KSET 2026: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ |ಅರ್ಜಿ ಸಲ್ಲಿಕೆಗೆ 05.09.2026 ಕೊನೆಯ ದಿನಾಂಕ

KSET 2026: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ |ಅರ್ಜಿ ಸಲ್ಲಿಕೆಗೆ 05.09.2026 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿ ಹಂತ ಹಂತವಾಗಿ ಈ ಕೆಳಗೆ ನೀಡಲಾಗಿದೆ.

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್) – 2026. ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: ಇಡಿ 57 ಟಿಇಸಿ 2025 ದಿನಾಂಕ:19.05.2025 ಹಾಗೂ ಯುಜಿಸಿ-ನೆಟ್ ಬ್ಯೂರೋ ನವದೆಹಲಿ ರವರ ಪತ್ರ ಸಂಖ್ಯೆ:ಎಸ್.7-16/2012(ನೆಟ್/ಸೆಟ್) ದಿನಾಂಕ:06.09.2023 ರ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2026 (ಕೆಸೆಟ್-2026) ಅನ್ನು ದಿನಾಂಕ:11.10.2026 (ಭಾನುವಾರ) ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲು ಯೋಜಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ಕೆಸೆಟ್-2026 ಪರೀಕ್ಷೆಯ ವೇಳಾಪಟ್ಟಿ ಈ ಕೆಳಗಿನಂತಿದೆ.

ಕ್ರ.ಸಂ. ವಿವರ ದಿನಾಂಕ
1 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ 10.08.2026
2 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 05.09.2026
3 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 06.09.2026
4 ಪ್ರವೇಶ ಪತ್ರ (Hall Ticket) ಬಿಡುಗಡೆ ದಿನಾಂಕ 01.10.2026
5 ಪರೀಕ್ಷಾ ದಿನಾಂಕ 11.10.2026

ಅಭ್ಯರ್ಥಿಗಳು ಕೆಸೆಟ್-2026ಕ್ಕೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಯಾವುದೇ ಇತರ ನಮೂನೆಯಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಕೆಇಎ ವೆಬ್‌ಸೈಟ್ https://cetonline.karnataka.gov.in/ken/ ಅನ್ನು ಪ್ರವೇಶಿಸುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಯನ್ನು ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಈ ಅಧಿಸೂಚನೆಯನ್ನು ಗಮನವಿಟ್ಟು ಓದಿ ನಂತರ ಅರ್ಜಿಯನ್ನು ಭರ್ತಿಮಾಡಬೇಕು.

ಕೆಸೆಟ್ (KSET) 2026ರ ಪರೀಕ್ಷೆಯನ್ನು 37 ವಿಷಯಗಳಲ್ಲಿ ನಡೆಸಲಾಗುತ್ತಿದ್ದು, ಪರೀಕ್ಷಾ ಕೇಂದ್ರಗಳ ವಿವರಗಳನ್ನು ಪುಟ ಸಂಖ್ಯೆ: 7 ಮತ್ತು 8 ರಲ್ಲಿ ನೀಡಲಾಗಿದೆ.

ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ / ಪ್ರಥಮ ದರ್ಜೆ ಪದವಿ ಕಾಲೇಜು / ಉನ್ನತ ಶಿಕ್ಷಣ ಸಂಸ್ಥೆ (ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ ಹಾಗೂ ಆಯಾ ಸಂಸ್ಥೆಗಳ ನಿಯಮ ಮತ್ತು ಕಾಯ್ದೆಗಳಿಗೆ ಒಳಪಟ್ಟಿರುತ್ತಾರೆ.

ವಿಶೇಷ ಚೇತನ (PwD), ತೃತೀಯ ಲಿಂಗ, ಪರಿಶಿಷ್ಟ ಜಾತಿ (SC-A/SC-B/SC-C), ಪರಿಶಿಷ್ಟ ಪಂಗಡ (ST), ಮತ್ತು ಇತರೆ ಹಿಂದುಳಿದ ವರ್ಗದ (ಪ್ರವರ್ಗ-I, IIA, IIB, IIIA, ಮತ್ತು IIIB) ಅಭ್ಯರ್ಥಿಗಳು, ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದವರ https://bcwd.karnataka.gov.in/ಪಟ್ಟಿಯಲ್ಲಿರುವಂತಿರಬೇಕು.

I) ಅರ್ಹತಾ ನಿಬಂಧನೆಗಳು :

1) ಅಭ್ಯರ್ಥಿಗಳು ಯು.ಜಿ.ಸಿ ಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯ / ಉನ್ನತ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ.55% ರಷ್ಟು ಅಂಕಗಳನ್ನು (ಪೂರ್ಣಾಂಕಿತ ಗೊಳಿಸಿರಬಾರದು) ಪಡೆದಿರಬೇಕು. ಪರಿಶಿಷ್ಟ ಜಾತಿ (SC-A/SC-B/SC-C), ಪರಿಶಿಷ್ಟ ಪಂಗಡ (ST), ಇತರೆ ಹಿಂದುಳಿದ ಅಭ್ಯರ್ಥಿಗಳು (ಪ್ರವರ್ಗ-I, IIA, IIB, IIA, IIIB) ವಿಶೇಷಚೇತನರು (PwD) ಮತ್ತು ತೃತೀಯ ಲಿಂಗ ಗುಂಪಿಗೆ ಸೇರಿದ ಅಭ್ಯರ್ಥಿಗಳು ಶೇ.50% ರಷ್ಟು (ಪೂರ್ಣಾಂಕಿತ ಗೊಳಿಸಿರಬಾರದು) ಅಂಕಗಳನ್ನು ಪಡೆದಿರಬೇಕು.

2) ಸ್ನಾತಕೋತ್ತರ ಪದವಿ ಪಡೆದವರು ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ (ಅಂತಿಮ ಅಥವಾ ದ್ವಿತೀಯ) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಆದರೆ, ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ತಾತ್ಕಾಲಿಕವಾಗಿ ಮಾತ್ರ ಪ್ರವೇಶ ನೀಡಲಾಗುವುದು. ಅವರು ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಯನ್ನು, ಸಾಮಾನ್ಯ ವರ್ಗದವರು ಶೇ.55% ರಷ್ಟು ಹಾಗೂ ಪರಿಶಿಷ್ಟ ಜಾತಿ (SC-A/SC-B/SC-C). ಪರಿಶಿಷ್ಟ ಪಂಗಡ (ST), ಪ್ರವರ್ಗ-I, IIA, IIB, IIIA, ಮತ್ತು IIIB, ವಿಶೇಷಚೇತನ (PwD) ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳು, ಶೇ. 50% ರಷ್ಟು ಅಂಕ ಪಡೆದು, ಅರ್ಹತೆ ಹೊಂದಿ ಕೆಸೆಟ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ದಿನಾಂಕದಿಂದ ಎರಡು ವರ್ಷಗಳೊಳಗಾಗಿ ಅವರ ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳನ್ನು ಸಲ್ಲಿಸಿದರೆ ಮಾತ್ರ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪ್ರಮಾಣ ಪತ್ರ ಪಡೆಯಬಹುದು. ಇಲ್ಲವಾದಲ್ಲಿ ಅಂತಹವರ ಅರ್ಹತೆಯನ್ನು ರದ್ದುಪಡಿಸಲಾಗುವುದು.

3) ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿದ ವಿಷಯದಲ್ಲಿಯೇ ಅಭ್ಯರ್ಥಿಗಳು ಕೆಸೆಟ್ (KSET) ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಪ್ರಸ್ತುತ ಕೆಸೆಟ್-2026 ಅಧಿಸೂಚನೆಯಲ್ಲಿ ಇಲ್ಲದಿರುವ ವಿಷಯಗಳಿಗೆ, ಅಭ್ಯರ್ಥಿಗಳು ವರ್ಷದಲ್ಲಿ ಎರಡು ಬಾರಿ ನಡೆಯುವ ಯು.ಜಿ.ಸಿ, ಎನ್.ಇ.ಟಿ ಅಥವಾ ಯು.ಜಿ.ಸಿ-ಸಿ.ಎಸ್.ಐ.ಆರ್-ಎನ್.ಇ.ಟಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

4) 1991ರ ಸೆಪ್ಟೆಂಬರ್ 19 ರೊಳಗೆ ಸ್ನಾತಕೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿ (ಫಲಿತಾಂಶ ಘೋಷಣೆಯ ದಿನಾಂಕವನ್ನು ಲೆಕ್ಕಿಸದೆ) ಹಾಗೂ ಪಿ.ಹೆಚ್.ಡಿ ಪದವಿ ಪಡೆದವರು ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಒಟ್ಟು ಅಂಕಗಳಲ್ಲಿ 5% ವಿನಾಯಿತಿ ಇರುತ್ತದೆ (55%ರ ಬದಲಾಗಿ 50)

5) ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ಹೊರತುಪಡಿಸಿ, ಮೀಸಲಾತಿಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂಡಿಸಬೇಕು.SC-A, SC-B, SC-C, ST, CAT-1, IIA, IIB, IIIA, 2 IIIB ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರಗಳು ನೀಡುವ ಪ್ರವರ್ಗ ಪ್ರಮಾಣಪತ್ರಗಳನ್ನು ಪಡೆದಿರಬೇಕು. (ವಿವಾಹಿತ ಅಭ್ಯರ್ಥಿಗಳು ಒಟ್ಟು ಕುಟುಂಬ ಆದಾಯವನ್ನು ಘೋಷಿಸಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಸಕ್ಷಮ ಪ್ರಾಧಿಕಾರದಿಂದ ಪಡೆದು ಸಲ್ಲಿಸತಕ್ಕದ್ದು ಹಾಗೂ ವಿವಾಹಿತ ಮಹಿಳಾ ಅಭ್ಯರ್ಥಿಗಳು ತಮ್ಮ ಹೆಸರಿನೊಂದಿಗೆ ಸದರಿಯವರ ಪತಿಯ ಹೆಸರಿನಲ್ಲಿ ಜಾರಿಯಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದು ಸಲ್ಲಿಸತಕ್ಕದ್ದು) ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಚಾಲ್ತಿಯಲ್ಲಿರುವ ಪ್ರಮಾಣ ಪತ್ರದ ರೆವಿನ್ಯೂ ಡಿವಿಜನ್ (RD) ಸಂಖ್ಯೆ ನಮೂದಿಸಬೇಕು. ನಂತರ ತಾವು ಸಲ್ಲಿಸುವ ಪ್ರಮಾಣ ಪತ್ರಗಳನ್ನು ಪರಿಗಣಿಸುವುದಿಲ್ಲ.

