KSEAB- SSLC EXAM- ಕನಿಷ್ಠ 75% ಹಾಜರಾತಿ ಕಡ್ಡಾಯ? KSEAB ಯಿಂದ ಸ್ಪಷ್ಟಿಕರಣ.

KSEB- Clarification related to newspaper article about attendance shortage of SSLC students.

KSEAB : ದಿನಾಂಕ:07.02.2025ರಂದು Deccan Herald ದಿನಪತ್ರಿಕೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಲು ಶೇ.75ಕ್ಕಿಂತ ಕಡಿಮೆ ಹಾಜರಾತಿ ಇದ್ದಲ್ಲಿ ಪರೀಕ್ಷೆ-2 ಮತ್ತು 3ಕ್ಕೂ ನೋಂದಣಿಗೆ ಅವಕಾಶ ಇಲ್ಲದ ಕುರಿತು ಹಾಗೂ ಮರು ದಾಖಲಾತಿಯಾಗುವ ಬಗ್ಗೆ ಪ್ರಕಟವಾಗಿರುವ ಸುದ್ದಿಯ ಕುರಿತು.

ಶೇ.75 ಕ್ಕಿಂತ ಕಡಿಮೆ ಹಾಜರಾತಿ ಇರುವ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ-1, 2 ಮತ್ತು 3ಕ್ಕೆ ನೋಂದಣಿಗೆ ಅವಕಾಶ ವಿಲ್ಲದಿರುವ ಕುರಿತು ಮಂಡಲಿಯಿಂದ ಸುತ್ತೋಲೆ ಪ್ರಕಟವಾಗಿದ್ದು ಹಾಗೂ ಸದರಿ ವಿದ್ಯಾರ್ಥಿಗಳು 2025-26ನೇ ಶೈಕ್ಷಣಿಕ ಸಾಲಿಗೆ ಮರುದಾಖಲಾತಿಯಾಗಲು ಸುತ್ತೋಲೆಯಲ್ಲಿ ತಿಳಿಸಲಾಗಿದೆಯೆಂದು ವರದಿಯಾಗಿದೆ.

ಮಂಡಳಿಯ ಕಾಯ್ದೆ-1966 ನಿಯಮ-37 ರನ್ವಯ, ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಲು ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿರುವ ದಿನಗಳಿಗೆ – ಅನುಸಾರ ಕನಿಷ್ಠ ಶೇ.75ರಷ್ಟು ಹಾಜರಾತಿ ಕಡ್ಡಾಯವಾಗಿರುತ್ತದೆ.

ಆದರೆ 2024ರ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು ಶೇ.75 ಕ್ಕಿಂತ ಹಾಜರಾತಿ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿತದೃಷ್ಟಿಯಿಂದ ಪರೀಕ್ಷೆ-2 ಮತ್ತು 3ಕ್ಕೆ ಖಾಸಗಿ ಅಭ್ಯರ್ಥಿಯಾಗಿ ನೋಂದಣಿಮಾಡಿ ಪರೀಕ್ಷೆ ಹಾಜರಾಗಲು ಅವಕಾಶ ಕಲ್ಪಿಸಲಾಗಿತ್ತು. ಇದೇ ರೀತಿ 2024-25ನೇ ಸಾಲಿನ ಪರೀಕ್ಷೆಗೂ ಸಹ ಸದರಿ ನಿಯಮವನ್ನು ಮುಂದುವರೆಸಲಾಗುವುದು. ಹಾಜರಾತಿ ಹಾಗೂ ಪರೀಕ್ಷೆ ಸಂಬಂಧಪಟ್ಟಂತೆ ಯಾವುದೇ ಬದಲಾವಣೆ ಇರುವುದಿಲ್ಲ. ಇರುತ್ತದೆ ಎಂದು KSEAB ಸ್ಪಷ್ಟಿಕರಣ ನೀಡಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!