Khanmigo Artificial Intelligence: ಆನ್ಲೈನ್ ಮೂಲಕ ಶಿಕ್ಷಕರಿಗೆ ತರಬೇತಿ-2025
Khanmigo Artificial Intelligence: ಆನ್ಲೈನ್ ಮೂಲಕ ಶಿಕ್ಷಕರಿಗೆ ತರಬೇತಿ-2025: 6 ರಿಂದ 10ನೇ ತರಗತಿಯ ಶಿಕ್ಷಕರಿಗೆ ಜ್ಞಾನಸೇತು ಕಾರ್ಯಕಮದಡಿಯಲ್ಲಿ ‘ಖಾನ್‌ಮಿಗೊ’ ಕೃತಕ ಬುದ್ಧಿಮತ್ತೆ (Rhanmigo Artificial Intelligence) ಬಳಕೆಯ ಸಂಬಂಧ ಆನ್‌ಲೈನ್ ತರಬೇತಿಗೆ ಹಾಜರಾಗುವ ಬಗ್ಗೆ
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ ಕಂಡಿಕೆ:111(vii) ರಲ್ಲಿ “ಜ್ಞಾನಸೇತು” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ ಘೋಷಿಸಲಾಗಿರುತ್ತದೆ.
ಉಲ್ಲೆಖಿತ ಸಂಖ್ಯೆ (2) ರಲ್ಲಿ ಸದರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು 2025-26 ನೇ ಸಾಲಿನ PAB’ ರಲ್ಲಿ ಅನುದಾನವನ್ನು ಅನುಮೋದಿಸಲಾಗಿರುತ್ತದೆ.
6 ರಿಂದ 10ನೇ ತರಗತಿಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರು ಅವರ ತರಗತಿ ಬೋಧನೆಯಲ್ಲಿ ಪಾಠ ಯೋಜನೆ, ಮತ್ತು ರಸಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಪರಿಣಾಮಕಾರಿ ತರಗತಿ ಪ್ರಕ್ರಿಯೆಗಳನ್ನು ನಡೆಸಲು ಅನುವಾಗುವಂತೆ ಖಾನ್ “ಮಿಗೊ ಕೃತಕ ಬುದ್ಧಿಮತ್ತೆ (Khanmigo AI) ಒಳಗೊಂಡಂತೆ ಪೂರಕ ಬೋಧನಾ ಉಪಕರಣಗಳನ್ನು(Teaching tools) ಬಳಸುವ ಸಂಬಂಧ ರಾಜ್ಯದ ಎಲ್ಲಾ ಆದರ್ಶ, ಕೆ.ಪಿ.ಎಸ್, ಕೆ.ಜಿ.ಬಿ.ವಿ Type-1 & 3 ಹಾಗೂ ಪಿ.ಎಂ.ಶ್ರೀ ಶಾಲೆಗಳಲ್ಲಿ ಗಣಿತ, ವಿಜ್ಞಾನ ಹಾಗೂ ಆಂಗ್ಲ ಭಾಷೆ ಭೋದಿಸುತ್ತಿರುವ ಎಲ್ಲಾ ಶಿಕ್ಷಕರು, ಮುಖ್ಯ ಶಿಕ್ಷಕರು, ಜಿಲ್ಲಾ ಮತ್ತು ಬ್ಲಾಕ್ ಹಂತದ ನೋಡಲ್ ಅಧಿಕಾರಿಗಳು ದಿನಾಂಕ:02.09.2025 ರಂದು zoom/webinar ಮೂಲಕ ಆಯೋಜಿಸಲಾದ ಆನ್‌ಲೈನ್ ತರಬೇತಿಯಲ್ಲಿ ಕಡ್ಡಾಯವಾಗಿ ಭಾಗವಹಿಸುವುದು.
ಈ ಸಂಬಂಧ ರಾಜದ ಎಲ್ಲಾ ಉಪನಿರ್ದೇಶಕರು(ಆಡಳಿತ) ರವರು ಸಂಬಂಧಿಸಿದ ಶಾಲೆಗಳ ಎಲ್ಲಾ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಖಾನ್ ಅಕಾಡೆಮಿ ಪೋರ್ಟಲ್‌ನಲ್ಲಿ ದಿನಾಂಕ:15.09.2025 ರೊಳಗೆ Activate ಮಾಡಲು ಕ್ರಮವಹಿಸುವುದು ಹಾಗೂ ಪ್ರತಿ ಜಿಲ್ಲೆ ಹಾಗೂ ಬ್ಲಾಕ್ ಹಂತದಲ್ಲಿ ಜ್ಞಾನಸೇತು ಕಾರ್ಯಕ್ರಮದ ನೋಡಲ್ ಅಧಿಕಾರಿಗಳು ಹಾಗೂ ಸಂಬಂಧಿಸಿದ ಶಾಲಾ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರನ್ನು zoom ಮೂಲಕ ಆಯೋಜಿಸಲಾದ ಆನ್‌ಲೈನ್ ತರಬೇತಿಗೆ ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ.
ಸೂಚನೆ:
Batch 1 : ಆದರ್ಶ, ಕೆಪಿಎಸ್ ಮತ್ತು ಕೆಜಿಬಿವಿ Type-1 &3 ದಿನಾಂಕ :02.09.2025 ರಂದು ಬೆಳಿಗ್ಗೆ 11 ಗಂಟೆಗೆ
Batch 2 : ಜಿಲಾ ಹಾಗೂ ತಾಲ್ಲೂಕು ಹಂತದ ನೋಡಲ್ ಅಧಿಕಾರಿಗಳು ಹಾಗೂ ಪಿಎಂಶ್ರೀ ಶಾಲಾ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ದಿನಾಂಕ ದಿನಾಂಕ:02.09.2025 ರಂದು ಮಧ್ಯಾಹ್ನ 02-30 ಗಂಟೆಗೆ
ಸಂಬಂಧಿಸಿದ ತರಬೇತಿಯ Zoom/webinar link ನ್ನು ಒಂದು ದಿನ ಮುಂಚಿತವಾಗಿ ತಿಳಿಸಲಾಗುವುದು.