LIFE INSURANCE: ವಾರ್ಷಿಕ ಆದಾಯದ 16-18 ಪಟ್ಟು ಇನ್ಶೂರೆನ್ಸ್ ನಿಮ್ಮ ಬಳಿ ಇದೆಯೇ?

LIFE INSURANCE: ವಾರ್ಷಿಕ ಆದಾಯದ 16-18 ಪಟ್ಟು ಇನ್ಶೂರೆನ್ಸ್ ನಿಮ್ಮ ಬಳಿ ಇದೆಯೇ? ಹೌದು ಅನ್ನುವುದಾದರೇ, ಈ ದೇಶದ ಕೇವಲ 1% ‘ಜಾಣ ಹೂಡಿಕೆದಾರ’ರಲ್ಲಿ ನೀವೂ ಒಬ್ಬರು!

 

LIFE INSURANCE: ಮೊಬೈಲ್ ಖರೀದಿ ಮಾಡುವಾಗ ಸಾವಿರಾರು ರೂಪಾಯಿಯನ್ನು ಹಿಂದೆಮುಂದೆ ನೋಡದೆ ಖರ್ಚು ಮಾಡುವ ಕೆಲವರು, ಬಹಳ ಮುಖ್ಯವಾದ ಹೂಡಿಕೆ ಮಾಡುವಾಗ ಏಕೆ ಇಷ್ಟು ಜಿಪುಣರಾಗುತ್ತಾರೆ? ಒಂದು ದ್ವಿಚಕ್ರ ವಾಹನ, ಒಂದು ಕಾರು ಖರೀದಿ ಮಾಡುವಾಗ ಬಿಂದಾಸ್ ಆಗಿ ಹಣ ಸುರಿಯುವ ಜನರು (ಕೆಲಸಕ್ಕೆ ಬಾರದ ಸನ್ ರೂಫ್ ಇರುವ ಕಾರನ್ನು ಲಕ್ಷಾಂತರ ರೂ. ಹೆಚ್ಚುವರಿ ಹಣ ಕೊಟ್ಟು ಖರೀದಿ ಮಾಡುತ್ತಾರೆ) ಜೀವವಿಮೆ ಖರೀದಿಸುವಾಗ ಏಕೆ ಅದೇ ಉದಾರತೆ ತೋರುವುದಿಲ್ಲ? ಸಾವಿನ ಬಗ್ಗೆ ಭಯವಿರಬೇಕು ಎಂದೇನೂ ಇಲ್ಲ, ಆದರೆ ಎಚ್ಚರವಿರಬೇಕು. ಮಳೆ ಬರುತ್ತದೆ ಎಂದು ಯಾರೂ ಭಯ ಬೀಳುವುದಿಲ್ಲ, ಛತ್ರಿ/ರೈನ್ ಕೋಟ್ ಇಟ್ಟುಕೊಂಡರೆ ಆಯಿತಲ್ಲವೇ? ಸೂಕ್ತ ಮೊತ್ತದ ವಿಮೆ ಖರೀದಿಯೂ ಹಾಗೆಯೇ.

ಜೀವ ವಿಮೆಯಲ್ಲಿ ನಾವು ಹೂಡಿಕೆ ಮಾಡಿದ್ದೇವೆ ಮತ್ತು ಮಾಡುತ್ತಿದ್ದೇವೆ ಎನ್ನುವುದಕ್ಕಿಂತಲೂ ನಿಮ್ಮ ಬಳಿ ಎಷ್ಟು ಮೊತ್ತದ ವಿಮೆ ಇದೆ ಎನ್ನುವದು ಮುಖ್ಯ ಅಂದರೆ, ನೀವು ವಾರ್ಷಿಕ ಎಷ್ಟು ಪ್ರೀಮಿಯಂ ಕಟ್ಟುತ್ತಿದ್ದೀರಿ ಎನ್ನುವುದಕ್ಕಿಂತ, ಎಷ್ಟು ಮೊತ್ತಕ್ಕೆ ಜೀವ ವಿಮೆಯನ್ನು ಖರೀದಿಸಿದ್ದೀರಿ ಎನ್ನುವುದು ಮಹತ್ವದ ಸಂಗತಿ ನೀವು ವಾರ್ಷಿಕ ಒಂದು ಲಕ್ಷ ರೂ. ಪ್ರೀಮಿಯಂ ಕಟ್ಟುತ್ತಿದ್ದರೂ, ನಿಮ್ಮ ಬಳಿ ಸೂಕ್ತ ಮೊತ್ತದ ವಿಮೆ ಇಲ್ಲದಿದ್ದರೆ ಅದು ಲೆಕ್ಕಕ್ಕೆ ಬರುವುದಿಲ್ಲ, ನೆನಪಿರಲಿ. ನಿಮ್ಮ ವಾರ್ಷಿಕ ಆದಾಯದ 16-18 ಪಟ್ಟು ಜೀವ ವಿಮೆಯನ್ನು ಹೊಂದಿದ್ದರೆ, ಆಗ ನೀವು ಈ ದೇಶದ ಕೇವಲ ಒಂದು ಪರ್ಸೆಂಟ್ ‘ಜ್ಞಾನವಂತ ಹೂಡಿಕೆದಾರ’ರಲ್ಲಿ ಒಬ್ಬವಾಗಿರುತ್ತೀರಿ.

