KREIS: 2025-26 ನೇ ಶೈಕ್ಷಣಿಕ ಸಾಲಿಗೆ ವಿಶೇಷ ವರ್ಗಗಳ ಅಭ್ಯರ್ಥಿಗಳಿಗೆ 6 ನೇ ತರಗತಿಗೆ ದಾಖಲಾತಿ, ವಿಶೇಷ ಮಕ್ಕಳಿಗೆ ಮೀಸಲು ನಿಗದಿ.

KREIS: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 2025-26 ನೇ ಶೈಕ್ಷಣಿಕ ಸಾಲಿಗೆ ವಿಶೇಷ ವರ್ಗಗಳ ಅಭ್ಯರ್ಥಿಗಳಿಗೆ 6 ನೇ ತರಗತಿಗೆ ದಾಖಲಾತಿ ಮಾಡುವ ಕುರಿತು.

KREIS : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವನ್ನು ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲಿ ಉಚಿತವಾಗಿ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ.

ಕ್ರೈಸ್ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ ಅಟಲ್ ಬಿಹಾರಿ ವಾಜಪೇಯಿ/ ಶ್ರೀಮತಿ ಇಂದಿರಾಗಾಂಧಿ/ಡಾ॥ ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಮತ್ತು ಶ್ರೀ ನಾರಾಯಣ ಗುರು ಇತ್ಯಾದಿ ಹೆಸರಿನ ಒಟ್ಟು 817 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ವಸತಿ ಶಾಲೆಗಳ ಪ್ರಾರಂಭಿಕ ತರಗತಿಯಾದ 6ನೇ ತರಗತಿಗೆ 2025-26 ನೇ ಸಾಲಿನ ಪ್ರವೇಶಕ್ಕಾಗಿ ಸರ್ಕಾರದ ಆದೇಶಗಳನ್ವಯ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ.

ವಸತಿ ಶಾಲೆಗಳಲ್ಲಿ 6 ನೇ ತರಗತಿಗೆ ಒಟ್ಟು 41500 ಸ್ಥಾನಗಳು ಲಭ್ಯವಿರುತ್ತವೆ ಸದರಿ ಸ್ಥಾನಗಳಿಗೆ ಎರಡು ವಿಧಾನಗಳ ಮೂಲಕ ದಾಖಲಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು ಇದರಲ್ಲಿ ಶೇ.50 ರಷ್ಟು (20750) ಸ್ಥಾನಗಳನ್ನು ಪ್ರವೇಶ ಪರೀಕ್ಷೆ ಮೂಲಕ ದಾಖಲಾತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾದಿಂದ ದಿನಾಂಕ: 15.02.2025 ರಂದು ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿದೆ ಹಾಗೂ ಉಳಿದ ಶೇ.50 ರಷ್ಟು (20750) ಸ್ಥಾನಗಳನ್ನು ವಿಶೇಷ ವರ್ಗಗಳ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ ದಾಖಲಾತಿ ಮಾಡಿಕೊಳ್ಳಲು ಈ ಕೆಳಕಂಡಂತೆ ಅವಕಾಶವನ್ನು ಕಲ್ಪಿಸಲಾಗಿದೆ

ವಸತಿ ಶಾಲೆಗಳಲ್ಲಿ ವಿಶೇಷ ಮಕ್ಕಳಿಗೆ ಮೀಸಲು ನಿಗದಿ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕೈಸ್) ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಆರನೇ ತರಗತಿ ದಾಖಲಾತಿಗೆ ವಿಶೇಷ ಮಕ್ಕಳಿಗೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿರುವ 800ಕ್ಕೂ ಅಧಿಕ ವಸತಿ ಶಾಲೆಗಳಲ್ಲಿ ಆರನೇ ತರಗತಿಗೆ ದಾಖಲಾಗಲು ಒಟ್ಟಾರೆ 41,500 ಸೀಟುಗಳು 4. ಲಭ್ಯವಿವೆ. ಇದರಲ್ಲಿ 21,750 ಸೀಟುಗಳನ್ನು ವಿಶೇಷ ಮಕ್ಕಳಿಗಾಗಿ ಮೀಸಲಿಡಲಾಗಿದೆ. ಇವರಿಗೆ ಪ್ರವೇಶ ಪರೀಕ್ಷೆ ಇಲ್ಲದೆ ನೇರವಾಗಿ ಪ್ರವೇಶ ನೀಡಲಾಗುತ್ತದೆ. ಸಫಾಯಿ ಕರ್ಮಚಾರಿ/ ಚಿಂದಿ ಆಯುವ/ ಸ್ಮಶಾನ ಕಾರ್ಮಿಕ ಮಕ್ಕಳಿಗಾಗಿ ಶೇ.10 ಮೀಸಲಾತಿ ಇರಲಿದೆ. ಬಾಲ ಕಾರ್ಮಿಕರು/ ಜೀತ ವಿಮುಕ್ತ ಕಾರ್ಮಿಕರ ಮಕ್ಕಳು/ ಮಾಜಿ ದೇವದಾಸಿಯರ ಮಕ್ಕಳಿಗಾಗಿ ಶೇ.10 ಮೀಸಲು ಇದೆ. ಅಂಗವಿಕಲ, ಅನಾಥ ಮಕ್ಕಳಿಗೆ ಶೇ.10, ಅಲೆಮಾರಿ, ಅರೆ ಅಲೆಮಾರಿ ಮಾಜಿ ಸೈನಿಕ/ಯೋಜನಾ ನಿರಾಶ್ರಿತರ ಮಕ್ಕಳಿಗಾಗಿ ಶೇ.10 ಮತ್ತು ಪರಿಶಿಷ್ಟರ ಆಶ್ರಮ ವಸತಿಶಾಲೆಗಳಲ್ಲಿ ಕಲಿತವರಿಗೆ ಶೇ.10 ಸೇರಿ ಒಟ್ಟು ಶೇ.50 ಸೀಟುಗಳನ್ನು ನೀಡಲಾಗುತ್ತದೆ.. ಈ ಮಕ್ಕಳಿಗಾಗಿ ದಾಖಲಾತಿ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಕ್ರೈಸ್ ತಿಳಿಸಿದೆ.  kreis.karnataka.gov.in  ಸಂಪರ್ಕ ಮಾಡಿ ಎಂದು ತಿಳಿಸಿದೆ.

