KREIS Schools Admission 2026–27 ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ 6 ನೇ ತರಗತಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಅಹ್ವಾನ
KREIS Schools Admission 2026–27: ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಸತಿ ಸಹಿತ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ವತಿಯಿಂದ 817 ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ/ಅಟಲ್ ಬಿಹಾರಿ ವಾಜಪೇಯಿ/ಶ್ರೀ ನಾರಾಯಣ ಗುರು ಇತ್ಯಾದಿ ಹೆಸರಿನಿಂದ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ.
ಈ ಎಲ್ಲಾ ವಸತಿ ಶಾಲೆಗಳಿಗೆ ಪ್ರಾರಂಭಿಕ ತರಗತಿಯಾದ 6ನೇ ತರಗತಿಗೆ ಒಟ್ಟು 41500 ಸೀಟುಗಳಲ್ಲಿ ಶೇ 50 ರಷ್ಟು ಅಂದರೆ 20750 ಸೀಟುಗಳನ್ನು ಪ್ರವೇಶ ಪರೀಕ್ಷೆ ನಡೆಸಿ ಆನ್‌ಲೈನ್ ಪ್ರಕ್ರಿಯೆ ಮುಖಾಂತರ ವಿದ್ಯಾರ್ಥಿಗಳನ್ನು ಭರ್ತಿ ಮಾಡಲು ಸರ್ಕಾರವು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿರುತ್ತದೆ.
ಅರ್ಜಿ ಭರ್ತಿಮಾಡುವಾಗ ಅಭ್ಯರ್ಥಿಯ ವಿವರಗಳಾದ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಸ್ವಂತ ಜಿಲ್ಲೆ ಮತ್ತು ತಾಲ್ಲೂಕು ಹಾಗೂ ಇನ್ನಿತರೆ ಮಾಹಿತಿಗಳನ್ನು Student Achievement Tracking System (SATS) ತಂತ್ರಾಂಶದಿಂದ SATS ಸಂಖ್ಯೆಯನ್ನು ನಮೂದಿಸಿ ಪಡೆಯಲಾಗುವುದು.
ಅಭ್ಯರ್ಥಿಯ SATS ಸಂಖ್ಯೆಯನ್ನು ನಮೂದಿಸಿದಾಗ ಮೇಲಿನ ಎಲ್ಲಾ ವಿವರಗಳನ್ನು ಕಂಪ್ಯೂಟರ್ ಪರದೆಯ ಮೇಲೆ ನೋಡಬಹುದು. ಯಾವುದಾದರೂ ಮಾಹಿತಿಯಲ್ಲಿ ದೋಷವಿದ್ದರೇ ಸಂಬಂದಪಟ್ಟ ಶಾಲೆಯ ಮುಖ್ಯೋಪಾದ್ಯಾಯರನ್ನು ಸಂಪರ್ಕಿಸಿ ಮಾಹಿತಿಯನ್ನು ಸರಿಪಡಿಸಿಕೊಂಡು ಅನಂತರ ಅರ್ಜಿ ಸಲ್ಲಿಸುವುದು.
ಗಮನಿಸಿ: ಸೀಟು ಹಂಚಿಕೆಯು ಅಭ್ಯರ್ಥಿಯ ಲಿಂಗ, ಜಾತಿ ಮತ್ತು ಆದಾಯದ ಆಧಾರದ ಮೇಲೆ ಹಾಗೂ ಇತರ ಮಾಹಿತಿಯ ಮೇಲೆ ಅವಲಂಬಿತವಾಗಿರುವುದರಿಂದ SATS ನಲ್ಲಿರುವ ಅಭ್ಯರ್ಥಿಯ ಎಲ್ಲಾ ಮಾಹಿತಿಗಳನ್ನು ತಪ್ಪದೇ ಪರಿಶೀಲಿಸಿಕೊಳ್ಳತಕ್ಕದ್ದು, ಅಗತ್ಯವಿದ್ದಲ್ಲಿ ಸದರಿ ಶಾಲೆಯಲ್ಲಿ ಮಾಹಿತಿಯನ್ನು ಸರಿಪಡಿಸತಕ್ಕದ್ದು.
