Master Mitra

KREIS- DRAFT RULES- ವಸತಿ ಶಾಲೆಗಳಲ್ಲಿ 3517 ಹುದ್ದೆಗಳು,ಬಡ್ತಿ ಮೂಲಕ ಶೇ.75 ಶಿಕ್ಷಕರ ನೇಮಕಾತಿ, ವೃಂದ ನೇಮಕಾತಿ ನಿಯಮಗಳಿಗೆ ತಿದ್ದುಪಡಿ.

KREIS- DRAFT RULES- ವಸತಿ ಶಾಲೆಗಳಲ್ಲಿ 3517 ಹುದ್ದೆಗಳು,ಬಡ್ತಿ ಮೂಲಕ ಶೇ.75 ಶಿಕ್ಷಕರ ನೇಮಕಾತಿ, ವೃಂದ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಅಧಿಸೂಚನೆ ಪ್ರಕಟ.

KREIS: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿರುವ ವಿವಿಧ ವಸತಿ ಶಾಲೆಗಳಲ್ಲಿನ 3517 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಇಲ್ಲಿನ ಶಿಕ್ಷಕರಿಗೆ ಸಿಹಿಸುದ್ದಿ ನೀಡಿದೆ. ಇನ್ನುಮುಂದೆ ಶೇ.75 ಹುದ್ದೆಗಳನ್ನು ಬಡ್ತಿ ಮೂಲಕವೇ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಘೋಷಿಸಿದೆ. ಇದಕ್ಕಾಗಿ ಪ್ರಸ್ತಾಪಿತ ವೃಂದ ಹಾಗೂ ನೇಮಕಾತಿ ನಿಯಮಗಳಲ್ಲಿ ಹಲವು ತಿದ್ದುಪಡಿಗಳನ್ನು ಮಾಡಿ ಕರಡು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ಹಾಗೂ ಸಂಬಂಧಪಟ್ಟವರಿಂದ ಸಲಹೆ- ಸೂಚನೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಹಿಂದಿನ ನಿಯಮಗಳು ಹಾಗೂ ಪ್ರಸ್ತಾಪಿತ ತಿದ್ದುಪಡಿಗಳನ್ನು ನೀಡಲಾಗಿದೆ.

KREIS-ಕರಡು ನಿಯಮಗಳಿಗೆ ಆಕ್ಷೇಪಣೆ ಸಲ್ಲಿಕೆಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.

ಬಡ್ತಿ ಮೂಲಕ ಪ್ರಾಂಶುಪಾಲರ ಹುದ್ದೆ: ಪ್ರಾಂಶುಪಾಲರ ಹುದ್ದೆಗಳನ್ನು ಶೇ.100ರಷ್ಟು, ಉಪಪ್ರಾಂಶುಪಾಲರ ಶೇ.75 ಹುದ್ದೆ ಗಳನ್ನು ಬಡ್ತಿ ಆಧಾರದಲ್ಲಿ ತುಂಬಬೇಕು. ಸೇವಾವಧಿ ಆಧಾರದಲ್ಲಿ ಜೇಷ್ಠತೆ ನಿರ್ಧರಿಸಬೇಕು. ದೈಹಿಕ ಶಿಕ್ಷಣ ಶಿಕ್ಷಕರು, ಸಂಗೀತ, ಕರಕುಶಲ, ಚಿತ್ರಕಲೆ ಶಿಕ್ಷಕರನ್ನು ಇದರಿಂದ ಹೊರಗಿಡಲಾಗಿದೆ.

ಹಿಂದಿ ಕೋರ್ಸ್‌ಗಳಿಗೆ ಕೊಕ್: ಹಿಂದಿ ಭಾಷಾ ಶಿಕ್ಷಕರ 811 ಹುದ್ದೆಗಳನ್ನು ಸೃಜಿಸಲಾಗಿದ್ದು, ಹಿಂದಿ ಪ್ರಚಾರ ಪರಿಷತ್, ಹಿಂದಿ ಸೇವಾ ಸಮಿತಿಗಳು ನೀಡುವ ಪದವಿ ಹಾಗೂ ಬಿ.ಇಡಿಗೆ ತತ್ಸಮಾನವಾದ ಹಿಂದಿ ರತ್ನ, ರಾಜಭಾಷಾ ಪ್ರವೀಣ್, ರಾಷ್ಟ್ರಭಾಷಾ ಪ್ರವೀಣ್, ಹಿಂದಿ ಶಿಕ್ಷಕ ಕೋರ್ಸ್ ಮೊದಲಾದ ಕೋರ್ಸ್‌ಗಳನ್ನು ಕೈಬಿಡಲಾಗಿದೆ.

