NCERT ಹೊಸ ಡಿಪ್ಲೊಮಾ ಕೋರ್ಸ್: ವಿಜ್ಞಾನ ಶಿಕ್ಷಕರು ತಿಳಿಯಲೇಬೇಕಾದ ಮಾಹಿತಿ

NCERT ಹೊಸ ಡಿಪ್ಲೊಮಾ ಕೋರ್ಸ್: ವಿಜ್ಞಾನ ಶಿಕ್ಷಕರು ತಿಳಿಯಲೇಬೇಕಾದ ಮಾಹಿತಿ,ಅರ್ಜಿ ಸಲ್ಲಿಸಲು ಡಿ. 28ರವರೆಗೆ ಅವಕಾಶ| 40 ವಾರಗಳ ವಿಶೇಷ ಆನ್‌ಲೈನ್ ಡಿಪ್ಲೊಮಾ ಕೋರ್ಸ್

NCERT ಹೊಸ ಡಿಪ್ಲೊಮಾ ಕೋರ್ಸ್: ವಿಜ್ಞಾನ ಶಿಕ್ಷಕರು ತಿಳಿಯಲೇಬೇಕಾದ ಮಾಹಿತಿ: ಅಷ್ಟೇ ಅಲ್ಲದೇ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಕಲಿಸಲು ಅನುವು ಮಾಡಿಕೊಡುವುದು. ಈ ಉಪಕ್ರಮದ ಪ್ರಮುಖ ಗುರಿ ವಿದ್ಯಾರ್ಥಿಗಳಿಗೆ ಎಲ್ಲಾ ಪ್ರಮುಖ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ತಿಳಿಯುವಂತೆ ಮಾಡುವುದಾಗಿದೆ.

ಈ ಡಿಪ್ಲೊಮಾ ಕೋರ್ಸ್ ಅನ್ನು ನವದೆಹಲಿಯ ಎನ್ ಸಿಇಆರ್‌ಟಿ ಯ ವಿಜ್ಞಾನ ಮತ್ತು ಗಣಿತ ಶಿಕ್ಷಣ ಇಲಾಖೆ (DESM) ಅಡಿಯಲ್ಲಿ ನೀಡಲಾಗುತ್ತದೆ.

NCERTX ಎಂಬ ವೇದಿಕೆ:


ಈ ಆನ್‌ಲೈನ್ ಡಿಪ್ಲೊಮಾ ಕೋರ್ಸ್ ಅನ್ನು NCERT ವಿಶೇಷವಾಗಿ ವಿನ್ಯಾಸಗೊಳಿಸಿದ್ದಲ್ಲದೆ, ಸಂಪೂರ್ಣವಾಗಿ ಮೇಲ್ವಿಚಾರಣೆ ಕೂಡ ಮಾಡುತ್ತದೆ. ಎನ್‌ಸಿಆಆರ್‌ಟಿ ಯ ಅಧಿಕೃತ ಆನ್‌ಲೈನ್ ಶಿಕ್ಷಣ ಉಪಕ್ರಮವಾದ ‘NCERTX’ ಪ್ಲಾಟ್ ಫಾರ್ಮ್ ಮೂಲಕ ಕೋರ್ಸ್‌ಗಳನ್ನು ನಡೆಸಲಾಗುತ್ತದೆ. ಶಿಕ್ಷಕರು ಈ ವೇದಿಕೆಯ ಮೂಲಕ ಮನೆಯಿಂದಲೇ ಆನ್ ಲೈನ್‌ನಲ್ಲಿ ಕೋರ್ಸ್ ಪೂರ್ಣಗೊಳಿಸಬಹುದಾಗಿದೆ.

ಕೋರ್ಸ್ ವಿವರ ಮಾಹಿತಿ


ಈ ಕೋರ್ಸ್ ‘ಮಧ್ಯಮ ಹಂತದಲ್ಲಿ ವಿಜ್ಞಾನ ಬೋಧನೆ (6 ರಿಂದ 8 ನೇ ತರಗತಿಗಳು)’ ಎಂದು ಶೀರ್ಷಿಕೆ ಹೊಂದಿದೆ. ಕೋರ್ಸ್‌ನ ಒಟ್ಟು ಅವಧಿ 40 ವಾರಗಳದ್ದಾಗಿರುತ್ತದೆ. ಡಿಸೆಂಬರ್ 29ರಂದು ಕೋರ್ಸ್ ಪ್ರಾರಂಭವಾಗಿ 2026ರ ಅಕ್ಟೋಬರ್ 18 ರವರೆಗೆ ನಡೆಯಲಿದೆ.