ಜೀವ ವಿಮೆ ಕೊಂಡುಕೊಳ್ಳುವ ಮೊದಲು ಯಾವ ವಿಷಯದ ಬಗ್ಗೆ ಎಚ್ಚರವಹಿಸಬೇಕು?

ಈ ವಿಷಯವನ್ನು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನು ಗಮನಿಸಿ. ಈ ಪ್ರಕ್ರಿಯ ವಯಸ್ಸು ಮೂವತ್ತೈದು, ಮದುವೆಯಾಗಿದೆ ಮತ್ತು ಇಬ್ಬರು ಸಣ್ಣವಯಸ್ಸಿನ ಮಕ್ಕಳು ಇದ್ದಾರೆ. ಈ ವ್ಯಕ್ತಿ ತನ್ನ 32ನೇ ವಯಸ್ಸಿನಲ್ಲಿ ಒಂದು ಜೀವ ವಿಮೇ ಖರೀದಿಸಿದರು. ಅದು ಎಂಡೋಮೆಂಟ್ ಪ್ಲಾನ್ ವಾರ್ಷಿಕ ಪ್ರೀಮಿಯಂ ಸುಮಾರು ಒಂದು ಲಕ್ಷ ರೂಪಾಯಿ ಕಟ್ಟುತ್ತಿದ್ದಾರೆ. 25 ವರ್ಷಗಳ ಟರ್ಮ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಪಾಲಸಿಯ ವಿಮೆ ಮೊತ್ತ ಸುಮಾರು 25 ಲಕ್ಷರೂಪಾಯಿ ಮೆಚುರಿಟ ಮೊತ್ತ ಸುಮಾರು 50 ಲಕ್ಷ ರೂ.ನಷ್ಟು ಬರಬಹುದು. ಅಂದ ಹಾಗೇ, ಈ ವ್ಯಕ್ತಿಯ ತಿಂಗಳ ಸಂಬಳ ಒಂದು ಲಕ್ಷ ರೂಪಾಯಿ

ಮೇಲಿನ ಉದಾಹರಣೆಯನ್ನು ಗಮನಿಸಿದರೆ, ಬೇರೇನೂ ಯೋಚಿಸದೆ ಹಾಗೂ ಲೆಕ್ಕ ಹಾಕದೇ “ಗುಡ್, ಉತ್ತಮ ಜೀವ ವಿಮೆ ಖರೀದಿಸಿದ್ದಾರೆ.” ಎಂದು ಬಹುತೇಕರಿಗೆ ಅನ್ನಿಸಬಹುದು. ವಾರ್ಷಿಕ ಒಂದು ಲಕ್ಷ ರೂಪಾಯಿ ಪ್ರೀಮಿಯಂ ಕಟ್ಟುತ್ತಿದ್ದಾರೆ, ಅದೇನು ಅಲ್ಪ ಮೊತ್ತವಲ್ಲ, ವಿಮೆಯ ಮೊತ್ತವೂ ದೊಡ್ಡದಾಗೇ ಕಾಣುತ್ತಿದೆ. ಆದರೆ, ಇಲ್ಲಿ ಏನು ತಪ್ಪಾಗಿದೆ ಹೇಳಿ…. ಬನ್ನಿ ಅವಲೋಕಿಸೋಣ.

