National Nutrition Month 2025-26: ಶಾಲೆ ಮತ್ತು ಸಮುದಾಯದಲ್ಲಿ ಪೋಷಣ ಜಾಗೃತಿ ಅಭಿಯಾನ
National Nutrition Month 2025-26: ಮೇಲ್ಕಂಡ ವಿಷಯ ಹಾಗೂ ಉಲ್ಲೇಖಿತ ಪತ್ರಗಳಲ್ಲಿ ತಿಳಿಸಿರುವಂತೆ, ಭಾರತ ಸರ್ಕಾರದ ಘನತೆವೆತ್ತ ಮಾನ್ಯ ಪ್ರಧಾನ ಮಂತ್ರಿಗಳು ದಿನಾಂಕ: 08ನೇ ಮಾರ್ಚ್-2018 ರಲ್ಲಿ ಉದ್ಘಾಟಿಸಿ ಜಾರಿಗೊಳಿಸಿರುವ ಪ್ರತಿಷ್ಠಿತ ರಾಷ್ಟ್ರೀಯ ಪೋಷಣ್ ಕಾರ್ಯಕ್ರಮ ಇದಾಗಿದ್ದು, ಸದರಿ ಕಾರ್ಯಕ್ರಮವನ್ನು ಪ್ರತೀ ವರ್ಷ ಸೆಪ್ಟೆಂಬರ್ ತಿಂಗಳಿನ 17 ರಿಂದ ಅಕ್ಟೋಬರ್ 16ರ ವರೆಗೆ ರಾಷ್ಟ್ರೀಯ ಪೋಷಣ ಮಾನಾಚರಣೆ ಎಂಬುದಾಗಿ ಹಮ್ಮಿ ಕೊಳ್ಳಬೇಕಾಗಿತ್ತು.
ಪ್ರಸ್ತುತ 2025-26ನೇ ಸಾಲಿನಲ್ಲಿ ಈ ಕೆಳಕಂಡ ಉದ್ದೇಶಗಳ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಶಾಲಾ ಕಾರ್ಯಕ್ರಮಗಳನ್ನು ರೂಪಿಸಿದ್ದು, ಸದರಿ ಕಾರ್ಯಚಟುವಟಿಕೆಗಳನ್ನು ಶಾಲಾ ಎನ್.ಡಿ.ಎಂ.ಸಿ ತಾಯಂದಿರ ಸಮಿತಿ, ಪ್ರಮುಖವಾಗಿ ಕಾರ್ಯಕ್ರಮ ಜಾರಿಗೊಳಿಸುತ್ತಿರುವ ಜಿಲ್ಲೆ ಮತ್ತು ತಾಲ್ಲೂಕುಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ನೆರವು ಮಾರ್ಗದರ್ಶನ ಸಹಕಾರದೊಂದಿಗೆ, ಶಾಲೆ. ತಾಲ್ಲೂಕು ಹಾಗೂ ಜಿಲ್ಲಾ ಹಂತಗಳಲ್ಲಿ ದಿನಾಂಕ: 1.11.2025 ರಿಂದ 31.11.2025 ರ ವರೆಗೆ ಅರ್ಥಪೂರ್ಣವಾಗಿ ಹಾಗೂ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಸೂಚಿಸಿದೆ.
2025 ನೇ ಸಾಲಿನ ರಾಷ್ಟ್ರೀಯ ಪೋಷಣ ಮಾಸಾಚರಣೆಯಲ್ಲಿ ಗಮನ ಹರಿಸಬೇಕಾದ ಪ್ರಮುಖ ಅಂಶಗಳು:-
1. ಸಕ್ಕರೆ ಮತ್ತು ಎಣ್ಣೆಯ ಸೇವನೆಯನ್ನು ಕಡಿಮೆ ಮಾಡುವ ಮೂಲಕ ಬೊಜ್ಜುತನವನ್ನು ಪರಿಹರಿಸುವುದು.
2. ಸ್ಥಳೀಯ ಉನ್ನತಿಗಾಗಿ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡುವುದು.
3. ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ECCE)/ (ಪೋಷಣ್ ಭಿ ಪಡಾಯಿ ಬಿ) (PBPB) ಪೋಷಣೆಯೂ ಶಿಕ್ಷಣವೂ
4. ಕನ್ವರ್ಜೆಂಟ್ ಆಕ್ಷನ್ ಮತ್ತು ಡಿಜಿಟಲೀಕರಣ.
5. ಶಿಶು ಮತ್ತು ಚಿಕ್ಕ ಮಕ್ಕಳಿಗೆ ಆಹಾರ ನೀಡುವ (IYCF) ಅಭ್ಯಾಸಗಳು.
6. ಮೆನ್- ಸ್ಟ್ರೀಮಿಂಗ್.( ಹೆಚ್ಚಿನ ಸಂಖ್ಯೆಯಲ್ಲಿ ಪುರುಷರನ್ನು ಭಾಗವಹಿಸಲು ಪ್ರೋತ್ಸಾಹಿಸುವುದು)
ಪೋಷಣ್ ಮಾನಾಚರಣೆ 2025 ನ್ನು ಆಚರಿಸಲು ಮೇಲಿನ ವಿಷಯಗಳ ಮೇಲೆ ಕೇಂದ್ರೀಕರಿಸಿ ಕೆಳಗೆ ಸೂಚಿಸಲಾದ ಚಟುವಟಿಕೆಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳತಕ್ಕದ್ದು.
ಶಾಲಾ ಮಕ್ಕಳಿಗೆ ಆಹಾರ ಹಾಗೂ ಆರೋಗ್ಯದ ಕುರಿತಂತೆ ಸಂವೇದನಾಶೀಲತಾ ಅವಧಿಗಳನ್ನು ಏರ್ಪಡಿಸುವುದು.
ಪೋಷಣೆಗಾಗಿ ಹಾಗೂ ಆರೋಗ್ಯ ಕುರಿತು ಪೋಷಕರೊಂದಿಗೆ ಶಿಕ್ಷಕರಿಂದ ಜಂಟಿ ಸಂಪರ್ಕ ಚಟುವಟಿಕೆಗಳನ್ನು ಏರ್ಪಡಿಸುವುದು.
ಸಮುದಾಯದೊಂದಿಗೆ ಶಾಲಾ ಸಿದ್ಧತೆ ಅಭಿಯಾನವನ್ನು ಹಮ್ಮಿಕೊಳ್ಳುವುದು.
ಪೂರ್ವ ಶಾಲಾ/ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಜಂಟಿ ಕ್ರೀಡಾ ದಿನ ಆಚರಿಸುವುದು.
ತೈಲ ಸೇವನೆಯನ್ನು ಕಡಿಮೆ ಮಾಡುವುದರ ಪ್ರಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ತರಗತಿಗಳನ್ನು ನಡೆಸಲು, ಪೌಷ್ಠಿಕಾಂಶ ತಜ್ಞರನ್ನು ಆಹ್ವಾನಿಸಲು ಮತ್ತು ಆರೋಗ್ಯಕರ ಆಹಾರದ ಬಗ್ಗೆ ರಸ ಪ್ರಶ್ನೆಗಳನ್ನು ನಡೆಸಲು ಸಲಹೆ ನೀಡಲಾಗಿದೆ. ಶಾಲೆಗಳಲ್ಲಿ ಯೋಗಕ್ಷೇಮವನ್ನು ಉತ್ತೇಜಿಸಲು ಪರಿಸರ ಕ್ಲಬ್, ಚರ್ಚೆಗಳು, ಯೋಗ ಮತ್ತು ವ್ಯಾಯಮ ಅವಧಿಗಳಂತಹ ಚಟುವಟಿಕೆಗಳನ್ನು ಆಯೋಜಿಸುವುದು, ಕಡಿಮೆ ಎಣ್ಣೆಯ ಅಡುಗೆ, ಪಾಕವಿಧಾನ ಮತ್ತು ಆರೋಗ್ಯ ಟ್ರ್ಯಾಕಿಂಗ್ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವುದು ಇತ್ಯಾದಿಗಳ ಬಗ್ಗೆ ಶಿಕ್ಷಕರು ಪೋಷಕರಿಗೆ ಮಾರ್ಗದರ್ಶನ ನೀಡುವುದು.
