Moulyankana 2026-27: ರಾಜ್ಯದ ಎಲ್ಲಾ ಶಾಲೆಗಳಿಗೆ ಮಹತ್ವದ ಮಾಹಿತಿ|1–10ನೇ ತರಗತಿ ಮೌಲ್ಯಾಂಕನ ಕುರಿತು ಶಿಕ್ಷಣ ಇಲಾಖೆಯ ಆದೇಶ
Moulyankana 2026-27: ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ 1 ರಿಂದ 10ನೇ ತರಗತಿ ಶಾಲೆಗಳಿಗೆ 2026-27ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕ್ರಿಯಾಯೋಜನೆಯನ್ನು ಉಲ್ಲೇಖ-1 ರನ್ವಯ ಹೊರಡಿಸಲಾಗಿದೆ. ಇದನ್ನು ಆಧರಿಸಿ ಶಾಲೆಗಳಲ್ಲಿ ಕಲಿಕಾ ಪ್ರಕ್ರಿಯೆ ಹಾಗೂ ಮೌಲ್ಯಾಂಕನ ಪ್ರಕ್ರಿಯೆ ಕುರಿತು ಈ ಕೆಳಕಂಡಂತೆ ಕ್ರಮವಹಿಸಲು ತಿಳಿಸಿದೆ.
1. 2026-27ನೇ ಸಾಲಿನ ಶೈಕ್ಷಣಿಕ ವರ್ಷವು ದಿನಾಂಕ: 29-05-2026 ರಿಂದ ಪ್ರಾರಂಭವಾಗಿದ್ದು, ಪ್ರಸ್ತುತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸುತ್ತೋಲೆಗಳನ್ನು ನೀಡಲಾಗುತ್ತಿದೆ.
2. ವಿದ್ಯಾರ್ಥಿಗಳ ಕಲಿಕೆಯನ್ನು ಸಮರ್ಪಕವಾಗಿ ಅನುಕೂಲಿಸುವ ಸಲುವಾಗಿ ‘ಕಲಿಕಾ ಚೇತರಿಕೆ’, ‘ಕಲಿಕಾ ಬಲವರ್ಧನೆ’, ‘ಕಲಿಕಾ ಫಲಾಧಾರಿತ ಪ್ರಶ್ನೆಕೋಠಿ’ ಉಪಕ್ರಮಗಳಡಿ ಸಿದ್ಧಪಡಿಸಲಾಗಿರುವ ಕಲಿವಿನ ಫಲಾಧಾರಿತ ವಿದ್ಯಾರ್ಥಿಗಳ ಚಟುವಟಿಕೆ ಪುಸ್ತಕಗಳು ಹಾಗೂ ಶಿಕ್ಷಕರ ಕೈಪಿಡಿಗಳು DSERT Website ನಲ್ಲಿ ಈಗಾಗಲೇ ಲಭ್ಯವಿರುತ್ತದೆ. ಇವುಗಳನ್ನು ಕಲಿಕಾ ಬೋಧನಾ ಪ್ರಕ್ರಿಯೆಯಲ್ಲಿ ಅಳವಡಿಸಿ ವಿದ್ಯಾರ್ಥಿಗಳ ಕಲಿಕಾ ಅಂತರವನ್ನು ಬೆಸೆಯಲು ಕ್ರಮವಹಿಸುವುದು.
3. ವಿದ್ಯಾರ್ಥಿಗಳನ್ನು ತರಗತಿ ನಿರ್ಧಿಷ್ಟ ಕಲಿಕೆಗೆ ಸಜ್ಜುಗೊಳಿಸಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ‘ಸೇತುಬಂಧ’ ಉಪಕ್ರಮವನ್ನು ಉಲ್ಲೇಖ-2 ರಂತೆ ಜೂನ್ ತಿಂಗಳಿನಲ್ಲಿ ನಡೆಸಲಾಗಿರುತ್ತದೆ. ಸೇತುಬಂಧದ ಹಾಗೂ FLN ಸಂಬಂಧಿತ ಕಲಿಕಾ ಫಲಗಳನ್ನು ನಿಡಲಾಗಿದ್ದು ಅದರಂತೆ ಬಿ ಕಲಿಕಾ ಹಂತದ ವಿದ್ಯಾರ್ಥಿಗಳು ಅಪೇಕ್ಷಿತ ಕಲಿಕಾ ಹಂತವನ್ನು ತಲುಪಲು ಅಗತ್ಯವಿರುವ ಕಲಿಕಾ ತಂತ್ರಗಳನ್ನು ಬಳಸಿ ವಿದ್ಯಾರ್ಥಿಗಳ ಕಲಿಕೆಯನ್ನು ಅನುಕೂಲಿಸುವುದು.