ಈ ಕೋರ್ಸ್ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿದ್ದು, ದಿನದ 24 ಗಂಟೆಗಳು, ವಾರದ ಏಳು ದಿನಗಳು ಲಭ್ಯವಿದೆ. ಇದು 40 ಸಂವಾದಾತ್ಮಕ ಮಾಡ್ಯೂಲ್‌ಗಳನ್ನು ಮತ್ತು ಕೋರ್ಸ್‌ನ ಕೊನೆಯಲ್ಲಿ ಅಂತಿಮ ಪರೀಕ್ಷೆಯನ್ನು ಒಳಗೊಂಡಿದೆ. ವಾರಕ್ಕೆ ಸುಮಾರು 6 ರಿಂದ 8 ಗಂಟೆಗಳ ಕಾಲ ಅಧ್ಯಯನ ಮಾಡಬೇಕಾಗುತ್ತದೆ. ಈ ಕೋರ್ಸ್‌ಗೆ ದಾಖಲಾಗಲು 2,000/- ರೂ. ಶುಲ್ಕ ಭರಿಸಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಮತ್ತೆ ಮರುಪಾವತಿಸಲಾಗುವುದಿಲ್ಲ. ಕೋರ್ಸ್ ಮತ್ತು ಅಂತಿಮ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ NCERT ಯಿಂದ ಇ-ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?


ಈ ಕೋರ್ಸ್ ಪ್ರಾಥಮಿಕವಾಗಿ ಸೇವಾ ನಿರತ ಶಿಕ್ಷಕರಿಗೆ ಮಾತ್ರ. ಈ ಕೆಳಗಿನ ವ್ಯಕ್ತಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರು.

▪️6 ರಿಂದ 8ನೇ ತರಗತಿಗಳಿಗೆ ವಿಜ್ಞಾನ ಶಿಕ್ಷಕರು
▪️ ಬಿಎಸ್ಸಿ ಪದವಿ ಪಡೆದ ಶಿಕ್ಷಕರು
▪️ಶಿಕ್ಷಣದಲ್ಲಿ ಡಿಪ್ಲೊಮಾ ಅಥವಾ ಪದವಿ ಪಡೆದ ಅಭ್ಯರ್ಥಿಗಳು
▪️ಬಿ.ಎಡ್ ಅಧ್ಯಯನ ಮಾಡುವ ವಿದ್ಯಾರ್ಥಿಗಳು, ಅಂದರೆ ಭಾವೀ ಶಿಕ್ಷಕರು
▪️ವಿಜ್ಞಾನ ಶಿಕ್ಷಣದಲ್ಲಿ ತೊಡಗಿರುವ ಇತರ ಜನರು

ಅರ್ಜಿ ಸಲ್ಲಿಸುವುದು ಹೇಗೆ?


▪️ಅಭ್ಯರ್ಥಿಗಳು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಲು, ಮೊದಲು ನೀವು ncertx.in ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿ ಪೇ ಫೀ ಆನ್‌ಲೈನ್ ಎಂಬ ವಿಭಾಗಕ್ಕೆ ಹೋಗಿ 2,000/- ರೂ. ಶುಲ್ಕ ಪಾವತಿಸಬೇಕು.

▪️ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಒಂದೇ ಇಮೇಲ್ ಐಡಿಯನ್ನು ಬಳಸುವುದು ಕಡ್ಡಾಯವಾಗಿದೆ.

▪️ಶುಲ್ಕವನ್ನು ಪಾವತಿಸಿದ ಸರಿಸುಮಾರು ಒಂದು ವಾರದೊಳಗೆ NCERTX ವೇದಿಕೆಯ ಮುಂದಿನ ಹಂತಗಳನ್ನು ವಿವರಿಸುವ ಇಮೇಲ್ ಅನ್ನು ನಿಮಗೆ ಕಳುಹಿಸುತ್ತದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಆ ಇಮೇಲ್‌ ನಲ್ಲಿರುವ ಸೂಚನೆಗಳನ್ನು ಅನುಸರಿಸಿ.

NCERT

ಹೆಚ್ಚಿನ ಮಾಹಿತಿಗಾಗಿ – CLICK HERE

PDF download – CLICK HERE 

CLICK HERE MORE INFORMATION

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!