ಬಡ್ತಿ ಮೂಲಕ ಶೇ.75 ಶಿಕ್ಷಕರ ನೇಮಕಾತಿ: ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಶಿಕ್ಷಕರ ನೇಮಕಾತಿಗೆ ಶೇ.75ರಷ್ಟು ಹುದ್ದೆಗಳನ್ನು ಬಡ್ತಿ ಮೂಲಕ ಭರ್ತಿ ಮಾಡಬೇಕೆಂದು ನಿಯಮ ರೂಪಿಸಲಾಗಿದೆ. ಈ ಹಿಂದೆ ಶೇ.50 ಹುದ್ದೆಗಳು ನೇ ನೇಮಕಾತಿ ಹಾಗೂ ಶೇ.50 ಹುದ್ದೆಗಳು ಬಡ್ತಿ ಮೂಲಕ ತುಂಬಿಕೊಳ್ಳುವ ನಿಯಮವಿತ್ತು. ಆದರೆ, ಅಧಿಸೂಚನೆಯಲ್ಲಿ ಸೂಚಿಸಲಾಗಿರುವ 26 ಹುದ್ದೆಗಳಿಗೆ ನೇರ ನೇಮಕಾತಿಯೇ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ. ಕನ್ನಡ, ಇಂಗ್ಲಿಷ್‌, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವವಿಜ್ಞಾನ ಹಾಗೂ ಕಂಪ್ಯೂಟ‌ರ್ ಸೈನ್ಸ್ ವಿಷಯಗಳ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಪ್ರತಿ ವಿಷಯಕ್ಕೆ -26 ಹುದ್ದೆಗಳಂತೆ ಒಟ್ಟು 182 ಹುದ್ದೆಗಳನ್ನು ಗುರುತಿಸಲಾಗಿದೆ. ವಿಷಯವಾರು ಬೋಧಕರು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ಅರ್ಹತೆ ಪಡೆದಿರಬೇಕು. ಆದರೆ, ಕಂಪ್ಯೂಟರ್ ಸೈನ್ಸ್ ಹುದ್ದೆಗಳಿಗೆ ಎಂಎಸ್‌ಸಿ, ಎಂಸಿಎ ಹಾಗೂ ಬಿಇ ಪದವಿ ಕೇಳಲಾಗಿದ್ದು, ಬಿಇಡಿ ಹಾಗೂ ಟಿಇಟಿ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

KREIS: ಮುರಾರ್ಜಿ ವಸತಿ ಶಾಲೆ ಸ್ಥಾನಗಳು:

ಕನ್ನಡ ಭಾಷಾ ಶಿಕ್ಷಕರು-26
ಇಂಗ್ಲಿಷ್- 26
ಭೌತಶಾಸ್ತ್ರ-26
ರಸಾಯನಶಾಸ್ತ್ರ-26
ಗಣಿತ-26
ಜೀವವಿಜ್ಞಾನ-26
ಕಂಪ್ಯೂಟರ್ ಸೈನ್ಸ್- 26

ಡಿಪ್ಲೊಮಾ ಪರಿಗಣಿಸಲ್ಲ:

ದೈಹಿಕ ಶಿಕ್ಷಣ ಶಿಕ್ಷಕರ 811 ಹುದ್ದೆಗಳಿಗೆ ನಿಯಮಗಳನ್ನು ರೂಪಿಸಲಾಗಿದೆ. ದೈಹಿಕ ಶಿಕ್ಷಣದಲ್ಲಿ ಸ್ನಾತಕ ಪದವಿ ಪಡೆದಿರಬೇಕು. ಈ ಹಿಂದೆ ಪರಿಗಣಿಸಲಾಗುತ್ತಿದ್ದ ಡಿಪ್ಲೊಮಾ ಶಿಕ್ಷಣವನ್ನು ಈಗ ಕೈ ಬಿಡಲಾಗಿದೆ. ವಾರ್ಡನ್ ಪೋಸ್ಟ್ ಗಳಿಗಾಗಿ ಕಲೆ ಅಥವಾ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು. ಕಲೆ ಅಥವಾ ವಿಜ್ಞಾನ ವಿಭಾಗದಲ್ಲಿ ಬಿ.ಇಡಿ ಪದವಿ ಪಡೆದಿರಬೇಕೆಂದು ನಿಯಮ ವಿಧಿಸಲಾಗಿದೆ.

ಯಾವ ಹುದ್ದೆಗಳ ಭರ್ತಿ? ಎಷ್ಟು?

ವಾಜಪೇಯಿ ಶಾಲೆಗಳ ಪ್ರಾಂಶುಪಾಲರು-16
ವಾಜಪೇಯಿ ಶಾಲೆಗಳ ಉಪಪ್ರಾಂಶುಪಾಲರು-15
ಕ್ರೈಸ್ ಬಾಲಕಿಯರ ಶಾಲೆಗಳ ಪ್ರಾಂಶುಪಾಲರು-209
ಹಿಂದಿ ಶಿಕ್ಷಕರು-811
ದೈಹಿಕ ಶಿಕ್ಷಣ ಶಿಕ್ಷಕರು- 811
ವಾರ್ಡನ್- 738
ನರ್ಸಿಂಗ್ ಅಧಿಕಾರಿಗಳು-457 (278 ತಾತ್ಕಾಲಿಕ)

ತಾತ್ಕಾಲಿಕ ನರ್ಸಿಂಗ್ ಹುದ್ದೆಗಳು:

ಒಟ್ಟಾರೆ 735 ನರ್ಸಿಂಗ್ ಹುದ್ದೆಗಳನ್ನು ನೇಮಕಾತಿಗೆ ಪರಿಗಣಿಸಲಾಗುತ್ತಿದೆಯಾದರೂ ಇದರಲ್ಲಿ 457 ಹುದ್ದೆಗಳು ಮಾತ್ರ ಕಾಯಂ ಹುದ್ದೆಗಳಾಗಿವೆ. ಉಳಿದ 278 ಹುದ್ದೆಗಳನ್ನು ತಾತ್ಕಾಲಿಕ ನೆಲೆಯಲ್ಲಿ ಗುರುತಿಸಲಾಗಿದೆ. ಬಿಎಸ್‌ಸಿ ನರ್ಸಿಂಗ್, ಜಿಎನ್‌ಎಂ ಪೂರೈಸಿದವರು ಹಾಗೂ ನರ್ಸಿಂಗ್ ಮಂಡಳಿಯಲ್ಲಿ ನೋಂದಾಯಿತರಾದವರನ್ನು ನೇಮಕಾತಿಗೆ ಪರಿಗಣಿಸಬಹುದು ಎಂದು ತಿಳಿಸಲಾಗಿದೆ.

CLICK HERE TO DRAFT NOTIFICATION

 

Exit mobile version