NIRANTAR App Update-2026: ನಿರಂತರ ಆಪ್ ಕಾರ್ಯಕ್ಷಮತೆ ಹೆಚ್ಚಿಸಲು ಅಗತ್ಯವಿರುವ ಪ್ರಮುಖ ಅಪ್ಡೇಟ್ಗಳು
NIRANTAR App Update-2026: ನಿರಂತರ ಆಪ್”ನಲ್ಲಿ ಅಪ್ಡೇಟ್ ಆಗಬೇಕಾದ ಕಾರ್ಯಗಳು, SATS ಡೇಟಾ ತಿದ್ದುಪಡಿ, ವಿದ್ಯಾರ್ಥಿಗಳ ಮಾಹಿತಿ ನವೀಕರಣ, ಹಾಜರಾತಿ ಹಾಗೂ ಇತರೆ ಪ್ರಮುಖ ಬದಲಾವಣೆಗಳ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.
ಮೇಲಿನ ವಿಷಯ ಹಾಗೂ ಉಲ್ಲೇಖದನ್ವಯ “ನಿರಂತರ ಆಪ್”ದಲ್ಲಿ ಅಪಡೆಟ್ ಆಗಬೇಕಾದ ಕಾರ್ಯಗಳು/ಆಯ್ಕೆಗಳು ಕುರಿತು ಈ ಕೆಳಗಿನಂತಿವೆ:
1) SATS ನಲ್ಲಿ TC OUT ಆಗಿರುವ ಕೆಲವು ಮಕ್ಕಳು ಇನ್ನೂ NIRANTAR App ನಲ್ಲಿ Display ಆಗುತ್ತಿದ್ದು, ಈ ಮಕ್ಕಳು ತಕ್ಷಣ Delete ಆಗಬೇಕು.
2) SATS ನಲ್ಲಿ TC IN ಆಗಿರುವ ಇನ್ನೂ ಕೆಲವು ಮಕ್ಕಳು NIRANTAR App ನಲ್ಲಿ ಬರುತ್ತಿಲ್ಲ. ಇವುಗಳು ತಕ್ಷಣ Add ಆಗಬೇಕು.
3) SATS ನಲ್ಲಿ TC IN ಮತ್ತು out ಆದ ಮಕ್ಕಳು ತಕ್ಷಣ NIRANTAR ದಲ್ಲಿ ಅಪ್ಡೇಟ್ ಆಗುವಂತೆ Real time sink ಅವಕಾಶ ನೀಡುವುದು.
4) ಇಲ್ಲವಾದಲ್ಲಿ ಕನಿಷ್ಠ ದಿನಕ್ಕೆ ಒಂದು ಬಾರಿಯಾದರೂ Sink ಆಗಿ ಮಕ್ಕಳ ಪಟ್ಟಿ Synchronisation & Validation ಆಗಿ 24 ಗಂಟೆಯೊಳಗಾಗಿ Update ಆಗುವಂತೆ ಅವಕಾಶ ನೀಡುವುದು.
5) ಈಗಾಗಲೇ NIRANTAR app ನಲ್ಲಿ ಮಕ್ಕಳ Registration ಆಗುವಾಗ ಸಾಕಷ್ಟು Photo mismatch ಆಗಿರುವುದರಿಂದ ಒಂದು ಬಾರಿ ಮತ್ತೊಮ್ಮೆ Photo Register ನಲ್ಲಿ Delete ಮಾಡಿ Edit ಮಾಡಲು ಅವಕಾಶ ನೀಡುವುದು.
6) ಶಾಲೆಗಳ Latitude ಮತ್ತು Longitude ತಪ್ಪಾಗಿರುವುದರಿಂದ ಒಂದು ಬಾರಿಗೆ ಮಾತ್ರ ಶಾಲೆಯಲ್ಲೇ ನಿಂತುಕೊಂಡು GEO CREDENTIALS update ಮಾಡಿಕೊಳ್ಳಲು ಅವಕಾಶ ನೀಡುವುದು.
7) ಶಾಲೆಗಳಲ್ಲಿ ಮಕ್ಕಳು ಸಾಂಸ್ಕೃತಿಕ ಪ್ರತಿಭಾಕಾರಂಜಿ/ಕ್ವಿಜ್) ಕಾರ್ಯಕ್ರಮಗಳು, ವಲಯ ತಾಲೂಕು ಜಿಲ್ಲಾ ರಾಜ್ಯ ಮಟ್ಟದ ಕ್ರೀಡಾಕೂಟಗಳು, ಪರೀಕ್ಷೆಗಳು ಹೀಗೆ ಇನ್ನಿತರ ಚಟುವಟಿಕೆಗಳಿಗೆ ಮಕ್ಕಳು ಶಾಲೆಯಿಂದ ಹೊರಗಡೆ ಹೋಗಬೇಕಾಗಿರುವುದರಿದ Special Attendance/OOD ಆಯ್ಕೆಯನ್ನು ನೀಡುವುದು.
8) HBC ಮಕ್ಕಳನ್ನು Registartion ಮಾಡುವಾಗ HBC ಅನ್ನುವ ಆಯ್ಕೆ ನೀಡಿ ಅದನ್ನು Yes ಎಂದು Confirmation ನೀಡಿದಾಗ Automatic Attendance ತೆಗೆದುಕೊಳ್ಳುವಂತೆ ಅವಕಾಶ ನೀಡುವುದು.
9) BEO/ DDPI Login , Filter ಮಾಡಲು ಅವಕಾಶ ನೀಡಿ Export Excel Option ನೀಡುವುದು.
10) ಶೂನ್ಯ ಶಿಕ್ಷಕರು ಇರುವ ಶಾಲೆಗಳಿಗೆ ಪಕ್ಕದ ಶಾಲೆಯ ಶಿಕ್ಷಕರನ್ನು/CRPs ರವರನ್ನು ತಾತ್ಕಾಲಿಕವಾಗಿ ನಿಯೋಜಿಸಿ ಕಾರ್ಯ ಹಂಚಿಕೆ ಮಾಡಿ Maping ಮಾಡಿ ಪಟ್ಟಿ ಕಳುಹಿಸಿದ್ದು ತಕ್ಷಣ ನಿರಂತರ್ App ಗೆ Update ಮಾಡುವುದು
