KEA UPCOMING NOTIFICATION-2025: ಮುಂಬರುವ ಪರೀಕ್ಷೆಗಳ ಬಗ್ಗೆ ಮಾಹಿತಿ ಇಲ್ಲಿದೆ.
KEA UPCOMING NOTIFICATION-2025:ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಕೆಳಕಂಡ ಇಲಾಖೆಗಳ/ನಿಗಮ/ಸಂಸ್ಥೆಗಳ ವಿವಿಧ ಹುದ್ದೆಗಳ ನೇಮಕಾತಿಗಾಗಿ ಸಂಕ್ಷಿಪ್ತ ಅಧಿಸೂಚನೆಯನ್ನು ಹೊರಡಿಸಿ ವಿವರವಾದ ಅಧಿಸೂಚನೆಯನ್ನು ನಂತರ ಹೊರಡಿಸಲಾಗುವುದೆಂದು ತಿಳಿಸಲಾಗಿತ್ತು.

ಈ ಕೆಳಕಂಡ ಕಾರಣಗಳಿಂದಾಗಿ ವಿವರವಾದ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿರುವುದಿಲ್ಲ.
▪️ಇಲಾಖೆಗಳಲ್ಲಿನ ಕೆಲವು ಹುದ್ದೆಗಳ ಮೀಸಲಾತಿ/ವರ್ಗಿಕರಣವನ್ನು ಪರಿಷ್ಕರಿಸಲು ಇಲಾಖೆಯು ಕೋರಿದ್ದರಿಂದ.
▪️ವಿವರವಾದ ಅಧಿಸೂಚನೆಯಲ್ಲಿನ ನಿಬಂಧನೆಗಳಲ್ಲಿ ಕೆಲವು ಪರಿಷ್ಕರಣೆ ಮಾಡಲು ಇಲಾಖೆಯು ಕೋರಿದ್ದರಿಂದ.
▪️ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆಯುವ ಸಂಬಂಧ ಇಲಾಖೆಯು ತಡೆಹಿಡಿಯಲು ವಿನಂತಿಸಿದ್ದರಿಂದ.
▪️ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಇಲಾಖೆಗಳಿಂದ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಸ್ವೀಕರಿಸಿರುವ ಪ್ರಸ್ತಾವನೆಗಳು ಈ ಕೆಳಗಿನಂತಿವೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೇಲೆ ವಿವರಿಸಿರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಈ ಮಧ್ಯೆ ಸರ್ಕಾರದ ಸುತ್ತೋಲೆ ಸಂಖ್ಯೆ ಸಿಆಸುಇ 388 ಸೆನೆನಿ 2024 ದಿನಾಂಕ 25.11.2024 ರಂತೆ ಹೊಸ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿರುವುದಿಲ್ಲ.
ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಮೇಲೆ ವಿವರಸಿರುವ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಬಯಸಿದಲ್ಲಿ, ಆ ಹುದ್ದೆಗಳಿಗೆ ನಿಗದಿಯಾಗಿರುವ ಪಠ್ಯಕ್ರಮದಂತೆ ಅಭ್ಯಾಸಮಾಡಲು ತಿಳಿಸಿದೆ.
ಸರ್ಕಾರದಿಂದ ನೇಮಕಾತಿ ಅಧಿಸೂಚನೆ ಹೊರಡಿಸಲು ಅನುಮತಿಸಿದ ತಕ್ಷಣ ಪ್ರಾಧಿಕಾರ ಅಧಿಸೂಚನೆ ಹೊರಡಿಸಿ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲು ಕ್ರಮವಹಿಸಲಾಗುವುದು ಮತ್ತು ಶೀಘ್ರವಾಗಿ ಪರೀಕ್ಷೆಗಳನ್ನು ಸಹ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
CLICK HERE TO UPDATE INFORMATION