂದಿಸಿದೆ. ಕವಿಗಳಲ್ಲಿ, ನಿರೂಪಕರುಗಳಲ್ಲಿ ವಕೀಲರುಗಳಲ್ಲಿ ಹಾಗೂ ಭಾಷೆಯನ್ನು ಹೆಚ್ಚಾಗಿ ಬಳಸುವವರಲ್ಲಿಈ ಸಾರ್ಮಥ್ಯ ಹೆಚ್ಚಾಗಿ ವ್ಯಕ್ತವಾಗುತ್ತದೆ.
▪️ತಾರ್ಕಿಕ ಗಣಿತದ ಬುದ್ಧಿಶಕ್ತಿ;
ಗಣಿತದ ಸಮಸ್ಯೆ ಬಿಡಿಸುವಲ್ಲಿ ಅಮೂರ್ತ ಚಿಂತನೆ ಮತ್ತು ಸಂಕೇತದ ಬಳಕೆಯ ಸಾಮರ್ಥ್ಯವನ್ನು ಒಳಗೊಳ್ಳುತ್ತದೆ. ವೈಜ್ಞಾನಿಕ ಕಾರ್ಯಗಳಲ್ಲಿ ಈ ಸಾಮರ್ಥ್ಯ ವ್ಯಕ್ತವಾಗುತ್ತದೆ.
▪️ಸ್ಥಳಾವಕಾಶ ಸಂಬಂಧಿತ ಬುದ್ಧಿಶಕ್ತಿ :
ಸ್ಥಳಾವಕಾಶ ಸಂಬಂಧಗಳನ್ನು ಕಲ್ಪಿಸಿಕೊಳ್ಳುವಲ್ಲಿ ಮಾನಸಿಕ ಚಿತ್ರಣವನ್ನು ರೂಪಿಸಿಕೊಳ್ಳುವಿಕೆ. ಅಂತರಿಕ್ಷಯಾನದಲ್ಲಿ ಕಂಡುಬರುತ್ತದೆ. ನಾವಿಕರು ಅಭಿಯಂತರರು, ಶಸ್ತ್ರಚಿಕಿತ್ಸಾ ತಜ್ಞರು, ಚಾಲಕರು, ಶಿಲ್ಪಿಗಳು, ಕಲಾವಿದರಲ್ಲಿ ಈ ರೀತಿಯ ಬುದ್ದಿ ಶಕ್ತಿ ಉತ್ತಮವಾಗಿ ಬೆಳವಣಿಗೆಯಾಗಿರುತ್ತದೆ.
▪️ಸಂಗೀತದ ಬುದ್ಧಿಶಕ್ತಿ;
ಹಾಡುವಿಕೆಗೆ ಅಗತ್ಯವಾದ ರಾಗ, ತಾಳ, ಲಯ, ಶೃತಿ, ಸ್ವರ, ಸಂಗೀತದ ವಾದ್ಯಗಳನ್ನು ನುಡಿಸುವಿಕೆ,ರಾಗ ಸಂಯೋಜನೆ ಮುಂತಾದವುಗಳಲ್ಲಿ ಸಂವೇದನಾ ಶೀಲತೆಯನ್ನು ವ್ಯಕ್ತಪಡಿಸುತ್ತಾರೆ.
▪️ದೈಹಿಕ-ಗತಿಸಂವೇದನಾತ್ಮಕ ಬುದ್ಧಿಶಕ್ತಿ;
ನಾಟ್ಯ ಕ್ರೀಡೆ, ಶಸ್ತ್ರಚಿಕಿತ್ಸೆ ಕರಕುಶಲತೆ ಮುಂತಾದ ಸಮನ್ವಯದಿಂದ ಕೂಡಿದ ಗತಿಶೀಲನಾ ಚಟುವಟಿಕೆಗಳಿಗೆ ಅಗತ್ಯವಾದ ಕೌಶಲ್ಯಗಳು ಮತ್ತು ನೈಪುಣ್ಯತೆಯನನ್ನು ಈ ಬುದ್ದಿಶಕ್ತಿಯು ಹೊಂದಿರುತ್ತದೆ
▪️ಅಂತರ ವ್ಯಕ್ತಿ ಸಂಬಂದದ ಬುದ್ದಿಶಕ್ತಿ;
ಇತರರ ಭಾವನೆಗಳು ಪ್ರೇರಣೆಗಳು ಹಾಗೂ ವರ್ತನೆಗಳನ್ನು ಅರ್ಥ ಮಾಡಿಕೊಳ್ಳುವುದು ಈ ಬುದಿಶಕ್ತಿಯು ಶಿಕ್ಷಕರು. ರಾಜಕಾರಿಣಿಗಳು ವ್ಯಾಪಾರಿಗಳು ಮತ್ತು ಧಾರ್ಮಿಕ ನಾಯಕರುಗಳಲ್ಲಿ ಕಂಡುಬರುತ್ತದೆ.
