NMMS EXAMINATION 2025-26: ಒಮ್ಮೆ ಉತ್ತೀರ್ಣರಾದರೆ 4 ವರ್ಷ ಸ್ಕಾಲರ್‌ಶಿಪ್,ವಾರ್ಷಿಕ 12 ಸಾವಿರ ರೂ. ಶಿಷ್ಯವೇತನ

NMMS EXAMINATION 2025-26: ಒಮ್ಮೆ ಉತ್ತೀರ್ಣರಾದರೆ 4 ವರ್ಷ ಸ್ಕಾಲರ್‌ಶಿಪ್,ವಾರ್ಷಿಕ 12 ಸಾವಿರ ರೂ. ಶಿಷ್ಯವೇತನ

NMMS EXAMINATION 2025-26: ನ್ಯಾಷನಲ್‌ ಮೀನ್ಸ್ ಕಂ-ಮೆರಿಟ್ ಸ್ಕಾಲರ್‌ಶಿಪ್ (ಎನ್ ಎಂಎಂಎಸ್) ಆರ್ಥಿಕವಾಗಿ ಹಿಂದುಳಿದ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆಂದೇ ರೂಪಿಸಲಾಗಿರುವ ಯೋಜನೆಯಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಅರ್ಹತೆ ಪಡೆದಿದ್ದೇ ಆದಲ್ಲಿ ದ್ವಿತೀಯ ಪಿಯು ಪೂರ್ಣಗೊಳಿಸುವವರೆಗೂ ನಿರಂತರವಾಗಿ ಸ್ಕಾಲರ್‌ಶಿಪ್‌ ನೀಡಲಾಗುತ್ತದೆ. ಪ್ರಸ್ತುತ ಈ ಪರೀಕ್ಷೆಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅ.15 ಕೊನೆಯ ದಿನವಾಗಿದೆ. ಪರೀಕ್ಷೆಯು ಡಿ.7ರಂದು ನಿಗದಿಯಾಗಿದೆ.

ಏನಿದು ಪರೀಕ್ಷೆ?:

ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ 8ನೇ ಕ್ಲಾಸ್‌ನ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ನಡೆಸಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತರು ಶಾಲೆಯಿಂದ ಹೊರಗುಳಿಯುವುದನ್ನು ತಡೆಯವುದು, ಅವರ ವಿದ್ಯಾಭ್ಯಾಸದ ಮುಂದುವರಿಕೆಗೆ ಪ್ರೇರೇಪಿಸುವುದು ಇದರ ಉದ್ದೇಶ. ತಾಲೂಕು ಕೇಂದ್ರಗಳಲ್ಲಿ ನಡೆಯುವ ಈ ಪರೀಕ್ಷೆಯನ್ನು ಮಂಡಳಿಯು ಆಯೋಜಿಸುತ್ತದೆ.

ಅರ್ಹತೆಗಳೇನು?

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆದರೆ, ಪಾಲಕರ ಆದಾಯ ವಾರ್ಷಿಕ 3.50 ಲಕ್ಷ ರೂ. ಮೀರುವಂತಿಲ್ಲ. ಏಳನೇ ತರಗತಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಗಳಿಸಿರಬೇಕು. ಪರಿಶಿಷ್ಟ ವಿದ್ಯಾರ್ಥಿಗಳು ಶೇ.50 ಅಂಕ ಪಡೆದಿರಬೇಕು. ಆದರೆ ಖಾಸಗಿ ಶಾಲೆಗಳು, ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆ, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ನಡೆಸಲಾಗುವ ವಸತಿಶಾಲೆಗಳಲ್ಲಿ ಹಾಗೂ ಖಾಸಗಿ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆದವರು ಈ ಸ್ಕಾಲರ್‌ಶಿಪ್ ಪಡೆಯುವಂತಿಲ್ಲ. ಐಟಿಐ, ಡಿಪ್ಲೊಮಾದವರನ್ನು ಈ ಸ್ಕಾಲರ್‌ಶಿಪ್‌ಗೆ ಪರಿಗಣಿಸಲಾಗುವುದಿಲ್ಲ ಎಂದು ಎಂದು ಶಿಕ್ಷಣ ಇಲಾಖೆಯು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಲಿಖಿತ ಪರೀಕ್ಷೆ ಸ್ವರೂಪ:

ಮೆಂಟಲ್‌ ಎಬಿಲಿಟಿ ಟೆಸ್ಟ್ (ಬೌದ್ಧಿಕ ಸಾಮರ್ಥ್ಯ ಪರೀಕ್ಷೆ) ಹಾಗೂ ಸ್ಕಾಲಸ್ಟಿಕ್ ಎಬಿಲಿಟಿ ಟೆಸ್ಟ್ (ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ) ಎಂಬ ಎರಡು ಪತ್ರಿಕೆಗಳ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಬೇಕಾಗುತ್ತದೆ. ಈ ಎರಡೂ ಪತ್ರಿಕೆಗಳಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಮೊದಲ ಪರೀಕ್ಷೆಯಲ್ಲಿ 90 ವಸ್ತುನಿಷ್ಠ, ಬಹು ಆಯ್ಕೆ ಮಾದರಿಯ ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೆ ಒಂದು ಅಂಕದಂತೆ 90 ಅಂಕಗಳು ನಿಗದಿಯಾಗಿರುತ್ತವೆ. ಎರಡನೇ ಪರೀಕ್ಷೆಯಲ್ಲಿ ವಿಜ್ಞಾನ ವಿಷಯಕ್ಕೆ 35, ಸಮಾಜ ವಿಜ್ಞಾನಕ್ಕೆ 35 ಹಾಗೂ ಗಣಿತ ವಿಷಯಕ್ಕೆ 20 ಅಂಕದಂತೆ ಒಟ್ಟು 90 ಪ್ರಶ್ನೆಗಳಿರುತ್ತವೆ. ಪ್ರತಿ ಪರೀಕ್ಷೆಗೆ 90 ನಿಮಿಷ ನೀಡಲಾಗುತ್ತದೆ.ಡಿ.7ರ ಭಾನುವಾರ ಬೆಳಗ್ಗೆ 10.30ರಿಂದ 12ಗಂಟೆಯವರೆಗೆ ಮೊದಲ ಪತ್ರಿಕೆ, ಮಧ್ಯಾಹ್ನ 2ರಿಂದ 3.30ರವರೆಗೆ ಎರಡನೇ ಪತ್ರಿಕೆಯ ಪರೀಕ್ಷೆ ನಡೆಸಲಾಗುತ್ತದೆ.