6) ವಿಶೇಷಚೇತನ ಅಭ್ಯರ್ಥಿಗಳು ವಿವಿಧ ವೈಕಲ್ಯತೆಯ ಶೇ.40ಕ್ಕೆ ಕಡಿಮೆ ಇಲ್ಲಸಿರುವ ಬಗ್ಗೆ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ 115 ಸೆನೆನಿ 2005ರಲ್ಲಿ ನಿಗದಿ ಪಡಿಸಿದ ನಮೂನೆಯಲ್ಲಿ ಅಂಗವಿಕಲತೆ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ನೀಡಲಾದ ವೈದ್ಯಕಿಯ ಪ್ರಮಾಣ ಪತ್ರದ UDID ಸಂಖ್ಯೆಯನ್ನು ನಮೂದಿಸಬೇಕು.

7) ತೃತೀಯ ಲಿಂಗ ಮೀಸಲಾತಿ ಕೋರುವ ಅಭ್ಯರ್ಥಿಗಳು, ತೃತೀಯ ಲಿಂಗ ವ್ಯಕ್ತಿಗಳ ಹಕ್ಕುಗಳ ರಕ್ಷಣೆ) ಅಧಿನಿಯಮ 2019ರ ಕೇಂದ್ರ ಅಧಿನಿಯಮ 2019 ರ ಸೆಕ್ಷನ್ 6 ರ ಖಂಡ (1) ರಲ್ಲಿ ನಿರ್ದೇಶಿಸಿದಂತೆ, ಸಂಬಂಧಪಟ್ಟ ಜಿಲ್ಲಾ ದಂಡಾಧಿಕಾರಿಗಳು ಜಾರಿಮಾಡಿರುವ ತೃತೀಯ ಲಿಂಗ ಪ್ರಮಾಣ ಪತ್ರವನ್ನು ಪಡೆದಿರಬೇಕು. ಪ್ರಮಾಣ ಪತ್ರದ ಸಂಖ್ಯೆಯನ್ನು ನಮೂದಿಸಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಪ್ರಮಾಣ ಪತ್ರಗಳು ಯಾವುದೇ ಹಂತದಲ್ಲಾದರೂ, ಸುಳ್ಳು ಎಂದು ಸಾಬೀತಾದರೆ ಅವರ ಅಭ್ಯರ್ಥಿತ್ವವನ್ನು ಮುನ್ಸೂಚನೆ ಇಲ್ಲದೆ ರದ್ದುಗೊಳಿಸಲಾಗುತ್ತದೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

8) ಹೊರರಾಜ್ಯದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಮೀಸಲಾತಿ ಇರುವುದಿಲ್ಲ, ಅವರು ಸ್ನಾತಕೋತ್ತರ ಪರೀಕ್ಷೆಯಲ್ಲಿ ನಿಗದಿತ ಕನಿಷ್ಟ 55% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಲ್ಲಿ ಮಾತ್ರ ಸಾಮಾನ್ಯ ವರ್ಗದಡಿಯಲ್ಲಿ ಪ್ರವೇಶಾತಿಗೆ ನೊಂದಾಯಿಸಬಹುದು. SC-A/SC-B/SC-C/ST/OBC/Transgender/PwD ಅರ್ಹತೆಯ ನಿಯಮವು ಕೇವಲ ಕರ್ನಾಟಕ ರಾಜ್ಯದ SC-A/SC-B/SC-C/ST/OBC/Transgender/PwD ಅಭ್ಯರ್ಥಿಗಳಿಗೆ ಮಾತ್ರ ಅನ್ವವಾಗುತ್ತದೆ.

9) ಅಭ್ಯರ್ಥಿಗಳು ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಅವರ ಅಭ್ಯರ್ಥಿತನವು ತಾತ್ಕಾಲಿಕವೆಂದು ಪರಿಗಣಿಸಿಕೊಳ್ಳತಕ್ಕದ್ದು. ಪ್ರವೇಶಾತಿ ಪಡೆದ ಕಾರಣಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅವರನ್ನು ಅರ್ಹ ಅಭ್ಯರ್ಥಿಯಾಗಿ ಪರಿಗಣಿಸಿದೆ ಎಂದು ತಿಳಿಯಬಾರದು. ಅಭ್ಯರ್ಥಿಗಳ ಅರ್ಹತಾ ನಿಬಂಧನೆಗಳನ್ನು ಪರಿಶೀಲಿಸಿದ ನಂತರ ಅವರ ಅಭ್ಯರ್ಥಿತನವನ್ನು ಪರಿಗಣಿಸಲಾಗುವುದು.

10) ಈಗಾಗಲೇ ಕೆಸೆಟ್ ಪರೀಕ್ಷೆಯಲ್ಲಿ ಯಾವುದೇ ಒಂದು ವಿಷಯದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮುಂಬರುವ ಕೆಸೆಟ್ ಪರೀಕ್ಷೆಗೆ ಅದೇ ವಿಷಯದಲ್ಲಿ (Same Subject) ಅರ್ಜಿ ಸಲ್ಲಿಸುವಂತಿಲ್ಲ. ಯಾವುದೇ ವಿಷಯದಲ್ಲಿ ಕೆಸೆಟ್ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಪುನಃ ಅದೇ ವಿಷಯದಲ್ಲಿ ಅರ್ಜಿ ಸಲ್ಲಿಸಿದ್ದು ಕಂಡು ಬಂದ ಪಕ್ಷದಲ್ಲಿ ಅಂತಹ ಅಭ್ಯರ್ಥಿಗಳ ಅರ್ಹತೆಯನ್ನು ರದ್ದುಗೊಳಿಸಲಾಗುವುದು ಹಾಗೂ ಅವರು ಹಿಂದೆ ಪಡೆದಿರುವ ಕೆಸೆಟ್ ಪರೀಕ್ಷೆಯ ಅರ್ಹತೆಯನ್ನು ಕೂಡ ಡಿನೋಟಿಫಿಕೇಷನ್ ಮೂಲಕ ಹಿಂಪಡೆಯಲಾಗುವುದು.

11) ಭಾರತೀಯ ವಿಶ್ವವಿದ್ಯಾಲಯ / ಸಂಸ್ಥೆ ನೀಡುವ ಎರಡು ವರ್ಷದ ಸ್ನಾತಕೋತ್ತರ ಡಿಪ್ಲೊಮಾ / ಪ್ರಮಾಣಪತ್ರ ಅಥವಾ ವಿದೇಶಿ ವಿಶ್ವವಿದ್ಯಾಲಯ / ಸಂಸ್ಥೆ ನೀಡುವ ವಿದೇಶಿ ಪದವಿ / ಡಿಪ್ಲೊಮಾ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ತಮ್ಮ ಹಿತದೃಷ್ಟಿಯಿಂದ. ಮಾನ್ಯತೆ ಪಡೆದ ಭಾರತೀಯ ಸ್ನಾತಕೋತ್ತರ ಪದವಿಯೊಂದಿಗೆ ತಮ್ಮ ಡಿಪ್ಲೊಮಾ/ ಪದವಿ/ ಪ್ರಮಾಣಪತ್ರದ ಸಮಾನತೆಯನ್ನು (ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟೀಸ್ (ಎಐಯು) ನವದೆಹಲಿ (www.alu.ac.in) ಯಿಂದ ಖಚಿತಪಡಿಸಿಕೊಳ್ಳಬೇಕು.

II) ವಯೋಮಿತಿ :

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2026 ತೆಗೆದುಕೊಳ್ಳಲು ಗರಿಷ್ಟ ವಯೋಮಿತಿ ಇರುವುದಿಲ್ಲ.

III) ವಿನಾಯತಿ :

ಕರ್ನಾಟಕ ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ, ವಿಶ್ವವಿದ್ಯಾನಿಲಯ / ಪ್ರಥಮ ದರ್ಜೆ ಕಾಲೇಜುಗಳು / ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಸರ್ಕಾರಿ / ಅನುದಾನಿತ / ಖಾಸಗಿ) ನೇಮಕವಾಗಬೇಕಾದರೆ, ಅಭ್ಯರ್ಥಿಗಳು ಕಡ್ಡಾಯವಾಗಿ ಕೆಸೆಟ್ ಅಥವಾ ಎನ್‌ಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕೆಂಬ ನಿಯಮವಿದೆ.

3) ಯು.ಜಿ.ಸಿ ಕಾಲಕಾಲಕ್ಕೆ ಹೊರಡಿಸುವ ನಿಬಂಧನೆಗಳು, ಯು.ಜಿ.ಸಿ ಮಾರ್ಗಸೂಚಿಗಳು ಮತ್ತು ಅಧಿನಿಯಮಗಳ ಅನ್ವಯ ಕೆಸೆಟ್ ಅರ್ಹತೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು.

b) ಅಭ್ಯರ್ಥಿಯು 1989 ಕ್ಕಿಂತ ಮುಂಚಿತವಾಗಿ ಯು.ಜಿ.ಸಿ-ನೆಟ್/ಸಿ.ಎಸ್.ಐ.ಆರ್-ನೆಟ್, ಜೆ.ಆರ್.ಎಫ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಲ್ಲಿ ಅಂತಹವರಿಗೆ ಕೆಸೆಟ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.

c) ಅಭ್ಯರ್ಥಿಯು 1ನೇ ಜೂನ್ 2002 ಕ್ಕಿಂತ ಮೊದಲೇ ನಡೆಸಲಾದ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ (SET) ತೇರ್ಗಡೆಯಾಗಿದ್ದ ಅಭ್ಯರ್ಥಿಗಳಿಗೂ ಕೆಸೆಟ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿರುತ್ತದೆ. ಅಂತಹ ಅಭ್ಯರ್ಥಿಗಳು ಭಾರತದಲ್ಲಿ ಎಲ್ಲಿಯಾದರೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹರಾಗುತ್ತಾರೆ. ಆದರೆ 01 ಜೂನ್, 2002 ರ ನಂತರ ಕೆಸೆಟ್‌ ನಲ್ಲಿ ಅರ್ಹರಾದ ಅಭ್ಯರ್ಥಿಗಳು ಆಯಾ ರಾಜ್ಯಗಳ ವಿಶ್ವವಿದ್ಯಾನಿಲಯಗಳು / ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಾತ್ರ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹರಾಗಿರುತ್ತಾರೆ.

