KSBDB: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯಡಿ 2025-26 ನೇ ಸಾಲಿಗೆ ಅರ್ಜಿ ಆಹ್ವಾನ
KSBDB: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯಡಿ 2025-26 ನೇ ಸಾಲಿಗೆ ಅರ್ಜಿ ಆಹ್ವಾನ:ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ನೇರವಾಗಿ ಸಾಲ- ಸಹಾಯಧನ ಮಂಜೂರು ಮಾಡಲು ಉದ್ದೇಶಿಸಿದೆ.
ಈ ಯೋಜನೆಯ ಉದ್ದೇಶ:
ಈ ಯೋಜನೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ನೇರವಾಗಿ ಸಾಲ-ಸಹಾಯಧನ ಮಂಜೂರು ಮಾಡಲು ಉದ್ದೇಶಿಸಿದೆ. ಹಲವು ವೃತ್ತಿಗಳಾದ ಹಸು ಸಾಕಾಣಿಕೆ, ಗುಡಿಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ, ಟ್ಯಾಕ್ಸಿ ಇತ್ಯಾದಿ ವ್ಯಾಪಾರ ವಹಿವಾಟುಗಳನ್ನು ಕೈಗೊಳ್ಳಲು ಕನಿಷ್ಠ ರೂ.1.00 ಲಕ್ಷ ಹಾಗೂ ಗರಿಷ್ಠ ರೂ.2.00 ಲಕ್ಷಗಳ ಆರ್ಥಿಕ ನೆರವು ಒದಗಿಸಲಾಗುವುದು.

ಸಾಮಾನ್ಯ ಅರ್ಹತೆಗಳು:
1. ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿದ ಅರ್ಜಿದಾರರು ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪ್ರಮಾಣಪತ್ರ (EWS ಪ್ರಮಾಣ ಪತ್ರ) ಹೊಂದಿರಬೇಕು
2. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು
3. ಅರ್ಜಿದಾರರು 18 ರಿಂದ 65 ವರ್ಷದ ಒಳಗಿನವರಾಗಿರಬೇಕು
4. ಒಂದು ಕುಟುಂಬದಿಂದ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ
5. ಮಹಿಳೆಯರಿಗೆ 33%, ವಿಶೇಷಚೇತನರಿಗೆ ಶೇ 5% ಮೀಸಲಾತಿಯನ್ನು ನೀಡಲಾಗುವುದು
6. ಅರ್ಜಿದಾರರ ಆಧಾರ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು ಮತ್ತು ಬ್ಯಾಂಕ್ ಖಾತೆ ಸೀಡ್ ಆಗಿರಬೇಕು
ಷರತ್ತುಗಳು ಹೀಗಿವೆ:
1. ಈ ಯೋಜನೆಯಡಿ ಪಡೆದ ಸಾಲವನ್ನು ಸಾಲ ಮಂಜೂರಾದ 2 ತಿಂಗಳ ನಂತರ, ಪ್ರತಿ ತಿಂಗಳು 3 ವರ್ಷಗಳ ಕಾಲ ಒಟ್ಟು 34 ಮಾಸಿಕ ಕಂತುಗಳಲ್ಲಿ ಮೂಲಧನ ಹಾಗೂ ಬಡ್ಡಿಯೊಂದಿಗೆ ಆನ್ ಲೈನ್ ಮೂಲಕ ಕಡ್ಡಾಯವಾಗಿ ಪಾವತಿಸಬೇಕು (UPI/Debit card/ credit ಕಾರ್ಡ್ ಮುಖಾಂತರ)
2. ಈ ಯೋಜನೆಯಲ್ಲಿ ಸ್ವ ಉದ್ಯೋಗಕ್ಕಾಗಿ ರೂ.1,00,000/-ಗಳ ಸಾಲವನ್ನು ಪಡೆದರೆ, ಇದರಲ್ಲಿ ರೂ.20,000/- ಸಹಾಯಧನವಾಗಿದ್ದು (Subsidy), ໙໖ 2.80,000/- ដ ಮೊತ್ತಕ್ಕ ಶೇ.4% ಬಡ್ಡಿದರದಲ್ಲಿ ಮಂಜೂರು ಮಾಡಲಾಗುತ್ತದೆ. ಮುಂದಿನ 3 ವರ್ಷಗಳ ಕಾಲ ಪ್ರತಿ ಮಾಹೆಯ ದಿನಾಂಕ: 5 ರ ಒಳಗಾಗಿ ರೂ.2,511/- ರಂತೆ ಮರುಪಾವತಿ ಮಾಡಬೇಕಾಗಿರುತ್ತದೆ.
3. ಈ ಯೋಜನೆಯಲ್ಲಿ ಸ್ವ ಉದ್ಯೋಗಕ್ಕಾಗಿ ರೂ.2,00,000/- ಗಳ ಸಾಲವನ್ನು ಪಡೆದರೆ, ಇದರಲ್ಲಿ ರೂ.40,000/- ಸಹಾಯಧನವಾಗಿದ್ದು (Subsidy), ໙ 2. 1,60,000/- ដ ಮೊತ್ತಕ್ಕ ಶೇ.4% ಬಡ್ಡಿದರದಲ್ಲಿ ಮಂಜೂರು ಮಾಡಲಾಗುತ್ತದೆ. ಮುಂದಿನ 3 ವರ್ಷಗಳ ಕಾಲ ಪ್ರತಿ ಮಾಹೆಯ ದಿನಾಂಕ: 5 ರ ಒಳಗಾಗಿ ರೂ.5,022/- ರಂತೆ ಮರುಪಾವತಿ ಮಾಡಬೇಕಾಗಿರುತ್ತದೆ
4. ಸಾಲ ಕೋರುವ ಆನ್ ಲೈನ್ ಅಪ್ಲಿಕೇಷನ್ ಭರ್ತಿ ಮಾಡುವಾಗ ತಾವು ಕೈಗೊಳ್ಳುವ ಉದ್ಯಮದ ವಿವರವನ್ನು ಕಡ್ಡಾಯವಾಗಿ ಕನಿಷ್ಠ 10 ಪದಗಳಲ್ಲಿ ನಮೂದಿಸತಕ್ಕದ್ದು.
5. ಸಾಲ ಮಂಜೂರಾದ ನಂತರ ಇ-ಸ್ಟ್ಯಾಂಪ್ ಹಾಗೂ ಪ್ರಕ್ರಿಯೆ ಶುಲ್ಕವನ್ನು ತಾವೇ ಭರಿಸತಕ್ಕದ್ದು ಮತ್ತು ಜಾಮೀನುದಾರರ ವಿವರವನ್ನು ನೀಡತಕ್ಕದ್ದು.
6. ಸಾಲ ಮಂಜೂರಾದ ಫಲಾನುಭವಿಗಳಿಗೆ ಸಾಲ & ಸಹಾಯಧನವನ್ನು ನೇರ ನಗದು ವರ್ಗಾವಣೆ (DBT) ಮುಖಾಂತರ ಬಿಡುಗಡೆ ಮಾಡಲಾಗುವುದು.
ಸಹಾಯವಾಣಿ: 8762249230 (ಬೆಳಿಗ್ಗೆ 10.00 ರಿಂದ ಸಂಜೆ 5.30 ರವರೆಗೆ ಸಂಪರ್ಕಿಸಬಹುದಾಗಿದೆ).
▪️ಅಧಿಕೃತ ವೆಬ್‌ಸೈಟ್: ksbdb.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