4. 2026-27ನೇ ಸಾಲಿಗೆ ರಾಜ್ಯದ ಎಲ್ಲಾ ಕೆ.ಪಿ.ಎಸ್ ಶಾಲೆಗಳು, ಪಿಎಂಶ್ರೀ ಶಾಲೆಗಳು ಮತ್ತು ಎಲ್ಲಾ ದ್ವಿಭಾಷಾ ತರಗತಿಗಳನ್ನು ಪ್ರಾರಂಭಿಸಿರುವ ಸರ್ಕಾರಿ ಶಾಲೆಗಳು, ಎಲ್ಲಾ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಿರುವ ಸರ್ಕಾರಿ ಶಾಲೆಗಳು, ಗಣಿಬಾಧಿತ ತಾಲ್ಲೂಕುಗಳಾದ ಚಿತ್ರದುರ್ಗ, ಹೊಳಲ್ಕೆರೆ ಮೊಣಕಾಲೂರು, ಹೊಸದುರ್ಗ ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು, ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆ ತಾಲ್ಲೂಕುಗಳಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು 15 ಜಿಲ್ಲೆಗಳಾದ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾವೇರಿ, ಕಲಬುರಗಿ, ಶಿವಮೊಗ್ಗ, ಹಾಸನ ತುಮಕೂರು, ದಕ್ಷಿಣಕನ್ನಡ, ಕೋಲಾರ, ಧಾರವಾಡ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಜಿಲ್ಲೆಗಳ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 01 ರಿಂದ 05ನೇ ತರಗತಿಗಳಿಗೆ ಏಕತರಗತಿ ದ್ವಿಭಾಷಾ ತರಗತಿಗಳನ್ನು ಪ್ರಾರಂಭಿಸಲು ಆದೇಶಿಸಲಾಗಿದೆ. ಆದೇಶದನ್ವಯ ಶಿಕ್ಷಕರಿಗೆ ದ್ವಿಭಾಷಾ ಮಾಧ್ಯಮ ತರಗತಿ ಪ್ರಕ್ರಿಯೆಗೆ ಸಜ್ಜುಗೊಳಿಸಲು ತರಬೇತಿಗಳನ್ನು ನೀಡಲಾಗಿರುತ್ತದೆ. ಅದರಂತೆ ತರಗತಿ ಪ್ರಕ್ರಿಯೆಗಳನ್ನು ಅನುಕೂಲಿಸಲು ಕ್ರಮವಹಿಸುವುದು.
5. 2025-26ನೇ ಸಾಲಿನಿಂದ ರಾಜ್ಯ ಪಠ್ಯಕ್ರಮದ ಶಾಲೆಗಳ ತರಗತಿಗಳಲ್ಲಿ ನಿರಂತರ ಮೌಲ್ಯಾಂಕನ ಪ್ರಕ್ರಿಯೆಗೆ ಅನುಕೂಲವಾಗುವಂತೆ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಸಿದ್ಧಪಡಿಸಿ DSERT Website ನಲ್ಲಿ ಅಳವಡಿಸಿ ಅನುಷ್ಠಾನ ಸಂಬಂಧ ಮಾರ್ಗದರ್ಶನ ನೀಡಲಾಗಿದೆ.
6. ಪ್ರತಿ ಪಾಠದ ನಂತರ ವಿದ್ಯಾರ್ಥಿಯ ಕಲಿಕೆಯನ್ನು ದೃಢೀಕರಿಸಿಕೊಳ್ಳಲು ಪಾಠ ಆಧಾರಿತ ಮೌಲ್ಯಾಂಕನದ ಪ್ರಶ್ನೆಕೋಠಿಯಲ್ಲಿನ ಪ್ರಶ್ನೆಗಳನ್ನು ಆಧರಿಸಿ ಮೌಲ್ಯಾಂಕನ ಮಾಡುವುದು.
7. 2026-27ನೇ ಸಾಲಿಗೆ ಸದರಿ ಪ್ರಶ್ನೆಕೋಠಿಗಳನ್ನು ಪರಿಷ್ಕರಿಸಲಾಗಿದೆ ಮತ್ತು ಹೊಸ ಪಠ್ಯಪುಸ್ತಕಗಳಿಗೆ ಪ್ರಶ್ನೆಕೋಠಿಗಳನ್ನು ರಚಿಸಲಾಗಿದೆ.
8. 1 ರಿಂದ 5ನೇ ತರಗತಿಗಳಿಗೆ 10 ಅಂಕಗಳಿಗೆ ಲಿಖಿತ ಹಾಗೂ 05 ಅಂಕಗಳಿಗೆ ಮೌಖಿಕ ಒಟ್ಟು 15 ಅಂಕಗಳಿಗೆ ಎಲ್ಲಾ ರೀತಿಯ ವಸ್ತು ನಿಷ್ಠ ಪ್ರಶ್ನೆಗಳು ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಂತೆ ಕಲಿಕಾ ಫಲಾಧಾರಿತ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಮೌಲ್ಯಾಂಕನ ಮಾಡುವುದು ಹಾಗೂ SATS ತಂತ್ರಾಂಶದಲ್ಲಿ ಇಂದೀಕರಿಸುವುದು.