IV) ಪರೀಕ್ಷಾ ಶುಲ್ಕ, ಮತ್ತು ಪಾವತಿಸುವ ವಿಧಾನ:

c) ಅಭ್ಯರ್ಥಿಯು 1ನೇ ಜೂನ್ 2002 ಕ್ಕಿಂತ ಮೊದಲೇ ನಡೆಸಲಾದ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ (SET) ತೇರ್ಗಡೆಯಾಗಿದ್ದ ಅಭ್ಯರ್ಥಿಗಳಿಗೂ ಕೆಸೆಟ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿರುತ್ತದೆ. ಅಂತಹ ಅಭ್ಯರ್ಥಿಗಳು ಭಾರತದಲ್ಲಿ ಎಲ್ಲಿಯಾದರೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹರಾಗುತ್ತಾರೆ. ಆದರೆ 01 ಜೂನ್, 2002 ರ ನಂತರ ಕೆಸೆಟ್‌ನಲ್ಲಿ ಅರ್ಹರಾದ ಅಭ್ಯರ್ಥಿಗಳು ಆಯಾ ರಾಜ್ಯಗಳ ವಿಶ್ವವಿದ್ಯಾನಿಲಯಗಳು / ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಾತ್ರ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹರಾಗಿರುತ್ತಾರೆ.

IV) ಪರೀಕ್ಷಾ ಶುಲ್ಕ ಮತ್ತು ಪಾವತಿಸುವ ವಿಧಾನ:

1) ಪರೀಕ್ಷಾ ಶುಲ್ಕ :

ವರ್ಗ ಶುಲ್ಕ (ರೂ.ಗಳಲ್ಲಿ)
ಸಾಮಾನ್ಯ ವರ್ಗ, ಪ್ರವರ್ಗ II-A, II-B, III-A, III-B ಹಾಗೂ ಇತರ ರಾಜ್ಯಗಳ ಅಭ್ಯರ್ಥಿಗಳಿಗೆ ₹750/-
ಪ್ರವರ್ಗ-I, SC-A, SC-B, SC-C, ST, PwD ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ ₹500/-

2) ಶುಲ್ಕ ಪಾವತಿಸುವ ವಿಧಾನ :

ಸೂಚನೆ:

1. ಮೇಲ್ಕಂಡ ಶುಲ್ಕವನ್ನು ಕೆಇಎ ಸೂಚಿಸಿದಂತೆ ಆನ್‌ಲೈನ್ ಮೂಲಕ ಮಾತ್ರವೇ ಪಾವತಿಸಬೇಕು.

2. ಒಮ್ಮೆ ಶುಲ್ಕ ಪಾವತಿಸಿದ ನಂತರ ಅದನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ.

V) ಪರೀಕ್ಷಾ ವಿಧಾನ ಮತ್ತು ಪರೀಕ್ಷಾ ದಿನಾಂಕ: 

ಕೆಸೆಟ್ (KSET) ಪರೀಕ್ಷೆಯಲ್ಲಿ ಎರಡು ಪ್ರಶ್ನೆಪತ್ರಿಕೆಗಳಿರುತ್ತವೆ. ಎರಡು ಪತ್ರಿಕೆಗಳು ಸಹ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಪರೀಕ್ಷೆಯನ್ನು ಆಫ್‌ಲೈನ್ ಓ.ಎಂ.ಆರ್ ಮಾದರಿಯಲ್ಲಿ ದಿನಾಂಕ:11.10.2026 ರಂದು ಒಂದು ಅವಧಿಯಲ್ಲಿ ಈ ಕೆಳಕಂಡಂತೆ ನಡೆಯುವುದು.

ದಿನಾಂಕ ಪತ್ರಿಕೆ ಅಂಕಗಳು ಪ್ರಶ್ನೆಗಳು ಅವಧಿ
11.10.2026 I 100 50 3 ಗಂಟೆ
10:00–1:00
II 200 100

ಸೂಚನೆ : ಅಭ್ಯರ್ಥಿಗಳು ಮಧ್ಯಾಹ್ನ 1.00 ಗಂಟೆಯ ಮೊದಲು ಪರೀಕ್ಷಾ ಕೇಂದ್ರದಿಂದ ಹೊರಬರಲು ಅನುಮತಿಸಲಾಗುವುದಿಲ್ಲ.

ಪತ್ರಿಕೆ – I : ಸಾಮಾನ್ಯ ಪತ್ರಿಕೆಯು ಅಭ್ಯರ್ಥಿಗಳ ಬೋಧನೆ, ಸಂಶೋಧನೆ ಮತ್ತು ಬೌದ್ಧಿಕ ಸಾಮರ್ಥ್ಯಗಳನ್ನು ಪರೀಕ್ಷಿಸುವುದಾಗಿರುತ್ತದೆ.

ಈ ಪತ್ರಿಕೆಯು ಅಭ್ಯರ್ಥಿಗಳ ಸಾಮಾನ್ಯ ಪತ್ರಿಕೆಯಾಗಿದ್ದು, ಸಾಮಾನ್ಯ ಜ್ಞಾನ, ಬೋಧನೆ ಹಾಗೂ ಸಂಶೋಧನೆಯ ಅಭಿರುಚಿಗೆ ಸಂಬಂಧಿಸಿರುತ್ತದೆ. ಅಭ್ಯರ್ಥಿಗಳ ಸಾಮಾನ್ಯ ತಿಳಿವಳಿಕೆಗಳನ್ನು ಗ್ರಹಿಸುವ ಹಾಗೂ ಯೋಚನಾ ಸಾಮರ್ಥ್ಯವನ್ನು ಅಳೆಯುವಂತಹದ್ದಾಗಿರುತ್ತದೆ. ಈ ಪತ್ರಿಕೆಯು 50 ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ಪ್ರಶ್ನೆಗೆ 02 ಅಂಕಗಳಿರುತ್ತದೆ.

ಪತ್ರಿಕೆ – II : ವಿಷಯ ಪತ್ರಿಕೆ:

ಈ ಪತ್ರಿಕೆಯು ಅಭ್ಯರ್ಥಿಯು ಆಯ್ಕೆ ಮಾಡಿದ ವಿಷಯದ್ದಾಗಿರುತ್ತದೆ. ಈ ಪತ್ರಿಕೆಯು ಆಯ್ಕೆ ಮಾಡಿದ ವಿಷಯದಲ್ಲಿ 100 ಕಡ್ಡಾಯ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ಪ್ರಶ್ನೆಗೂ 02 ಅಂಕಗಳಿರುತ್ತದೆ. ಗರಿಷ್ಠ 200 ಅಂಕಗಳಿರುತ್ತವೆ.

ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಜೊತೆಗೆ ನೀಡುವ ಪೇಪರ್-I ಮತ್ತು ಪೇಪರ್-II ರ ಒ.ಎಂ.ಆರ್. ಹಾಳೆಯಲ್ಲಿ ನಿಗದಿಪಡಿಸಿದ ನಮೂನೆಯಲ್ಲಿಯೇ ಉತ್ತರಗಳನ್ನು ಗುರುತಿಸಬೇಕು.

VI) ಕೆಸೆಟ್ (KSET) ಪರೀಕ್ಷೆಯ ಫಲಿತಾಂಶ ಪ್ರಕಟಣೆಯ ವಿಧಾನ :

UGC ಮಾರ್ಗಸೂಚಿಗಳ ಪ್ರಕಾರ KSETನ ಮಾನದಂಡವು UGC-NETನ ಮಾನದಂಡದ ಪ್ರಕಾರವಾಗಿರುತ್ತದೆ. ಇದು ಅಂತಿಮ ಮತ್ತು ಅಭ್ಯರ್ಥಿಗಳು ಇದಕ್ಕೆ ಭಾದ್ಯರಾಗಿರಬೇಕಾಗುತ್ತದೆ.

ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಅಭ್ಯರ್ಥಿಗಳನ್ನು ಈ ಕೆಳಗಿನ UGC ಮಾರ್ಗಸೂಚಿಗಳಂತೆ ಪರಿಗಣಿಸಲಾಗುತ್ತದೆ. ಸಹಾಯಕ ಪ್ರಾಧ್ಯಾಪಕರ ಅರ್ಹತೆಗಾಗಿ ಅಭ್ಯರ್ಥಿಗಳು ಪೇಪರ್-I ಮತ್ತು ಪೇಪರ್-II ರ ಪತ್ರಿಕೆಗಳ ಒಟ್ಟು ಅಂಕಗಳಲ್ಲಿ ಕೆಳಗೆ ನಿರ್ದಿಷ್ಟಪಡಿಸಿದ ಕನಿಷ್ಟ ಅಂಕಗಳನ್ನು ಪಡೆಯಬೇಕು.

CATEGORY ಪಡೆಯಬೇಕಾದ ಕನಿಷ್ಠ (%) ಅಂಕಗಳು
PAPER-I PAPER-II
GENERAL (GM) ಎರಡು ಪತ್ರಿಕೆಗಳಲ್ಲಿ ಸೇರಿ ಒಟ್ಟು 40% ಅಂಕಗಳು
SC-A / SC-B / SC-C / ST / CAT-I / II-A / II-B / III-A / III-B / PwD / TRANSGENDER ಎರಡು ಪತ್ರಿಕೆಗಳಲ್ಲಿ ಸೇರಿ ಒಟ್ಟು 35% ಅಂಕಗಳು

ಹಂತ- 1 : ಸಹಾಯಕ ಪ್ರಾಧ್ಯಾಪಕರ ಅರ್ಹತೆಯ ಸಂಖ್ಯೆ (Total Slots), ಒಟ್ಟು ಎರಡು ಪತ್ರಿಕೆಗಳಿಗೂ (ಪತ್ರಿಕೆ 1 ಮತ್ತು ಪತ್ರಿಕೆ II) ಹಾಜರಾದ ಅಭ್ಯರ್ಥಿಗಳ 6% ಸಂಖ್ಯೆಗೆ ಸಮಾನವಾಗಿರುತ್ತದೆ.

ಹಂತ- 2 : ಈ ಒಟ್ಟು ಸ್ಲಾಟ್ ಗಳನ್ನು ಎರಡೂ ಪತ್ರಿಕೆಗಳಿಗೂ ಹಾಜರಾಗಿ ಹಂತ-1 ನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಒಟ್ಟು ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ವಿಷಯವಾರು ಮತ್ತು ಪ್ರವರ್ಗವಾರು ಸಿದ್ಧಪಡಿಸಲಾಗುತ್ತದೆ.