NMMS ಪರೀಕ್ಷೆಗೆ ಅರ್ಜಿ ಆಹ್ವಾನ:

ಆಯ್ಕೆ ಪ್ರಕ್ರಿಯೆ:

ಸಾಮಾನ್ಯ ವರ್ಗದವರು ಶೇ.40, ಪರಿಶಿಷ್ಟರು ಶೇ.32 ಅಂಕಗಳನ್ನು ಪಡೆದರಷ್ಟೇ ಅರ್ಹತೆ ಗಿಟ್ಟಿಸಲಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ ಮೀಸಲಾತಿ ಹಾಗೂ ಅರ್ಹತಾ ನಿಯಮ ಅನುಸಾರ ರ್ಯಾಂಕ್ ಆಧರಿಸಿ ಡಿಎಸ್‌ಇಆರ್‌ಟಿ ವತಿಯಿಂದ ಅರ್ಹರನ್ನು ಸ್ಕಾಲರ್‌ಶಿಪ್ ಗೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರು ಸ್ಕಾಲರ್ ಶಿಪ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ಸ್ಕಾಲರ್‌ಶಿಪ್ ಮೊತ್ತ:

ಮಾಸಿಕ ಒಂದು ಸಾವಿರ ರೂ. ನಂತೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿವರ್ಷ 12 ಸಾವಿರ ರೂ.ಗಳನ್ನು ಶಿಷ್ಯವೇತನವಾಗಿ ನೀಡಲಾಗುತ್ತದೆ. 9ನೇ ತರಗತಿಯಿಂದ 12ನೇ ತರಗತಿಯವರೆಗೂ ನಾಲ್ಕು ವರ್ಷಗಳ ತನಕ ನೀಡಲಾಗುತ್ತದೆ. ವಿದ್ಯಾರ್ಥಿಗಳು ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತದೆ. ಆದರೆ, ವಿದ್ಯಾರ್ಥಿ ವೇತನ ಮುಂದುವರಿಕೆಗೆ ಕೆಲ ಷರತ್ತುಗಳು ಅನ್ವಯವಾಗುತ್ತವೆ. 9, 10, 11ನೇ ತರಗತಿಯನು ಒಂದೇ ಯತ್ನದಲ್ಲಿ ಪಾಸು ಮಾಡಬೇಕು. 9, 11ನೇ ತರಗತಿಯಲ್ಲಿ ಶೇ.55 ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.60 ಅಂಕ ಪಡೆಯಬೇಕು.

ಅರ್ಜಿ ಸಲ್ಲಿಕೆ ವಿಧಾನ:

ಪರೀಕ್ಷೆಗೆ ಶಾಲಾ ಪ್ರಾಂಶುಪಾಲರು ಅಥವಾ ಮುಖ್ಯ ಶಿಕ್ಷಕರ ಲಾಗಿನ್ ಮೂಲಕವೇ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಬೇಕಿದೆ. ಅರ್ಜಿ ಸಲ್ಲಿಕೆ ಬಳಿಕ ಅದರ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳಬೇಕು. ಪರೀಕ್ಷೆಗೆ 15 ದಿನ ಮುಂಚೆ ಪ್ರವೇಶಪತ್ರಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದನ್ನೂ ಶಾಲಾ ಮುಖ್ಯಸ್ಥರಿಂದಲೇ ಪಡೆದುಕೊಳ್ಳಬೇಕು.

 

CLICK HERE TO DOWNLOAD CIRCULAR

CLICK HERE TO ONLINE APPLICATION

 

ಇದನ್ನೂ ನೋಡಿ….B.Ed Admission-2025: ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಬಿ.ಎಡ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಮರು ಸಿಂಚನ’ ಕಾರ್ಯಕ್ರಮವನ್ನು ಅನುಷ್ಠಾನ- ಸಂಪೂರ್ಣ ಮಾಹಿತಿ 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

3 thoughts on “NMMS EXAMINATION 2025-26: ಒಮ್ಮೆ ಉತ್ತೀರ್ಣರಾದರೆ 4 ವರ್ಷ ಸ್ಕಾಲರ್‌ಶಿಪ್,ವಾರ್ಷಿಕ 12 ಸಾವಿರ ರೂ. ಶಿಷ್ಯವೇತನ”

Leave a Comment

You cannot copy content of this page

error: Content is protected !!