ವಿಶೇಷ ವರ್ಗಗಳ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ ದಾಖಲಾತಿ:

ಸರ್ಕಾರದ ಆದೇಶ ಸಂಖ್ಯೆ: ಸಕಇ 399 ಎಂಡಿಎಸ್ 2022 ಬೆಂಗಳೂರು, ದಿನಾಂಕ: 15.03.2024 ರಂತೆ ಈ ಕೆಳಕಂಡ ವಿಶೇಷ ವರ್ಗಗಳ ಅಭ್ಯರ್ಥಿಗಳಿಗೆ ಶೇ.50% ಅಂದರೆ 20,750 ಸ್ನಾನಗಳನ್ನು ಮೀಸಲಿಟ್ಟು ಪ್ರವೇಶ ಪರೀಕ್ಷೆ ಇಲ್ಲದೇ ನೇರ ದಾಖಲಾತಿಗಾಗಿ ಅವಕಾಶವನ್ನು ಕಲ್ಪಿಸಲಾಗಿದ್ದು ವಿವರ ಕೆಳಕಂಡಂತಿದೆ.

ಮೇಲ್ಕಂಡ ವಿಶೇಷ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೇರವಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ವ್ಯಾಪ್ತಿಯ ವಸತಿ ಶಾಲೆಗಳಿಗೆ ನೇರವಾಗಿ ದಾಖಲಾತಿಯನ್ನು ಮಾಡಿಕೊಳ್ಳುವ ಸಂಬಂಧ KREIS ವೆಬ್ ಸೈಟ್ : https://kreis.karnataka.gov.in ನಲ್ಲಿ ಅವಕಾಶವನ್ನು ಕಲ್ಪಿಸಲಾಗುವುದು.

ಇದಕ್ಕೆ ಸಂಬಂಧಿಸಿದಂತೆ 5ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಮುಗಿದು ಫಲಿತಾಂಶ ಪ್ರಕಟವಾದ ನಂತರದಲ್ಲಿ, KREIS ವೆಬ್ ಸೈಟ್ : https://krels.karnataka.gov.in ನಲ್ಲಿ ಅವಕಾಶವನ್ನು ನೀಡಲಾಗುವುದು. ಆದುದರಿಂದ ಸಂಘದ ವಸತಿ ಶಾಲೆಗಳಲ್ಲಿ ವಿಶೇಷ ವರ್ಗದ ಅಡಿಯಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ಮೇಲ್ಕಂಡ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಿ, ಪ್ರವೇಶಾತಿ ಪತ್ರವನ್ನು Download ಮಾಡಿಕೊಳ್ಳಬಹುದು. ತದನಂತರ ಸಂಬಂಧಪಟ್ಟ ವರ್ಗ/ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಆಧಾರ್ ಕಾರ್ಡ್, 5ನೇ ತರಗತಿ ಅಂಕಪಟ್ಟಿ Passport Size & Stamp Size Photo ಗಳೊಂದಿಗೆ ತಮ್ಮ ಪ್ರವೇಶಾತಿ ಪತ್ರದೊಂದಿಗೆ ನಿಯಮಾನುಸಾರ ಆಯ್ಕೆಗೊಂಡ ವಸತಿ ಶಾಲೆಯಲ್ಲಿ ತಮ್ಮ ದಾಖಲಾತಿಗಳನ್ನು ನೀಡಿ. 6ನೇ ತರಗತಿಗೆ ದಾಖಲಾತಿ ನಡೆಯಬಹುದಾಗಿದೆ.

 

ಹೆಚ್ಚಿನ ಮಾಹಿತಿಗಾಗಿ – CLICK HERE

ಅಧಿಕೃತ ವೆಬ್ಸೈಟ್ ಲಿಂಕ್- CLICK HERE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!