ಸಹಾಯಕ ಪ್ರಾಧ್ಯಾಪಕರ ಅರ್ಹತೆಗೆ ಪರಿಗಣಿಸಬೇಕಾದರೆ, ಪತ್ರಿಕೆ I ಮತ್ತು ಪತ್ರಿಕೆ – II ರಲ್ಲೂ ಹಾಜರಾಗಿ, GM ಅಭ್ಯರ್ಥಿಗಳು ಎರಡೂ ಪತ್ರಿಕೆಗಳೂ ಸೇರಿ ಒಟ್ಟು ಶೇ.40 ಅಂಕಗಳು ಮತ್ತು ಮೀಸಲಾತಿ ವ್ಯಾಪ್ತಿಗೆ ಬರುವ ಪ.ಜಾ/ಪ.ಪಂ, ಇತರೆ ಹಿಂದುಗಳಿದ ವರ್ಗ, ತೃತೀಯ ಲಿಂಗದ ಮತ್ತು ವಿಶೇಷಚೇತನ ಅಭ್ಯರ್ಥಿಗಳು ಎರಡೂ ಪತ್ರಿಕೆಗಳಲ್ಲೂ ಸೇರಿ ಶೇ.35 ಅಂಕಗಳನ್ನು ಗಳಿಸಿರಬೇಕು. ಅಂತಹ ಅಭ್ಯರ್ಥಿಗಳನ್ನು ಮಾತ್ರ ಅರ್ಹತಾ ಪಟ್ಟಿಗೆ ಪರಿಗಣಿಸಲಾಗುವುದು. ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ವಿಷಯವಾರು, ವರ್ಗವಾರು ಮೆರಿಟ್ ಪಟ್ಟಿಯನ್ನು ತಯಾರಿಸಲಾಗುವುದು.

ಯುಜಿಸಿಯ ಫಲಿತಾಂಶದ ಸೂತ್ರದ ಪ್ರಕಾರ ಒಟ್ಟು ಸ್ಥಾಟ್ಗಳನ್ನು ಲೆಕ್ಕಾಚಾರಮಾಡಿ ರಾಜ್ಯ ಸರ್ಕಾರದ ಮೀಸಲಾತಿ ನೀತಿಯ ಅನುಸಾರವಾಗಿ ಅರ್ಹತಾ ಪಟ್ಟಿಯನ್ನು ವಿಷಯವಾರು, ವರ್ಗವಾರು ಸಿದ್ದಪಡಿಸಿ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಫಲಿತಾಂಶವನ್ನು ಪ್ರಕಟಿಸಲಾಗುವುದು.

ಈ ಮೇಲೆ ತಿಳಿಸಿದ ಫಲಿತಾಂಶದ ಪ್ರಕಟಣೆಯ ವಿಧಾನವು ಯುಜಿಸಿ-ಕೆಸೆಟ್ ನಿಬಂಧನೆಗಳಿಗೆ ಬದ್ಧವಾಗಿರುತ್ತದೆ. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ತೀರ್ಮಾನವೇ ಅಂತಿಮವಾಗಿರುತ್ತದೆ.

ಹಂತ-3 : ಯುಜಿಸಿಯ ಸೆಟ್ ಮಾರ್ಗಸೂಚಿಗಳ ಪ್ರಕಾರ, ಎರಡು ಪತ್ರಿಕೆಗಳಿಗೂ ಹಾಜರಾಗುವ ಅಭ್ಯರ್ಥಿಗಳಲ್ಲಿ ಶೇಕಡ 6% ರಷ್ಟು ಅಭ್ಯರ್ಥಿಗಳು ಮಾತ್ರ ಸಹಾಯಕ ಪ್ರಾಧ್ಯಾಪಕರಿಗೆ ಅರ್ಹರು ಎಂದು ಪರಿಗಣಿಸಲಾಗುವುದು. ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಮೀಸಲಾತಿ ನೀತಿಯನ್ನು ಅನುಸರಿಸಿ ಪ್ರವರ್ಗವಾರು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ.

ಈ ಕೆಳಕಂಡ ಸೂತ್ರದ ಪ್ರಕಾರ ವಿಷಯವಾರು ಹಾಗೂ ವರ್ಗವಾರು ಹಂಚಿಕೆ ಮಾಡಲಾಗುವುದು.

1) ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ

ಒಂದು ವಿಷಯದಲ್ಲಿ ಸಾಮಾನ್ಯ ವರ್ಗದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಸಂಖ್ಯೆ = ಆ ವಿಷಯದಲ್ಲಿ ಒಟ್ಟು 40% ಅಥವಾ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳ ಸಂಖ್ಯೆ
ಎಲ್ಲಾ ವಿಷಯಗಳಲ್ಲಿ ಸೇರಿ 40% ಅಥವಾ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳ ಒಟ್ಟು ಸಂಖ್ಯೆ
× ಎಲ್ಲಾ ವಿಷಯಗಳಲ್ಲಿ ಅರ್ಹತೆ ಪಡೆದ ಒಟ್ಟು ಅಭ್ಯರ್ಥಿಗಳ ಸಂಖ್ಯೆ

2) ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ

ಒಂದು ವಿಷಯದಲ್ಲಿ ಮೀಸಲಾತಿ ವರ್ಗದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಸಂಖ್ಯೆ = ಆ ವಿಷಯದಲ್ಲಿ ಒಟ್ಟು 35% ಅಥವಾ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳ ಸಂಖ್ಯೆ
ಎಲ್ಲಾ ವಿಷಯಗಳಲ್ಲಿ ಸೇರಿ 35% ಅಥವಾ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳ ಒಟ್ಟು ಸಂಖ್ಯೆ

ಆದ್ದರಿಂದ, ಆನ್‌ಲೈನ್ ಅರ್ಜಿ ಸಲ್ಲಿಸುವ ಸಮಯದಲ್ಲಿ ಕೆಸೆಟ್ ವಿಷಯ, ಮೀಸಲಾತಿಗಳನ್ನು ಸರಿಯಾಗಿ ನಮೂದಿಸಬೇಕು (ಅರ್ಜಿ ಸಲ್ಲಿಸಿದ ನಂತರ ವಿಷಯ, ಮೀಸಲಾತಿ ಲಿಂಗ ಹಾಗೂ ಪರೀಕ್ಷಾ ಕೇಂದ್ರ ಇತ್ಯಾದಿಗಳ ಬದಲಾವಣೆಯ ಮನವಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ).

ಮೇಲಿನ ಅರ್ಹತಾ ಮಾನದಂಡಗಳು ಅಂತಿಮವಾಗಿರುತ್ತದೆ ಮತ್ತು ಯುಜಿಸಿಯು ನಿಗದಿಪಡಿಸಿದ ನಿಬಂಧನೆಗಳಿಗೆ ಬದ್ಧವಾಗಿರುತ್ತವೆ.

VII) ಕೆಸೆಟ್ ಪಠ್ಯಕ್ರಮ ಮತ್ತು ಪ್ರಶ್ನೆ ಪತ್ರಿಕೆ :

ಕೆಸೆಟ್ ಪಠ್ಯಕ್ರಮ: ಕೆಸೆಟ್ (KSET) ಪರೀಕ್ಷಾ ಪಠ್ಯಕ್ರಮವು, ಯು.ಜಿ.ಸಿ / ಸಿ.ಎಸ್.ಐ.ಆರ್ ನೆಟ್ ನಿಗದಿಪಡಿಸಿರುವ ಪಠ್ಯಕ್ರಮದ ಮಾದರಿಯಲ್ಲೇ ಇರುತ್ತದೆ.

ಎಲ್ಲಾ ವಿಷಯಗಳ ಕರ್ನಾಟಕ ಪಠ್ಯಕ್ರಮವನ್ನು ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ನಿಂದ (https://cetonline.karnataka.gov.in/kea/) ಡೌನ್ಲೋಡ್ ಮಾಡಿಕೊಳ್ಳಬಹುದು. ಪ್ರಾಧಿಕಾರದ ವಿಷಯಗಳ ಪಠ್ಯಕ್ರಮವನ್ನು ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಒದಗಿಸಲಾಗುವುದಿಲ್ಲ.

ಕ್ರಮ ಸಂಖ್ಯೆ ವಿಷಯ ವಿಷಯದ ಕೋಡ್ ಪ್ರಶ್ನೆ ಪತ್ರಿಕೆಯ ಅವೃತ್ತಿ
1 ವಾಣಿಜ್ಯ ಶಾಸ್ತ್ರ 1 ಕನ್ನಡ ಮತ್ತು ಆಂಗ್ಲಭಾಷೆ
2 ಕನ್ನಡ 2 ಕನ್ನಡಭಾಷೆ
3 ಅರ್ಥ ಶಾಸ್ತ್ರ(I) 3 ಕನ್ನಡ ಮತ್ತು ಆಂಗ್ಲಭಾಷೆ
4 ಇಂಗ್ಲೀಷ್ 4 ಆಂಗ್ಲಭಾಷೆ
5 ರಾಜ್ಯ ಶಾಸ್ತ್ರ 5 ಕನ್ನಡ ಮತ್ತು ಆಂಗ್ಲಭಾಷೆ
6 ಇತಿಹಾಸ 6 ಕನ್ನಡ ಮತ್ತು ಆಂಗ್ಲಭಾಷೆ
7 ಸಮಾಜ ಶಾಸ್ತ್ರ 7 ಕನ್ನಡ ಮತ್ತು ಆಂಗ್ಲಭಾಷೆ
8 ಭೂಗೋಳ ಶಾಸ್ತ್ರ 8 ಕನ್ನಡ ಮತ್ತು ಆಂಗ್ಲಭಾಷೆ
9 ಹಿಂದಿ 9 ಹಿಂದಿಭಾಷೆ
  ನಿರ್ವಹಣೆ (ಮ್ಯಾನೇಜ್‌ಮೆಂಟ್)(II) 10 ಆಂಗ್ಲಭಾಷೆ
11 ಪ್ರವಾಸೋದ್ಯಮ ಆಡಳಿತ ಮತ್ತು ನಿರ್ವಹಣೆ 11 ಆಂಗ್ಲಭಾಷೆ
12 ಶಿಕ್ಷಣ 12 ಕನ್ನಡ ಮತ್ತು ಆಂಗ್ಲಭಾಷೆ
13 ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ 13 ಆಂಗ್ಲಭಾಷೆ
14 ಸಮಾಜ ಸಂವಹನ ಮತ್ತು ಪತ್ರಿಕೋದ್ಯಮ 14 ಕನ್ನಡ ಮತ್ತು ಆಂಗ್ಲಭಾಷೆ
15 ಮನೋವಿಜ್ಞಾನ 15 ಕನ್ನಡ ಮತ್ತು ಆಂಗ್ಲಭಾಷೆ
16 ಸಮೂಹ ಕಾರ್ಯ 16 ಕನ್ನಡ ಮತ್ತು ಆಂಗ್ಲಭಾಷೆ
17 ಅಪರಾಧ ಶಾಸ್ತ್ರ 17 ಆಂಗ್ಲಭಾಷೆ
18 ಕಾನೂನು 18 ಆಂಗ್ಲಭಾಷೆ
19 ಸಂಸ್ಕೃತ 19 ಸಂಸ್ಕೃತಭಾಷೆ
20 ದೈಹಿಕ ಶಿಕ್ಷಣ 20 ಕನ್ನಡ ಮತ್ತು ಆಂಗ್ಲಭಾಷೆ
21 ಜಾನಪದ ಸಾಹಿತ್ಯ(III) 21 ಕನ್ನಡ ಮತ್ತು ಆಂಗ್ಲಭಾಷೆ
22 ಉರ್ದು 22 ಉರ್ದು ಭಾಷೆ
23 ಸಾರ್ವಜನಿಕ ಆಡಳಿತ 23 ಕನ್ನಡ ಮತ್ತು ಆಂಗ್ಲಭಾಷೆ
24 ಗಣಿತ ವಿಜ್ಞಾನ ಮತ್ತು ಅನ್ವಯ 24 ಆಂಗ್ಲಭಾಷೆ
25 ಭೌತಿಕ ವಿಜ್ಞಾನಗಳು(IV) 25 ಆಂಗ್ಲಭಾಷೆ
26 ಗಣಿತ ವಿಜ್ಞಾನಗಳು(V) 26 ಆಂಗ್ಲಭಾಷೆ
27 ರಾಜಕೀಯ ವಿಜ್ಞಾನಗಳು(VI) 27 ಆಂಗ್ಲಭಾಷೆ
28 ಜೀವ ವಿಜ್ಞಾನಗಳು(VII) 28 ಆಂಗ್ಲಭಾಷೆ
29 ಪರಿಸರ ವಿಜ್ಞಾನಗಳು 29 ಆಂಗ್ಲಭಾಷೆ
30 ಗ್ರಹ ವಿಜ್ಞಾನ 30 ಆಂಗ್ಲಭಾಷೆ
31 ವಿದ್ಯುನ್ಮಾನ ವಿಜ್ಞಾನ 31 ಆಂಗ್ಲಭಾಷೆ
32 ಭೂ ವಿಜ್ಞಾನ(VIII) 32 ಆಂಗ್ಲಭಾಷೆ
33 ತತ್ತ್ವಶಾಸ್ತ್ರ 36 ಕನ್ನಡ ಮತ್ತು ಆಂಗ್ಲಭಾಷೆ
34 ಮಹಿಳಾ ಅಧ್ಯಯನ(IX) 37 ಕನ್ನಡ ಮತ್ತು ಆಂಗ್ಲಭಾಷೆ
35 ಪ್ರದರ್ಶನ ಕಲೆಗಳು 39 ಕನ್ನಡ ಮತ್ತು ಆಂಗ್ಲಭಾಷೆ
36 ಸಂಗೀತ 40 ಕನ್ನಡ ಮತ್ತು ಆಂಗ್ಲಭಾಷೆ
37 ವ್ಯಕ್ತಿ ಕಲೆ 41 ಕನ್ನಡ ಮತ್ತು ಆಂಗ್ಲಭಾಷೆ