▪️ಒಂದು ವೇಳೆ ಈ ವಿಮೇ ಖರೀದಿಸಿದ  ದಿಢೀರನೆ ಮೃತಪಟ್ಟರೆ ಏನಾಗುತ್ತದೆ?

ವಿಮೆ ಕಂಪನಿಯು ನಾಮಿನಿಗೆ ವಿಮೆಯ ಮೊತ್ತ ಇಪ್ಪತ್ತು ಲಕ್ಷ ರೂ. ಗಳ ಪೂರ್ಣ ಮೊತ್ತವನ್ನು ಕೊಡುತ್ತದೆ. ಅಲ್ಲದೇ, ಹೂಡಿಕೆಯ ಅಲ್ಲಿಯವರೆಗಿನ ಬೆಳವಣಿಗೆ ಹಣವನ್ನೂ ಕೊಡುತ್ತಾರೆ. ಈಗ ಲೆಕ್ಕಹಾಕಿ ನೋಡುವ ಸಮಯ. ಈ ವ್ಯಕ್ತಿಯ ತಿಂಗಳ ಸಂಪಾದನೆ ಒಂದು ಲಕ್ಷ ರೂಪಾಯಿ (ವಾರ್ಷಿಕ ಹನ್ನೆರಡು ಲಕ್ಷ ರೂಪಾಯಿ), ವಿಮೆ ಕಂಪನಿ ನೀಡುವ ಹಣ ಇವತ್ತು-ಇಪತ್ತೆರಡು ಲಕ್ಷ (ಮೂವತ್ತು ಲಕ್ಷವೆಂದೂ ಇಟ್ಟುಕೊಳ್ಳಬಹುದು). ಈ ಹಣವನ್ನು ಪಡೆಯುವ ಈತನ ಸಂಸಾರಕ್ಕೆ ಇಷ್ಟು ಮೊತ್ತ ಸಾಕಾಗುತ್ತದೆಯೇ? ಇದನ್ನು ಬ್ಯಾಂಕಿನಲ್ಲಿ ಠೇವಣಿಯಂತೆ ಇಟ್ಟರೆ ವಾರ್ಷಿಕ 6% ಬಡ್ಡಿ ದುಡಿದರೆ, ತಿಂಗಳಿಗೆ ಬರುವ ಆದಾಯ ಸುಮಾರು ಹತ್ತರಿಂದ ಹದಿನೈದು ಸಾವಿರ ರೂಪಾಯಿ! ಬದುಕಿದ್ದಾಗ ಮಾಡುತ್ತಿದ್ದ ಸಂಪಾದನೆ ತಿಂಗಳಿಗೆ ಒಂದು ಲಕ್ಷ (ಸಂಸಾರಕ್ಕೆ ಬರುತ್ತಿದ್ದ  ಸಂಪಾದನೆಯೂ ಇಷ್ಟೇ), ಮನೆ ಒಡೆಯನ ನಿಧನದ ನಂತರ ಸಂಸಾರಕ್ಕೆ ಸಿಗುವ ಆದಾಯ ಹತ್ತನೇ ಒಂದು ಅಂಶ. ಈ ಮೊತ್ತ ಸಂಸಾರ ನಡೆಸಲು ಸಾಕೆ?

▪️ಸಾಮಾನ್ಯ ಜನರು ಈ ರೀತಿಯ ಜೀವವಿಮೆಯನ್ನು ಏಕೆ ಖರೀದಿಸುತ್ತಾರೆ?