9. 6 ಮತ್ತು 7ನೇ ತರಗತಿಗಳಿಗೆ 20 ಅಂಕಗಳಿಗೆ ವಸ್ತು ನಿಷ್ಠ ಹಾಗೂ ವಿವರಣಾತ್ಮಕ ಪ್ರಶ್ನೆಗಳನ್ನೊಳಗೊಂಡ ಪ್ರಶ್ನೆ ಪತ್ರಿಕೆಯನ್ನು ಸಿದ್ದಪಡಿಸಿ ಲಿಖಿತ ಮೌಲ್ಯಾಂಕನ ಮಾಡುವುದು ಹಾಗೂ SATS ತಂತ್ರಾಂಶದಲ್ಲಿ ಇಂದೀಕರಿಸುವುದು.
10.8 ರಿಂದ 10ನೇ ತರಗತಿಗಳಿಗೆ 20 ಅಂಕಗಳಿಗೆ LBA ಪ್ರಶ್ನೆಕೋಠಿಯ ಬಹು ಆಯ್ಕೆಯ ಪ್ರಶ್ನೆಗಳು ಹಾಗೂ ವಿವರಣಾತ್ಮಕ ಪ್ರಶ್ನೆಗಳನ್ನೊಳಗೊಂಡ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿ ಲಿಖಿತ ಮೌಲ್ಯಾಂಕನ ಮಾಡುವುದು ಹಾಗೂ SATS ತಂತ್ರಾಂಶದಲ್ಲಿ ಇಂದೀಕರಿಸುವುದು.
11. ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಆಧರಿಸಿ ರೂಪಣಾತ್ಮಕ (FA) ಹಾಗೂ ಸಂಕಲನಾತ್ಮಕ (SA) ಮೌಲ್ಯಾಂಕನ ಕೈಗೊಂಡು, ವಿದ್ಯಾರ್ಥಿಗಳ ಕಲಿಕೆಯ ಪಗತಿಯನ್ನು SATS ತಂತ್ರಾಂಶದಲ್ಲಿ ಕಡ್ಡಾಯವಾಗಿ ಇಂದೀಕರಿಸುವುದು.
12. SATS ನಲ್ಲಿ LBA ವಿಶ್ಲೇಷಣಾ ವರದಿಯನ್ನು ಆಧರಿಸಿ, ಪ್ರತಿ ಮೌಲ್ಯಾಂಕನದ ನಂತರ ವಿದ್ಯಾರ್ಥಿಗಳ ಕಲಿಕಾ ಸಾಧನೆಗೆ ಕ್ರಮವಹಿಸುವುದು.
13.2026-27ನೇ ಸಾಲಿಗೆ ಇಲಾಖಾವತಿಯಿಂದ ಸಮಗ್ರ ಪುಗತಿ ಪತ್ರವನ್ನು (Holistic Progress Card) ಸಿದ್ಧಪಡಿಸಿದ್ದು, ಶಾಲಾ ಶೈಕ್ಷಣಿಕ ದಿನಚರಿಯಲ್ಲಿ ಅಳವಡಿಸಿ ಮುದ್ರಿಸಿ, ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲಾಗಿದೆ. ನಿಯಮಿತವಾಗಿ ದಿನಚರಿಯನ್ನು ಬಳಸುವುದರ ಜೊತೆಗೆ ಸಮಗ್ರ ಪುಗತಿ ಪತ್ರವನ್ನು ಭರ್ತಿ ಮಾಡಿ ಕಾಲಕಾಲಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ ತರುವುದು.
14. 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸೇತುಬಂಧ ಉಪಕ್ರಮ, ಪಾಠ ಆಧಾರಿತ ಮೌಲ್ಯಾಂಕನ, ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಾಂಕನ ನಿರ್ವಹಿಸಲು ಅನುವಾಗುವಂತೆ ಸದರಿ ಸುತ್ತೋಲೆಯಲ್ಲಿ ಮಾಹಿತಿಯನ್ನು ನೀಡಲಾಗಿದೆ. ಅದರಂತೆ, ಮೇಲುಸ್ತುವಾರಿ ಅಧಿಕಾರಿಗಳು ಭೇಟಿ ಸಮಯದಲ್ಲಿ ಶಾಲಾ ಹಂತದಲ್ಲಿ ಕ್ರಮವಹಿಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಂಡು ನಿರಂತರವಾಗಿ ಅನುಪಾಲನೆ ಮಾಡುವುದು.
ಮತ್ತಷ್ಟು ಮಾಹಿತಿಗಾಗಿ ಈ ಕೆಳಗಿನ ಸುತ್ತೋಲೆ ಡೌನ್ಲೋಡ್ ಮಾಡಿಕೊಳ್ಳಿ

CLICK HERE TO DOWNLOAD – CIRCULAR