▪️ವ್ಯಕ್ತಿ ಅಂತರ್ಗತ ಬುದ್ಧಿಶಕ್ತಿ;
ಇದು ತನ್ನನ್ನು ತಾನು ಅರ್ಥ ಮಾಡಿಕೊಳ್ಳುವಿಕೆ ಮತ್ತು ಅನನ್ಯತೆಯನ್ನು ರೂಪಿಸಿಕೊಳ್ಳುವಿಕೆಗೆ ಸಂಬಂದಿಸಿದೆ.
▪️ನೈಸರ್ಗಿಕ ಬುದ್ಧಿಶಕ್ತಿ:
ಪರಿಸರದಲ್ಲಿರುವ ಪ್ರಾಣಿ ಹಾಗೂ ಸಸ್ಯ ಪ್ರಭೇದವನ್ನು ಗುರುತಿಸುವ ಸಾಮರ್ಥ್ಯವನ್ನು ಒಳಗೊಳ್ಳುತ್ತದೆ. ಈ ಬುದ್ದಿಶಕ್ತಿಯು ಹೆಚ್ಚಾಗಿ ಬೇಟೆಗಾರರು, ರೈತರು ಪ್ರವಾಸಿಗರು ಮತ್ತು ಜೀವ ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಕಂಡು ಬರುತ್ತದೆ.
ಬುದ್ಧಿಶಕ್ತಿಯ ಸೂಚ್ಯಾಂಕ :
ಬುದ್ದಿಶಕ್ತಿಯನ್ನು ಅಳೆಯಲು ಬಳಸಬಹುದಾದ ಸೂಕ್ತ ವಿಧಾನವೆಂದರೆ ಬುದ್ಧಿಶಕ್ತಿ ಸೂಚ್ಯಾಂಕವನ್ನು ಕಂಡುಹಿಡಿಯುವುದು, ಬುದ್ಧಿಶಕ್ತಿ ಸೂಚ್ಯಾಂಕವನ್ನು ಪರಿಚಯಿಸಿದವರು ಜರ್ಮನಿಯ ಮನೋವಿಜ್ಞಾನಿ ವಿಲಿಯಂ ಸ್ಟರ್ನ್ ರವರು. ಮಾನಸಿಕ ವಯಸ್ಸನ್ನು ದೈಹಿಕ ವಯಸ್ಸಿನಿಂದ ಭಾಗಿಸುವುದರ ಮೂಲಕ ಬುದ್ಧಿಶಕ್ತಿ ಸೂಚ್ಯಂಕವನ್ನು ಕಂಡು ಹಿಡಿಯಬಹುದು.

ಸಂವೇಗಾತ್ಮಕ ಬುದ್ಧಿಶಕ್ತಿ (Emotional Intelligence)
ಇಂದಿನ ಯುವಜನತೆ ಮತ್ತು ಮಕ್ಕಳಲ್ಲಿ ಆಕ್ರಮಣ ಪ್ರವೃತ್ತಿ, ಖಿನ್ನತೆ, ಆತ್ಮಹತ್ಯಾ ಪ್ರಮಾಣ, ಮಾನಸಿಕ ಒತ್ತಡ ಹೆಚ್ಚಾಗಿರುವುದನ್ನು ನಾವು ಹಿಂದೆಂದಿಗಿಂತಲೂ ಹೆಚ್ಚಾಗಿ ಕಾಣುತ್ತಿದ್ದೇವೆ. ಆದ್ದರಿಂದ ಈ ಹಿನ್ನೆಲೆಯಲ್ಲಿ ನಾವು ನೋಡಿದಾಗ ನಮ್ಮ ಮಕ್ಕಳು ಜೀವನವನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗಲು ಅಗತ್ಯವಾದಂತಹ ಸಾಮರ್ಥ್ಯಗಳನ್ನು ಬೆಳೆಸುವುದರ ಮೂಲಕ ಸರಿಯಾದ ಮಾರ್ಗದಲ್ಲಿ ಮುನ್ನಡೆಯಲು ಮಾರ್ಗದರ್ಶನದ ಅಗತ್ಯವಿದೆ.