ಇದಲ್ಲದೆ ವಿದ್ಯಾರ್ಥಿಗಳಿಗೆ ಮಾಹಿತಿಯುಕ್ತ ಆಹಾರ ಆಯ್ಕೆಗಳ ಬಗ್ಗೆ ಶಿಕ್ಷಣ ನೀಡಲು ಮತ್ತು ವಿದ್ಯಾರ್ಥಿಗಳಲ್ಲಿ ದೀರ್ಘಕಾಲಿನ ಆರೋಗ್ಯ ಪ್ರಯೋಜನಗಳನ್ನು ಉತ್ತೇಜಿಸಲು ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿ.ಬಿ.ಎಸ್.ಇ) ಸಕ್ಕರೆಯುಕ್ತ ಆಹಾರ ಕುರಿತು ಸಕ್ಕರೆ ಮಂಡಳಿಗಳನ್ನು ರಚಿಸಿದ್ದು, ಇದರಲ್ಲಿ ವಿದ್ಯಾರ್ಥಿಗಳಿಗೆ ಅತಿಯಾದ ಸಕ್ಕರೆ ಸೇವನೆಯ ಅಪಾಯಗಳ ಬಗ್ಗೆ ಅರಿವು ಮೂಡಿಸಲು ಫಲಕಗಳಲ್ಲಿ ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ. ಈ ಫಲಕಗಳು ಶಿಫಾರಸ್ಸು ಮಾಡಲಾದ ದೈನಂದಿನ ಸಕ್ಕರೆ ಸೇವನೆ, ಸಾಮಾನ್ಯವಾಗಿ ಸೇವಿಸುವ ಆಹಾರಗಳಲ್ಲಿನ ಸಕ್ಕರೆ ಅಂಶ (ಜಂಕ್ ಪುಡ್, ತಂಪು ಪಾನಿಯಗಳು ಇತ್ಯಾದಿ ಅನಾರೋಗ್ಯಕರ ಊಟಗಳು) ಹೆಚ್ಚಿನ ಸಕ್ಕರೆ ಸೇವನೆಯಿಂದ ಉಂಟಾಗುವ ಆರೋಗ್ಯದ ಅಪಾಯಗಳು, ಕಡಿಮೆ ಎಣ್ಣೆ ಸೇವನೆಯ ಪ್ರಯೋಜನಗಳನ್ನು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಪೋಷಣ್ ಮಾಸಾಚರಣೆ ಮತ್ತು ಆರೋಗ್ಯಕರ ಆಹಾರ ಪರ್ಯಾಯಗಳು ಸೇರಿದಂತೆ ಅಗತ್ಯ ಮಾಹಿತಿಯನ್ನು ಒಳಗೊಂಡಿರುತ್ತವೆ. ಈ ಫಲಕಗಳು ಪೋಷಣ ಮಾಸಾಚರಣೆಯ ಅನುಷ್ಠಾನದಲ್ಲಿ ಪ್ರಚಾರ ಮಾಡಲು ಸಹಾಯವಾಗುತ್ತವೆ. ಹಾಗಾಗಿ ವಿದ್ಯಾರ್ಥಿಗಳಿಂದ ಈ ಫಲಕಗಳನ್ನು ಸಿದ್ಧಪಡಿಸಲು ತಿಳಿಸುವುದು.