1. ಅಭ್ಯರ್ಥಿಯು ತನ್ನ ಮೀಸಲಾತಿಯಡಿಯಲ್ಲಿ ಸೀಟು ಪಡೆಯಲು ಅರ್ಹತೆಗೊಳ್ಳಲು, ತಾನು ಯಾವ ಮೀಸಲಾತಿ ಅಡಿಯಲ್ಲಿ ಅರ್ಹನಿರುವನೋ ಅಂದರೆ, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಅಥವಾ ಪ್ರವರ್ಗ-1 ಅಥವಾ ಇತರೆ ಹಿಂದುಳಿದ ವರ್ಗಕ್ಕೆ ಸಂಬಂಧಿಸಿದ RD ಸಂಖ್ಯೆಯನ್ನೊಳಗೊಂಡ ನಿಗದಿತ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿಯನ್ನು ಪಡೆದು ಸಲ್ಲಿಸತಕ್ಕದ್ದು.
2. ಅಭ್ಯರ್ಥಿಯು ವಿಶೇಷ ವರ್ಗಕ್ಕೆ ಸೇರಿದ ಅಭ್ಯರ್ಥಿ ಆಗಿದ್ದಲ್ಲಿ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರಗಳನ್ನು ಪಡೆದಿರತಕ್ಕದ್ದು.
3. ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ತನ್ನ ಪೋಷಕರ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ತಪ್ಪದೇ ನಮೂದಿಸಬೇಕು.
4. ರಾಜ್ಯದ ಎಲ್ಲಾ ತಾಲ್ಲೂಕಿನ ಸ್ಥಳೀಯ ಅಭ್ಯರ್ಥಿಗಳಿಗೆ ಶೇ.75, ಅದೇ ಜಿಲ್ಲೆಯ ಇತರೆ ತಾಲ್ಲೂಕಿನ ಸ್ಥಳೀಯ ಅಭ್ಯರ್ಥಿಗಳಿಗೆ ಶೇ.25 ರಷ್ಟು ಸ್ಥಾನಗಳನ್ನು ಹಂಚಿಕೆ ಮಾಡಲಾಗುವುದು. ಅಭ್ಯರ್ಥಿಯು ತನ್ನ ಸ್ವಂತ ತಾಲ್ಲೂಕಿನ ಎಲ್ಲಾ ವಸತಿ ಶಾಲೆಗಳಿಗೆ ಪ್ರವೇಶ ಪಡೆಯಲು ಮೀಸಲಾತಿಗನುಗುಣವಾಗಿ ಅರ್ಹನಾಗಿರುತ್ತಾನೆ. ಸೀಟು ಹಂಚಿಕೆಯು ಜಿಲ್ಲಾ ಹಂತದಲ್ಲಿ ಆನ್‌ಲೈನ್ ಮುಖಾಂತರ ನಡೆಸುವುದರಿಂದ ವಸತಿ ಶಾಲೆಯಿಂದ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಯು ತನ್ನ ಸ್ವಂತ ತಾಲ್ಲೂಕಿನ ಯಾವ ವಸತಿ ಶಾಲೆಗಳಲ್ಲಿ ಪ್ರವೇಶ ಬಯಸುತ್ತಾರೋ ಅಂತಹ ವಸತಿ ಶಾಲೆಗಳಿಗೆ ಆಧ್ಯತೆ ಅನುಸಾರ ತನ್ನ ಇಚ್ಛೆ / ಆಯ್ಕೆಗಳನ್ನು ಕಡ್ಡಾಯವಾಗಿ ನೀಡತಕ್ಕದ್ದು.
5. ಅಭ್ಯರ್ಥಿಯು ವಸತಿ ಶಾಲೆಯ ಪ್ರವೇಶಕ್ಕಾಗಿ ಶಾಲೆಯ ಆದ್ಯತೆಗಳನ್ನು ನೀಡುವ ಸಲುವಾಗಿ ಅರ್ಜಿ ಸಲ್ಲಿಸುವ ಶಾಲೆಯಿಂದ “ಶಾಲಾ ಆದ್ಯತೆ ವಿವರವನ್ನು ಸಲ್ಲಿಸುವ ಪ್ರತಿ” ಯನ್ನು ಪಡೆದು ಆದ್ಯತೆಗಳನ್ನು ಬರೆದು ಅಭ್ಯರ್ಥಿಯ ಹಾಗು ಪೋಷಕರ ಸಹಿಯೊಂದಿಗೆ ವಸತಿ ಶಾಲೆಯ ಮುಖ್ಯಸ್ಥರಿಗೆ ನೀಡಬೇಕು.
