KARTET EXAM-2025 ತಿದ್ದುಪಡಿ ಅಧಿಸೂಚನೆ ಪ್ರಕಟ.

KARTET EXAM-2025 ತಿದ್ದುಪಡಿ ಅಧಿಸೂಚನೆ ಪ್ರಕಟ.

KARTET EXAM-2025- Karnataka Teacher Eligibility Test-2025 Amendment Notification

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2025ರ ಸಂಬಂಧ ದಿನಾಂಕ:18/10/2025 ರಂದು ಹೊರಡಿಸಲಾದ ಅಧಿಸೂಚನೆಯ ಪುಟ ಸಂಖ್ಯೆ: 06 ರಲ್ಲಿ ಕಂಡಿಕೆಯ ಕ್ರ.ಸಂ.7.2 ಪತ್ರಿಕೆ-1 (1 ರಿಂದ 5ನೇ ತರಗತಿಗಳಿಗೆ) ಅಗತ್ಯವಿರುವ ಕನಿಷ್ಠ ವಿದ್ಯಾರ್ಹತೆ ರಲ್ಲಿನ ಕೊನೆಯ ಉಪಕಂಡಿಕೆಯಾದ

“ಅಥವಾ

ಪದವಿಯಲ್ಲಿ ಕನಿಷ್ಠ ಶೇ.50 ರಷ್ಟು ಅಂಕಗಳನ್ನು ಗಳಿಸಿರಬೇಕು ಹಾಗೂ ಬಿ.ಇಡಿ ಪದವಿಯಲ್ಲಿ ತೇರ್ಗಡೆ ಹೊಂದಿರುವವರು ಅಥವಾ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು” ಎಂದಿರುವುದನ್ನು ಹಿಂಪಡೆಯಲಾಗಿದೆ.

ಮೂಲ ಅಧಿಸೂಚನೆಯಲ್ಲಿರುವ ವಿಷಯಾಂಶ ಹೀಗಿದೆ.

 

7.2. ಪತ್ರಿಕೆ-1 (1 ರಿಂದ 5ನೇ ತರಗತಿಗಳಿಗೆ) ಅಗತ್ಯವಿರುವ ಕನಿಷ್ಠ ವಿದ್ಯಾರ್ಹತೆ:

ಪಿ.ಯು.ಸಿ/ ಸೀನಿಯರ್ ಸೆಕೆಂಡರಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ.50 ಅಂಕಗಳನ್ನು ಗಳಿಸಿರಬೇಕು ಹಾಗೂ ಎರಡು ವರ್ಷಗಳ D.El.Ed. ಕೋರ್ಸಿನ (ಯಾವ ಹೆಸರಿನಿಂದ ಕರೆಯುವರೋ ಆ ಹೆಸರಿನ) ದ್ವಿತೀಯ ವರ್ಷದಲ್ಲಿ ತೇರ್ಗಡೆ ಹೊಂದಿರುವವರು ಅಥವಾ ಕೋರ್ಸಿಗೆ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು.

ಅಥವಾ

ಪಿ.ಯು.ಸಿ / ಸೀನಿಯರ್ ಸೆಕೆಂಡರಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಟ ಶೇ.50 ರಷ್ಟು ಅಂಕಗಳನ್ನು ಗಳಿಸಿರಬೇಕು ಹಾಗೂ ನಾಲ್ಕು ವರ್ಷಗಳ ಬ್ಯಾಚುಲರ್ ಇನ್ ಎಲಿಮೆಂಟರಿ ಎಜುಕೇಶನ್‌ನಲ್ಲಿ (B.El.Ed) ತೇರ್ಗಡೆ ಹೊಂದಿರುವವರು ಅಥವಾ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು.

ಅಥವಾ

ಸೀನಿಯರ್ ಸೆಕೆಂಡರಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ.50 ರಷ್ಟು ಅಂಕಗಳನ್ನು ಗಳಿಸಿರಬೇಕು ಹಾಗೂ ಎರಡು ವರ್ಷಗಳ ಡಿಪ್ಲೊಮೋ ಇನ್ ಎಜುಕೇಶನ್ (ವಿಶೇಷ ಶಿಕ್ಷಣ) ತೇರ್ಗಡೆ ಹೊಂದಿರುವವರು ಅಥವಾ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು.

ಅಥವಾ

ಪದವಿಯಲ್ಲಿ ಕನಿಷ್ಟ ಶೇ.50 ರಷ್ಟು ಅಂಕಗಳನ್ನು ಗಳಿಸಿರಬೇಕು ಹಾಗೂ ಎರಡು ವರ್ಷಗಳ D.EL.Ed. ಕೋರ್ಸಿನ (ಯಾವ ಹೆಸರಿನಿಂದ ಕರೆಯುವರೋ ಆ ಹೆಸರಿನ) ದ್ವಿತೀಯ ವರ್ಷದಲ್ಲಿ ತೇರ್ಗಡೆ ಹೊಂದಿರುವವರು ಅಥವಾ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು.

ಅಥವಾ

ಪದವಿಯಲ್ಲಿ ಕನಿಷ್ಟ ಶೇ.50 ರಷ್ಟು ಅಂಕಗಳನ್ನು ಗಳಿಸಿರಬೇಕು ಹಾಗೂ ಬಿ.ಇಡಿ ಪದವಿಯಲ್ಲಿ ತೇರ್ಗಡೆ ಹೊಂದಿರುವವರು ಅಥವಾ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು,

 

▪️ಮೂಲ ಅಧಿಸೂಚನೆ ಡೌನ್ಲೋಡ್ ಮಾಡಲು CLICK HERE

▪️ತಿದ್ದುಪಡಿ ಅಧಿಸೂಚನೆ ಡೌನ್ಲೋಡ್ ಮಾಡಲು CLICK HERE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!