* (I), (II), (III), (IV), (V), (VI), (VII), (VIII) & (IX)

1.ಅರ್ಥಶಾಸ್ತ್ರ / ಕೋ-ಆಪರೇಷನ್ ವಿಷಯದಲ್ಲಿ ಮತ್ತು ಇವುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಎರಡು ವರ್ಷ ಅವಧಿಯ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ‘ಅರ್ಥಶಾಸ್ತ್ರ’ ದಲ್ಲಿ ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

II) ನಿರ್ವಹಣೆ (ಮ್ಯಾನೇಜ್ಮೆಂಟ್) ವಿಷಯದಲ್ಲಿ ಮತ್ತು ಇವುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಎರಡು ವರ್ಷ ಅವಧಿಯ ಸ್ನಾತಕೋತ್ತರ ಪದವಿ ಅಥವಾ ಎರಡು ವರ್ಷದ ಪಿ.ಜಿ. ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್ ಹೊಂದಿರುವ ಅಭ್ಯರ್ಥಿಗಳು ‘ನಿರ್ವಹಣೆ’ (ಮ್ಯಾನೇಜ್‌ ಮೆಂಟ್) ನಲ್ಲಿ ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

III) ಜಾನಪದ ಸಾಹಿತ್ಯ, ಕನ್ನಡ, ಜಾನಪದ, ಕನ್ನಡ ಜಾನಪದ, ಜಾನಪದ ಸಾಹಿತ್ಯ ಮತ್ತು ಇವುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಕುಳಿತಿರುವ ಅಭ್ಯರ್ಥಿಗಳು ‘ಜಾನಪದ ಸಾಹಿತ್ಯ’ ದಲ್ಲಿ ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

IV) ಭೌತಶಾಸ್ತ್ರ /ಎಲೆಕ್ಟ್ರಾನಿಕ್ಸ್ /ಪರಮಾಣು ಮತ್ತು ಅಣು ಭೌತವಿಜ್ಞಾನ /ಕ್ಲಾಸಿಕಲ್ ಡೈನಾಮಿಕ್ಸ್ /ಕಂಡೆನ್ಸಡ್ ಮ್ಯಾಟರ್ ಫಿಜಿಕ್ಸ್/ಎಲೆಕ್ಟೋಮ್ಯಾಗ್ನೆಟಿಕ್/ ಎಕ್ಸ್‌ಪಿರಿಮೆಂಟಲ್ ಡಿಸೈನ್/ ನ್ಯೂಕ್ಲಿಯರ್, ಸ್ಪೇಸ್ ಅಚೀಡ್, ಪ್ರಾಕ್ಟಿಕಲ್ ಫಿಜಿಕ್ಸ್/ ಕ್ವಾಂಟಮ್ ಫಿಜಿಕ್ಸ್/ಥರ್ಮೊಡೈನಾಮಿಕ್ಸ್, ಅಸ್ಪೋನಾಮಿ, ಅಸ್ಟೋಫಿಜಿಕ್ಸ್ / ಮೆಟಿರೀಯಲ್ ಸೈನ್ಸ್ ಮತ್ತು ಇತರೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಕುಳಿತಿರುವ ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆಯನ್ನು ‘ಭೌತಿಕ ವಿಜ್ಞಾನ’ದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

V) ಯಾವ ಅಭ್ಯರ್ಥಿಗಳು ಶುದ್ಧ ಗಣಿತ ವಿಜ್ಞಾನ / ಸಂಖ್ಯಾಶಾಸ್ತ್ರ/ ಆನ್ವಯಿಕ ಗಣಿತ ವಿಜ್ಞಾನ /ಗಣಿತ ಮತ್ತು ಗಣಕ ವಿಜ್ಞಾನ ಮತ್ತು ಇತರೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಕುಳಿತಿರುವ ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆಯನ್ನು ‘ಗಣಿತ ವಿಜ್ಞಾನ’ದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

VI) ರಾಸಾಯನಿಕ ವಿಜ್ಞಾನಗಳು / ವಿಶ್ಲೇಷಣಾತ್ಮಕ ರಾಸಾಯನ ವಿಜ್ಞಾನ/ ಇನಾರ್ಗ್ಯಾನಿಕ್ (ನಿರವಯವ) / ರಾಸಾಯನಿಕ ವಿಜ್ಞಾನ /ಆರ್ಗ್ಯಾನಿಕ್ (ಸಾವಯವ) ರಸಾಯನ ವಿಜ್ಞಾನ/ ಭೌತ ರಾಸಾಯನ ವಿಜ್ಞಾನ/ ಮೆಡಿಸಿನಲ್ ಕೆಮಿಸ್ಟ್ರಿ/ ಅನ್ವಯಿಕ ರಾಸಾಯನ ಶಾಸ್ತ್ರ /ನ್ಯೂಕ್ಲಿಯರ್ ಕೆಮಿಸ್ಟ್ರಿ / ಪರಿಸರ ರಾಸಾಯನ ಶಾಸ್ತ್ರ / ಮೆರೈನ್ ಕೆಮಿಸ್ಟ್ರಿ / ಫಾರ್ಮಾಸಿಟಿಕಲ್ ಕೆಮಿಸ್ಟ್ರಿ / ಬಯೋ-ಆರ್ಗಾನಿಕ್ ಕೆಮಿಸ್ಟ್ರಿ ಮತ್ತು ಇತರೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಕುಳಿತಿರುವ ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆಯನ್ನು ‘ರಾಸಾಯನಿಕ ವಿಜ್ಞಾನ’ದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

VII) ಜೀವ ರಾಸಾಯನ ವಿಜ್ಞಾನ / ಜೀವ ವಿಜ್ಞಾನ/ ಜೈವಿಕ ತಂತ್ರಜ್ಞಾನ/ಜೀವವೈವಿಧ್ಯತೆ ಮತ್ತು Taxonoy/ ಸಸ್ಯವಿಜ್ಞಾನ/ Genetic/ಮೈಕ್ರೋಬಯಾಲಜಿ/ Physiology/ ಪ್ರಾಣಿ ವಿಜ್ಞಾನ/ ಫಿಶರಿ ಸೈನ್ಸ್/ ಅನಿಮಲ್ ಬಯೋಲಾಜಿ/ ಮೆರೈನ್ ಬಯೋಲಜಿ/ ಅಪ್ರೈಡ್ ಜೆನೆಟಿಕ್ಸ್ / ಸೆರಿಕಲ್ಸ್ರ್ ಮತ್ತು ಸಂಬಂಧಿಸಿದ ಇತರೆ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಕುಳಿತಿರುವ ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆಯನ್ನು ‘ಜೈವಿಕ ವಿಜ್ಞಾನ’ದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

VIII) ಭೂ ವಿಜ್ಞಾನ/ಅನ್ವಯಿಕ ಭೂ ವಿಜ್ಞಾನ/ ಭೂ ಭೌತವಿಜ್ಞಾನ (ಜಿಯೋ ಫಿಸಿಕ್ಸ್) / ಹವಾಮಾನ ವಿಜ್ಞಾನ / ಸಾಗರ ವಿಜ್ಞಾನ / ಫಿಜಿಕಲ್ ಜಿಯೋಗ್ರಾಫಿ / ಎಂ.ಎಸ್. ಜಿಯೋಲಾಜಿ / ಭೂ ವಿಜ್ಞಾನ ಸಂಪನ್ಮೂಲ ಮತ್ತು ಸಾಗರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ /ಪೆಟ್ರೋಲಿಯಂ ಜಿಯೋಲಾಜಿ / ಜಿಯೋಇನ್ಫಾರ್‌ಮ್ಯಾಟಿಕ್ಸ್/ ಅಪ್ರೈಡ್ ಜಿಯೋಕೆಮಿಸ್ಟ್ರಿ / ಮತ್ತು ಸಂಬಂಧಿಸಿದ ಇತರೆ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಕುಳಿತಿರುವ ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆಯನ್ನು ‘ಭೂ ವಿಜ್ಞಾನ’ದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

IX) ಮಹಿಳಾ ಅಧ್ಯಯನ / ಗ್ರಾಮೀಣ ಅಭಿವೃದ್ಧಿ, ಮಾನವಿಕ / ಸಮಾಜ ವಿಜ್ಞಾನ ಹಾಗೂ ಭಾಷಾ ವಿಷಯಗಳಲ್ಲಿ ಎರಡು ವರ್ಷ ಅವಧಿಯ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ‘ಮಹಿಳಾ ಅಧ್ಯಯನ’ದಲ್ಲಿ ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

ಸೂಚನೆ:

1) ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆ ಬರೆಯುವ ವಿಷಯದಲ್ಲಿ ಯುಜಿಸಿ ನವದೆಹಲಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸ್ನಾತಕೋತ್ತರ ಅಥವಾ ಯಾವುದೇ ತತ್ಸಮಾನ ಪದವಿಯನ್ನು ಹೊಂದಿರಬೇಕು.