ರಾಜ್ಯ ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳೊಂದಿಗೆ ಸಮನ್ವಯ ಏರ್ಪಡಿಸಿ ಪೂರ್ವಭಾವಿಯಾಗಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಸಮುದಾಯದಲ್ಲಿ ಉತ್ತಮ ಪೋಷಣೆ, ಆರೋಗ್ಯ ಮತ್ತು ನೈರ್ಮಲ್ಯ, ಸಮತೋಲಿತ ಆಹಾರ ಸಿರಿ ಧಾನ್ಯಗಳ ಬಳಕೆ ಇತ್ಯಾದಿಗಳಿಗೆ ಸಂಬಂಧಿಸಿದ ಸಂದೇಶಗಳ ವ್ಯಾಪಕ ಪ್ರಸರಣವನ್ನು ಖಚಿತಪಡಿಸಿಕೊಳ್ಳುವುದು.
ಸಮುದಾಯ ರೇಡಿಯೋ, CSOಗಳು/NGOಗಳು ಮತ್ತು ಸ್ಥಳೀಯವಾಗಿ ಸೂಕ್ತವಾದ ಇತರ ವೇದಿಕೆಗಳು ಸೇರಿದಂತೆ ಮಾಧ್ಯಮ ಚಟುವಟಿಕೆಗಳ ಮೂಲಕ ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವುದು, ಮಾಸಾಚರಣೆ ಕುರಿತಂತೆ ಮೇಲ್ವಿಚಾರನಣೆ ಹಾಗೂ ಮಾಹಿತಿ ಇಂದೀಕರಿಸಲು ತಾಲ್ಲೂಕು ಹಂತದಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ ಅಗತ್ಯ ಕ್ರಮ ಕೈಗೊಳ್ಳುವುದು. ಇಲ್ಲಿ ನೀಡಿರುವ ಪೋರ್ಟಲ್‌ನಲ್ಲಿ (www.Poshanabhiyan.gov.in) ಮಾಸಾಚರಣೆಯ ತಿಂಗಳಲ್ಲಿ ಕೈಗೊಂಡ ಚಟುವಟಿಕೆಗಳನ್ನು ದಾಖಲಿಸಲು ಮತ್ತು ವರದಿ ಮಾಡಲು ಕಡ್ಡಾಯವಾಗಿ ಕ್ರಮ ಕೈಗೊಳ್ಳುವಂತೆ ಈ ಮೂಲಕ ಸೂಚಿಸಿದೆ.
ಸೂಚನೆ:-
ಈ ಪತ್ರಕ್ಕೆ ಲಗತ್ತಿಸಲಾದ ಅನುಬಂಧ-1ರಂತೆ ಪ್ರತಿ ಹತ್ತು ದಿನಗಳಿಗೊಮ್ಮೆ (ನವಂಬರ್ 01 ರಿಂದ 30) ರವರೆಗೆ ತಪ್ಪದೇ ರಾಜ್ಯ ಕಛೇರಿಗೆ nutrimdms@gmail.com ಮಾಹಿತಿ ರವಾನಿಸಲು ಸೂಚಿಸಿದೆ.
ಈ ಪತ್ರದೊಂದಿಗೆ ಪ್ರತಿ ಜಿಲ್ಲೆಯಿಂದ ನವಂಬರ್ ಮಾಸಾಚರಣೆ ಪೋಷಣ ಮಾಸದ ಚಟುವಟಿಕೆಗಳ ಫೋಟೋ ಮತ್ತು ವಿಡಿಯೋಗಳನ್ನು Documentation ಮಾಡಿ ಇಂದೀಕರಿಸಲು ಲಾಗಿನ್ ID ಮತ್ತು password ಗಳನ್ನು ಅನುಬಂಧ-2 ರಲ್ಲಿ ನೀಡಲಾಗಿದ್ದು, ಇದನ್ನು ಬಳಸಿಕೊಂಡು ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಇಂದೀಕರಿಸಬೇಕು. ಕರ್ನಾಟಕ ರಾಜ್ಯದಿಂದ MOE-PM POSHAN ವಿಭಾಗಕ್ಕೆ ಸದರಿ ಮಾಹಿತಿಯನ್ನು UPLOAD ಕಡ್ಡಾಯವಾಗಿ ಮಾಡತಕ್ಕದ್ದು.

CLICK HERE TO DOWNLOAD CIRCULAR