ಮೊಬೈಲ್ ಖರೀದಿ ಮಾಡುವಾಗ ಸಾವಿರಾರು ರೂಪಾಯಿಯನ್ನು ಹಿಂದೆ ಮುಂದೆ ನೋಡದೆ ಖರ್ಚು ಮಾಡುವ ಈ ಜನ, ಬಹಳ ಮುಖ್ಯವಾದ ಹೂಡಿಕೆ ಮಾಡುವಾಗ ಏಕೆ ಇಷ್ಟು ಜಿಪುಣರಾಗುತ್ತಾರೆ ಏಕೆ ಇಷ್ಟು ಜಿಪುಣರಾಗುತ್ತಾರೆ? ಒಂದು ದ್ವಿಚಕ್ರ ವಾಹನ, ಒಂದು ಕಾರು ಖರೀದಿ ಮಾಡುವಾಗ ಬಿಂದಾಸ್ ಆಗಿ ಹಣ ಸುರಿಯುವ ಜನ ( ಕೆಲಸಕ್ಕೆ ಬಾರದ ಸನ್ ರೂಫ್ ಇರುವ ಕಾರನ್ನು ಲಕ್ಷಾಂತರ ರೂ.ಅಧಿಕ ಹಣ ಕೊಟ್ಟು ಖರೀದಿ ಮಾಡುತ್ತಾರೆ), ಜೀವ ವಿಮೆ ಖರೀದಿಸುವಾಗ ಏಕೆ ಅದೇ ಉದಾರತೆ ತೋರುವುದಿಲ್ಲ? ಏಕೆಂದರೆ ಜೀವವಿಮೆಯು ಒಂದು ಅಗತ್ಯ ಅಥವಾ ಅತ್ಯಾವಶ್ಯಕ ಆರ್ಥಿಕ ಸುರಕ್ಷತೆಯ ಬೇಲಿ ಎಂದು ನಾವು ಪರಿಗಣಿಸುವುದೇ ಇಲ್ಲ.

ಸಾವಿನ ಬಗ್ಗೆ ಭಯವಿರಬೇಕು ಎಂದೇನೂ ಇಲ್ಲ, ಆದರೆ ಎಚ್ಚರವಿರಬೇಕು. ಮಳೆ ಬರುತ್ತದೆ ಎಂದು ಯಾರೂ ಭಯ ಬೀಳುವುದಿಲ್ಲ, ಛತ್ರಿ/ರೈನ್ ಕೋಟ್ ಇಟ್ಟುಕೊಂಡರೆ ಅಯಿತಲ್ಲವೇ? ಸೂಕ್ತ ಮೊತ್ತದ ವಿಮೆ ಖರೀದಿಯೂ ಹಾಗೆಯೇ.

▪️ಬಹಳಷ್ಟು ಜನ ಮಾಡುವ ತಪ್ಪು ಯಾವುದು ಗೊತ್ತೆ?

ವಿಮೆ ಪಾಲಿಸಿಯ ಅವಧಿಯಲ್ಲಿ ಸಾವು ಎಂಬ ಘಟನೆ ನಡೆಯದಿದ್ದರೆ ನಾವು ಕಟ್ಟುವ ಹಣ ವೇಸ್ಟ್ ಆಗಿಬಿಡುತ್ತದೆ ಎಂಬ ಚಿಂತೆ ಬಹಳ ಜನರಲ್ಲಿದೆ. ಮುಖ್ಯವಾಗಿ ಪಾಲಿಸಿ ಅವಧಿ ಮುಗಿದಾಗ ಏನೂ ಹಣ ಬರದೇ ಇದ್ದರೆ ಅದು ಘೋರ ಅಪರಾಧ ಎನ್ನುವ ಭಾವನೆಯೂ ಇದೆ. ಹಣ ಕಟ್ಟಿದ್ದೇನೆ, ಏನಾದರೂ ಮತ್ತು ಎಪ್ಪಾದರೂ ಹಣ ವಾಪಸ್ಸು ಬರಬೇಕು ಎಂಬ ಅರ್ಥವಾಗದ ಲೆಕ್ಕಾಚಾರ ಜನರಲ್ಲಿ ಸಾಮಾನ್ಯ. ನಿಜಕ್ಕೂ ವಿಮೆಯನ್ನು ಹೂಡಿಕೆಯಂತೆ ನೋಡಬಾರದು. ಅನಾಹುತ ನಡೆದರೆ ಅದಕ್ಕೆ ಸೂಕ್ತ ಪರಿಹಾರ ಕೊಡುವುದು ವಿಮೆಯ ಕೆಲಸ.

