KSPSTA: ರಾಜ್ಯ ಮಟ್ಟದ ಶೈಕ್ಷಣಿಕ ಅಧಿವೇಶನ,ಫೆಬ್ರವರಿ-25

KSPSTA: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು, ರಾಜ್ಯ ಮಟ್ಟದ ಶೈಕ್ಷಣಿಕ ಅಧಿವೇಶನ,ಫೆಬ್ರವರಿ-25 ರಂದು ಸಕ್ಕರೆ ನಾಡು ಮಂಡ್ಯದಲ್ಲಿ ಜರುಗಲಿದೆ.

KSPSTA- ದಿನಾಂಕ:25-02-2025 ರಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ [KSPSTA] ರಾಜ್ಯಮಟ್ಟದ ಶೈಕ್ಷಣಿಕ ಅಧಿವೇಶನ ಹಾಗೂ ಸರ್ವ ಸದಸ್ಯರ ಸಭೆ ಮತ್ತು ರಾಜ್ಯಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಡ್ಯ ನಗರದಲ್ಲಿ ಹಮ್ಮಿಕೊಂಡಿದ್ದು, ಶೈಕ್ಷಣಿಕ ಅಧಿವೇಶನವನ್ನು ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪನವರು ಉದ್ಘಾಟಿಸಲಿದ್ದು, ಸದರಿ ಸಭೆಯಲ್ಲಿ ಮುಖ್ಯವಾಗಿ..

1) ಸಿ & ಆ‌ರ್ ಸಮಸ್ಯೆ

2) ಪದವೀಧರ ಶಿಕ್ಷಕರಿಗೆ ನ್ಯಾಯ ಒದಗಿಸುವ ಬಗ್ಗೆ

3) ಮುಖ್ಯ ಗುರುಗಳ ಮೇಲೆ ಆಗುತ್ತಿರುವ ಒತ್ತಡದ ಬಗ್ಗೆ

4) ಶಿಕ್ಷಕರ ವರ್ಗಾವಣೆಯ ಬಗ್ಗೆ ಹಾಗೂ

ಇನ್ನಿತರ ವಿಷಯಗಳ ಬಗ್ಗೆ ಮಾನ್ಯ ಸಚಿವರ ಗಮನ ಸೆಳೆಯಲಾಗುವುದು. ಕಾರಣ ಸದರಿ ಸಭೆಯಲ್ಲಿ ರಾಜ್ಯದ ಎಲ್ಲಾ ನಿರ್ದೇಶಕರು, ತಾಲೂಕಾ ಮತ್ತು ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

ಸರ್ವರಿಗೂ ಸಹೃದಯದ ಸ್ವಾಗತ.

ಚಂದ್ರಶೇಖರ ನುಗ್ಗಲಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು

ಕೆ ನಾಗೇಶ, ರಾಜ್ಯಾಧ್ಯಕ್ಷರು

ತಪ್ಪದೆ ಎಲ್ಲ ಶಿಕ್ಷಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ..

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!