ತನ್ನ ಮತ್ತು ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಇತರರ ಭಾವನೆಗಳಿಗೆ ಸ್ಪಂದಿಸುವ ಹಾಗೂ ರಚನಾತ್ಮಕವಾಗಿ ವರ್ತಿಸುವ ಸಾಮರ್ಥ್ಯವನ್ನು ಬೆಳೆಸಬೇಕಾಗಿದೆ. ಇದನ್ನೇ ಸಂವೇಗಾತ್ಮಕ ಬುದ್ದಿಶಕ್ತಿ ಎನ್ನುವರು. ಸಂವೇಗಾತ್ಮಕ ಬುದ್ದಿಶಕ್ತಿ ಪರಿಕಲ್ಪನೆಯನ್ನು ಜಾನ್ ಮೇಯರ್ ಮತ್ತು ಪೀಟರ್ ಸಾಲೋವೈರವರು 1990 ರಲ್ಲಿ ಜಾರಿಗೆ ತಂದರು. ವ್ಯಕ್ತಿ ತನ್ನ ಒಳಗಿನ ಮತ್ತು ಬಾಹ್ಯ ಪರಿಸರದ ವಿವಿಧ ರೀತಿಯ ಭಾವನಾತ್ಮಕ ಪ್ರಚೋದನೆಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವೇ ಸಂವೇಗಾತ್ಮಕ ಬುದ್ಧಿಶಕ್ತಿ.
ಸಂವೇಗಾತ್ಮಕ ಬುದ್ಧಿಶಕ್ತಿ 3 ಆಯಾಮಗಳನ್ನು ಒಳಗೊಂಡಿದೆ.
1. ಸಂವೇಗಾತ್ಮಕ ಪರಿಪಕ್ವತೆ
2. ಸಂವೇಗಾತ್ಮಕ ಸಾಮರ್ಥ್ಯ
3. ಸಂವೇಗಾತ್ಮಕ ಸಂವೇದನಾಶೀಲತೆ.
ಸಂವೇಗಾತ್ಮಕ ಬುದ್ಧಿಶಕ್ತಿಯ 5 ಮೂಲ ಸಾಮರ್ಥ್ಯಗಳು
▪️ಸ್ವಯಂ ಅರಿವು
▪️ಸ್ವಯಂ ನಿಯಂತ್ರಣ
▪️ಸ್ವಯಂ ಪ್ರೇರಣೆ
▪️ಅನುಭೂತಿ ಶಕ್ತಿ
▪️ಸಾಮಾಜಿಕ ಕೌಶಲಗಳು
ಟರ್ಮನ್ ರವರ ಬುದ್ದಿಶಕ್ತಿ ಸೂಚ್ಯಕಗಳ ವಿತರಣೆ ಮತ್ತು ವರ್ಗೀಕರಣ:
ಬುದ್ಧಿಶಕ್ತಿ ಪರೀಕ್ಷೆಯ ವಿಧಾನಗಳು:
ಬುದ್ಧಿಶಕ್ತಿ ಪರೀಕ್ಷೆಗಳು:
▪️ವೈಯಕ್ತಿಕ ಪರೀಕ್ಷೆ – ಶಾಬ್ಬಿಕ. ಆಶಾಬ್ಲಿಕ
▪️ಸಾಮೂಹಿಕ ಪರೀಕ್ಷೆ – ಕಾರ್ಯಾತ್ಮಕ, ಶಾಬ್ಬಿಕ, ಆಶಾಬ್ಬಿಕ
ಸೃಜನಶೀಲತೆ:
ಸೃಜನಶೀಲತೆಯು ಮೌಲ್ಯಯುತವಾದ ಮಾನವ ಗುಣಗಳಲ್ಲೊಂದು. ಸೃಜನಶೀಲ ಚಟುವಟಿಕೆಗಳು ವೈಜ್ಞಾನಿಕ ಪ್ರಗತಿಯನ್ನು ನಿರ್ಧರಿಸುತ್ತದೆ. ಯಾವ ರಾಷ್ಟ್ರಗಳು ತನ್ನ ವ್ಯಕ್ತಿಗಳಲ್ಲಿ ಸೃಜನಶೀಲತೆಯನ್ನು ಗುರುತಿಸಿ ಬೆಳಸಿ ಪ್ರೋತ್ಸಾಹಿಸುತ್ತದೆಯೋ ಅಂತಹ ರಾಷ್ಟ್ರಗಳು ಪ್ರಗತಿಪಥದಲ್ಲಿ ಇರುವುದನ್ನು ನಾವು ಕಾಣಬಹುದು. ಹಾಗಾಗಿ ಪ್ರತಿಯೊಬ್ಬ ಶಿಕ್ಷಕರೂ ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಗುರುತಿಸುವುದು ಹಾಗೂ ಅದನ್ನು ಪೋಷಿಸುವ ಕ್ರಮಗಳನ್ನು ತಿಳಿದಿರಬೇಕು.