ನಮ್ಮ ನಡವಳಿಕೆ, ವರ್ತನೆ ಮತ್ತು ಚಿಂತನೆ (behaviour) ಬದಲಾಗಬೇಕು. ಸಾವು ಎನ್ನುವುದು ಜೀವನದ ಒಂದು ಕಟು ಸತ್ಯ. ಆದೇನಾದರೂ ನನ್ನ ಸಂಸಾರ ನನ್ನನ್ನು ನಂಬಿಕೊಂಡಿದ್ದಾಗ ನಡೆದುಬಿಟ್ಟರೇ. ಸಂಸಾರವು ಮುಂದೆ ಹೇಗೆ ಜೀವನ ನಡೆಸುತ್ತದೆ? ಈ ಚಿಂತನೆ ಬಹಳ ಮುಖ್ಯ. ಈ ಚಿಂತನೆ ಇದ್ದಾಗ ಜೀವವಿಮೆಯ ಖರೀದಿ ಸರಿಯಾಗುತ್ತದೆ. ಯಾರ ಬಳಿ ತಮ್ಮ ವಾರ್ಷಿಕ ಸಂಪಾದನೆಯ ಹದಿನಾರರಿಂದ ಹದಿನೆಂಟು ಪಟ್ಟು ವಿಮೆಯ ಮೊತ್ತ ಇರುವುದಿಲ್ಲವೋ, ಅವರೆಲ್ಲರೂ ತಮ್ಮನ್ನು ನಂಬಿಕೊಂಡಿರುವ ಸಂಸಾರವನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದರ್ಥ!

ಜೀವವಿಮೆಯನ್ನು ಒಂದು ಹೂಡಿಕೆ ದೃಷ್ಟಿಯಿಂದ ನೋಡುವುದನ್ನು ಬಿಟ್ಟು ರಿಸ್ಕ್ ತಪ್ಪಿಸುವ ಒಂದು ಉಪಾಯ ಎಂಬುದಾಗಿ ನೋಡಿದರೆ ಹೂಡಿಕೆಯ ಆಯ್ಕೆ (ವಿಮೆಯ ಮೊತ್ತದ ಆಯ್ಕೆ) ಸರಿ ಎಂದು ಅನ್ನಿಸುತ್ತದೆ.

▪️ನಮ್ಮ ವಾಹನಕ್ಕೆ ವಿಮೆ ಮಾಡಿಸುತ್ತೇವೆ, ಒಂದು ವರ್ಷದ ನಂತರ ನವೀಕರಿಸುತ್ತೇವೆ….. ವಾಹನಕ್ಕೆ ಅಪಘಾತವಾಗಲಿಲ್ಲವಲ್ಲಾ ಎಂದು ಚಿಂತೆ ಮಾಡಲಾಗುತ್ತದೆಯೇ?

▪️ಆರೋಗ್ಯ ವಿಮೆ ಕೊಂಡುಕೊಳ್ಳುತ್ತೇವೆ….. ಒಂದು ವರ್ಷದ ಅವಧಿಯಲ್ಲಿ ನಾವು ಆಸ್ಪತ್ರೆಗೆ ದಾಖಲಾಗಲಿಲ್ಲವಲ್ಲಾ ಎಂದು ಹಲುಬಲಾಗುತ್ತದೆಯೇ?

▪️ಕಳೆದ ವರ್ಷ ವಾಹನಕ್ಕೆ ಎನೂ ಆಗಲಿಲ್ಲ, ನಾನು ಆಸ್ಪತ್ರೆಗೆ ದಾಖಲಾಗಲಿಲ್ಲ ಇನ್ನೇಕೆ ವಿಮೆ, ಇನ್ನೇಕೆ ನವೀಕರಣ ಎನ್ನಲಾಗುತ್ತದೆಯೇ?

ಜೀವವಿಮೆಯಲ್ಲಿ ನಮ್ಮ ಆಯ್ಕೆಯು ಟರ್ಮ್ ಇನ್ಶೂರೆನ್ಸ್ ಆಗಿರಬೇಕು. ಮುಂದಿನ ವಾರದ ಅಂಕಣದಲ್ಲಿ ‘ಟರ್ಮ್ ಇನ್ಸೂರೆನ್ಸ್’ನ ವಿಶೇಷತೆ ಏನು ಮತ್ತು ಹೇಗೆ ಸರಿಯಾದ ಆಯ್ಕೆ ಮಾಡಬಹುದು ಎಂದು ತಿಳಿದುಕೊಳ್ಳೋಣ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!