2) ಒಂದಕ್ಕಿಂತ ಹೆಚ್ಚು ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು, ಯಾವುದಾದರೂ ಒಂದು ವಿಷಯದಲ್ಲಿ ಮಾತ್ರ ಕೆಸೆಟ್ (KSET-2026) ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಅಭ್ಯರ್ಥಿಗಳು ಪರೀಕ್ಷಾ ವಿಷಯವನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಿದ ನಂತರ ಯಾವುದೇ ಕಾರಣಕ್ಕೂ ವಿಷಯಗಳ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.

IX) ಪರೀಕ್ಷಾ ಕೇಂದ್ರಗಳು :

ಕ್ರಮ ಸಂಖ್ಯೆ ಕೇಂದ್ರದ ಹೆಸರು
1 ಬೆಂಗಳೂರು
2 ಬೆಳಗಾವಿ
3 ಬಳ್ಳಾರಿ
4 ವಿಜಯಪುರ
5 ದಾವಣಗೆರೆ
6 ಧಾರವಾಡ
7 ಕಲಬುರಗಿ
8 ಮೈಸೂರು
9 ಶಿವಮೊಗ್ಗ
10 ತುಮಕೂರು
11 ಮಂಗಳೂರು

1) ಭಾಗ-ಎ ಯಲ್ಲಿ ನೀಡಲಾದ ಈ ಕೆಳಕಂಡ 18 ವಿಷಯಗಳಿಗೆ ಕೆಸೆಟ್ (KSET) ಪರೀಕ್ಷೆಯನ್ನು ಕರ್ನಾಟಕ ರಾಜ್ಯದ ಮೇಲ್ಕಂಡ 11 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ಯಾವುದಾದರೂ ಒಂದು ಪರೀಕ್ಷಾ ಕೇಂದ್ರವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.

ಕ್ರಮ ಸಂಖ್ಯೆ ವಿಷಯ ವಿಷಯದ ಕೋಡ್
1 ವಾಣಿಜ್ಯ ಶಾಸ್ತ್ರ 1
2 ಕನ್ನಡ 2
3 ಅರ್ಥ ಶಾಸ್ತ್ರ 3
4 ಇಂಗ್ಲೀಷ್ 4
5 ರಾಜ್ಯ ಶಾಸ್ತ್ರ 5
6 ಇತಿಹಾಸ 6
7 ಸಮಾಜ ಶಾಸ್ತ್ರ 7
8 ಹಿಂದಿ 9
9 ನಿರ್ವಹಣಾ (ಮ್ಯಾನೇಜ್‌ಮೆಂಟ್) 10
10 ಶಿಕ್ಷಣ 12
11 ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ 13
12 ಸಮಾಜ ಕಾರ್ಯ 16
13 ದೈಹಿಕ ಶಿಕ್ಷಣ 20
14 ಗಣಿತ ವಿಜ್ಞಾನ ಮತ್ತು ಅನ್ವಯ 24
15 ಭೌತಿಕ ವಿಜ್ಞಾನಗಳು 25
16 ಗಣಿತ ವಿಜ್ಞಾನಗಳು 26
17 ರಾಸಾಯನಿಕ ವಿಜ್ಞಾನಗಳು 27
18 ಜೀವ ವಿಜ್ಞಾನಗಳು 28

ii) ಅಭ್ಯರ್ಥಿಗಳು ಭಾಗ-ಬಿ ಯಲ್ಲಿ ನೀಡಲಾಗಿರುವ 19 ವಿಷಯಗಳಿಗೆ ಬೆಂಗಳೂರು ಕೇಂದ್ರವನ್ನು ಮಾತ್ರ ಆಯ್ಕೆ ಮಾಡಿಕೊಳ್ಳತಕ್ಕದ್ದು.

‘ಭಾಗ ಬಿ’

ಕ್ರ.ಸಂ. ವಿಷಯ ವಿಷಯದ ಕೋಡ್
1 ಭೂಗೋಳ ಶಾಸ್ತ್ರ 8
2 ಪ್ರಾಮಾಣಿಕತೆಯ ಆದರ್ಶ ಮತ್ತು ನಿರ್ವಹಣ 11
3 ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ 14
4 ಮನೋವಿಜ್ಞಾನ 15
5 ಅಪರಾಧ ಶಾಸ್ತ್ರ 17
6 ಕಾನೂನು 18
7 ಸಂಸ್ಕೃತ 19
8 ಜಾನಪದ ಸಾಹಿತ್ಯ 21
9 ಉರ್ದು 22
10 ಸಾರ್ವಜನಿಕ ಆಡಳಿತ 23
11 ಪರಿಸರ ವಿಜ್ಞಾನಗಳು 29
12 ಗ್ರಹ ವಿಜ್ಞಾನ 30
13 ವಿದ್ಯುನ್ಮಾನ ವಿಜ್ಞಾನ 31
14 ಭೂ ವಿಜ್ಞಾನ 32
15 ತತ್ತ್ವಶಾಸ್ತ್ರ 36
16 ಮೆಕ್ಯಾನಿಕಲ್ ಅಧ್ಯಯನ 37
17 ಪ್ರದರ್ಶನ ಕಲೆಗಳು 39
18 ಸಂಗೀತ 40
19 ದೃಶ್ಯ ಕಲೆ 41

ಸೂಚನೆ :

1. ಅಭ್ಯರ್ಥಿಯು ಒಮ್ಮೆ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿದ ನಂತರ, ಪರೀಕ್ಷಾ ಕೇಂದ್ರವನ್ನು ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.

2. ಅಭ್ಯರ್ಥಿಗಳು ಭಾಗ ‘ಬಿ’ ಯಲ್ಲಿ ನಮೂದಿಸಿರುವ 19 ವಿಷಯಗಳಿಗೆ ಬೆಂಗಳೂರು ಕೇಂದ್ರವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.

3. ಆಡಳಿತಾತ್ಮಕ ಉದ್ದೇಶದಿಂದ ಜಿಲ್ಲಾ ಪರೀಕ್ಷಾ ಕೇಂದ್ರಗಳು ಬದಲಾವಣೆಯ ಷರತ್ತಿಗೆ ಒಳಪಟ್ಟಿರುತ್ತದೆ.

X) ಅರ್ಜಿಯನ್ನು ಸಲ್ಲಿಸುವ ವಿಧಾನ :

ಕೆಸೆಟ್ 2026ಕ್ಕೆ ಪರೀಕ್ಷೆ ಬರೆಯಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea/ ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ಅನಾನುಕೂಲತೆ ಅಥವಾ ಕೊನೆಯ ನಿಮಿಷದ ತೊಂದರೆಗಳು ಅಥವಾ ಅನಿರೀಕ್ಷಿತ ತೊಂದರೆಗಳನ್ನು ತಪ್ಪಿಸಲು, ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕಾಗಿ ಕಾಯದೇ ಮುಂಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಕೊನೆಯ ದಿನಾಂಕದಂದು ಉಂಟಾಗುವ ಯಾವುದೇ ರೀತಿಯ ತೊಂದರೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜವಬ್ದಾರಿಯಾಗಿರುವುದಿಲ್ಲ.

ಅಭ್ಯರ್ಥಿಗಳು ನಿಗದಿತ ವಿವರಗಳೊಂದಿಗೆ ಈ ಕೆಳಗಿನಂತೆ ನೋಂದಾಯಿಸತಕ್ಕದ್ದು (ಅಭ್ಯರ್ಥಿಯ ವಿವರಗಳು, ವಿದ್ಯಾಭ್ಯಾಸ ಮತ್ತು ಕೆಸೆಟ್-2026 ಪರೀಕ್ಷೆಯ ವಿವರಗಳು) ಮುಂದುವರೆಸುತ್ತಾ ಅಭ್ಯರ್ಥಿಗಳು ವಿದ್ಯಾರ್ಹತೆಯ ಕುರಿತಂತೆ ತಾವು ಪಿ.ಜಿ ಕೋರ್ಸ್ ಅನ್ನು ಉತ್ತೀರ್ಣರಾಗಿರುವ ಬಗ್ಗೆ ಅಥವಾ ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿರುವ ಬಗ್ಗೆ ಮಾಹಿತಿ ಸಲ್ಲಿಸುವುದು.

ಕೆಸೆಟ್ ಪ್ರಮಾಣ ಪತ್ರದಲ್ಲಿ ಅಭ್ಯರ್ಥಿಯ ಹೆಸರು, ತಂದೆಯ ಹೆಸರು ಹಾಗೂ ತಾಯಿಯ ಹೆಸರನ್ನು ಎಸ್.ಎಸ್.ಎಲ್.ಸಿ/10 ನೇ ತರಗತಿಯ ಅಂಕ ಪಟ್ಟಿಯಲ್ಲಿರುವಂತೆ ಮುದ್ರಿಸಲಾಗುವುದರಿಂದ ಎಸ್.ಎಸ್.ಎಲ್.ಸಿ/10 ನೇ ತರಗತಿಯ ಅಂಕ ಪಟ್ಟಿಯಂತೆ ಅರ್ಜಿಯಲ್ಲಿ ಹೆಸರನ್ನು ನಮೂದು ಮಾಡತಕ್ಕದ್ದು, ಅರ್ಜಿ ಸಲ್ಲಿಸಿದ ನಂತರ ಹೆಸರಿನಲ್ಲಿ ಬದಲಾವಣೆ ಕೋರಿ ಸಲ್ಲಿಸಲಾಗುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.

1. ಅಭ್ಯರ್ಥಿಗಳು ಕೆಸೆಟ್-2026 ಪರೀಕ್ಷೆಯ ಅಂತಿಮವಾಗಿ ಭರ್ತಿಮಾಡಿದ ಮುದ್ರಿತ ಪ್ರತಿಗಳನ್ನು ಕಡ್ಡಾಯವಾಗಿ ತಮ್ಮ ಬಳಿ ಸಂರಕ್ಷಿಸಿಕೊಳ್ಳುವುದು. ಸದರಿ ಮುದ್ರಿತ ಪ್ರತಿಗಳನ್ನು ಅವಶ್ಯಕತೆಗನುಗುಣವಾಗಿ ಸಲ್ಲಿಸುವುದು.