6. ಅರ್ಜಿಯನ್ನು ವಸತಿ ಶಾಲೆಯಲ್ಲಿ ಸಲ್ಲಿಸಿದ ನಂತರ ಅದೇ ಶಾಲೆಯಿಂದ ಸ್ವೀಕೃತಿಯನ್ನು ಅಥವಾ ಅರ್ಜಿಯ ಪ್ರತಿಯನ್ನು ಪಡೆದು ಆಯ್ಕೆ ಪ್ರಕ್ರಿಯೆಯ ಎಲ್ಲಾ ಹಂತದವರೆವಿಗೂ ತನ್ನ ಬಳಿ ಇರಿಸಿಕೊಳ್ಳತಕ್ಕದ್ದು.
ಸೂಚನೆ: ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ / ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ/ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ/ ಸಂಘದ ಅಡಿ ಕಾರ್ಯನಿರ್ವಹಿಸುತ್ತಿರುವ ಹತ್ತಿರದ ವಸತಿ ಶಾಲೆಗಳನ್ನು / ಕಾಲೇಜುಗಳನ್ನು ಸಂಪರ್ಕಿಸುವುದು.
ಸೀಟು ಹಂಚಿಕೆ – ವಿಶೇಷ ಸೂಚನೆಗಳು:
1. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಯು ಸೇರ ಬಯಸುವ ವಸತಿ ಶಾಲೆಗಳ ವಿವರಗಳನ್ನು ಅಂದರೆ ಇಚ್ಛೆ (Options) ಗಳನ್ನು ಕಡ್ಡಾಯವಾಗಿ ಆದ್ಯತಾ ಕ್ರಮದಲ್ಲಿ ನಮೂದಿಸಬೇಕು. ಒಂದು ವೇಳೆ ಅಭ್ಯರ್ಥಿಯು ಆದ್ಯತಾ ಕ್ರಮದಲ್ಲಿ ಯಾವುದೇ ಶಾಲೆಗಳ ವಿವರಗಳನ್ನು ನೀಡದಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಸೀಟು ಹಂಚಿಕೆಗೆ ಪರಿಗಣಿಸಲಾಗುವುದಿಲ್ಲ.
2. ಇಚ್ಚೆ (Options) ಗಳನ್ನು ಎಷ್ಟು ಬೇಕಾದರೂ ನಮೂದಿಸಬಹುದು. ಅದಕ್ಕೆ ಯಾವುದೇ ಸಂಖ್ಯಾಮಿತಿ ಇರುವುದಿಲ್ಲ. ಒಬ್ಬ ವಿದ್ಯಾರ್ಥಿ/ನಿಯು, ತನ್ನ ಸ್ವಂತ ಆದ್ಯತೆಗೆ ಅನುಗುಣವಾಗಿ ತಾನು ಬಯಸುವಷ್ಟು ಸಂಖ್ಯೆಯ ಇಚ್ಛೆಗಳನ್ನು ನಮೂದಿಸಬಹುದು. ಸೀಟು ಸಿಗದಿದ್ದ ಪಕ್ಷದಲ್ಲಿ ಉಂಟಾಗುವ ನಿರಾಸೆಯನ್ನು ತಪ್ಪಿಸುವ ದೃಷ್ಟಿಯಿಂದ ವಿದ್ಯಾರ್ಥಿಗಳು ಇಚ್ಛೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಮೂದಿಸುವಂತೆ ಸಲಹೆ ನೀಡಲಾಗಿದೆ.
3. ವಿದ್ಯಾರ್ಥಿಗಳು, ಯಾವ ಆಯ್ಕೆಗಳನ್ನು ನಮೂದಿಸಬೇಕು ಎನ್ನುವುದನ್ನು ಕುರಿತು ಮನೆಯಲ್ಲಿ ಪೂರ್ವಭಾವಿ ಸಿದ್ಧತೆಯನ್ನು ಮಾಡಿಕೊಳ್ಳುವುದು ಸೂಕ್ತ. ವಿದ್ಯಾರ್ಥಿಯು ಅಧಿಸೂಚನೆಯಲ್ಲಿ ನೀಡಿರುವ ಶಾಲೆಯ ಹೆಸರುಗಳನ್ನು ಒಂದು ಪ್ರತ್ಯೇಕವಾದ ಹಾಳೆಯಲ್ಲಿ ಬರೆದುಕೊಳ್ಳಬೇಕು.
4. ನಂತರ ಈ ರೀತಿ ಬರೆದುಕೊಂಡ ನಂತರ ಶಾಲೆಗಳ ಪಟ್ಟಿಗೆ ಆದ್ಯತಾ ಕ್‌ರಮದ ಸಂಖ್ಯೆಯನ್ನು ನೀಡಬೇಕು.