2. ಎಲ್ಲಾ ಸ್ಕ್ಯಾನ್ ಮಾಡಿದ ಪ್ರತಿಗಳು JPEG ಸ್ವರೂಪದಲ್ಲಿರಬೇಕು. ಆನ್‌ ಲೈನ್ ಅರ್ಜಿ ವ್ಯವಸ್ಥೆಯು ನಿರ್ದಿಷ್ಟಪಡಿಸಿದ ಗಾತ್ರಗಳಿಗಿಂತ ಚಿಕ್ಕದಾದ /ದೊಡ್ಡದಾದ ಫೈಲ್‌ಗಳನ್ನು ಅಪ್ ಲೋಡ್ ಮಾಡಲು ಅನುಮತಿಸುವುದಿಲ್ಲ.)

ಅ) ಕೆಸೆಟ್-2026 ಪರೀಕ್ಷೆಗೆ ನಿಗದಿಪಡಿಸಲಾದ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸತಕ್ಕದ್ದು.

ಆ) ಪ್ರವೇಶ ಪತ್ರವನ್ನು ಕೆಇಎ ಅಂತರ್ಜಾಲದ ಮೂಲಕವೇ ಡೌನ್ ಲೋಡ್ ಮಾಡತಕ್ಕದ್ದು, ಪ್ರವೇಶ ಪತ್ರದ ಹಾರ್ಡ್ ಕಾಪಿ (Hard Copy) ಯನ್ನು ಕೆಇಎಯಿಂದ ನೀಡಲಾಗುವುದಿಲ್ಲ. ಅಭ್ಯರ್ಥಿಗಳು ತಪ್ಪದೇ ಮಾನ್ಯವಾದ ಭಾವಚಿತ್ರವಿರುವ ಗುರುತಿನ ಪುರಾವೆ ಮತ್ತು ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ (ಕನಿಷ್ಠ ಎರಡು ಘಂಟೆ) ಮುಂಚಿತವಾಗಿ ಹಾಜರಾಗತಕ್ಕದ್ದು.

XI) ಸಾಮಾನ್ಯ ಸೂಚನೆಗಳು:

1. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಪ್ರಾಧಿಕಾರದ ವೆಬ್ ಸೈಟಿನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ಮುದ್ರಿತವಾಗಿರುವ ಎಲ್ಲಾ ವಿವರಗಳನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರವನ್ನು ಖಚಿತಪಡಿಸಿಕೊಳ್ಳಬೇಕು.

2. ಪ್ರವೇಶ ಪತ್ರದ ಜೊತೆಯಲ್ಲಿ ಮುದ್ರಿತವಾದ ಸೂಚನೆಗಳನ್ನು ಡೌನ್‌ ಲೋಡ್ ಮಾಡಿಕೊಂಡು ತಪ್ಪದೆ ಓದಿ.

3. ತಪ್ಪು ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನವಿರುವುದಿಲ್ಲ.

4. ಕೇವಲ ಕೆಸೆಟ್-2026 ಪರೀಕ್ಷೆಗೆ ಹಾಜರಾದ ಮಾತ್ರಕ್ಕೆ ಅರ್ಹತೆಯನ್ನು ಪಡೆದಿದ್ದೇವೆಂದು ಅಭ್ಯರ್ಥಿಗಳು ಭಾವಿಸಬಾರದು.

5. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್, ಬ್ಲೂಟೂಥ್, ಗ್ಯಾಡ್ಡೆಟ್ಸ್, ಮಾರ್ಕರ್, ಕ್ಯಾಲ್‌ಕ್ಯುಲೇಟರ್, ವೈಟ್ ಪ್ಯೂಯಿಡ್, ವೈರ್‌ಲೈಸ್ ಸೆಟ್ಸ್, ಚೀಟಿಗಳು, ಪುಸ್ತಕ ಇತ್ಯಾದಿಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

6. ಅಲ್ಲದೆ ಈ ಮೇಲಿನ ಯಾವುದೇ ವಸ್ತುಗಳನ್ನು ಸಂರಕ್ಷಿಸಿಡಲು ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥೆ ಇರುವುದಿಲ್ಲ.

7. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ರೀತಿಯ ಕೈಗಡಿಯಾರವನ್ನು ಕಟ್ಟಿಕೊಂಡು / ತೆಗೆದುಕೊಂಡು ಹೋಗುವಂತಿಲ್ಲ. ಪರೀಕ್ಷಾ ಮಧ್ಯಂತರದಲ್ಲಿ ಬಾರಿಸುವ ಎಚ್ಚರಿಕೆಯ ಗಂಟೆಗಳ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸುವ ಬೆಲ್ ಸಮಯವನ್ನು ನೋಡಲು ಕೋರಿದೆ.

8. ಅಭ್ಯರ್ಥಿಗಳು ಮೊಣಕೈವರೆಗೆ ಬರುವಂತಹ ಅರ್ಧ ತೋಳಿನ ಉಡುಪುಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗಬಹದು, ಕಿವಿ, ತಲೆ ಮುಖ ಮುಚ್ಚುವಂತಹ ವಸ್ತವನ್ನು ನಿಷೇಧಿಸಲಾಗಿದೆ.

9. ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸಿಕೊಂಡು ಬರುವುದನ್ನು ನಿಷೇಧಿಸಿದೆ. (ಮಂಗಳ ಸೂತ್ರ ಮತ್ತು ಕಾಲುಂಗುರವನ್ನು ಹೊರತುಪಡಿಸಿ)

10. ಅಭ್ಯರ್ಥಿತನವು ಸಂಪೂರ್ಣವಾಗಿ ತಾತ್ಕಾಲಿಕವಾಗಿರುತ್ತದೆ ಎಂಬುದನ್ನು ಗಮನಿಸಬೇಕು. ಕೇವಲ ಪ್ರವೇಶ ಪತ್ರವನ್ನು ನೀಡಿದ ಮಾತ್ರಕ್ಕೆ ಹಾಗೂ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿದ ಮಾತ್ರಕ್ಕೆ, ಪ್ರಾಧಿಕಾರವು ಅಭ್ಯರ್ಥಿಗಳ ವಿವರವನ್ನು ಒಪ್ಪಿದೆಯೆಂದು ಪರಗಣಿಸಬಾರದು.

11. ಪ್ರವೇಶ ಪತ್ರದ ಜೊತೆಯಲ್ಲಿ ಅಭ್ಯರ್ಥಿಯು ಕಡ್ಡಾಯವಾಗಿ ಸರ್ಕಾರದಿಂದ ಮಾನ್ಯತೆ ಇರುವ ಭಾವಚಿತ್ರವುಳ್ಳ ಯಾವುದಾದರೂ ಒಂದು ಗುರುತಿನ ಚೀಟಿ / ಡ್ರೈವಿಂಗ್ ಲೈಸೆನ್ಸ್ / ಪಾಸ್‌ಪೋರ್ಟ್ / ಆಧಾರ್ ಕಾರ್ಡ್ / ಪಾನ್ ಕಾರ್ಡ್ ಅನ್ನು ತೆಗೆದುಕೊಂಡು ಹೋಗಬೇಕು.

12. ಕೊಠಡಿ ಮೇಲ್ವಿಚಾರಕರು ನೀಡುವ ಎಲ್ಲಾ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಸೂಚನೆಗಳನ್ನು ಪಾಲಿಸದೇ ಇರುವ ಅಭ್ಯರ್ಥಿಗಳನ್ನು ಅನ್ಯಾಯದ ವಿಧಾನವೆಂದು ಪರಿಗಣಿಸಿ ಅಂತಹ ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗುವುದು.

13. ಪ್ರವೇಶ ಪತ್ರದಲ್ಲಿ ನಮೂದಿಸಿರುವ ಸೂಚನೆಗಳನ್ನು ಗಮನವಿಟ್ಟು ಓದಿಕೊಳ್ಳಬೇಕು.

14. ಪ್ರವೇಶ ಪತ್ರದಲ್ಲಿ ನಿಗದಿಪಡಿಸಿರುವ ಪರೀಕ್ಷಾ ಕೇಂದ್ರವನ್ನು ಹೊರತುಪಡಿಸಿ ಬೇರೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಬರೆಯಲು ಅಭ್ಯರ್ಥಿಗಳಿಗೆ ಅನುವು ಮಾಡಿಕೊಡುವುದಿಲ್ಲ.

15. ಓಎಂಆರ್ ಉತ್ತರ ಪತ್ರಿಕೆಯ ಮೇಲೆ ಅಗತ್ಯ ಮಾಹಿತಿಯನ್ನು ಹೊರತು ಪಡಿಸಿ, ಬೇರೆ ಯಾವುದೇ ಮಾಹಿತಿಯನ್ನು ಬರೆಯುವ ಕಾರಣದಿಂದ ಅಭ್ಯರ್ಥಿಯ ಗುರುತಿನ ವಿವರಗಳು ಬಹಿರಂಗವಾಗುವ ಸಾಧ್ಯತೆ ಇರುವುದರಿಂದ, ಅಥವಾ ಉತ್ತರಪತ್ರಿಕೆಯ ಮೇಲೆ ಅನುಚಿತವಾದ ಭಾಷೆಯನ್ನು ಬಳಸುವುದು ಅಥವಾ ಅನ್ಯಾಯದ ವಿಧಾನವನ್ನು ಅನುಸರಿಸುವುದು ಅಥವಾ ನಮೂದಿಸಿರುವ ಉತ್ತರಗಳನ್ನು ವಿವಿಧ ಸಾಧನಗಳಿಂದ ಹೊಡೆದು ಹಾಕುವುದು / ವೈಟ್ ಫ್ಲಯಿಡ್ ಬಳಸುವುದು, ಇಂತಹ ಪ್ರಕರಣಗಳಲ್ಲಿ ಅಭ್ಯರ್ಥಿಗಳು ಅನರ್ಹತೆಯನ್ನು ಹೊಂದುತ್ತಾರೆ.

16. ಕೆಲವು ವಿಷಯಗಳ ಪ್ರಶ್ನೆಪತ್ರಿಕೆಗಳು ಇಂಗ್ಲೀಷ್/ಕನ್ನಡ ಆವೃತ್ತಿಯಲ್ಲಿ ಮುದ್ರಿತವಾಗಿರುತ್ತದೆ. ಇಂತಹ ಪ್ರಶ್ನೆಪತ್ರಿಕೆಗಳಲ್ಲಿ ಯಾವುದಾದದರು ಪ್ರಶ್ನೆಯ ಬಗ್ಗೆ ಆಕ್ಷೇಪಣೆ / ಸಂದೇಹ ಉಂಟಾದಲ್ಲಿ ಕನ್ನಡ / ಇಂಗ್ಲೀಷ್ ಭಾಗವನ್ನು ನೋಡುವುದು.

17. ವಿಶೇಷ ಚೇತನ ಅಭ್ಯರ್ಥಿಗಳಿಗೆ, ಪ್ರತಿಕೆ-I ಹಾಗೂ ಪ್ರತಿಕೆ-II ಗಳಿಗೆ ಸೇರಿ 60 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗುವುದು. ಲಿಪಿಕಾರರ ಸಹಾಯ ಬಯಸುವ ವಿಶೇಷ ಚೇತನ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ ನ್ನು ಗಮನಿಸುವುದು.

XII) ಪರೀಕ್ಷಾ ಸೂಚನೆಗಳು:

1. ಅಭ್ಯರ್ಥಿಗಳಿಗೆ ಕೆಸೆಟ್ ಪರೀಕ್ಷೆಯ ಪೂರ್ಣ ಮಾಹಿತಿಯನ್ನು KEA ಅಂತರ್ಜಾಲದಲ್ಲಿ (https://cetonline.karnataka.gov.in/kea/) ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ನೀಡಲಾಗಿರುತ್ತದೆ. ಹಾಗೂ ಅಭ್ಯರ್ಥಿಗಳಿಗೆ ಅಂಚೆ ಮೂಲಕ ಅಥವಾ ಇಮೇಲ್ ಮೂಲಕ ಯಾವುದೇ ಮಾಹಿತಿಯ ಪ್ರತಿಯನ್ನು ನೀಡಲಾಗುವುದಿಲ್ಲ.

2. ಮರುಮೌಲ್ಯಮಾಪನಕ್ಕೆ ಅಥವಾ ಮರು ಎಣಿಕೆಗೆ ಅವಕಾಶವಿರುವುದಿಲ್ಲ.

3. ಕೆಸೆಟ್-2026 ಪರೀಕ್ಷೆಯ ಕೀ ಉತ್ತರಗಳನ್ನು ಕೆಇಎ ಅಂತರ್ಜಾಲದಲ್ಲಿ ಪರೀಕ್ಷೆ ಮುಗಿದ ನಂತರ ಪ್ರಕಟಿಸಲಾಗುವುದು. ತಾತ್ಕಾಲಿಕ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಅಭ್ಯರ್ಥಿಗಳು Online ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಆಕ್ಷೇಪಣೆ ಹಾಕಬಹುದು. ಪ್ರತಿ ಪ್ರಶ್ನೆಗೆ ರೂ.50/- ಶುಲ್ಕವನ್ನು ಪಾವತಿಸಬೇಕು.

4. ಆಕ್ಷೇಪಣೆಗಳ ಮೇಲಿನ ಕೆಇಎ ನಿರ್ಧಾರವೇ ಅಂತಿಮವಾಗಿರುತ್ತದೆ ಮತ್ತು ಅಂತಿಮ ಉತ್ತರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಿ ನಂತರ ಕೆಸೆಟ್ ಫಲಿತಾಂಶವನ್ನು ಪ್ರಕಟಿಸಲಾಗುವುದು.

5. ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಿದ ನಂತರ ಅಭ್ಯರ್ಥಿಗಳಿಗೆ ಪುನ: ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.

6. ಎಲ್ಲಾ ವಿಷಯದಲ್ಲೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ಣಯವೇ ಅಂತಿಮವಾಗಿರುತ್ತದೆ.

7. ಅರ್ಹರಾದ / ಅನರ್ಹಗೊಂಡ ಅಭ್ಯರ್ಥಿಗಳಿಗೆ ಕೆಇಎಯಿಂದ ಯಾವುದೇ ಅಂಕಪಟ್ಟಿಯನ್ನು ನೀಡುವುದಿಲ್ಲ.

8. ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆಗಳಾದಲ್ಲಿ ಅದು ಯು.ಜಿ.ಸಿ.ಯ ನಿಯಮಗಳಿಗೆ ಅನುಗುಣವಾಗಿರುತ್ತದೆ.

9. ಪರೀಕ್ಷೆಗೆ ಸಂಬಂಧಪಟ್ಟ ಯಾವುದೇ ವಿವಾದಗಳಿದ್ದಲ್ಲಿ, ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯದ (High Court of Karnataka) ವ್ಯಾಪ್ತಿಗೆ ಮಾತ್ರ ಒಳಪಟ್ಟಿರುತ್ತದೆ.

XIII) ಕೆಸೆಟ್-2026 ರ ಸಂಪೂರ್ಣ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿ ಸ್ಕ್ಯಾನ್ ಮಾಡಿದ ಛಾಯಾಚಿತ್ರಗಳ ಅಪ್‌ಲೋಡ್ ಮಾಡುವಿಕೆ, ಶುಲ್ಕ ಪಾವತಿ ಮತ್ತು ದೃಢೀಕರಣ ಪುಟದ ಮುದ್ರಣ ಪ್ರವೇಶ ಪತ್ರ ಇತ್ಯಾದಿಗಳೂ ಆನ್‌ಲೈನ್ ಮೂಲಕವೇ ಜರುಗುತ್ತವೆ. ಆದ್ದರಿಂದ ಅಭ್ಯರ್ಥಿಗಳು ಯಾವುದೇ ಪ್ರಮಾಣ ಪತ್ರಗಳು/ದಾಖಲೆಗಳನ್ನು ತಮ್ಮ ಅರ್ಹತೆಯ ಪುರಾವೆಯಾಗಿ ಅರ್ಜಿ ನಮೂನೆ ಅಥವಾ ದೃಢೀಕರಣ ಪುಟದ ಪ್ರತಿ ಇತ್ಯಾದಿಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸುವ ಆಗತ್ಯತೆಯಿಲ್ಲ, ಆದಾಗ್ಯೂ, ಅಭ್ಯರ್ಥಿಗಳು ತಮ್ಮ ಸ್ವಂತ ಹಿತಾಸಕ್ತಿಯಿಂದ ಪರೀಕ್ಷೆಗೆ ತಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ಹಂತದಲ್ಲಿ ಪ್ರಾಧಿಕಾರಕ್ಕೆ ಅಭ್ಯರ್ಥಿಗಳಲ್ಲಿ ಅನರ್ಹತೆ ಕಂಡುಬಂದಲ್ಲಿ, ಆಂಥವರ ಅಭ್ಯರ್ಥಿತ್ವವನ್ನು ರದ್ದುಗೊಳಿಸಲಾಗುತ್ತದೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಆನ್‌ಲೈನ್ ನೋಂದಣಿ ಸಮಯದಲ್ಲಿ ಅಭ್ಯರ್ಥಿಗಳು ಒದಗಿಸಿದ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪರಿಶೀಲಿಸುವುದಿಲ್ಲ. ಆದ್ದರಿಂದ ಅರ್ಹತಾ ಮಾನದಂಡಗಳನ್ನು ಪೂರೈಸುವ ಷರತ್ತಿಗೊಳಪಟ್ಟು ಕೆಸೆಟ್-2026ಕ್ಕೆ ಅರ್ಹರಾದ ಅಭ್ಯರ್ಥಿಗಳ ಅರ್ಹತೆಯು ಸಂಪೂರ್ಣವಾಗಿ ತಾತ್ಕಾಲಿಕವಾಗಿರುತ್ತದೆ.

ಸಂಪರ್ಕಿಸುವ ವಿಳಾಸ
ವಿಳಾಸ ಕಾರ್ಯನಿರ್ವಾಹಕ ನಿರ್ದೇಶಕರು,
ಕರ್ನಾಟಕ ಪರೀಕ್ಷಾ ಪ್ರಾಧಿಕಾರ,
ಸಿಇಟಿ ರಸ್ತೆ, 18ನೇ ಅಡ್ಡ ರಸ್ತೆ,
ಮಲ್ಲೇಶ್ವರಂ, ಬೆಂಗಳೂರು – 560012.
ದೂರವಾಣಿ 080 – 23460460
ಇಮೇಲ್ kset2026kea@gmail.com
ವೆಬ್‌ಸೈಟ್ https://cetonline.karnataka.gov.in/kea/

KSET 2026

Sl. No. Subject Download
1 Performing Arts PDF
2 Music PDF
3 ಇಂಗ್ಲಿಷ್ PDF
4 ಮಹಿಳಾ ಅಧ್ಯಯನ PDF
5 ಉರ್ದು PDF
6 ದೃಶ್ಯ ಕಲೆಗಳು PDF
7 ಪ್ರವಾಸೋದ್ಯಮ ಆಡಳಿತ ಮತ್ತು ನಿರ್ವಹಣೆ PDF
8 ಕಾನೂನು PDF
9 ಇತಿಹಾಸ PDF
10 ಸಾಮಾನ್ಯ ವಿಷಯ PDF
11 ವಾಣಿಜ್ಯ PDF
12 ಕನ್ನಡ PDF
13 ಅರ್ಥಶಾಸ್ತ್ರ PDF
14 ತತ್ವಶಾಸ್ತ್ರ PDF
15 ಭೂಗೋಳಶಾಸ್ತ್ರ PDF
16 ಹಿಂದಿ PDF
17 ಶಿಕ್ಷಣ PDF
18 ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ PDF
19 ಕಂಪ್ಯೂಟರ್ ಸೈನ್ಸ್ ಮತ್ತು ಅಪ್ಲಿಕೇಶನ್ PDF
20 ರಾಸಾಯನಿಕ ವಿಜ್ಞಾನ PDF
21 ಪರಿಸರ ವಿಜ್ಞಾನ PDF
22 ಗೃಹ ವಿಜ್ಞಾನ PDF
23 ವಿದ್ಯುನ್ಮಾನ ವಿಜ್ಞಾನ PDF
24 ಭೂ ವಿಜ್ಞಾನ PDF
25 ಜೀವ ವಿಜ್ಞಾನ PDF
26 ನಿರ್ವಹಣೆ PDF
27 ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ PDF
28 ಗಣಿತ ವಿಜ್ಞಾನ PDF
29 ಜಾನಪದ ಸಾಹಿತ್ಯ PDF
30 ದೈಹಿಕ ಶಿಕ್ಷಣ PDF
31 ಭೌತಿಕ ವಿಜ್ಞಾನ PDF
32 ರಾಜ್ಯಶಾಸ್ತ್ರ PDF
33 ಮನೋವಿಜ್ಞಾನ PDF
34 ಸಾರ್ವಜನಿಕ ಆಡಳಿತ PDF
35 ಅಪರಾಧಶಾಸ್ತ್ರ PDF
36 ಸಂಸ್ಕೃತ PDF
37 ಸಮಾಜ ಕಾರ್ಯ PDF
38 ಸಮಾಜಶಾಸ್ತ್ರ PDF

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!