5. ನಂತರ ನಿಮಗೆ ಅತ್ಯಂತ ಹೆಚ್ಚು ಇಷ್ಟವಿರುವ ಶಾಲೆಯನ್ನು ಮೊದಲ ಆದ್ಯತೆಯ ಕ್ರಮ ಸಂಖ್ಯೆಗಳಲ್ಲಿ ನಮೂದಿಸಿ. ಆನಂತರ ಇಷ್ಟವಿರುವ ಇತರ ಶಾಲೆಗಳನ್ನು ನಮೂದಿಸಿ. ಹೀಗೆ ಮೊದಲಿನ ಇಚ್ಛೆಗೆ ಶೇ. 100ರಷ್ಟು ಆದ್ಯತೆಯೆಂದು ಪರಿಗಣಿಸಿದರೆ, ನಂತರದ ಆದ್ಯತೆಗಳು ಇಳಿಕೆ / ಅವರೋಹಣ (descending) ಕ್ರಮದಲ್ಲಿ ಇರಬೇಕು.
6. ಸೀಟು ಹಂಚಿಕೆ ಪಡೆದ ಪ್ರತಿಯೊಬ್ಬ ಅಭ್ಯರ್ಥಿಯೂ ಕೂಡ ನಿಗದಿತ ಸಮಯದೊಳಗೆ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಸಂಬಂಧಿಸಿದ ವಸತಿ ಶಾಲೆಗೆ ಕಡ್ಡಾಯವಾಗಿ ಪ್ರವೇಶ ಪಡೆಯತಕ್ಕದ್ದು.
ವಂಚಕರ ಬಗ್ಗೆ ಎಚ್ಚರದಿಂದಿರಿ:
ಕೆಲವು ವ್ಯಕ್ತಿಗಳು, ಕ.ಪ.ಪ್ರಾದ ಅಧಿಕಾರಿಗಳು ನಮಗೆ ಚೆನ್ನಾಗಿ ಗೊತ್ತು ಎಂದು ಹೇಳಿಕೊಂಡು ಕ.ಪ.ಪ್ರಾ.ದ ಮೂಲಕ ಅಕ್ರಮವಾಗಿ ನಿಮಗೆ ಸೀಟು ದೊರಕಿಸಿಕೊಡುವ ಆಶ್ವಾಸನೆ ನೀಡಬಹುದು. ಆದರೆ, ಕ.ಪ.ಪ್ರಾ.ವು ಸೀಟು ಹಂಚಿಕೆಯಲ್ಲಿ ಯಾವುದೇ ಅಕ್ರಮ ವ್ಯವಹಾರಕ್ಕೆ ಆಸ್ಪದ ನೀಡುವುದಿಲ್ಲ. ಅಂಥ ಯಾರಾದರೂ ವ್ಯಕ್ತಿಗಳು ನಿಮ್ಮ ಗಮನಕ್ಕೆ ಬಂದ ಪಕ್ಷದಲ್ಲಿ, ಕೂಡಲೇ ಲಿಖಿತ ರೂಪದಲ್ಲಿಯಾಗಲೀ ಅಥವಾ ಪ್ರಾಧಿಕಾರಕ್ಕೆ ಇ-ಮೇಲ್ ಮಾಡುವ ಮೂಲಕವಾಗಲೀ ಕ.ಪ.ಪ್ರಾ. ದ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಿ ಸೀಟು ಹಂಚಿಕೆಯು, ಸರ್ಕಾರ ನೀಡುವ ಸೀಟ್ ಮ್ಯಾಟ್ರಿಕ್ಸ್ ಅನ್ನು ಕಟ್ಟುನಿಟ್ಟಾಗಿ ಆಧರಿಸಿರುತ್ತದೆ. ಹಾಗೆಯೇ, ವಿದ್ಯಾರ್ಥಿ/ನಿಯ ಮೆರಿಟ್, ಮೀಸಲಾತಿ ಮತ್ತು ಆತ/ ಆಕೆ ನಮೂದಿಸಿರುವ ಇಚ್ಛೆಯನ್ನು ಮಾತ್ರವೇ ಆಧರಿಸಿ ಅವರಿಗೆ ಸೀಟನ್ನು ಹಂಚಿಕೆ ಮಾಡಲಾಗುವುದು. ಆದ್ದರಿಂದ, ಸುಳ್ಳು ಆಶ್ವಾಸನೆಗಳನ್ನು ಕೊಡುವ ಯಾರೇ ಅಪರಿಚಿತ ವ್ಯಕ್ತಿಗಳನ್ನು ನಂಬತಕ್ಕದ್ದಲ್ಲ.

CLICK HERE TO DOWNLOAD NOTIFICATION
CLICK HERE TO ONLINE APPLICATION